ಷೇರುಪೇಟೆಯಲ್ಲಿ ಸತತ 6ನೇ ದಿನವೂ ಗೂಳಿ ಓಟ
ಮುಂಬೈ: ಕಚ್ಚಾ ತೈಲ ಬೆಲೆಯಲ್ಲಿನ ತೀವ್ರ ಕುಸಿತ ಹಾಗೂ ಅಮೆರಿಕದ ಮಧ್ಯಂತರ ಚುನಾವಣಾ ಫಲಿತಾಂಶದ ಬೆನ್ನಲ್ಲೇ ಪಶ್ಚಿಮ ಏಷ್ಯಾ ಬಿಕ್ಕಟ್ಟು ಇತ್ಯರ್ಥಗೊಳ್ಳುವ ಆಶಾಭಾವನೆಯಿಂದಾಗಿ ಗುರುವಾರ ನಡೆದ ವಹಿವಾಟಿನಲ್ಲಿ ದೇಶೀಯ ಷೇರುಪೇಟೆಯು ಏರಿಕೆ ದಾಖಲಿಸಿದೆ. 30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ 2,009 ಅಂಶ ಏರಿಕೆ ಕಂಡು 79,310.01 ಅಂಶಕ್ಕೆ ತಲುಪಿದೆ. ಹಾಗೆಯೇ ರಾಷ್ಟ್ರೀಯ ಷೇರು

ಮುಂಬೈ: ಕಚ್ಚಾ ತೈಲ ಬೆಲೆಯಲ್ಲಿನ ತೀವ್ರ ಕುಸಿತ ಹಾಗೂ ಅಮೆರಿಕದ ಮಧ್ಯಂತರ ಚುನಾವಣಾ ಫಲಿತಾಂಶದ ಬೆನ್ನಲ್ಲೇ ಪಶ್ಚಿಮ ಏಷ್ಯಾ ಬಿಕ್ಕಟ್ಟು ಇತ್ಯರ್ಥಗೊಳ್ಳುವ ಆಶಾಭಾವನೆಯಿಂದಾಗಿ ಗುರುವಾರ ನಡೆದ ವಹಿವಾಟಿನಲ್ಲಿ ದೇಶೀಯ ಷೇರುಪೇಟೆಯು ಏರಿಕೆ ದಾಖಲಿಸಿದೆ. 30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ 2,009 ಅಂಶ ಏರಿಕೆ ಕಂಡು 79,310.01 ಅಂಶಕ್ಕೆ ತಲುಪಿದೆ. ಹಾಗೆಯೇ ರಾಷ್ಟ್ರೀಯ ಷೇರುಪೇಟೆ ಎನ್ಎಸ್ಇ ನಿಫ್ಟಿ 576 ಅಂಶ ಏರಿಕೆಯಾಗಿ 24,536.60 ಅಂಶಕ್ಕೆ ತಲುಪಿದೆ.ನಿರಂತರ ವಿದೇಶಿ ಬಂಡವಾಳ ಹರಿವು ಮತ್ತು ಅಮೆರಿಕದ ಮಾರುಕಟ್ಟೆಗಳಲ್ಲಾದ ತೀವ್ರ ಏರಿಕೆಯು ಹೂಡಿಕೆದಾರರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.ಬಿಎಸ್ಇ ಪೈಕಿ ಬಜಾಜ್ ಫೈನಾನ್ಸ್ ಷೇರು ಮೌಲ್ಯ ಶೇ 7.77ರಷ್ಟು ಹೆಚ್ಚಳವಾಗಿದೆ. ಉಳಿದಂತೆ, ಇಂಟರ್ಗ್ಲೋಬ್ ಏವಿಯೇಷನ್ (ಶೇ 5.80), ಐಸಿಐಸಿಐ ಬ್ಯಾಂಕ್ (ಶೇ 5.29), ಮಾರುತಿ (ಶೇ 5.28), ಮಹೀಂದ್ರ ಆ್ಯಂಡ್ ಮಹೀಂದ್ರ (ಶೇ 5.15) ಮತ್ತು ಬಜಾಜ್ ಫಿನ್ಸರ್ವ್ (ಶೇ 4.66) ಏರಿಕೆ ಕಂಡಿವೆ. ಮತ್ತೊಂದೆಡೆ, ಎನ್ಟಿಪಿಸಿ, ಭಾರತ್ ಎಲೆಕ್ಟ್ರಾನಿಕ್ಸ್, ಅದಾನಿ ಪೋರ್ಟ್ಸ್ ಮತ್ತು ಐಟಿಸಿ ಷೇರುಗಳು ನಷ್ಟ ಅನುಭವಿಸಿದವು.ಕಳೆದ ಸತತ ಆರು ವಹಿವಾಟು ಅವಧಿಗಳಲ್ಲಿ ಸೆನ್ಸೆಕ್ಸ್ ಒಟ್ಟು 6,063.98 ಅಂಕ (ಶೇ 8.27) ಮತ್ತು ನಿಫ್ಟಿ 1,837.75 ಅಂಕ (ಶೇ 8) ಏರಿಕೆ ಕಂಡಿದೆ. ಅಮೆರಿಕ ಮಧ್ಯಂತರ ಚುನಾವಣೆ: ಟ್ರಂಪ್ಗೆ ಮುಖಭಂಗ...ಅಮೆರಿಕ ಮಧ್ಯಂತರ ಚುನಾವಣೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ತೀವ್ರ ಮುಖಭಂಗವಾಗಿದೆ. ಅಮೆರಿಕದ ಮತದಾರರು ವಿರೋಧ ಪಕ್ಷವಾದ ಡೆಮಾಕ್ರಟಿಕ್ ಪಕ್ಷಕ್ಕೆ ಯುಎಸ್ ಸಂಸತ್ತಿನ ಅಧಿಕಾರ ನೀಡಿದ್ದಾರೆ. ಪ್ರಮುಖ ಗವರ್ನರ್ ಹುದ್ದೆಗಳನ್ನೂ ಡೆಮಾಕ್ರಟ್ಗಳು ವಶಪಡಿಸಿಕೊಂಡಿದ್ದು, ಇದು ಅಮೆರಿಕದಾಚೆಗೂ ವ್ಯಾಪಕ ಪರಿಣಾಮ ಬೀರಿದೆ. ಷೇರುಪೇಟೆ: ಹೂಡಿಕೆದಾರರ ಸಂಪತ್ತು ₹9.6 ಲಕ್ಷ ಕೋಟಿಯಷ್ಟು ಏರಿಕೆStock Market: ಸತತ ನಾಲ್ಕನೇ ದಿನವೂ ಷೇರುಪೇಟೆ ಸೂಚ್ಯಂಕ ಕುಸಿತ