ಪದಕಟ್ಟು ಭಾಗ– 5: ತಂತ್ರಜ್ಞಾನ ಯುಗದಲ್ಲಿ ಪರ್ಯಾಯ ಪದಗಳ ಸವಾಲು
ಹೊಸ ತಂತ್ರಜ್ಞಾನ ಬಂದಾಗಲೆಲ್ಲ ಅದಕ್ಕೆ ತಕ್ಕಂತೆ ಭಾಷೆಯನ್ನು ದುಡಿಸಿಕೊಳ್ಳುವುದು ಎಷ್ಟು ಅನಿವಾರ್ಯವೋ ಕನ್ನಡದ ಶಬ್ದಕೋಶವನ್ನು ಶ್ರೀಮಂತಗೊಳಿಸುತ್ತ ಬರುವುದೂ ಅಷ್ಟೇ ಅಗತ್ಯ. ಕನ್ನಡದ ಹಿರಿಯರು ಈ ಕೆಲಸವನ್ನು ಆಯಾ ಕಾಲಕ್ಕೆ ಮಾಡುತ್ತ ಭಾಷೆಯನ್ನು ಜೀವಂತವಾಗಿಡಲು ಗರಿಷ್ಠ ಪ್ರಯತ್ನವನ್ನು ಮಾಡಿದ್ದಾರೆ. ಭಾಷಾ ಅಕಾಡೆಮಿಗಳು, ಸರಕಾರದ ಇಲಾಖೆಗಳು, ವಿಶ್ವವಿದ್ಯಾಲಯದಂಥ ಸಾಂಸ

ಹೊಸ ತಂತ್ರಜ್ಞಾನ ಬಂದಾಗಲೆಲ್ಲ ಅದಕ್ಕೆ ತಕ್ಕಂತೆ ಭಾಷೆಯನ್ನು ದುಡಿಸಿಕೊಳ್ಳುವುದು ಎಷ್ಟು ಅನಿವಾರ್ಯವೋ ಕನ್ನಡದ ಶಬ್ದಕೋಶವನ್ನು ಶ್ರೀಮಂತಗೊಳಿಸುತ್ತ ಬರುವುದೂ ಅಷ್ಟೇ ಅಗತ್ಯ. ಕನ್ನಡದ ಹಿರಿಯರು ಈ ಕೆಲಸವನ್ನು ಆಯಾ ಕಾಲಕ್ಕೆ ಮಾಡುತ್ತ ಭಾಷೆಯನ್ನು ಜೀವಂತವಾಗಿಡಲು ಗರಿಷ್ಠ ಪ್ರಯತ್ನವನ್ನು ಮಾಡಿದ್ದಾರೆ. ಭಾಷಾ ಅಕಾಡೆಮಿಗಳು, ಸರಕಾರದ ಇಲಾಖೆಗಳು, ವಿಶ್ವವಿದ್ಯಾಲಯದಂಥ ಸಾಂಸ್ಥಿಕ ವ್ಯವಸ್ಥೆಯ ಮಟ್ಟದಲ್ಲಿ ಇಂಥ ಕೆಲಸಗಳು ಆಗಬೇಬೇಕಾದುದು ಅಗತ್ಯ. ಆದರೆ ಬಹುತೇಕ ಸಂದರ್ಭದಲ್ಲಿ ಇದು ವ್ಯಕ್ತಿಗತ ನೆಲೆಯಲ್ಲಿ ಆದದ್ದೇ ಹೆಚ್ಚು. ಈ ನಿಟ್ಟಿನಲ್ಲಿ ಸುದ್ದಿಮನೆಗಳ ಕೊಡುಗೆಯೂ ಗಮನಾರ್ಹವಾದುದು. ದೈನಂದಿನ ಸುದ್ದಿ ಬರವಣಿಗೆಯ ಹಂತದಲ್ಲಿ ಹಲವು ಪತ್ರಿಕೆಗಳು ಹೊಸ ಹೊಸ ಪದಗಳನ್ನು ಪರಿಚಯಿಸುತ್ತ, ಅವನ್ನು ಜನಮಾನಸದಲ್ಲಿ ಚಾಲ್ತಿಗೆ ತಂದದ್ದು ಸುಳ್ಳಲ್ಲ.