ಷೇರುಪೇಟೆಯಲ್ಲಿ ದೀಪಾವಳಿ ಪಟಾಕಿಗಳ ಅಬ್ಬರ: ಸತತ 7ನೇ ದಿನವೂ ಗೂಳಿ ಓಟ
ಮುಂಬೈ: ದೇಶದ ಷೇರುಪೇಟೆಗಳಲ್ಲಿ ದೀಪಾವಳಿ ಹಬ್ಬದ ಪಟಾಕಿಗಳ ಸದ್ದು ಜೋರಾಗಿವೆ. ಜಾಗತಿಕ ಮಾರುಕಟ್ಟೆಗಳಲ್ಲಿನ ಭಾರಿ ಕುಸಿತದ ನಡುವೆಯೂ ಮುಂಬೈ ಷೇರುಪೇಟೆಯಲ್ಲಿ ಸತತ ಏಳನೇ ದಿನವೂ ಗೂಳಿ ಓಟ ಮುಂದುವರಿದಿದೆ. ಶುಕ್ರವಾರದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 1,718 ಅಂಶಗಳ ಜಿಗಿತ ಕಂಡಿತು. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 25,000 ಗಡಿ ದಾಟಿದ್ದು, ಒಂಬತ

ಮುಂಬೈ: ದೇಶದ ಷೇರುಪೇಟೆಗಳಲ್ಲಿ ದೀಪಾವಳಿ ಹಬ್ಬದ ಪಟಾಕಿಗಳ ಸದ್ದು ಜೋರಾಗಿವೆ. ಜಾಗತಿಕ ಮಾರುಕಟ್ಟೆಗಳಲ್ಲಿನ ಭಾರಿ ಕುಸಿತದ ನಡುವೆಯೂ ಮುಂಬೈ ಷೇರುಪೇಟೆಯಲ್ಲಿ ಸತತ ಏಳನೇ ದಿನವೂ ಗೂಳಿ ಓಟ ಮುಂದುವರಿದಿದೆ. ಶುಕ್ರವಾರದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 1,718 ಅಂಶಗಳ ಜಿಗಿತ ಕಂಡಿತು. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 25,000 ಗಡಿ ದಾಟಿದ್ದು, ಒಂಬತ್ತು ತಿಂಗಳ ಗರಿಷ್ಠ ಮಟ್ಟವನ್ನು ತಲುಪಿದೆ. ಈ ಹಿಂದೆ 2026ರ ಫೆಬ್ರುವರಿ 2ರಂದು ನಿಫ್ಟಿ 25,088.40ರಲ್ಲಿ ಕೊನೆಗೊಂಡಿತ್ತು.ವಿದೇಶಿ ಬಂಡವಾಳದ ನಿರಂತರ ಹರಿವು ಮತ್ತು ಕಚ್ಚಾ ತೈಲ ಬೆಲೆ ಇಳಿಕೆಯು ಹೂಡಿಕೆದಾರರಲ್ಲಿ ವಿಶ್ವಾಸ ಮೂಡಿಸಿದೆ.ಎರಡನೇ ತ್ರೈಮಾಸಿಕದ ಅತ್ಯುತ್ತಮ ಕಾರ್ಪೊರೇಟ್ ಆದಾಯ ವರದಿಗಳು ಹಾಗೂ ರೂಪಾಯಿ ಮೌಲ್ಯದಲ್ಲಿನ ವೃದ್ಧಿಯು ದಲಾಲ್ ಸ್ಟ್ರೀಟ್ನಲ್ಲಿ ಹಬ್ಬದ ಕಳೆಯನ್ನು ಮುಂದುವರಿಸಿವೆ.ಬಿಎಸ್ಇ ಸೂಚ್ಯಂಕ ಸೆನ್ಸೆಕ್ಸ್ 1,718.01 ಅಂಶಗಳಷ್ಟು (ಶೇ 2.17) ಏರಿಕೆ ಕಂಡು, ದಿನದ ಗರಿಷ್ಠ ಮಟ್ಟವಾದ 81,028.02ಕ್ಕೆ ತಲುಪಿದೆ. ಎನ್ಎಸ್ಇ ಸೂಚ್ಯಂಕ 493.75 ಅಂಶಗಳಷ್ಟು (ಶೇ 2.01) ಏರಿಕೆ ಕಂಡು, ದಿನದ ಗರಿಷ್ಠ ಮಟ್ಟವಾದ 25,030.35ಕ್ಕೆ ತಲುಪಿದೆ. ಸೆನ್ಸೆಕ್ಸ್ ಪೈಕಿ ಮಹೀಂದ್ರ ಆ್ಯಂಡ್ ಮಹೀಂದ್ರ (ಎಂ & ಎಂ) ಷೇರುಗಳು ಶೇ 6.15ರಷ್ಟು ಜಿಗಿತ ಕಂಡಿವೆ. ಐಸಿಐಸಿಐ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್, ಟೈಟಾನ್, ಆಕ್ಸಿಸ್ ಬ್ಯಾಂಕ್ ಹಾಗೂ ಕೋಟಕ್ ಮಹೀಂದ್ರ ಬ್ಯಾಂಕ್ ಷೇರುಗಳು ಸಹ ಲಾಭ ಗಳಿಸಿವೆ. ಬ್ಲೂ-ಚಿಪ್ ಕಂಪನಿಗಳ ಪೈಕಿ ಪವರ್ ಗ್ರಿಡ್ ಮಾತ್ರ ನಷ್ಟ ಅನುಭವಿಸಿದೆ.ಕಳೆದ ಮೂರು ವರ್ಷಗಳಲ್ಲಿಯೇ ಮೊದಲ ಬಾರಿಗೆ ಸತತ ಏಳು ಅವಧಿಗಳಲ್ಲಿ ಷೇರುಪೇಟೆ ಚೇತರಿಕೆ ಕಂಡಿದ್ದು, ಸೆನ್ಸೆಕ್ಸ್ 7,781.99 ಅಂಶಗಳಷ್ಟು (ಶೇ 10.62) ಮತ್ತು ನಿಫ್ಟಿ 2,331.5 ಅಂಶಗಳಷ್ಟು (ಶೇ 10.27) ಭಾರಿ ಏರಿಕೆ ದಾಖಲಿಸಿವೆ.ಅಮೆರಿಕ ಚುನಾವಣೆಯಲ್ಲಿ ಟ್ರಂಪ್ ಪಕ್ಷಕ್ಕೆ ಹಿನ್ನಡೆ: ಜಿಗಿದ ಷೇರುಪೇಟೆ ಸೂಚ್ಯಂಕಮುಂಬೈ ಷೇರುಪೇಟೆ ಸೂಚ್ಯಂಕ : ಸೆನ್ಸೆಕ್ಸ್ 876 ಅಂಶ ಇಳಿಕೆ