ಕಾರವಾರ: ಕ್ಯಾನ್ಸರ್ ಚಿಕಿತ್ಸೆಗೆ ಕ್ರಿಮ್ಸ್ ಸಜ್ಜು
ಕಾರವಾರ: ಜಿಲ್ಲೆಯಲ್ಲಿ ದಿನೇ ದಿನೇ ಕ್ಯಾನ್ಸರ್ ಪೀಡಿತರ ಸಂಖ್ಯೆ ಹೆಚ್ಚುತೊಡಗಿದ್ದು ಆತಂಕ ಸೃಷ್ಟಿಸಿದ್ದರೆ, ರೋಗಿಗಳು ಚಿಕಿತ್ಸೆಗೆ ಹೊರಜಿಲ್ಲೆಗೆ ಅಲೆದಾಡುವ ಬದಲು ಕಾರವಾರದಲ್ಲೇ ಚಿಕಿತ್ಸೆ ಪಡೆಯುವ ಸೌಲಭ್ಯ ಸಿಗಲು ದಿನಗಣನೆ ಆರಂಭಗೊಂಡಿದೆ.ಇಲ್ಲಿನ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್) ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಚಿಕಿತ್ಸೆ ವಿ

ಕಾರವಾರ: ಜಿಲ್ಲೆಯಲ್ಲಿ ದಿನೇ ದಿನೇ ಕ್ಯಾನ್ಸರ್ ಪೀಡಿತರ ಸಂಖ್ಯೆ ಹೆಚ್ಚುತೊಡಗಿದ್ದು ಆತಂಕ ಸೃಷ್ಟಿಸಿದ್ದರೆ, ರೋಗಿಗಳು ಚಿಕಿತ್ಸೆಗೆ ಹೊರಜಿಲ್ಲೆಗೆ ಅಲೆದಾಡುವ ಬದಲು ಕಾರವಾರದಲ್ಲೇ ಚಿಕಿತ್ಸೆ ಪಡೆಯುವ ಸೌಲಭ್ಯ ಸಿಗಲು ದಿನಗಣನೆ ಆರಂಭಗೊಂಡಿದೆ.ಇಲ್ಲಿನ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್) ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಚಿಕಿತ್ಸೆ ವಿಭಾಗ ಆರಂಭಕ್ಕೆ ಬಹುತೇಕ ಸಿದ್ಧತೆ ಪೂರ್ಣಗೊಂಡಿದೆ. ಕೆಲವೇ ದಿನಗಳಲ್ಲಿ ವಿಭಾಗವು ಕಾರ್ಯಾರಂಭಿಸಲು ತಯಾರಿ ನಡೆದಿದೆ.ಆದರೆ, ರೇಡಿ ಯೋಥೆರಪಿ ಉಪಕರಣ ಗಳ ಬಳಕೆಗೆ ಅಣು ಶಕ್ತಿ ನಿಯಂತ್ರಣ ಮಂಡಳಿಯ (ಎಇಆರ್ಬಿ) ವಿಕಿರಣ ಸುರಕ್ಷಾ ವಿಭಾಗದಿಂದ ಅಂತಿಮ ಹಂತದ ಅನುಮತಿ ಪಡೆಯುವ ಪ್ರಕ್ರಿಯೆ ಇನ್ನಷ್ಟೆ ನಡೆಯಬೇಕಿದ್ದು, ಒಪ್ಪಿಗೆ ಸಿಕ್ಕ ಬಳಿಕ ಚಿಕಿತ್ಸೆ ಆರಂಭಗೊಳ್ಳಲಿದೆ.ಕ್ಯಾನ್ಸರ್ ಪೀಡಿತರು ಹೆಚ್ಚಿನ ಸಂಖ್ಯೆಯಲ್ಲಿರುವ ಜಿಲ್ಲೆಗಳ ಪೈಕಿ ಉತ್ತರ ಕನ್ನಡವೂ ಒಂದಾಗಿದೆ. ಹೀಗಾಗಿ, ಇಲ್ಲಿ ಕ್ಯಾನ್ಸರ್ ಆಸ್ಪತ್ರೆ ಸ್ಥಾಪಿಸಲು ಒಂದೂವರೆ ದಶಕದಿಂದ ಪ್ರಯತ್ನ ನಡೆದಿತ್ತು. ಆಸ್ಪತ್ರೆ ಆರಂಭಿಸಲು ಮುಂಬೈನ ಟಾಟಾ ಸ್ಮಾರಕ ಆಸ್ಪತ್ರೆ ಪ್ರಯತ್ನ ನಡೆಸಿತ್ತು. 2012–13ರಲ್ಲಿಯೇ ಕ್ಯಾನ್ಸರ್ ಚಿಕಿತ್ಸೆ ಆಸ್ಪತ್ರೆ ಸ್ಥಾಪನೆಗೆ ಅನುಮತಿ ಕೋರಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಕಾರವಾರ ತಾಲ್ಲೂಕಿನ ಶಿರವಾಡದಲ್ಲಿ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆಗೆ ಹಿಂದಿನ ಸರ್ಕಾರದ ಅವಧಿಯಲ್ಲಿ ಪ್ರಯತ್ನ ನಡೆಯಿತು. ಆದರೆ ಜಾಗ ದೊರೆಯದ ಕಾರಣ ಯೋಜನೆ ನನೆಗುದಿಗೆ ಬಿದ್ದಿತ್ತು.