ಟ್ರಂಪ್ ವಿರುದ್ಧ ಭ್ರಷ್ಟಾಚಾರ ಆರೋಪ: ತನಿಖೆಗೆ ಶಪಥ
ವಾಷಿಂಗ್ಟನ್: ಉಭಯ ಸದನಗಳಲ್ಲಿ ತಮ್ಮ ಸಂಖ್ಯಾಬಲ ಹೆಚ್ಚಿಸಿಕೊಂಡು ಸಂಸತ್ತಿನ(ಕಾಂಗ್ರೆಸ್) ಮೇಲೆ ನಿಯಂತ್ರಣ ಸಾಧಿಸಿರುವ ಡೆಮಾಕ್ರಾಟ್ಗಳು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಕುರಿತು ತನಿಖೆ ನಡೆಸುವುದಾಗಿ ಹೇಳಿದ್ದಾರೆ.ಮಧ್ಯಂತರ ಚುನಾವಣೆ ವೇಳೆ ಭ್ರಷ್ಟಾಚಾರವೇ ಮತದಾರರ ಪಾಲಿನ ಮುಖ್ಯ ವಿಷಯವಾಗಿತ್ತು. ಆಡಳಿತಾರೂಢ ರಿಪಬ್ಲಿಕನ್ ಪಕ್ಷದ ಅಭ

ವಾಷಿಂಗ್ಟನ್: ಉಭಯ ಸದನಗಳಲ್ಲಿ ತಮ್ಮ ಸಂಖ್ಯಾಬಲ ಹೆಚ್ಚಿಸಿಕೊಂಡು ಸಂಸತ್ತಿನ(ಕಾಂಗ್ರೆಸ್) ಮೇಲೆ ನಿಯಂತ್ರಣ ಸಾಧಿಸಿರುವ ಡೆಮಾಕ್ರಾಟ್ಗಳು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಕುರಿತು ತನಿಖೆ ನಡೆಸುವುದಾಗಿ ಹೇಳಿದ್ದಾರೆ.ಮಧ್ಯಂತರ ಚುನಾವಣೆ ವೇಳೆ ಭ್ರಷ್ಟಾಚಾರವೇ ಮತದಾರರ ಪಾಲಿನ ಮುಖ್ಯ ವಿಷಯವಾಗಿತ್ತು. ಆಡಳಿತಾರೂಢ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸಿ, ಅಧಿಕಾರವನ್ನು ಡೆಮಾಕ್ರಾಟ್ಗಳಿಗೆ ನೀಡಿರುವ ಜನರು ಕೂಡ ಈಗ ಭ್ರಷ್ಟಾಚಾರ ಮತ್ತು ಟ್ರಂಪ್ ಆಡಳಿತದ ನೀತಿಗಳ ಕುರಿತು ತನಿಖೆ ಬಯಸುತ್ತಿದ್ದಾರೆ.‘ಟ್ರಂಪ್ ಅವರು ಅಧ್ಯಕ್ಷರಾಗಿ ಆಯ್ಕೆಗೊಂಡ ನಂತರ, ಟ್ರಂಪ್ ಹಾಗೂ ಅವರ ಕುಟುಂಬಸ್ಥರ ಸಂಪತ್ತು ಹೆಚ್ಚಳವಾಗಿದೆ. ಈ ಕುರಿತು ಪರಿಶೀಲನೆ ನಡೆಸಲು ತೀರ್ಮಾನಿಸಲಾಗಿದ್ದು, ಕಾರ್ಯಸೂಚಿಯೊಂದನ್ನು ಸಿದ್ಧಪಡಿಸಲಾಗುತ್ತಿದೆ’ ಎಂದು ಡೆಮಾಕ್ರಟಿಕ್ ನಾಯಕ ಹಕೀಮ್ ಜೆಫ್ರೀಸ್ ಹೇಳಿದ್ದಾರೆ. ಅಧ್ಯಕ್ಷ ಟ್ರಂಪ್ ಅವರಿಗೆ ಮೂರನೇ ಬಾರಿ ವಾಗ್ದಂಡನೆ ವಿಧಿಸಲು ಯತ್ನಿಸುವುದಾಗಿಯೂ ಹೇಳಿದ್ದಾರೆ. ಜೆಫ್ರೀಸ್ ಅವರು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ಗೆ ಆಯ್ಕೆಯಾಗಿದ್ದು, ಸಂಸತ್ ಸ್ಪೀಕರ್ ಆಗುವ ಸಾಧ್ಯತೆಗಳಿವೆ.ಸೆನೆಟ್ (ಸಂಸತ್ತಿನ ಮೇಲ್ಮನೆ) ಕೂಡ ಟ್ರಂಪ್ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಕುರಿತು ತನಿಖೆ ನಡೆಸುವ ಸಾಧ್ಯತೆಗಳಿವೆ.