ಲಡಾಖ್ ಮಣ್ಣಿನಲ್ಲಿ ಅರಳಿದ ಕೇಸರಿ; 4 ದಿನಗಳಲ್ಲಿ 22 ಗ್ರಾಂ ಕೊಯ್ಲು
ಲಡಾಖ್ ನೆಲದಲ್ಲಿ ಕೇಸರಿ ಬೆಳೆಯುವ ಪ್ರಯೋಗ ಯಶಸ್ವಿಯಾಗಿದೆ. ಸಾಮಾನ್ಯವಾಗಿ ಕೇಸರಿ ಬೆಳೆಯಲು ಎರಡು ತಿಂಗಳು ಸಮಯ ಬೇಕಾಗುತ್ತದೆ. ಆದರೆ ಲಡಾಖ್ನಲ್ಲಿ 30 ದಿನಗಳ ಹಿಂದೆ ನೆಟ್ಟ ಕೇಸರಿ ಗೆಡ್ಡೆಗಳು ಚಿಗುರಿ, ಹೂವುಗಳು ಅರಳಿವೆ. ಅತ್ಯಂತ ಕಡಿಮೆ ಅವಧಿಯಲ್ಲಿ ಅಂದರೆ 4 ದಿನಗಳಲ್ಲಿ ಸುಮಾರು 22 ಗ್ರಾಂ ಕೇಸರಿಯನ್ನು ಕೊಯ್ಲು ಮಾಡಲಾಗಿದೆ ಎಂದು ಲಡಾಖ್ ಆಡಳಿತ ತಿಳಿಸಿದೆ.ಕಳೆದ

ಲಡಾಖ್ ನೆಲದಲ್ಲಿ ಕೇಸರಿ ಬೆಳೆಯುವ ಪ್ರಯೋಗ ಯಶಸ್ವಿಯಾಗಿದೆ. ಸಾಮಾನ್ಯವಾಗಿ ಕೇಸರಿ ಬೆಳೆಯಲು ಎರಡು ತಿಂಗಳು ಸಮಯ ಬೇಕಾಗುತ್ತದೆ. ಆದರೆ ಲಡಾಖ್ನಲ್ಲಿ 30 ದಿನಗಳ ಹಿಂದೆ ನೆಟ್ಟ ಕೇಸರಿ ಗೆಡ್ಡೆಗಳು ಚಿಗುರಿ, ಹೂವುಗಳು ಅರಳಿವೆ. ಅತ್ಯಂತ ಕಡಿಮೆ ಅವಧಿಯಲ್ಲಿ ಅಂದರೆ 4 ದಿನಗಳಲ್ಲಿ ಸುಮಾರು 22 ಗ್ರಾಂ ಕೇಸರಿಯನ್ನು ಕೊಯ್ಲು ಮಾಡಲಾಗಿದೆ ಎಂದು ಲಡಾಖ್ ಆಡಳಿತ ತಿಳಿಸಿದೆ.ಕಳೆದ ಭಾನುವಾರ ಲಡಾಖ್ನ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ಈ ಪ್ರಯೋಗವನ್ನು ಪರಿಶೀಲನೆ ನಡೆಸಿದ್ದರು. ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಸಕ್ಸೇನಾ ಅವರು, ‘ಲಡಾಖ್ನ ಎತ್ತರದ ಕೃಷಿ ಭೂಮಿಯಲ್ಲಿ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸಲಾಗುತ್ತಿದೆ. ಲೇಹ್ ಲಡಾಖ್ನಲ್ಲಿ ಕೇಸರಿ ಬೆಳೆಯುವ ಪ್ರಯೋಗ ಯಶಸ್ವಿಯಾಗಿದೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ. ಸಾಮಾನ್ಯವಾಗಿ ಬೆಳೆಯನ್ನು ನಾಟಿ ಮಾಡಿ 2 ತಿಂಗಳಲ್ಲಿ ಮೊದಲ ಕೊಯ್ಲು ಆರಂಭವಾಗುತ್ತದೆ. ಆದರೆ ಇಲ್ಲಿ 30 ದಿನಗಳಲ್ಲೇ ಹೂವು ಅರಳಿದ್ದು, ಮೊದಲ ಕೊಯ್ಲನ್ನು ಮಾಡಿದ್ದೇವೆ’ ಎಂದಿದ್ದಾರೆ.