ಅಂತಿಮವಾಗಿ ಕ್ರಿಮ್ಸ್ನಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಪ್ರತ್ಯೇಕ ವಿಭಾಗ ಆರಂಭಿಸಲು ನಿರ್ಧರಿಸಲಾಗಿದ್ದು, 2024ರಲ್ಲಿಯೇ ಒಪ್ಪಿಗೆ ಸಿಕ್ಕಿತ್ತು. ರೆಡಿಯೋಥೆರಪಿಗೆ ಅಗತ್ಯವಿರುವ ಯಂತ್ರೋಪಕರಣಗಳು, ಎಂ.ಆರ್.ಐ ಸ್ಕ್ಯಾನಿಂಗ್ ಯಂತ್ರಗಳ ಅಳವಡಿಕೆ ಪ್ರಕ್ರಿಯೆ ಮುಗಿದಿದೆ. ವಿಕಿರಣ ಹರಡದಂತೆ ತಡೆಯುವ ಬಂಕರ್ ನಿರ್ಮಾಣ ಹಲವು ತಿಂಗಳ ಹಿಂದೆಯೇ ಪೂರ್ಣಗೊಂಡಿದೆ.‘ಕ್ಯಾನ್ಸರ್ ಚಿಕಿತ್ಸಾ ವಿಭಾಗಕ್ಕೆ ಅಗತ್ಯವಿರುವ ಉಪಕರಣಗಳ ಪೂರೈಕೆ ಆಗಿದ್ದು, ಅಳವಡಿಕೆ ಕೆಲಸವೂ ಮುಗಿದಿದೆ. ಆ್ಯಂಕಾಲಜಿ ತಜ್ಞರೊಬ್ಬರು ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿದ್ದಾರೆ. ಇನ್ನೂ ಎರಡು ಹುದ್ದೆಗೆ ಅರ್ಜಿ ಬಂದಿದೆ. ರೇಡಿಯೊಥೆರಪಿ ಉಪಕರಣಗಳ ತಾಂತ್ರಿಕ ಕಾರ್ಯಾಚರಣೆಗೆ ಟಿಎಲ್ಡಿ ಬ್ಯಾಡ್ಜ್ ಹೊಂದಿರುವ ಸಿಬ್ಬಂದಿ ನೇಮಕವಾಗಿದ್ದಾರೆ’ ಎಂದು ಕ್ರಿಮ್ಸ್ ನಿರ್ದೇಶಕಿ ಡಾ.ಪೂರ್ಣಿಮಾ ಆರ್.ಟಿ. ತಿಳಿಸಿದರು.ಹೊರ ಜಿಲ್ಲೆಗೆ ಅಲೆದಾಟಕ್ಯಾನ್ಸರ್ ಚಿಕಿತ್ಸೆಗೆ ಜಿಲ್ಲೆಯ ಜನರು ಮಂಗಳೂರು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಮಹಾನಗರಗಳ ಖಾಸಗಿ ಆಸ್ಪತ್ರೆಗಳಿಗೆ ಅಲೆದಾಡುವ ಅನಿವಾರ್ಯತೆ ಇಂದಿಗೂ ಇದೆ. ಚಿಕಿತ್ಸೆಯ ದುಬಾರಿ ವೆಚ್ಚ ಭರಿಸಲು ಬಡ, ಮಧ್ಯಮ ವರ್ಗದ ಕುಟುಂಬಗಳು ಪರದಾಡುತ್ತಿವೆ. ಆರೋಗ್ಯ ಇಲಾಖೆಯ ವರದಿ ಪ್ರಕಾರ ಪ್ರತಿ ವರ್ಷ ಕೇವಲ 400–450 ಕ್ಯಾನ್ಸರ್ ಪ್ರಕರಣ ವರದಿ ಆಗುತ್ತಿದೆ. ಆದರೆ, ವಾಸ್ತವದಲ್ಲಿ ಸರಾಸರಿ 4 ಸಾವಿರಕ್ಕೂ ಹೆಚ್ಚು ಕ್ಯಾನ್ಸರ್ ಪ್ರಕರಣಗಳು ಪ್ರತಿ ವರ್ಷ ಜಿಲ್ಲೆಯಲ್ಲಿ ದಾಖಲಾಗುತ್ತಿದೆ ಎಂಬುದಾಗಿ ಕ್ಯಾನ್ಸರ್ ಚಿಕಿತ್ಸೆಗೆ ಮೀಸಲಿರುವ ಕಿದ್ವಾಯಿ ಸ್ಮಾರಕ ಗ್ರಂಥಿ ಆಸ್ಪತ್ರೆಯ ಮಾಹಿತಿ ಹೇಳುತ್ತಿದೆ.–ಡಾ.ಪೂರ್ಣಿಮಾ ಆರ್.ಟಿ., ಕ್ರಿಮ್ಸ್ ನಿರ್ದೇಶಕಿಕ್ಯಾನ್ಸರ್ ಚಿಕಿತ್ಸಾ ವಿಭಾಗದಲ್ಲಿ ರೇಡಿಯೊಥೆರಪಿ ಪ್ರಕ್ರಿಯೆ ಆರಂಭಕ್ಕೆ ಎಇಆರ್ಬಿ ಅಂತಿಮ ಅನುಮತಿಗೆ ಅರ್ಜಿ ಸಲ್ಲಿಸುತ್ತಿದ್ದು, ಒಂದೆರಡು ವಾರದಲ್ಲಿ ಒಪ್ಪಿಗೆ ಸಿಗುವ ನಿರೀಕ್ಷೆ ಇದೆ.261105-20-475414652