‘ಸರ್ಕಾರದಲ್ಲಿರುವ ಭ್ರಷ್ಟಾಚಾರವನ್ನು ನಾವು ನಿರ್ಮೂಲನೆ ಮಾಡಬೇಕು ಎಂಬುದು ಅಮೆರಿಕ ಜನತೆಯ ಬಯಕೆ’ ಎಂದು ಸೆನೆಟರ್ ಚಕ್ ಶುಮರ್ ಹೇಳುತ್ತಾರೆ. ಎಪ್ಸ್ಟೈನ್ ಐಸಿಇ ದಾಳಿಗಳ ಕುರಿತು ತನಿಖೆ ಸಾಧ್ಯತೆ ಡೆಮಾಕ್ರಟಿಕ್ ಸಂಸದ ರಾಬರ್ಟ್ ಗಾರ್ಸಿಯಾ ಅವರು ಐದು ಪ್ರಮುಖ ಅಂಶಗಳನ್ನು ಪಟ್ಟಿ ಮಾಡಿದ್ದಾರೆ. ಟ್ರಂಪ್ ಕುಟುಂಬದ ವ್ಯವಹಾರಗಳು ಜೆಫ್ರಿ ಎಪ್ಸ್ಟೈನ್ ಕುರಿತ ತನಿಖೆಯನ್ನು ನಿರ್ವಹಿಸಿದ ರೀತಿ ವಲಸೆ ಮತ್ತು ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆ ಸೇರಿ ಈ ಐದು ಆದ್ಯತಾ ಅಂಶಗಳ ಕುರಿತು ಡೆಮಾಕ್ರಾಟ್ಗಳು ತನಿಖೆ ನಡೆಸುವ ಸಾಧ್ಯತೆ ಇದೆ. ‘ಟ್ರಂಪ್ ಅವರು ಶ್ವೇತಭವನ ಹಾಗೂ ಇತರೆಡೆ ಕೈಗೊಂಡ ನಿರ್ಮಾಣ ಯೋಜನೆಗಳು ಹಾಗೂ ಖನಿಜಗಳ ಕುರಿತ ಒಪ್ಪಂದಗಳಲ್ಲಿ ಟ್ರಂಪ್ ಕುಟುಂಬದ ಪಾತ್ರದ ಬಗ್ಗೆ ತನಿಖೆ ಅಗತ್ಯ’ ಎಂದು ಕ್ಯಾಲಿಫೋರ್ನಿಯಾದಿಂದ ಆಯ್ಕೆಯಾಗಿರುವ ಡೆಮಾಕ್ರಟಿಕ್ ಜರೇಡ್ ಹಫ್ಮನ್ ಹೇಳುತ್ತಾರೆ. ‘ಅಮೆರಿಕ ಜನರ ಆಶಯಕ್ಕೆ ವಿರುದ್ಧವಾಗಿ ಕೆಲಸ ಮಾಡಿದಂತೆ’ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ಕೆಲ ನಿರ್ಧಾರಗಳು ಹಾಗೂ ಟ್ರಂಪ್ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಕುರಿತು ತನಿಖೆ ನಡೆಸುವುದಾಗಿ ಡೆಮಾಕ್ರಾಟ್ಗಳು ಹೇಳಿರುವ ಬೆನ್ನಲ್ಲೇ ಶ್ವೇತಭವನ ವಕ್ತಾರೆ ಲಾರೆನ್ ಬಿಸ್ ಅವರು ವಿಪಕ್ಷ ಸಂಸದರ ವಿರುದ್ಧ ಕಿಡಿ ಕಾರಿದ್ದಾರೆ. ‘ಅಮೆರಿಕದ ಜನತೆ ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗಾಗಿ ಯಾರ ಜೊತೆಗೂ ಕೆಲಸ ಮಾಡಲು ಸಿದ್ಧ ಎಂದು ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ. ಆದರೆ ಕಪಟತನದಿಂದ ಕೂಡಿದ ತನಿಖೆಗಳನ್ನು ನಡೆಸಲು ಮೂಲಭೂತವಾದಿ ಎಡಪಂಥೀಯ ಸಿದ್ಧಾಂತ ಹೇರಲು ಡೆಮಾಕ್ರಾಟ್ಗಳು ಮುಂದಾದಲ್ಲಿ ಅವರು ಅಮೆರಿಕ ಜನರ ಆಶಯಕ್ಕೆ ವಿರುದ್ಧವಾಗಿ ಕೆಲಸ ಮಾಡಲು ನಿರ್ಧರಿಸಿದ್ದಾರೆ ಎಂದೇ ಅರ್ಥ’ ಎಂದು ಲಾರೆನ್ ಬಿಸ್ ಟೀಕಿಸಿದ್ದಾರೆ.