ಪಕ್ಷ ರಾಜಕಾರಣ ಪರಿಷತ್ತಿನೊಳಗೆ ಮೂಗುತೂರಿಸದಿರಲಿ: ಸಾಹಿತಿ ಎಸ್.ಜಿ.ಸಿದ್ದರಾಮಯ್ಯ
ಧಾರವಾಡ: ‘ಕಳೆದ 10 ವರ್ಷಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸ್ವಾಯತ್ತತೆಗೆ ಧಕ್ಕೆಯಾಗಿದೆ. ಪರಿಷತ್ತಿನ ಕಳೆದ ಚುನಾವಣೆಯಲ್ಲಿ ಪಕ್ಷವೊಂದರ ಪ್ರವೇಶವೇ ಅದಕ್ಕೆ ಕಾರಣ. ಪಕ್ಷ ರಾಜಕಾರಣ ಪರಿಷತ್ತಿನೊಳಗೆ ಮೂಗು ತೂರಿಸಬಾರದು’ ಎಂದು ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಹೇಳಿದರು. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಕ್ಷದ ಕೊಳಕು ರಾಜಕಾರಣ ಪರಿಷತ್ತಿಗೆ ಬೇಡ. ಪರಿಷತ

ಧಾರವಾಡ: ‘ಕಳೆದ 10 ವರ್ಷಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸ್ವಾಯತ್ತತೆಗೆ ಧಕ್ಕೆಯಾಗಿದೆ. ಪರಿಷತ್ತಿನ ಕಳೆದ ಚುನಾವಣೆಯಲ್ಲಿ ಪಕ್ಷವೊಂದರ ಪ್ರವೇಶವೇ ಅದಕ್ಕೆ ಕಾರಣ. ಪಕ್ಷ ರಾಜಕಾರಣ ಪರಿಷತ್ತಿನೊಳಗೆ ಮೂಗು ತೂರಿಸಬಾರದು’ ಎಂದು ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಹೇಳಿದರು. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಕ್ಷದ ಕೊಳಕು ರಾಜಕಾರಣ ಪರಿಷತ್ತಿಗೆ ಬೇಡ. ಪರಿಷತ್ತು ರಾಜಕೀಯ ವೇದಿಕೆಯಲ್ಲ, ಅದು ಜನರ ವೇದಿಕೆ ಎಂದರು. ‘ಪರಿಷತ್ತಿನ ಹೆಬ್ಬಾಗಿಲಿನಲ್ಲಿದ್ದ ‘ಮನುಷ್ಯ ಜಾತಿ ತಾನೊಂದೆ ವಲಂ’ ಫಲಕ ಕಿತ್ತು ಹಾಕಿಸಿದ್ದು, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆ ಸ್ಥಳಾಂತರಿಸಿದ್ದು ಹಾಗೂ ಪಂಪ ಮಹಾಕವಿ ರಸ್ತೆ ಹೆಸರು ಬದಲಾಯಿಸಲು ಯತ್ನಿಸಿದ್ದು ಈ ಹಿಂದಿನ ಅಧ್ಯಕ್ಷ ಮಹೇಶ ಜೋಶಿ ಅವಧಿಯಲ್ಲಿ ನಡೆಯಿತು. ಇವೆಲ್ಲ ಕನ್ನಡ ದ್ರೋಹಿ ಕೆಲಸಗಳಲ್ಲವೇ?’ ಎಂದು ಪ್ರಶ್ನಿಸಿದರು. ‘ ಪರಿಷತ್ತಿನಲ್ಲಿ ಈ ಹಿಂದಿನ ಅವಧಿಯಲ್ಲಿ ₹ 8 ಕೋಟಿ ಭ್ರಷ್ಟಾಚಾರ ನಡೆದಿದೆ. ಕೋರ್ಟ್ ವ್ಯವಹಾರಗಳಿಗೆ ಪರಿಷತ್ತಿನ ₹ 29 ಲಕ್ಷವನ್ನು ವೆಚ್ಚ ಮಾಡಲಾಗಿದೆ’ ಎಂದು ಆರೋಪಿಸಿದರು. ‘ಕಳಂಕಿತ ಅಧಿಕಾರಿಗಳು ಪರಿಷತ್ತಿಗೆ ಪ್ರವೇಶಿಸಬಾರದು. ಪರಿಷತ್ತಿನ ಚುನಾವಣೆಗೆ ಸ್ಪರ್ಧಿಸುವ ನಿವೃತ್ತ ಅಧಿಕಾರಿಗಳು ಅವರ ಇಡೀ ಆಡಳಿತಾವಧಿಯ (ಸೇವಾವಧಿ) ಪಾರದರ್ಶಕತೆಯನ್ನು ಪ್ರಕಟಿಸಬೇಕು’ ಎಂದು ಒತ್ತಾಯಿಸಿದರು. ಎಸ್.ಜಿ.ಸಿದ್ದರಾಮಯ್ಯ, ಸಾಹಿತಿಉಚಿತ ಮತ್ತು ಕಡ್ಡಾಯ ಶಿಕ್ಷಣ ಜಾರಿಗೊಳಿಸಿದ್ದು ಯಾವ ಪಕ್ಷ ಎಂದು ರಾಜ್ಯ ಸರ್ಕಾರ ಆತ್ಮಾವಲೋಕನ ಮಾಡಿಕೊಳ್ಳಬೇಕು. ರಾಜ್ಯ ಸರ್ಕಾರವು ಸರ್ಕಾರಿ ಶಾಲೆಗಳನ್ನು ಖಾಸಗಿಯವರಿಗೆ ವಹಿಸಲು ಮುಂದಾಗಿರುವುದು ಸರಿಯಲ್ಲ.