‘ಸರಾಸರಿ ಪ್ರತಿದಿನ 20 ರಿಂದ 25 ಹೂವುಗಳು ಅರಳುತ್ತಿದ್ದು, ಇಂದು ಬೆಳಿಗ್ಗೆ 72 ಹೂವುಗಳು ಅರಳಿದ್ದವು’ ಎಂದು ನ.1 ರಂದು ಪೋಸ್ಟ್ ಹಂಚಿಕೊಂಡಿದ್ದರು. ಅಲ್ಲದೆ, ‘ಕೇವಲ 4 ದಿನಗಳಲ್ಲಿ ಸುಮಾರು 22 ಗ್ರಾಂನಷ್ಟು ಶುದ್ಧ ಕೇಸರಿಯನ್ನು ಸಂಗ್ರಹಿಸಲಾಗಿದೆ. ಇದರಿಂದ ಲಡಾಖ್ನ ಶುಷ್ಕ ಹಾಗೂ ತಂಪಾದ ವಾತಾವರಣ ಮತ್ತು ಮಣ್ಣಿನ ಗುಣಧರ್ಮ ಕೇಸರಿ ಬೆಳೆಗೆ ಅತ್ಯಂತ ಪೂರಕವಾಗಿದೆ ಎಂಬುದು ಸಾಬೀತಾಗಿದೆ’ ಎಂದು ಬರೆದುಕೊಂಡಿದ್ದಾರೆ.90 ಸಾವಿರ ಕೇಸರಿ ಗೆಡ್ಡೆ ನೆಡಲಾಗಿತ್ತುಈ ಪ್ರಾಯೋಗಿಕ ಯೋಜನೆಗಾಗಿ, ಸುಮಾರು 4,000 ಚದರ ಮೀಟರ್ಗಳಷ್ಟು ಭೂಮಿಯಲ್ಲಿ ಉತ್ತಮ ಗುಣಮಟ್ಟದ ಇರಾನಿಯನ್ ಕೇಸರಿಯನ್ನು ನೆಡಲಾಗಿತ್ತು. ಅ. 1 ರಂದು, ಒಟ್ಟು 800 ಕೆ.ಜಿ.ಯ ಸುಮಾರು 90,000, ಕೇಸರಿ ಗೆಡ್ಡೆಗಳನ್ನು ನೆಡಲಾಗಿತ್ತು. Breaking new grounds in Ladakh’s high-altitude agricultural landscape! Proud to announce that the experimental saffron cultivation, over recently restored degraded land in Leh, has begun to blossom, in a record-breaking 30 days, against the usual two-month timeline for the… pic.twitter.com/7a8YruTlMH— LG Ladakh (@lg_ladakh) November 1, 2026 ಲಡಾಖ್ನಲ್ಲಿ ಕೇಸರಿ ಬೆಳೆಯ ಪ್ರಯೋಗವೇಕೆ?ಕೇಸರಿ ಬೆಳೆಗೆ ಬೆಲೆ ಹೆಚ್ಚು. ವರ್ಷದ ಎಲ್ಲಾ ಕಾಲದಲ್ಲೂ ಇದಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆಯುತ್ತದೆ. ಲಡಾಖ್ನಲ್ಲಿ ಕೇಸರಿ ಬೆಳೆ ಪ್ರಯೋಗ ಯಶಸ್ವಿಯಾದರೆ ಅಲ್ಲಿನ ರೈತರಿಗೆ ಹೆಚ್ಚುವರಿ ಆದಾಯ ದೊರಕಲಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಶೇ 90 ರಷ್ಟು ಕೇಸರಿಯನ್ನು ಬೆಳೆಯಲಾಗುತ್ತದೆ. ಶುದ್ಧ ಕಾಶ್ಮೀರಿ ಕೇಸರಿಯ ಬೆಲೆ ಗ್ರಾಂಗೆ ₹300ರಷ್ಟಿದೆ. ವಿವಿಧ ತಳಿಯ, ವಿವಿಧ ಗುಣಮಟ್ಟದ ಕೇಸರಿ ಬೆಲೆಯಲ್ಲಿ ವ್ಯತ್ಯಾಸವಿರುತ್ತದೆ.