ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಪಟ್ಟು: ‘ಇಂಡಿಯಾ’ ಒಕ್ಕೂಟದಿಂದ ಪ್ರತಿಭಟನೆ
ಬೆಂಗಳೂರು: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ವಿರೋಧ ಪಕ್ಷಗಳು ಪಟ್ಟು ಹಿಡಿದಿದ್ದು, ಇಂಡಿಯಾ ಒಕ್ಕೂಟವು ಇಲ್ಲಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದೆ.ಮತ ಉಳಿಸಿ, ದೇಶ ಉಳಿಸಿ ಧ್ಯೇಯ ವಾಕ್ಯದಡಿ ಪ್ರತಿಭಟನೆಮತ ಉಳಿಸಿ, ದೇಶ ಉಳಿಸಿ ಧ್ಯೇಯ ವಾಕ್ಯದಡಿ ಪ್ರತಿಭಟನೆ ನಡೆಯುತ್ತಿದ್ದು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಿ

ಬೆಂಗಳೂರು: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ವಿರೋಧ ಪಕ್ಷಗಳು ಪಟ್ಟು ಹಿಡಿದಿದ್ದು, ಇಂಡಿಯಾ ಒಕ್ಕೂಟವು ಇಲ್ಲಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದೆ.ಮತ ಉಳಿಸಿ, ದೇಶ ಉಳಿಸಿ ಧ್ಯೇಯ ವಾಕ್ಯದಡಿ ಪ್ರತಿಭಟನೆಮತ ಉಳಿಸಿ, ದೇಶ ಉಳಿಸಿ ಧ್ಯೇಯ ವಾಕ್ಯದಡಿ ಪ್ರತಿಭಟನೆ ನಡೆಯುತ್ತಿದ್ದು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಸಚಿವ ಎಂ.ಬಿ ಪಾಟೀಲ್, ಯತೀಂದ್ರ ಸಿದ್ದರಾಮಯ್ಯ, ಶಾಸಕ ದಿನೇಶ್ ಗುಂಡೂರಾವ್ ಸೇರಿದಂತೆ ಅನೇಕ ಶಾಸಕರು, ಬಹುಭಾಷಾ ನಟ ಪ್ರಕಾಶ್ ರಾಜ್ ಭಾಗಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.ಪ್ರತಿಭಟನೆಯಲ್ಲಿ ಐದು ನಿರ್ಣಯಗಳ ಮಂಡನೆಅಕ್ರಮ ಹಾಗೂ ಪ್ರಜಾಪ್ರಭುತ್ವ ವಿರೋಧಿಯಾದ ಎಸ್ಐಆರ್ ಅನ್ನು ರದ್ದು ಮಾಡಬೇಕುಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕುಮುಖ್ಯ ಚುನಾವಣಾ ಆಯುಕ್ತರ ನೇಮಕಾತಿ ಕಾನೂನನ್ನು ರದ್ದು ಮಾಡಬೇಕು, ಸುಪ್ರೀಂಕೋರ್ಟ್ ಸೂಚನೆಯಂತೆ ನೇಮಕಾತಿಯ ಸ್ವಾಯತ್ತತೆಯನ್ನು ಖಾತ್ರಿಪಡಿಸಬೇಕುಕರ್ನಾಟಕ ಸರ್ಕಾರ ರಾಜ್ಯದ SIR ಅಂತಿಮ ಪಟ್ಟಿಯನ್ನು ತಿರಸ್ಕರಿಸಬೇಕುಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆಗಳು ಹಾಗೂ ಮುಂಬರುವ ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆಗಳನ್ನು SIR ಪೂರ್ವ ಪಟ್ಟಿ ಆಧರಿಸಿ ನಡೆಸಲು ಕ್ರಮವಹಿಸಬೇಕುಹರಿಪ್ರಸಾದ್ ಗರಂ: ಭಾಷಣದ ವೇಳೆ ಪ್ರತಿಭಟನೆಗೆ ಡಿ.