ಆಳ ಅಗಲ: ಅರುಣಾಚಲ ಪ್ರದೇಶ ಜಲವಿದ್ಯುತ್ ಯೋಜನೆಗೆ ಯಾಕಿಷ್ಟು ವಿರೋಧ?
ಪ್ರಜಾವಾಣಿ ವಾರ್ತೆಅರುಣಾಚಲ ಪ್ರದೇಶದ ರಾಜಧಾನಿ ಇಟಾನಗರ, ಪಾಸಿಘಾಟ್ ಸೇರಿದಂತೆ ವಿವಿಧ ಕಡೆಗಳಲ್ಲಿ ಜನರು ಪ್ರತಿಭಟನೆಗೆ ಇಳಿದಿದ್ದಾರೆ. ಜೆನ್ ಝೀಗಳು ಇದರಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಹೆದ್ದಾರಿ ತಡೆ, ಪೊಲೀಸ್ ವಾಹನಗಳಿಗೆ ಬೆಂಕಿ, ರಾಷ್ಟ್ರೀಯ ಜಲವಿದ್ಯುತ್ ನಿಗಮ (ಎನ್ಎಚ್ಪಿಸಿ) ಕಚೇರಿಯಲ್ಲಿ ದಾಂದಲೆ ಮಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಆಕ್

ಪ್ರಜಾವಾಣಿ ವಾರ್ತೆಅರುಣಾಚಲ ಪ್ರದೇಶದ ರಾಜಧಾನಿ ಇಟಾನಗರ, ಪಾಸಿಘಾಟ್ ಸೇರಿದಂತೆ ವಿವಿಧ ಕಡೆಗಳಲ್ಲಿ ಜನರು ಪ್ರತಿಭಟನೆಗೆ ಇಳಿದಿದ್ದಾರೆ. ಜೆನ್ ಝೀಗಳು ಇದರಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಹೆದ್ದಾರಿ ತಡೆ, ಪೊಲೀಸ್ ವಾಹನಗಳಿಗೆ ಬೆಂಕಿ, ರಾಷ್ಟ್ರೀಯ ಜಲವಿದ್ಯುತ್ ನಿಗಮ (ಎನ್ಎಚ್ಪಿಸಿ) ಕಚೇರಿಯಲ್ಲಿ ದಾಂದಲೆ ಮಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಅವರ ಬೇಡಿಕೆ ಒಂದೇ; ಸಿಯಾಂಗ್ ನದಿ ಕಣಿವೆಯ ಮೇಲ್ಭಾಗದಲ್ಲಿ ಜಲವಿದ್ಯುತ್ ಯೋಜನೆಗಾಗಿ ಅಣೆಕಟ್ಟು ನಿರ್ಮಿಸಬಾರದು ಎಂಬುದು. ಇದು ಮಹತ್ವಕಾಂಕ್ಷೆಯ ಯೋಜನೆ, ದೇಶದ ರಕ್ಷಣಾ ಕಾರ್ಯತಂತ್ರದ ಭಾಗ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸುತ್ತಿದ್ದು, ಪ್ರತಿಭಟನೆಗಳನ್ನು ಬಲವಂತವಾಗಿ ಹತ್ತಿಕ್ಕಲು ಯತ್ನಿಸುತ್ತಿದೆ.ಬಲಪ್ರಯೋಗಕ್ಕೆ ಮಣಿಯದ ಪ್ರತಿಭಟನಕಾರರು ಹೋರಾಟವನ್ನು ಮುಂದುವರಿಸಿರುವುದರಿಂದ ಅರುಣಾಚಲ ಪ್ರದೇಶದ ಬಿಜೆಪಿ ಸರ್ಕಾರವು ಯೋಜನೆ ವಿರೋಧಿಸುತ್ತಿರುವವರನ್ನು ಮಾತುಕತೆಗೆ ಆಹ್ವಾನಿಸುತ್ತಿದೆ. ಆದರೆ, ಪ್ರತಿಭಟನಕಾರರು ಇದನ್ನು ಒಪ್ಪಿಲ್ಲ. ಅಕ್ರಮವಾಗಿ ಬಂಧನದಲ್ಲಿಟ್ಟಿರುವ ಪ್ರತಿಭಟನಕಾರರನ್ನು ಬಿಡುಗಡೆ ಮಾಡುವಂತೆ ಮತ್ತು ಯೋಜನೆಗೆ ಗುರುತಿಸಲಾಗಿರುವ ಸಿಯಾಂಗ್ ಕಣಿವೆ ಪ್ರದೇಶದಲ್ಲಿ ನಿಯೋಜಿಸಲಾಗಿರುವ ಭದ್ರತಾ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಳ್ಳುವಂತೆ ಆಗ್ರಹಿಸುತ್ತಿದ್ದಾರೆ.