ಪ್ರಿಯಾಂಕ್ ಖರ್ಗೆಗೆ ಹಳ್ಳಿ ಜನರೇ ಪಾಠ ಕಲಿಸುತ್ತಾರೆ: ಕೆ.ಅನ್ನದಾನಿ
‘ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ‘ಹಳ್ಳಿ ಗುಗ್ಗು’ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಿಂದಿಸಿದ್ದಾರೆ. ದಲಿತ ಸಮುದಾಯದ ಪ್ರತಿನಿಧಿಯಾದ ತಾವು ಸಮುದಾಯಕ್ಕೆ ಘನತೆ, ಗೌರವ ಕಾಪಾಡಿ. ನಿಮ್ಮ ಹೇಳಿಕೆನ್ನು ಕೂಡಲೇ ವಾಪಸ್ ಪಡೆಯಬೇಕು’ ಎಂದು ಮಾಜಿ ಶಾಸಕ ಕೆ.ಅನ್ನದಾನಿ ಆಗ್ರಹಿಸಿದರು. ‘ನಿಮ್ಮ ಅಪ್ಪನಿಂದ ಮಂತ್ರಿ ಖಾತೆ ಬಳುವಳಿಯಾಗಿ ಸಿಕ್ಕಿದೆ. ಎಲ್

‘ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ‘ಹಳ್ಳಿ ಗುಗ್ಗು’ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಿಂದಿಸಿದ್ದಾರೆ. ದಲಿತ ಸಮುದಾಯದ ಪ್ರತಿನಿಧಿಯಾದ ತಾವು ಸಮುದಾಯಕ್ಕೆ ಘನತೆ, ಗೌರವ ಕಾಪಾಡಿ. ನಿಮ್ಮ ಹೇಳಿಕೆನ್ನು ಕೂಡಲೇ ವಾಪಸ್ ಪಡೆಯಬೇಕು’ ಎಂದು ಮಾಜಿ ಶಾಸಕ ಕೆ.ಅನ್ನದಾನಿ ಆಗ್ರಹಿಸಿದರು. ‘ನಿಮ್ಮ ಅಪ್ಪನಿಂದ ಮಂತ್ರಿ ಖಾತೆ ಬಳುವಳಿಯಾಗಿ ಸಿಕ್ಕಿದೆ. ಎಲ್ಲ ವಿಷಯಗಳಲ್ಲೂ ಮೂಗು ತೂರಿಸುವುದನ್ನು ಬಿಟ್ಟು ಗೃಹ ಇಲಾಖೆಯನ್ನು ಸರಿಯಾಗಿ ನಿರ್ವಹಿಸಿ. ಅಪ್ಪ ಮತ್ತು ಮಗನ ಹೇಳಿಕೆಗಳು ಕಾಂಗ್ರೆಸ್ ಪಕ್ಷಕ್ಕೆ ಹಾನಿ ಉಂಟು ಮಾಡುತ್ತಿವೆ. ಹಳ್ಳಿ ಜನರನ್ನು ಅವಮಾನಿಸಬೇಡಿ, ಮುಂದಿನ ಚುನಾವಣೆಯಲ್ಲಿ ಹಳ್ಳಿಗರೇ ನಿಮಗೆ ಸರಿಯಾದ ಪಾಠ ಕಲಿಸುತ್ತಾರೆ’ ಎಂದು ತಿರುಗೇಟು ನೀಡಿದರು.
Read the complete story at Prajavani