ಕೆ ಶಿವಕುಮಾರ್ ಅವರು ಆಗಮಿಸುತ್ತಿದ್ದಂತೆ ಅವರ ಬೆಂಬಲಿಗರು ಡಿಕೆ ಡಿಕೆ ಎಂದು ಘೋಷಣೆ ಕೂಗಿದ್ದಾರೆ. ಈ ವೇಳೆ ಯಾರ್ರೀ ಅವರು ಎಂದು ಹರಿಪ್ರಸಾದ್ ಗರಂ ಆಗಿದ್ದಾರೆ.ಪ್ರತಿಭಟನೆಯಲ್ಲಿ ಪ್ರಕಾಶ್ ರಾಜ್ ಭಾಷಣದೇಶದ ಗೃಹ ಮಂತ್ರಿ ಇಲ್ಲಿಯವರೆಗೂ ಏನೂ ಉತ್ತರ ಕೊಟ್ಟಿಲ್ಲ. ಮೂರು ಕೋಟಿ ವಲಸಿಗರು ದೇಶಕ್ಕೆ ಬಂದಿದ್ದಾರಂತೆ, ಬಾಂಗ್ಲಾದ ಜನಸಂಖ್ಯೆಯೇ 17 ಕೋಟಿ. ಮೂರು ಕೋಟಿ ಬಾಂಗ್ಲಾ ವಲಸಿಗರು ಬಂದಿದ್ದಾರೆ ಅಂದ್ರೆ ಹೇಗೆ ? ನಾಚಿಕೆ ಆಗೋದಿಲ್ಲವಾ ನಿಮಗೆ. ಯಾವ ಸುಳ್ಳನ್ನ ಯಾರಿಗೆ ಹೇಳುತ್ತಿದ್ದೀರಿ ಎಂದು ಕಿಡಿಕಾರಿದ್ದಾರೆ.ಕರ್ನಾಟಕದಲ್ಲಿ ತೆಗೆದುಹಾಕಿರುವ ಸಂಖ್ಯೆಯನ್ನ ನೋಡಿದ್ದೇವೆ. ದಲಿತರು, ಆದಿವಾಸಿಗಳ ಹೆಸರನ್ನ ತೆಗೆದು ಹಾಕಿದ್ದಾರೆ. ಎಸ್ಐಆರ್ ಅನ್ನು ಬಹಿಷ್ಕರಿಸಲೇಬೇಕು. ಯಾವ ಕಾರಣಕ್ಕೂ ಎಸ್ಐಆರ್ ಅನ್ನು ಒಪ್ಪಿಕೊಳ್ಳಬಾರದು. ಜ್ಞಾನೇಶ್ ಕುಮಾರ್ ರಾಜೀನಾಮೆ ಆಗಬಹುದು. ಅಷ್ಟಕ್ಕೆ ನಾವು ಸುಮ್ಮನಾಗಬಾರದು.ಇಡೀ ಎಸ್ಐಆರ್ ಪ್ರಕ್ರಿಯೆಯನ್ನೇ ಕೈಬಿಡಬೇಕು. ಬಿಜೆಪಿಯ ರಂಗಾಬಿಲ್ಲಾ ಮೋದಿ, ಅಮಿತ್ ಶಾ ಇದ್ದಾರಲ್ಲಾ. ನಮ್ಮ ಕಾಂಗ್ರೆಸ್ ಸರ್ಕಾರ ಬೂತ್ ಬೂತ್ಗೆ ಹೋಗಬೇಕು. ಹುನ್ನಾರವನ್ನು ತಡೆಯಬೇಕು. ಬಿಜೆಪಿಯನ್ನ ನಾವು ಸುಮ್ಮನೆ ಬಿಡೋದಿಲ್ಲ.ಬಿಜೆಪಿಯವರು ಎಂತಹ ಕಳ್ಳರು ಎಂಬುದನ್ನ ತೋರಿಸಬೇಕಿದೆ. ನನ್ನನ್ನ ದೇಶದ್ರೋಹಿ ಅಂತಾರೆ, ಪ್ರಶ್ನೆ ಮಾಡಿದ್ರೆ ದೇಶದ್ರೋಹಿಗಳಾ? ಹಸಿ ಹಸಿ ಸುಳ್ಳು ಹೇಳುವ ಇವರು ದ್ರೋಹಿಗಳಲ್ಲವಾ ? ಎಂದು ಕಿಡಿಕಾರಿದರು.ಡಿಕೆ ಡಿಕೆ ಎಂದು ಕೂಗಿದ ಬೆಂಬಲಿಗರುಪ್ರತಿಭಟನೆ ಉದ್ದೇಶಿಸಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಭಾಷಣ ಆರಂಭಿಸುತ್ತಿದ್ದಂತೆ ಅವರ ಬೆಂಬಲಿಗರು ಮತ್ತೆ ಡಿಕೆ ಡಿಕೆ ಎಂದು ಘೋಷಣೆ ಕೂಗಿದ್ದಾರೆ. ಆಗ ವ್ಯಕ್ತಿ ಪೂಜೆ ಬೇಡ, ಪಕ್ಷ ಪೂಜೆ ಮಾಡಿ. ಎನ್ಎಸ್ಯುಐ ಹುಡುಗರು ಶಿಸ್ತಿನಿಂದ ಇರಬೇಕು ಎಂದು ಕರೆ ನಿಡಿದರು.ಕೂಡಲೇ ಎದ್ದು ಬಂದ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ‘ಯಾರ್ರೀ’ ಅದು ಎಂದು ಗದರಿದರು. ಇಲ್ಲಿ ಎಲ್ಲಾ ಪಕ್ಷದವರು ಇದ್ದಾರೆ ಎಂದು ಎಚ್ಚರಿಸಿದರು.