ಚೀನಾ ಆಡಳಿತವಿರುವ ಟಿಬೆಟ್ನ ದಕ್ಷಿಣ ಭಾಗದಲ್ಲಿ ಹುಟ್ಟುವ ಯಾರ್ಲಂಗ್ ಸಂಗ್ಪೊ ನದಿಯು, ಅರುಣಾಚಲ ಪ್ರದೇಶದ ಮೂಲಕ ಭಾರತ ಪ್ರವೇಶಿಸಿದ ನಂತರ ಸಿಯಾಂಗ್ ಎಂದು ಕರೆಸಿಕೊಳ್ಳುತ್ತದೆ. ಮುಂದೆ ಸಾಗಿ ಅಸ್ಸಾಂನಲ್ಲಿ ಬ್ರಹ್ಮಪುತ್ರ ಎಂದು ಕರೆಸಿಕೊಳ್ಳುತ್ತದೆ. ಅರುಣಾಚಲ ಪ್ರದೇಶದ ಸಿಯಾಂಗ್ ಕಣಿವೆಯಲ್ಲಿ 11,200 ಮೆಗಾವಾಟ್ ಸಾಮರ್ಥ್ಯದ ವಿದ್ಯುತ್ ಯೋಜನೆ ಕೈಗೆತ್ತಿಕೊಳ್ಳುವುದು ಕೇಂದ್ರ ಸರ್ಕಾರದ ಯೋಜನೆ ಅದಕ್ಕಾಗಿ ಪೂರಕ ಸಮೀಕ್ಷೆಗಳು, ಅಧ್ಯಯನಗಳು ನಡೆಯುತ್ತಿವೆ. ಚೀನಾವು ಅರುಣಾಚಲ ಪ್ರದೇಶದ ಗಡಿಗೆ ಹೊಂದಿಕೊಂಡಂತೆ ಜಗತ್ತಿನ ಅತ್ಯಂತ ದೊಡ್ಡ ಅಣೆಕಟ್ಟು ನಿರ್ಮಿಸಲು ಹೊರಟಿದೆ ಮತ್ತು ಅರುಣಾಚಲ ಪ್ರದೇಶ ಗಡಿಭಾಗದಲ್ಲಿ ಪದೇ ಪದೇ ತಗಾದೆ ತೆಗೆಯಲು ಆರಂಭಿಸಿದೆ. ಹಾಗಾಗಿ ಭಾರತವು ಈ ಯೋಜನೆಗೆ ವೇಗ ನೀಡಲು ಬಯಸಿದೆ.ಆದರೆ, ಈ ಪ್ರಸ್ತಾವಿತ ಯೋಜನೆ ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಅವರು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಸಿಯಾಂಗ್ ಅಪ್ಪರ್ (ಮೇಲ್ಭಾಗ), ಪೂರ್ವ ಸಿಯಾಂಗ್, ಸಿಯಾಂಗ್ ಕಣಿವೆ ಹೀಗೆ ಹಲವು ಪ್ರದೇಶಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ಸ್ಥಳೀಯ ಸಂಸ್ಥೆಗಳು, ಯುವಕ ಸಂಘಗಳು, ಆದಿ ಬಡಕಟ್ಟು ಸಮುದಾಯ ಸೇರಿದಂತೆ ವಿವಿಧ ಬುಡಕಟ್ಟು ಸಂಘಟನೆಗಳು, ರೈತ ಸಂಘಟನೆಗಳ ಲಕ್ಷಾಂತರ ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.‘ಅಣೆಕಟ್ಟು ನಿರ್ಮಾಣವಾದರೆ ಸಿಯಾಂಗ್ ಕಣಿವೆ ಪ್ರದೇಶದ 27 ಹಳ್ಳಿಗಳು ಮುಳುಗಡೆಯಾಗುತ್ತವೆ. ಆದಿ ಬುಡಕಟ್ಟು ಸಮುದಾದವರು ಸೇರಿದಂತೆ ಸುಮಾರು 1.5 ಲಕ್ಷ ಜನರನ್ನು ಸ್ಥಳಾಂತರಿಸಬೇಕಾಗುತ್ತದೆ. ನಮ್ಮ ಜಮೀನು, ಬದುಕು ಎಲ್ಲವೂ ಆ ಪ್ರದೇಶದಲ್ಲಿದೆ. ಅಣೆಕಟ್ಟೆಯಿಂದಾಗಿ ಜೀವನ ಸರ್ವನಾಶವಾಗಲಿದೆ. ಹಾಗಾಗಿ, ಯಾವುದೇ ಕಾರಣಕ್ಕೂ ಅಣೆಕಟ್ಟು ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಸ್ಥಳೀಯರು ಯೋಜನೆ ವಿರೋಧಿಸುತ್ತಿದ್ದಾರೆ.ಅಕ್ಟೋಬರ್ 20ರ ನಂತರ ಪ್ರತಿಭಟನೆ ತೀವ್ರಗೊಂಡಿದ್ದು, ಜೆನ್ ಝೀಗಳು ಹಿಂಸಾಚಾರದಲ್ಲೂ ತೊಡಗಿಕೊಂಡಿದ್ದಾರೆ. ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರು ಅರುಣಾಚಲ ಪ್ರದೇಶ ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆ–2014ರ ಅಡಿಯಲ್ಲಿ ಕ್ರಮ ಜರುಗಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ. ಇದರಿಂದ ಅರುಣಾಚಲ ಪ್ರದೇಶ ವಿವಿಧ ಕಡೆಗಳಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿದ್ದು, ಅರಾಜಕತೆ ಸೃಷ್ಟಿಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಸದ್ಯದ ಸ್ಥಿತಿಗತಿಸಿಯಾಂಗ್ ಅಪ್ಪರ್ ಜಿಲ್ಲೆಯ ಗೆಕೂ ಗ್ರಾಮದಲ್ಲಿ ಅಣೆಕಟ್ಟು ನಿರ್ಮಿಸುವುದು ಕೇಂದ್ರ ಸರ್ಕಾರದ ಉದ್ದೇಶ. ರಾಷ್ಟ್ರೀಯ ಜಲವಿದ್ಯುತ್ ನಿಗಮ (ಎನ್ಎಚ್ಪಿಸಿ) ಮತ್ತು ಅರುಣಾಚಲ ಪ್ರದೇಶವು ಜಂಟಿಯಾಗಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಿವೆ.ಎನ್ಎಚ್ಪಿಸಿಯು ಯೋಜನೆಗಾಗಿ ಪ್ರಾಥಮಿಕ ಕಾರ್ಯ ಸಾಧ್ಯತೆ ವರದಿಯನ್ನು ಸಿದ್ಧಪಡಿಸುತ್ತಿದೆ. ಸ್ಥಳ ಸಮೀಕ್ಷೆ, ಭೂಪ್ರದೇಶದ ಪರಿಶೀಲನೆ ಮತ್ತು ಭೂವಿಜ್ಞಾನಕ್ಕೆ ಸಂಬಂಧಿಸಿದ ಪರೀಕ್ಷೆಗಳೆಲ್ಲ ಮುಗಿದಿವೆ. ಪರೋಂಗ್, ದಿತೆ ದಿಮೆ ಮತ್ತು ಉಗೆಂಗ್ ಗ್ರಾಮಗಳಲ್ಲಿ ಭೂಮಿಯ ಆಳಕ್ಕೆ ಕೊಳವೆ ಬಾವಿಗಳನ್ನು ಕೊರೆದು (200 ಮೀಟರ್ನಷ್ಟು ಉದ್ದ) ನೆಲದ ಅಡಿಯಲ್ಲಿರುವ ಕಲ್ಲಿನ ಗುಣಲಕ್ಷಣಗಳನ್ನು ಅಧ್ಯಯನ ನಡೆಸುವ ಕೆಲಸವಷ್ಟೇ ಬಾಕಿ ಇದೆ ಎಂದು ವರದಿಯಾಗಿದೆ. ಈ ಕೆಲಸ ಪೂರ್ಣಗೊಂಡರೆ ಅಣೆಕಟ್ಟು ನಿರ್ಮಾಣದ ಸ್ಥಳವನ್ನು ಅಂತಿಮಗೊಳಿಸಬಹುದು ಎಂಬುದು ಅಧಿಕಾರಿಗಳ ಹೇಳಿಕೆ.ನಾಲ್ಕು ದಶಕಗಳ ಹಿಂದಿನ ಪ್ರಸ್ತಾವಸಿಯಾಂಗ್ ಕಣಿವೆಯಲ್ಲಿ ಅಣೆಕಟ್ಟು ನಿರ್ಮಾಣ ಮಾಡುವುದು ಇಂದಿನ ಪ್ರಸ್ತಾವ ಅಲ್ಲ. ಮೊದಲ ಬಾರಿಗೆ 1982–83ರಲ್ಲಿ ಬಹ್ಮಪುತ್ರ ಮಂಡಳಿಯು ನದಿ ನೀರನ್ನು ತಡೆದು ಜಲ ವಿದ್ಯುತ್ ಉತ್ಪಾದನೆ ಮಾಡುವ ಪ್ರಸ್ತಾವವನ್ನು ಮುಂದಿಟ್ಟಿತ್ತು. ಆಗಿನಿಂದಲೂ ಸ್ಥಳೀಯರು ಯೋಜನೆಯನ್ನು ವಿರೋಧಿಸುತ್ತಲೇ ಬಂದಿದ್ದಾರೆ.ನಂತರ, 9,500 ಮೆಗಾ ವಾಟ್ ಸಾಮರ್ಥ್ಯದ ಸಿಯಾಂಗ್ ಮೇಲ್ಭಾಗದ ಜಲ ವಿದ್ಯುತ್ ಯೋಜನೆಯನ್ನು ರೂಪಿಸಲಾಗಿತ್ತು. 2008ರಲ್ಲಿ ಇದನ್ನು ‘ರಾಷ್ಟ್ರೀಯ ಯೋಜನೆ’ ಎಂದು ಘೋಷಿಸಲಾಗಿತ್ತು. ಸ್ಥಳೀಯರ ವಿರೋಧದ ನಂತರ ಅದು ನನೆಗುದಿಗೆ ಬಿದ್ದಿತ್ತು.2017ರಲ್ಲಿ ನೀತಿ ಆಯೋಗವು ಹಿಂದಿನ ಪ್ರಸ್ತಾವಿತ ಯೋಜನೆಯನ್ನು ಪರಿಷ್ಕರಿಸಿ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು 10 ಸಾವಿರ ಮೆಗಾ ವಾಟ್ಗೆ ಹೆಚ್ಚಿಸಿತ್ತು. ಅದನ್ನು ಸಿಯಾಂಗ್ ಮೇಲ್ಭಾಗದ ಬಹು ಉದ್ದೇಶದ ಯೋಜನೆ (ಸಿಯಾಂಗ್ ಅಪ್ಪರ್ ಮಲ್ಟಿಪರ್ಪಸ್ ಪ್ರಾಜೆಕ್ಟ್– ಯುಎಂಪಿ) ಎಂದು ಕರೆದಿತ್ತು. ಈ ಯೋಜನೆಯ ಬಗ್ಗೆ ಕಾರ್ಯಸಾಧ್ಯತಾ ವರದಿಯನ್ನು ಸಿದ್ಧಪಡಿಸುವಂತೆ 2022ರ ಏಪ್ರಿಲ್ನಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ಜಲವಿದ್ಯುತ್ ನಿಗಮಕ್ಕೆ (ಎನ್ಎಚ್ಪಿಸಿ) ಸೂಚಿಸಿತ್ತು. ಈ ಯೋಜನೆಯನ್ನು ಈಗ ಮತ್ತಷ್ಟು ಪರಿಷ್ಕರಿಸಿ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು 11,200 ಮೆಗಾವಾಟ್ಗೆ ಹೆಚ್ಚಿಸಲಾಗಿದೆ.‘ಚೀನಾ ಹಸ್ತಕ್ಷೇಪ ತಡೆಯಲು ಅಗತ್ಯ’ಅರುಣಾಚಲ ಪ್ರದೇಶ ತನ್ನದೆಂದು ವಾದಿಸುತ್ತಿರುವ ಚೀನಾ ಗಡಿಯಲ್ಲಿ ತಗಾದೆ ತೆಗೆಯುತ್ತಿದೆ. ಬ್ರಹ್ಮಪುತ್ರ ನದಿಯ ಮೇಲ್ಭಾಗದಲ್ಲಿ ಚೀನಾದ ಹಸ್ತಕ್ಷೇಪ ಹೆಚ್ಚಾಗುತ್ತಿದ್ದು, ಅದು ನಿರ್ಮಿಸುತ್ತಿರುವ ಅಣೆಕಟ್ಟು ಗಡಿಯಿಂದ 50 ಕಿ.ಮೀ ದೂರದಲ್ಲಷ್ಟೇ ಇದೆ. ಭಾರತ ಕೂಡ ಗಡಿ ಭಾಗದಲ್ಲೇ ಈ ಅಣೆಕಟ್ಟು ನಿರ್ಮಿಸುವುದರಿಂದ ರಾಜ್ಯಕ್ಕೆ ದೊಡ್ಡ ಮೂಲಸೌಕರ್ಯ ಯೋಜನೆ ಬಂದಂತಾಗುತ್ತದೆ. ಸ್ಥಳೀಯರಿಗೆ ಉದ್ಯೋಗ ಸೇರಿದಂತೆ ಗಡಿ ಪ್ರದೇಶದ ಅಭಿವೃದ್ಧಿಯೂ ಸಾಧ್ಯವಾಗುತ್ತದೆ. ಇದರಿಂದಾಗಿ ಚೀನಾ ಒಡ್ಡುತ್ತಿರುವ ಸವಾಲನ್ನು ಸಮರ್ಥವಾಗಿ ಎದುರಿಸಬಹುದು. ದೇಶದ ಭದ್ರತೆ ಹಿತದೃಷ್ಟಿಯಿಂದ ಈ ಯೋಜನೆ ಕಾರ್ಯರೂಪಕ್ಕೆ ಬರಬೇಕು ಎಂಬ ವಾದವನ್ನು ಸ್ಥಳೀಯ ಜನಪ್ರತಿನಿಧಿಗಳು, ಸೇನಾಧಿಕಾರಿಗಳು, ಯೋಜನೆಯ ಪರವಾಗಿರುವವರು ಮುಂದಿಡುತ್ತಿದ್ದಾರೆ.ಈಗ ಅರುಣಾಚಲ ಪ್ರದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಮುಂದಿಟ್ಟುಕೊಂಡು ಚೀನಾವು, ಅರುಣಾಚಲ ಪ್ರದೇಶದ ಜನರು ಭಾರತದ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಅದಕ್ಕಾಗಿ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಇಳಿದಿದ್ದಾರೆ ಎಂಬರ್ಥದ ಮಾತುಗಳನ್ನು ಚೀನಾದ ನಾಯಕರು, ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.ಚೀನಾ ಅಣೆಕಟ್ಟೆಗೆ ಸವಾಲು ಒಡ್ಡಬಲ್ಲುದೇ?ಟಿಬೆಟ್ನ ದಕ್ಷಿಣ ಭಾಗದಲ್ಲಿ ಗಡಿ ಭಾಗ ಮೆಡಾಗ್ ಎಂಬ ಪ್ರದೇಶದಲ್ಲಿ ಚೀನಾ ನಿರ್ಮಿಸುತ್ತಿರುವ, 60 ಸಾವಿರ ಮೆಗವಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯದ ಜಗತ್ತಿನ ಅತ್ಯಂತ ದೊಡ್ಡ ಅಣೆಕಟ್ಟೆಗೆ ಪ್ರತಿಯಾಗಿ ಭಾರತ ಈ ಅಣೆಕಟ್ಟೆಯನ್ನು ನಿರ್ಮಿಸುತ್ತಿದೆ.