ಬೆಂಗಳೂರು: ಪ್ರವಾಸಕ್ಕೆ ಬಂದಿದ್ದ ರಾಜಸ್ಥಾನದ ಯುವತಿ ಮೇಲೆ ಅತ್ಯಾಚಾರ
ಬೆಂಗಳೂರು: ರಾಜಸ್ಥಾನದ ಜೈಪುರದಿಂದ ಪ್ರವಾಸಕ್ಕೆ ಬಂದಿದ್ದ ಯುವತಿಯನ್ನು ಹೋಟೆಲ್ಗೆ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪಿ ಎಂ.ವಿ.ಸಮೀರ್ ಎಂಬಾತನನ್ನು ಮಡಿವಾಳ ಠಾಣೆಯ ಪೊಲೀಸರು ಬಂಧಿಸಿದ್ದಾರೆ.26 ವರ್ಷದ ಸಂತ್ರಸ್ತೆ ನೀಡಿದ ದೂರು ಆಧರಿಸಿ, ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯ ವಿಚಾರಣೆ ನಡೆಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆ(ಬಿಎನ್

ಬೆಂಗಳೂರು: ರಾಜಸ್ಥಾನದ ಜೈಪುರದಿಂದ ಪ್ರವಾಸಕ್ಕೆ ಬಂದಿದ್ದ ಯುವತಿಯನ್ನು ಹೋಟೆಲ್ಗೆ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪಿ ಎಂ.ವಿ.ಸಮೀರ್ ಎಂಬಾತನನ್ನು ಮಡಿವಾಳ ಠಾಣೆಯ ಪೊಲೀಸರು ಬಂಧಿಸಿದ್ದಾರೆ.26 ವರ್ಷದ ಸಂತ್ರಸ್ತೆ ನೀಡಿದ ದೂರು ಆಧರಿಸಿ, ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯ ವಿಚಾರಣೆ ನಡೆಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆ(ಬಿಎನ್ಎಸ್) ಸೆಕ್ಷನ್ 64ರ ಅಡಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.ಅ.24ರಂದು ಮಡಿವಾಳದ ಹೊಸೂರು ಮುಖ್ಯರಸ್ತೆಯಲ್ಲಿ ಇರುವ ಹೋಟೆಲ್ನಲ್ಲಿ ಆರೋಪಿ ಕೃತ್ಯ ಎಸಗಿದ್ದ. ಅ.28ರಂದು ಸಂತ್ರಸ್ತೆ ನೀಡಿದ ದೂರು ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಜೈಪುರದಿಂದ ಬಂದಿದ್ದ ಯುವತಿ ಮಡಿವಾಳದ ಟೋಟಲ್ ಮಾಲ್ ಬಳಿಯ ಕಾರ್ತಿಕಾ ಹೋಟೆಲ್ನಲ್ಲಿ ಕೊಠಡಿ ಪಡೆದು ವಾಸ್ತವ್ಯ ಮಾಡಿದ್ದರು. ಅ.6ರಂದು ಕೊಠಡಿ ಖಾಲಿ ಮಾಡಿಕೊಂಡು ನಗರದಲ್ಲಿ ನೆಲಸಿದ್ದ ಸ್ನೇಹಿತೆಯ ಮನೆಗೆ ತೆರಳಿದ್ದರು. ಅ.17ರಂದು ಸ್ನೇಹಿತೆಯ ಮನೆಯಿಂದ ವಾಪಸ್ ಬಂದು, ಅದೇ ಹೋಟೆಲ್ನಲ್ಲಿ ವಾಸ್ತವ್ಯ ಮಾಡಿದ್ದರು. ಅ.23ರಂದು ಸಂತ್ರಸ್ತೆ ಕೋರಮಂಗಲದ ಪಬ್ಗೆ ತೆರಳಿದ್ದರು. ಅದೇ ಕ್ಲಬ್ನಲ್ಲಿ ಆರೋಪಿ ಸಮೀರ್ ಪಾರ್ಟಿ ಮಾಡುತ್ತಿದ್ದ. ಅಲ್ಲಿ ಇಬ್ಬರೂ ಪರಿಚಯವಾಗಿ ಪರಸ್ಪರ ಮೊಬೈಲ್ ಸಂಖ್ಯೆಯನ್ನು ಬದಲಾವಣೆ ಮಾಡಿಕೊಂಡಿದ್ದರು. ಪಾರ್ಟಿ ಮುಗಿದ ಮೇಲೆ ಸಂತ್ರಸ್ತೆಯನ್ನು ಹೋಟೆಲ್ಗೆ ಬಿಟ್ಟು ಆರೋಪಿ ತೆರಳಿದ್ದ. ಮರುದಿನ ಬೆಳಿಗ್ಗೆ ಹೋಟೆಲ್ ಎದುರು ಬಂದಿದ್ದ ಆರೋಪಿ, ಸಂತ್ರಸ್ತೆಗೆ ಕರೆ ಮಾಡಿ ಹೋಟೆಲ್ನಿಂದ ಹೊರಗೆ ಬರುವಂತೆ ಕೋರಿಕೊಂಡಿದ್ದ. ಬಳಿಕ ಪಾರ್ಟಿ ಮಾಡುವ ನೆಪದಲ್ಲಿ ಮತ್ತೊಂದು ಹೋಟೆಲ್ಗೆ ಕರೆದೊಯ್ದಿದ್ದ ಎಂದು ಪೊಲೀಸರು ಹೇಳಿದರು.ಹೋಟೆಲ್ಗೆ ತೆರಳಿದ ಮೇಲೆ ಕೊಠಡಿಯಲ್ಲಿ ಇಬ್ಬರೂ ಪಾರ್ಟಿ ಮಾಡಿದ್ದರು. ಆ ಸಂದರ್ಭದಲ್ಲಿ ಇಬ್ಬರೂ ಮದ್ಯ ಸೇವಿಸಿದ್ದರು. ಯುವತಿಗೆ ನಶೆ ಬರುವಂತೆ ಕುಡಿಸಿ, ಆಕೆ ಕುಡಿದ ಮತ್ತಿನಲ್ಲಿದ್ದಾಗ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ಹೇಳಿದರು. ಸಂತ್ರಸ್ತೆ, ರಾಜಸ್ಥಾನದಲ್ಲಿ ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಕೇರಳದ ಆರೋಪಿ ಸಮೀರ್, ನಗರದಲ್ಲಿ ಸೆಕೆಂಡ್ ಹ್ಯಾಂಡ್ ಕಾರು ಡೀಲರ್ ಆಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದರು.Highlights - ಪ್ರವಾಸಕ್ಕೆ ಬಂದಿದ್ದ ಯುವತಿ ಮದ್ಯದ ನಶೆಯಲ್ಲಿ ಕೃತ್ಯ ಪರಾರಿಯಾಗಿದ್ದ ಆರೋಪಿ ಸೆರೆCut-off box - ಲೈಟರ್ ಕೇಳಿದಾಗ ಪರಿಚಯ ಸಿಗರೇಟ್ ಸೇದಲು ಸಮೀರ್ ಬಳಿ ಯುವತಿ ಲೈಟರ್ ಕೇಳಿದ್ದರು. ಲೈಟರ್ ನೀಡಿದ್ದ ಆರೋಪಿ ಬಳಿಕ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ. ತನ್ನ ಮಾತುಗಳ ಮೂಲಕ ಯುವತಿಯನ್ನು ಆಕರ್ಷಿಸಿ ಆಕೆಯ ಮೊಬೈಲ್ ಸಂಖ್ಯೆ ಪಡೆದುಕೊಂಡಿದ್ದ. ಬಳಿಕ ಪಾರ್ಟಿ ನಡೆಸುವ ನೆಪದಲ್ಲಿ ಹೋಟೆಲ್ಗೆ ಕರೆದೊಯ್ದು ಕೃತ್ಯ ಎಸಗಿ ಪರಾರಿಯಾಗಿದ್ದ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.