ಆ ದೃಷ್ಟಿಯಿಂದ ಕನ್ನಡ ರಾಜ್ಯೋತ್ಸವದ ತಿಂಗಳಿನಲ್ಲಿ ನಮ್ಮಲ್ಲಿ ಬಳಕೆಯಲ್ಲಿರುವ ಒಂದಷ್ಟು ಪರಕೀಯ ಪದಗಳಿಗೆ ಪರ್ಯಾಯ ಕನ್ನಡ ಪದಗಳನ್ನು ಕಟ್ಟುವ ಪಯತ್ನಕ್ಕೆ ಮುಂದಾಗಿದೆ ‘ಪ್ರಜಾವಾಣಿ ಡಿಜಿಟಲ್’. ಕನ್ನಡದ ಪದರಚನೆಗೆ ಹೊಂದುವ, ಚಿಕ್ಕದಾದ, ಅರ್ಥಪೂರ್ಣವಾದ, ವ್ಯಾಕರಣಬದ್ಧವಾದ ಮತ್ತು ಜನಸಾಮಾನ್ಯರು ಸುಲಭವಾಗಿ ಬಳಸಬಹುದಾದ ಪರ್ಯಾಯ ಪದಗಳ ಸೃಷ್ಟಿಯ ಈ ಸವಾಲನ್ನು ಓದುಗರಾದ ನಿಮ್ಮ ಮುಂದೆಯೂ ತರುತ್ತಿದ್ದೇವೆ. ನಮ್ಮೊಂದಿಗೆ ನೀವೂ ಪ್ರಯತ್ನಿಸಿ ನೋಡಿ. ಒಳ್ಳೆಯ ಪದಗಳು ಹೊಳೆದರೆ ಇಲ್ಲಿಯೇ ಛಾಪಿಸಿ. ಆಯ್ದು ಸೂಕ್ತ ಪರ್ಯಾಯ ಪದಗಳನ್ನು ನಾಳೆ Prajavani. Net ನಲ್ಲಿ ಪ್ರಕಟಿಸುತ್ತೇವೆ;ಕರುನಾಡೋತ್ಸವ: ನೋ ಕ್ಯಾಪ್ ಬ್ರೋ...!AI ಯುಗದಲ್ಲಿ ಕನ್ನಡ ಭಾಷೆಯ ಮುಂದಿರುವ ಸವಾಲುಗಳುಪದಕಟ್ಟು ಐದನೇ ದಿನದ ಸವಾಲು21. ಸ್ವಿಚ್((Switch)22. ಪ್ಲಗ್(Plug)23. ಸಾಕೆಟ್(Socket)24. ಎಕ್ಸಾಸ್ಟ್ಫ್ಯಾನ್(Exhaust fan)25. ಸ್ಕ್ರೀನ್ಶಾಟ್(Screenshot)ಪದಕಟ್ಟು ನಾಲ್ಕನೇ ದಿನದ ಸವಾಲಿಗೆ ನಮ್ಮ ಸಲಹೆಗಳು ಇಂತಿವೆ;16. ಹ್ಯಾಂಗರ್(Hanger) : ಬಟ್ಟೆತೂಗುಕ (ಬಟ್ಟೆಗೂಟ)17. ಡೋರ್ಬೆಲ್ (Doorbell): ಬಾಗಿಲುಮಣಿ (ಕರೆಗಂಟೆ)18. ಡೋರ್ಮ್ಯಾಟ್( Doormat): ಬಾಗಿಲೊರೆ(ಕಾಲೊರೆಸುಗ)19. ಕೀ (Key): ಬೀಗದ ಕೀಲಿ (ಬೀಗದ ಕೈ)20. ಲಾಕ್ (Lock): ಬೀಗಕರುನಾಡೋತ್ಸವ ’ಪದ ಕಟ್ಟು‘ ಭಾಗ–3: ಇಂದಿನ ಸವಾಲುಪದಕಟ್ಟು ಭಾಗ– 4: ಕನ್ನಡದಲ್ಲಿ ಹೊಸ ಶಬ್ದಸೃಷ್ಟಿ ಮತ್ತು ಪರ್ಯಾಯ ಪದಗಳ ಯಶೋಗಾಥೆ