ಟಿಬೆಟ್ನಲ್ಲಿ ಯಾರ್ಲಂಗ್ ಸಂಗ್ಪೊ ನದಿಯು ಅರುಣಾಚಲ ಪ್ರದೇಶ ಪ್ರವೇಶಿಸುವುದಕ್ಕೂ ಮುನ್ನ, ಅದರ ನೀರಿನ ಹರಿವನ್ನು ತಡೆದು ವಿದ್ಯುತ್ ಉತ್ಪಾದನೆ ಮಾಡುವುದು ಚೀನಾದ ಯೋಜನೆ. 2024ರಲ್ಲಿ ಈ ಯೋಜನೆಯನ್ನು ಅದು ಘೋಷಿಸಿತ್ತು. ಅಂದಾಜು ₹15.98 ಲಕ್ಷ ಕೋಟಿ ವೆಚ್ಚದ ಈ ಯೋಜನೆಗೆ ಕಳೆದ ವರ್ಷ ಚಾಲನೆಯನ್ನೂ ನೀಡಿದೆ.ಚೀನಾವು ಈ ಅಣೆಕಟ್ಟೆಯನ್ನು ಬಳಸಿಕೊಂಡು ಬ್ರಹ್ಮಪುತ್ರ ನೀರಿನ ಹರಿವನ್ನು ತಡೆಯಬಹುದು ಎಂಬುದು ಭಾರತದ ಆತಂಕ. ಹಾಗಾಗಿ, ಚೀನಾ ಯೋಜನೆಯ ಬಗ್ಗೆ ಕೇಂದ್ರ ಸರ್ಕಾರ ಕಳವಳ ವ್ಯಕ್ತಪಡಿಸಿದೆ.ಚೀನಾದ ಅಣೆಕಟ್ಟೆ ಯೋಜನೆಗೆ ಪ್ರತಿಯಾಗಿ, ಬ್ರಹ್ಮಪುತ್ರ ನದಿಯ ನೀರನ್ನು ತಡೆ ಹಿಡಿದು, ವಿದ್ಯುತ್ ಉತ್ಪಾದನೆಯ ಜೊತೆಗೆ, ಬೇರೆ ಬೇರೆ ಉದ್ದೇಶಗಳಿಗೆ ನೀರನ್ನು ಬಳಸುವುದು ಕೇಂದ್ರ ಸರ್ಕಾರದ ಯೋಚನೆ.ಆದರೆ, ಚೀನಾದ್ದು 60 ಸಾವಿರ ಮೆಗಾವಾಟ್ ಸಾಮರ್ಥ್ಯದ ಯೋಜನೆ, ಕೇಂದ್ರ ಸರ್ಕಾರ ಪ್ರಸ್ತಾಪಿಸುತ್ತಿರುವುದು 11,200 ಮೆಗಾವಾಟ್ ಸಾಮರ್ಥ್ಯದ್ದು. ಅಷ್ಟು ದೊಡ್ಡ ಅಣೆಕಟ್ಟೆಗೆ, ನಮ್ಮ ಅಣೆಕಟ್ಟೆ ಸರಿಸಾಟಿಯಾಗಬಲ್ಲದೇ, ಚೀನಾ ಏಕಾಏಕಿ ನೀರು ಬಿಟ್ಟರೆ, ಅದನ್ನು ತಡೆಯಲು ಸಣ್ಣ ಅಣೆಕಟ್ಟೆಗೆ ಸಾಧ್ಯವಾಗಬಹುದೇ ಎಂಬ ಪ್ರಶ್ನೆಯನ್ನು ಯೋಜನೆಗೆ ಆಕ್ಷೇಪ ವ್ಯಕ್ತಪಡಿಸುತ್ತಿರುವವರು ಕೇಳುತ್ತಿದ್ದಾರೆ.ಪರಿಸರವಾದಿಗಳ ವಿರೋಧಪರಿಸರವಾದಿಗಳು ಕೂಡ ಯೋಜನೆಯನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಅರುಣಾಚಲ ಪ್ರದೇಶ ಸೇರಿದಂತೆ ದೇಶದ ಈಶಾನ್ಯ ಭಾಗವು ಪರಿಸರ ಸೂಕ್ಷ್ಮವಾದ ಪ್ರದೇಶ. ಅಲ್ಲಿ ಯಾವುದೇ ಅಭಿವೃದ್ಧಿ ಯೋಜನೆ ಕಾರ್ಯಸಾಧುವಲ್ಲ. ಈಗ ಅಣೆಕಟ್ಟೆಗೆ ಗುರುತಿಸಿರುವ ಪ್ರದೇಶವು ಹಿಮಾಲಯದ ಭೂಕಂಪನ ಸಂಭವನೀಯ ಪ್ರದೇಶವಾಗಿದೆ. ಇಲ್ಲಿನ ನೆಲದಾಳದಲ್ಲಿ ಭೂಕಂಪನದ ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ. ಹಾಗಾಗಿ, ಭಾರತವು ನಿರ್ಮಿಸಲು ಹೊರಟಿಸಿರುವ ಅಣೆಕಟ್ಟು ಸೂಕ್ಷ್ಮ ಭೂಪ್ರದೇಶಕ್ಕೆ ಮಾರಕವಾಗಿವೆ. ಸಿಯಾಂಗ್ ಕಣಿವೆ ಪ್ರದೇಶವು ಅರಣ್ಯದಿಂದ ಆವೃತವಾಗಿದ್ದು ಅಣೆಕಟ್ಟು ನಿರ್ಮಾಣದಿಂದ ಕಾಡು ನಾಶವಾಗಲಿದೆ ಎಂಬುದು ಅವರ ವಾದ.ಆಧಾರ: ಪಿಟಿಐ, ಎಎಫ್ಪಿ, ಐಡಿಎಸ್ಎ.