‘ರಾಮಾಯಣ’ ಸಿನಿಮಾ ವಿಮರ್ಶೆ: ದಶಾನನನ ಲೋಕದಲ್ಲಿ ರಾಮಾಯಣ
ಭಾರತೀಯರು ‘ರಾಮಾಯಣ’ದ ಕಥೆ ಕೇಳುತ್ತಾ, ಓದುತ್ತಾ ಬೆಳೆದವರು. ದೂರದರ್ಶನದಲ್ಲಿ ಹಾಗೂ ಬೆಳ್ಳಿಪರದೆಯಲ್ಲೂ ಈ ಕಥೆಯು ದೃಶ್ಯರೂಪವಾಗಿ ಪರಿವರ್ತನೆಯಾಗಿರುವುದನ್ನು ಕಂಡಿದ್ದೇವೆ. ಆದರೆ ಈ ಬಾರಿ ಬೆಳ್ಳಿತೆರೆಯಲ್ಲಿ ನಮಿತ್ ಮಲ್ಹೋತ್ರಾ ಹಾಗೂ ಯಶ್ ಕಟ್ಟಿಕೊಟ್ಟಿರುವ ‘ರಾಮಾಯಣ’ವು ಅಗಾಧವಾದ, ಉತ್ಕೃಷ್ಟ ದೃಶ್ಯವೈಭವವನ್ನು ಒಳಗೊಂಡಿದ್ದು, ಕಲ್ಪನಾಶಕ್ತಿಯನ್ನು ಪ್ರದರ್ಶಿಸಿದೆ.

ಭಾರತೀಯರು ‘ರಾಮಾಯಣ’ದ ಕಥೆ ಕೇಳುತ್ತಾ, ಓದುತ್ತಾ ಬೆಳೆದವರು. ದೂರದರ್ಶನದಲ್ಲಿ ಹಾಗೂ ಬೆಳ್ಳಿಪರದೆಯಲ್ಲೂ ಈ ಕಥೆಯು ದೃಶ್ಯರೂಪವಾಗಿ ಪರಿವರ್ತನೆಯಾಗಿರುವುದನ್ನು ಕಂಡಿದ್ದೇವೆ. ಆದರೆ ಈ ಬಾರಿ ಬೆಳ್ಳಿತೆರೆಯಲ್ಲಿ ನಮಿತ್ ಮಲ್ಹೋತ್ರಾ ಹಾಗೂ ಯಶ್ ಕಟ್ಟಿಕೊಟ್ಟಿರುವ ‘ರಾಮಾಯಣ’ವು ಅಗಾಧವಾದ, ಉತ್ಕೃಷ್ಟ ದೃಶ್ಯವೈಭವವನ್ನು ಒಳಗೊಂಡಿದ್ದು, ಕಲ್ಪನಾಶಕ್ತಿಯನ್ನು ಪ್ರದರ್ಶಿಸಿದೆ. ಕಥೆಯಲ್ಲಿ ಯಾವ ಬದಲಾವಣೆಯೂ ಇಲ್ಲ. ಒಂದಿಷ್ಟು ಪ್ರಸಂಗಗಳನ್ನು ಬೇರೆ ಬೇರೆ ರೀತಿಯಲ್ಲಿ ನಾವು ಕೇಳಿದ್ದಿರಬಹುದು, ಅವು ಚಿತ್ರದಲ್ಲಿ ಬದಲಾಗಿರುವುದನ್ನು ಕಾಣಬಹುದು. ಆದರೆ ಮೂಲ ಅದೇ. ಅಸುರರನ್ನು ಸೋಲಿಸುವ ಇಂದ್ರ, ಕುಬೇರನ ಕೈಗೆ ಲಂಕೆಯ ಅಧಿಕಾರ, ಕೈಕಸಿಯ ಪ್ರತೀಕಾರ, ರಾವಣನಾಗಿ ಬದಲಾಗುವ ದಶಾನನ, ಬ್ರಹ್ಮನ ಬಳಿ ಅಜೇಯತ್ವಕ್ಕಾಗಿ ವರ, ಆತನ ಸಂಹಾರಕ್ಕಾಗಿ ರಾಮನ ಜನನ, ಆತನ ಪರಾಕ್ರಮ, ವನವಾಸ, ಶೂರ್ಪನಖಿಯ ಪ್ರಸಂಗ, ಸೀತಾಪಹರಣ. ಇದುವೇ ‘ರಾಮಾಯಣ: ಭಾಗ 1’ರ ಕಥೆ.ಕಥೆ ಅದೇ ಆಗಿದ್ದರೂ ಅದನ್ನು ಪ್ರಸ್ತುತಪಡಿಸಿರುವ ರೀತಿ ಆಕರ್ಷಕ. ‘ಡ್ಯೂನ್’, ‘ಟೆನೆಟ್’, ‘ಇಂಟರ್ಸ್ಟೆಲ್ಲಾರ್’ ಮುಂತಾದ ಖ್ಯಾತ ಹಾಲಿವುಡ್ ಸಿನಿಮಾಗಳಿಗೆ ವಿಎಫ್ಎಕ್ಸ್ ಮಾಡಿ, ಎಂಟು ಬಾರಿ ಆಸ್ಕರ್ ಪ್ರಶಸ್ತಿ ಪಡೆದ ‘ಡಿಎನ್ಇಜಿ’ ಕಂಪನಿಯ ಕಲಾವಿದರ ಕೈಯಲ್ಲಿ ಭಾರತದ ಮಹಾಕಾವ್ಯ ಜೀವ ಪಡೆದಿದೆ. ಹೊರ ದೇಶಕ್ಕೂ ಅರ್ಥವಾಗುವ ಸಾಮರ್ಥ್ಯ ಪಡೆದಿದೆ. ಸಿನಿಮಾ ವಿಮರ್ಶೆ: ಸಂಬಂಧಗಳ ಭಾವತೀವ್ರತೆಯ ಪ್ರೇಮದ ಊರಲಿ‘ಹೆಗ್ಗಣ ಮುದ್ದು’ ಸಿನಿಮಾ ವಿಮರ್ಶೆ: ನೋಡುಗರಿಗೂ ಹೆಗ್ಗಣ ಮುದ್ದುಕಥೆಯ ಆರಂಭದಲ್ಲಿ ಬರುವ ಅಸುರರು ಹಾಗೂ ದೇವತೆಗಳ ನಡುವಿನ ಯುದ್ಧ, ಇಂದ್ರನ ಪ್ರವೇಶವೇ ಈ ಸಿನಿಮಾಗೊಂದು ಗಟ್ಟಿಯಾದ ವೇದಿಕೆ ಹಾಕಿಕೊಡುತ್ತದೆ. 3ಡಿ ತಂತ್ರಜ್ಞಾನದಲ್ಲಿ ನೋಡಿದಾಗ ಅದೊಂದು ಹೊಸ ಅನುಭವವೇ. ಅಲ್ಲಿಂದಾಚೆಗೆ ಹೆಚ್ಚಿನ ತೆರೆ ಅವಧಿ ‘ರಾವಣ’ನದ್ದೇ. ಆರಂಭದಲ್ಲೇ ಯಶ್ ತಮ್ಮ ನಿರ್ಮಾಣ ಸಂಸ್ಥೆಯ ಲಾಂಛನವನ್ನೂ ‘ರಾವಣ’ನನ್ನಾಗಿ ಪರಿವರ್ತಿಸಿದ ರೀತಿ ಸೂಚ್ಯವಾಗಿ ಈ ಬಗ್ಗೆ ಮುನ್ಸೂಚನೆ ನೀಡುತ್ತದೆ. ಹೀಗಿದ್ದರೂ ಸಂಗೀತವನ್ನಷ್ಟೇ ಬಳಸಿಕೊಂಡು ಶಾಂತಸ್ವರೂಪಿ ‘ರಾಮ’ನ ಜೀವನ ಹಾಗೂ ಉಗ್ರರೂಪಿ–ಶಿವಭಕ್ತ ‘ರಾವಣ’ನ ಲೋಕವನ್ನು ನಿರ್ದೇಶಕರು ಬೇರ್ಪಡಿಸುತ್ತಾರೆ. ಅಣ್ಣ ತಮ್ಮಂದಿರ ನಡುವಿದ್ದ ಸ್ನೇಹ, ರಾಮ ಹಾಗೂ ಕೈಕೇಯಿಯ ಭಾವನಾತ್ಮಕ ದೃಶ್ಯವನ್ನು ಕಟ್ಟುತ್ತಾರೆ. ಕೇವಲ ಕಥೆಯಲ್ಲಿ ಕೇಳಿದ್ದ ಯುದ್ಧ–ಸಂಘರ್ಷದ ದೃಶ್ಯಗಳು, ರಾವಣನ ತಪಸ್ಸು, ಇಂದ್ರನೆದುರು ಪ್ರತ್ಯಕ್ಷವಾಗುವ ವಿಷ್ಣು ಮುಂತಾದವುಗಳೆಲ್ಲ ಇಲ್ಲಿ ವಿಎಫ್ಎಕ್ಸ್ ಮೂಲಕ ಜೀವಪಡೆದಾಗ ಹೊಸ ಲೋಕ ಸೃಷ್ಟಿಯಾಗುತ್ತದೆ. ಜಟಾಯು ಹಾಗೂ ರಾವಣನ ನಡುವಿನ ಹೋರಾಟ, ರಾಮನೊಂದಿಗೆ ಜಟಾಯು ಕೊನೆ ಕ್ಷಣಗಳು ಜೀವಂತಿಕೆಯಿಂದ ಕೂಡಿವೆ. ‘ರಾಮ’ನಾಗಿ ರಣ್ಬೀರ್ ಕಪೂರ್ ಪ್ರಬುದ್ಧ, ಮುಗ್ಧ ನಟನೆ ಹಾಗೂ ‘ಸೀತೆ’ಯಾಗಿ ಸಾಯಿ ಪಲ್ಲವಿ ನಟನೆ ಚೆನ್ನಾಗಿದೆ. ಶೂರ್ಪನಖಿಯ ಮೂಗು ಕತ್ತರಿಸಿದ ಪ್ರಸಂಗದ ನಂತರ ‘ರಾಮ’ನೊಂದಿಗೆ ಯುದ್ಧವೋ ಅಥವಾ ಸಂಯಮವೋ ಎನ್ನುವ ಗೊಂದಲದಲ್ಲಿರುವ ಸಂದರ್ಭದಲ್ಲಿನ ‘ರಾವಣ’ನ ಮನಃಸ್ಥಿತಿಯನ್ನು ನಿರ್ದೇಶಕರು ಕಟ್ಟಿಕೊಟ್ಟ ರೀತಿ ಅದ್ಭುತ. ಹತ್ತು ತಲೆಯ ರಾವಣನೊಳಗಿನ ಮನಸ್ಸಿಗೂ ಹತ್ತಾರು ಯೋಚನೆಗಳು. ಹೀಗೆ ಯಶ್ ಹತ್ತು ಭಿನ್ನ ರಾವಣನಾಗಿ ಪ್ರತ್ಯಕ್ಷಗೊಳ್ಳುತ್ತಾರೆ. ಪ್ರತಿ ಪಾತ್ರದ ದನಿ, ವೇಷಭೂಷಣ, ನಡವಳಿಕೆಯೂ ಭಿನ್ನ. ಈ ಹಂತದಲ್ಲಿ ಒಮ್ಮೆ ‘ಟಿಕೆಟ್ ರಾವಣ’ನೂ ಇಣುಕಿ ನೋಡಿದಂತೆ ಭಾಸವಾಗುತ್ತದೆ! ಅವೆಲ್ಲವೂ ಒಂದಾಗುವ ಒಂದೈದು ನಿಮಿಷ ಯಶ್ ತೆರೆತುಂಬಾ ಆವರಿಸಿಕೊಂಡು ಬಿಡುತ್ತಾರೆ. ಒಟ್ಟಾರೆ ದಶಾನನನ ಲೋಕದಲ್ಲಿ ರಾಮನಿದ್ದಂತೆ ಭಾಸವಾಗುತ್ತದೆ. ‘ರಾಮಾಯಣ’ವೂ ಅದೇ ಅಲ್ಲವೇ? ‘ಬೇಲ್’ ಸಿನಿಮಾ ವಿಮರ್ಶೆ: ಉಪಕಥೆಗಳಲ್ಲಿ ಕಳೆದು ಹೋದ ಮೂಲ ಕಥೆ‘ಅಮೆರಿಕಾ ಅಮೆರಿಕಾ–2’ ಸಿನಿಮಾ ವಿಮರ್ಶೆ: ಹೊಸ ಪಾತ್ರಗಳಲ್ಲಿ ಹಳೆ ಅಂತರಂಗ ಕನ್ನಡ ಡಬ್ಬಿಂಗ್ ಪರಿಪೂರ್ಣವಾಗಿದೆ. ಯಶ್ ‘ರಾವಣ’ನ ಪಾತ್ರಕ್ಕೆ ಸ್ವತಃ ಡಬ್ಬಿಂಗ್ ಮಾಡಿರುವುದು, ಬೇರೆ ಪಾತ್ರಗಳ ಮಾತುಗಳೂ ಸ್ಪಷ್ಟವಾಗಿರುವುದು ಇದನ್ನು ಕನ್ನಡದಲ್ಲೇ ನೋಡಬೇಕಾದ ಚಿತ್ರವನ್ನಾಗಿ ಮಾಡುತ್ತದೆ. ಟೆರ್ರಿ ನಾಟರಿ ಹಾಗೂ ಗೈ ನೋರಿಸ್ ಸಂಯೋಜಿಸಿರುವ ಸಾಹಸ ಸನ್ನಿವೇಷಗಳು, ಯಶ್ ಹಾಗೂ ‘ರಾವಣ’ಲೋಕದ ವಸ್ತ್ರವಿನ್ಯಾಸ, ‘ಲಾರ್ಡ್ ಆಫ್ ದಿ ರಿಂಗ್ಸ್’ ಸರಣಿ ಖ್ಯಾತಿಯ ರಾಮ್ಸಿ ಅವೆರೆ ಹಾಗೂ ರವಿ ಬನ್ಸಲ್ ಅವರ ನಿರ್ಮಾಣ ವಿನ್ಯಾಸ ‘ರಾಮಾಯಣ’ವನ್ನು ಬಿಡುಗಣ್ಣಿನಿಂದ ನೋಡುವಂತೆ ಮಾಡಿದೆ.195 ನಿಮಿಷಗಳ ಮೊದಲ ಭಾಗವು, ಜಟಾಯುವಿನ ಅಂತ್ಯ ಹಾಗೂ ‘ರಾವಣ’ನನ್ನು ವಧಿಸುವ ‘ರಾಮ’ನ ಪ್ರತಿಜ್ಞೆಯಿಂದ ಅಂತ್ಯಗೊಳ್ಳುತ್ತದೆ. 2028ರಲ್ಲಿ ಎರಡನೇ ಭಾಗ ತೆರೆಕಾಣಲಿದೆ. ಸನ್ನಿ ಡಿಯೋಲ್ ‘ಹನುಮಂತ’ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದನ್ನು ಅಂತ್ಯದಲ್ಲಿ ಹೇಳಲಾಗಿದೆ.ನೋಡಬಹುದಾದ ಚಿತ್ರ