ಇನ್, ಡೌನ್ಟು ಅರ್ಥ್, ಮಾಧ್ಯಮ ವರದಿಗಳು06-11-2026 siang river dam graph.pdfHighlights - ಯೋಜನೆಯ ನೋಟ 11,200 ಮೆಗಾವಾಟ್ ಪ್ರಸ್ತಾವಿತ ಜಲವಿದ್ಯುತ್ ಯೋಜನೆಯ ಅಡಿಯಲ್ಲಿ ಉತ್ಪಾದಿಸಲು ಉದ್ದೇಶಿಸಲಾಗಿರುವ ವಿದ್ಯುತ್ತಿನ ಪ್ರಮಾಣ ₹1.15 ಲಕ್ಷ ಕೋಟಿ ಯೋಜನೆಯ ಅಂದಾಜು ವೆಚ್ಚ 920 ಕೋಟಿ ಘನ ಮೀಟರ್ ಪ್ರಸ್ತಾವಿತ ಅಣೆಕಟ್ಟಿನ ನೀರು ಸಂಗ್ರಹ ಸಾಮರ್ಥ್ಯ 15 ಸಾವಿರ ಚದರ ಕಿ.ಮೀ ಸಿಯಾಂಗ್ ನದಿ ಅಚ್ಚುಕಟ್ಟು ಪ್ರದೇಶದ ವಿಸ್ತೀರ್ಣ 82% ನದಿ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿರುವ ಅರಣ್ಯದ ಪ್ರಮಾಣ ––––––––––– Cut-off box - ನಾಲ್ಕು ದಶಕಗಳ ಹಿಂದಿನ ಪ್ರಸ್ತಾವಸಿಯಾಂಗ್ ಕಣಿವೆಯಲ್ಲಿ ಅಣೆಕಟ್ಟು ನಿರ್ಮಾಣ ಮಾಡುವುದು ಇಂದಿನ ಪ್ರಸ್ತಾವ ಅಲ್ಲ. ಮೊದಲ ಬಾರಿಗೆ 1982–83ರಲ್ಲಿ ಬಹ್ಮಪುತ್ರ ಮಂಡಳಿಯು ನದಿ ನೀರನ್ನು ತಡೆದು ಜಲ ವಿದ್ಯುತ್ ಉತ್ಪಾದನೆ ಮಾಡುವ ಪ್ರಸ್ತಾವವನ್ನು ಮುಂದಿಟ್ಟಿತ್ತು. ಆಗಿನಿಂದಲೂ ಸ್ಥಳೀಯರು ಯೋಜನೆಯನ್ನು ವಿರೋಧಿಸುತ್ತಲೇ ಬಂದಿದ್ದಾರೆ.ನಂತರ 9500 ಮೆಗಾ ವಾಟ್ ಸಾಮರ್ಥ್ಯದ ಸಿಯಾಂಗ್ ಮೇಲ್ಭಾಗದ ಜಲ ವಿದ್ಯುತ್ ಯೋಜನೆಯನ್ನು ರೂಪಿಸಲಾಗಿತ್ತು. 2008ರಲ್ಲಿ ಇದನ್ನು ‘ರಾಷ್ಟ್ರೀಯ ಯೋಜನೆ’ ಎಂದು ಘೋಷಿಸಲಾಗಿತ್ತು. ಸ್ಥಳೀಯರ ವಿರೋಧದ ನಂತರ ಅದು ನನೆಗುದಿಗೆ ಬಿದ್ದಿತ್ತು.2017ರಲ್ಲಿ ನೀತಿ ಆಯೋಗವು ಹಿಂದಿನ ಪ್ರಸ್ತಾವಿತ ಯೋಜನೆಯನ್ನು ಪರಿಷ್ಕರಿಸಿ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು 10 ಸಾವಿರ ಮೆಗಾ ವಾಟ್ಗೆ ಹೆಚ್ಚಿಸಿತ್ತು. ಅದನ್ನು ಸಿಯಾಂಗ್ ಮೇಲ್ಭಾಗದ ಬಹು ಉದ್ದೇಶದ ಯೋಜನೆ (ಸಿಯಾಂಗ್ ಅಪ್ಪರ್ ಮಲ್ಟಿಪರ್ಪಸ್ ಪ್ರಾಜೆಕ್ಟ್– ಯುಎಂಪಿ) ಎಂದು ಕರೆದಿತ್ತು. ಈ ಯೋಜನೆಯ ಬಗ್ಗೆ ಕಾರ್ಯಸಾಧ್ಯತಾ ವರದಿಯನ್ನು ಸಿದ್ಧಪಡಿಸುವಂತೆ 2022ರ ಏಪ್ರಿಲ್ನಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ಜಲವಿದ್ಯುತ್ ನಿಗಮಕ್ಕೆ (ಎನ್ಎಚ್ಪಿಸಿ) ಸೂಚಿಸಿತ್ತು. ಈ ಯೋಜನೆಯನ್ನು ಈಗ ಮತ್ತಷ್ಟು ಪರಿಷ್ಕರಿಸಿ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು 11200 ಮೆಗಾವಾಟ್ಗೆ ಹೆಚ್ಚಿಸಲಾಗಿದೆ.Cut-off box - ಸದ್ಯದ ಸ್ಥಿತಿಗತಿಸಿಯಾಂಗ್ ಅಪ್ಪರ್ ಜಿಲ್ಲೆಯ ಗೆಕೂ ಗ್ರಾಮದಲ್ಲಿ ಅಣೆಕಟ್ಟು ನಿರ್ಮಿಸುವುದು ಕೇಂದ್ರ ಸರ್ಕಾರದ ಉದ್ದೇಶ. ರಾಷ್ಟ್ರೀಯ ಜಲವಿದ್ಯುತ್ ನಿಗಮ (ಎನ್ಎಚ್ಪಿಸಿ) ಮತ್ತು ಅರುಣಾಚಲ ಪ್ರದೇಶವು ಜಂಟಿಯಾಗಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಿವೆ.ಎನ್ಎಚ್ಪಿಸಿಯು ಯೋಜನೆಗಾಗಿ ಪ್ರಾಥಮಿಕ ಕಾರ್ಯ ಸಾಧ್ಯತೆ ವರದಿಯನ್ನು ಸಿದ್ಧಪಡಿಸುತ್ತಿದೆ. ಸ್ಥಳ ಸಮೀಕ್ಷೆ ಭೂಪ್ರದೇಶದ ಪರಿಶೀಲನೆ ಮತ್ತು ಭೂವಿಜ್ಞಾನಕ್ಕೆ ಸಂಬಂಧಿಸಿದ ಪರೀಕ್ಷೆಗಳೆಲ್ಲ ಮುಗಿದಿವೆ. ಪರೋಂಗ್ ದಿತೆ ದಿಮೆ ಮತ್ತು ಉಗೆಂಗ್ ಗ್ರಾಮಗಳಲ್ಲಿ ಭೂಮಿಯ ಆಳಕ್ಕೆ ಕೊಳವೆ ಬಾವಿಗಳನ್ನು ಕೊರೆದು (200 ಮೀಟರ್ನಷ್ಟು ಉದ್ದ) ನೆಲದ ಅಡಿಯಲ್ಲಿರುವ ಕಲ್ಲಿನ ಗುಣಲಕ್ಷಣಗಳನ್ನು ಅಧ್ಯಯನ ನಡೆಸುವ ಕೆಲಸವಷ್ಟೇ ಬಾಕಿ ಇದೆ ಎಂದು ವರದಿಯಾಗಿದೆ. ಈ ಕೆಲಸ ಪೂರ್ಣಗೊಂಡರೆ ಅಣೆಕಟ್ಟು ನಿರ್ಮಾಣದ ಸ್ಥಳವನ್ನು ಅಂತಿಮಗೊಳಿಸಬಹುದು ಎಂಬುದು ಅಧಿಕಾರಿಗಳ ಹೇಳಿಕೆ.Cut-off box - ‘ಚೀನಾ ಹಸ್ತಕ್ಷೇಪ ತಡೆಯಲು ಅಗತ್ಯ’ಅರುಣಾಚಲ ಪ್ರದೇಶ ತನ್ನದೆಂದು ವಾದಿಸುತ್ತಿರುವ ಚೀನಾ ಗಡಿಯಲ್ಲಿ ತಗಾದೆ ತೆಗೆಯುತ್ತಿದೆ. ಬ್ರಹ್ಮಪುತ್ರ ನದಿಯ ಮೇಲ್ಭಾಗದಲ್ಲಿ ಚೀನಾದ ಹಸ್ತಕ್ಷೇಪ ಹೆಚ್ಚಾಗುತ್ತಿದ್ದು ಅದು ನಿರ್ಮಿಸುತ್ತಿರುವ ಅಣೆಕಟ್ಟು ಗಡಿಯಿಂದ 50 ಕಿ.ಮೀ ದೂರದಲ್ಲಷ್ಟೇ ಇದೆ. ಭಾರತ ಕೂಡ ಗಡಿ ಭಾಗದಲ್ಲೇ ಈ ಅಣೆಕಟ್ಟು ನಿರ್ಮಿಸುವುದರಿಂದ ರಾಜ್ಯಕ್ಕೆ ದೊಡ್ಡ ಮೂಲಸೌಕರ್ಯ ಯೋಜನೆ ಬಂದಂತಾಗುತ್ತದೆ. ಸ್ಥಳೀಯರಿಗೆ ಉದ್ಯೋಗ ಸೇರಿದಂತೆ ಗಡಿ ಪ್ರದೇಶದ ಅಭಿವೃದ್ಧಿಯೂ ಸಾಧ್ಯವಾಗುತ್ತದೆ. ಇದರಿಂದಾಗಿ ಚೀನಾ ಒಡ್ಡುತ್ತಿರುವ ಸವಾಲನ್ನು ಸಮರ್ಥವಾಗಿ ಎದುರಿಸಬಹುದು. ದೇಶದ ಭದ್ರತೆ ಹಿತದೃಷ್ಟಿಯಿಂದ ಈ ಯೋಜನೆ ಕಾರ್ಯರೂಪಕ್ಕೆ ಬರಬೇಕು ಎಂಬ ವಾದವನ್ನು ಸ್ಥಳೀಯ ಜನಪ್ರತಿನಿಧಿಗಳು ಸೇನಾಧಿಕಾರಿಗಳು ಯೋಜನೆಯ ಪರವಾಗಿರುವವರು ಮುಂದಿಡುತ್ತಿದ್ದಾರೆ.ಈಗ ಅರುಣಾಚಲ ಪ್ರದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಮುಂದಿಟ್ಟುಕೊಂಡು ಚೀನಾವು ಅರುಣಾಚಲ ಪ್ರದೇಶದ ಜನರು ಭಾರತದ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಅದಕ್ಕಾಗಿ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಇಳಿದಿದ್ದಾರೆ ಎಂಬರ್ಥದ ಮಾತುಗಳನ್ನು ಚೀನಾದ ನಾಯಕರು ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.Cut-off box - ಚೀನಾ ಅಣೆಕಟ್ಟೆಗೆ ಸವಾಲು ಒಡ್ಡಬಲ್ಲುದೇ?ಟಿಬೆಟ್ನ ದಕ್ಷಿಣ ಭಾಗದಲ್ಲಿ ಗಡಿ ಭಾಗ ಮೆಡಾಗ್ ಎಂಬ ಪ್ರದೇಶದಲ್ಲಿ ಚೀನಾ ನಿರ್ಮಿಸುತ್ತಿರುವ 60 ಸಾವಿರ ಮೆಗವಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯದ ಜಗತ್ತಿನ ಅತ್ಯಂತ ದೊಡ್ಡ ಅಣೆಕಟ್ಟೆಗೆ ಪ್ರತಿಯಾಗಿ ಭಾರತ ಈ ಅಣೆಕಟ್ಟೆಯನ್ನು ನಿರ್ಮಿಸುತ್ತಿದೆ.ಟಿಬೆಟ್ನಲ್ಲಿ ಯಾರ್ಲಂಗ್ ಸಂಗ್ಪೊ ನದಿಯು ಅರುಣಾಚಲ ಪ್ರದೇಶ ಪ್ರವೇಶಿಸುವುದಕ್ಕೂ ಮುನ್ನ ಅದರ ನೀರಿನ ಹರಿವನ್ನು ತಡೆದು ವಿದ್ಯುತ್ ಉತ್ಪಾದನೆ ಮಾಡುವುದು ಚೀನಾದ ಯೋಜನೆ. 2024ರಲ್ಲಿ ಈ ಯೋಜನೆಯನ್ನು ಅದು ಘೋಷಿಸಿತ್ತು. ಅಂದಾಜು ₹15.98 ಲಕ್ಷ ಕೋಟಿ ವೆಚ್ಚದ ಈ ಯೋಜನೆಗೆ ಕಳೆದ ವರ್ಷ ಚಾಲನೆಯನ್ನೂ ನೀಡಿದೆ.ಚೀನಾವು ಈ ಅಣೆಕಟ್ಟೆಯನ್ನು ಬಳಸಿಕೊಂಡು ಬ್ರಹ್ಮಪುತ್ರ ನೀರಿನ ಹರಿವನ್ನು ತಡೆಯಬಹುದು ಎಂಬುದು ಭಾರತದ ಆತಂಕ. ಹಾಗಾಗಿ ಚೀನಾ ಯೋಜನೆಯ ಬಗ್ಗೆ ಕೇಂದ್ರ ಸರ್ಕಾರ ಕಳವಳ ವ್ಯಕ್ತಪಡಿಸಿದೆ.ಚೀನಾದ ಅಣೆಕಟ್ಟೆ ಯೋಜನೆಗೆ ಪ್ರತಿಯಾಗಿ ಬ್ರಹ್ಮಪುತ್ರ ನದಿಯ ನೀರನ್ನು ತಡೆ ಹಿಡಿದು ವಿದ್ಯುತ್ ಉತ್ಪಾದನೆಯ ಜೊತೆಗೆ ಬೇರೆ ಬೇರೆ ಉದ್ದೇಶಗಳಿಗೆ ನೀರನ್ನು ಬಳಸುವುದು ಕೇಂದ್ರ ಸರ್ಕಾರದ ಯೋಚನೆ.ಆದರೆ ಚೀನಾದ್ದು 60 ಸಾವಿರ ಮೆಗಾವಾಟ್ ಸಾಮರ್ಥ್ಯದ ಯೋಜನೆ ಕೇಂದ್ರ ಸರ್ಕಾರ ಪ್ರಸ್ತಾಪಿಸುತ್ತಿರುವುದು 11200 ಮೆಗಾವಾಟ್ ಸಾಮರ್ಥ್ಯದ್ದು. ಅಷ್ಟು ದೊಡ್ಡ ಅಣೆಕಟ್ಟೆಗೆ ನಮ್ಮ ಅಣೆಕಟ್ಟೆ ಸರಿಸಾಟಿಯಾಗಬಲ್ಲದೇ ಚೀನಾ ಏಕಾಏಕಿ ನೀರು ಬಿಟ್ಟರೆ ಅದನ್ನು ತಡೆಯಲು ಸಣ್ಣ ಅಣೆಕಟ್ಟೆಗೆ ಸಾಧ್ಯವಾಗಬಹುದೇ ಎಂಬ ಪ್ರಶ್ನೆಯನ್ನು ಯೋಜನೆಗೆ ಆಕ್ಷೇಪ ವ್ಯಕ್ತಪಡಿಸುತ್ತಿರುವವರು ಕೇಳುತ್ತಿದ್ದಾರೆ.ಪರಿಸರವಾದಿಗಳ ವಿರೋಧ: ಪರಿಸರವಾದಿಗಳು ಕೂಡ ಯೋಜನೆಯನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಅರುಣಾಚಲ ಪ್ರದೇಶ ಸೇರಿದಂತೆ ದೇಶದ ಈಶಾನ್ಯ ಭಾಗವು ಪರಿಸರ ಸೂಕ್ಷ್ಮವಾದ ಪ್ರದೇಶ. ಅಲ್ಲಿ ಯಾವುದೇ ಅಭಿವೃದ್ಧಿ ಯೋಜನೆ ಕಾರ್ಯಸಾಧುವಲ್ಲ. ಈಗ ಅಣೆಕಟ್ಟೆಗೆ ಗುರುತಿಸಿರುವ ಪ್ರದೇಶವು ಹಿಮಾಲಯದ ಭೂಕಂಪನ ಸಂಭವನೀಯ ಪ್ರದೇಶವಾಗಿದೆ. ಇಲ್ಲಿನ ನೆಲದಾಳದಲ್ಲಿ ಭೂಕಂಪನದ ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ. ಹಾಗಾಗಿ ಭಾರತವು ನಿರ್ಮಿಸಲು ಹೊರಟಿಸಿರುವ ಅಣೆಕಟ್ಟು ಸೂಕ್ಷ್ಮ ಭೂಪ್ರದೇಶಕ್ಕೆ ಮಾರಕವಾಗಿವೆ. ಸಿಯಾಂಗ್ ಕಣಿವೆ ಪ್ರದೇಶವು ಅರಣ್ಯದಿಂದ ಆವೃತವಾಗಿದ್ದು ಅಣೆಕಟ್ಟು ನಿರ್ಮಾಣದಿಂದ ಕಾಡು ನಾಶವಾಗಲಿದೆ ಎಂಬುದು ಅವರ ವಾದ.