ಕಬ್ಬು ಒಣಗಿದರೂ ಇಳುವರಿ ಪ್ರಮಾಣ ಏರಿಕೆ!
ಬೆಳಗಾವಿ: ರೈತರ ಹೋರಾಟದ ಕಾರಣ ಕಬ್ಬು ನುರಿಸುವ ಹಂಗಾಮು ಒಂದು ತಿಂಗಳು ತಡವಾಗಿ ಆರಂಭವಾಗಿದೆ. ಇದರಿಂದ ಗದ್ದೆಗಳಲ್ಲೇ ಕಬ್ಬು ಒಣಗಿದ್ದು, ತೂಕದಲ್ಲಿ ಕುಂಠಿತ ಕಂಡುಬರಲಿದೆ. ಆದರೆ, ಒಣಗಿದ ಕಬ್ಬೇ ಈಗ ಕಾರ್ಖಾನೆಗಳಿಗೆ ಉತ್ತಮ ರಿಕವರಿ (ಇಳುವರಿ ಪ್ರಮಾಣ) ತಂದು ಕೊಡುವುದು ನಿಚ್ಚಳವಾಗಿದೆ.ಪ್ರತಿ ವರ್ಷ ಸೆಪ್ಟೆಂಬರ್ ಎರಡನೇ ವಾರದಲ್ಲಿ ಕಬ್ಬು ಕಟಾವು ಮತ್ತು ಅಕ್ಟೋಬರ್ ಮೊ

ಬೆಳಗಾವಿ: ರೈತರ ಹೋರಾಟದ ಕಾರಣ ಕಬ್ಬು ನುರಿಸುವ ಹಂಗಾಮು ಒಂದು ತಿಂಗಳು ತಡವಾಗಿ ಆರಂಭವಾಗಿದೆ. ಇದರಿಂದ ಗದ್ದೆಗಳಲ್ಲೇ ಕಬ್ಬು ಒಣಗಿದ್ದು, ತೂಕದಲ್ಲಿ ಕುಂಠಿತ ಕಂಡುಬರಲಿದೆ. ಆದರೆ, ಒಣಗಿದ ಕಬ್ಬೇ ಈಗ ಕಾರ್ಖಾನೆಗಳಿಗೆ ಉತ್ತಮ ರಿಕವರಿ (ಇಳುವರಿ ಪ್ರಮಾಣ) ತಂದು ಕೊಡುವುದು ನಿಚ್ಚಳವಾಗಿದೆ.ಪ್ರತಿ ವರ್ಷ ಸೆಪ್ಟೆಂಬರ್ ಎರಡನೇ ವಾರದಲ್ಲಿ ಕಬ್ಬು ಕಟಾವು ಮತ್ತು ಅಕ್ಟೋಬರ್ ಮೊದಲ ವಾರದಲ್ಲಿ ಕಾರ್ಖಾನೆಗಳಲ್ಲಿ ಹಂಗಾಮು ಪ್ರಕ್ರಿಯೆ ಆರಂಭವಾಗುತಿತ್ತು. ಹಸಿ ಕಬ್ಬಿಗೆ ತೂಕ ಹೆಚ್ಚು ಬರುತ್ತಿತ್ತು. ಹೆಕ್ಟೇರ್ಗೆ 40 ಟನ್ನಿಂದ 70 ಟನ್ವರೆಗೆ ಬೆಳೆ ಬಂದಿತ್ತು. ಆದರೆ, ಈ ವರ್ಷ ಕಟಾವು ಕೂಡ ತಿಂಗಳು ತಡವಾಗಿದ್ದರಿಂದ ಕಬ್ಬಿನಲ್ಲಿರುವ ನೀರಿನ ಅಂಶ ಆರಿದೆ. ಇದರಿಂದ ತೂಕ ಕಡಿಮೆ ಆಗಲಿದೆ.ವಿಶೇಷವೆಂದರೆ, ನೀರಿನ ಅಂಶ ಕಡಿಮೆಯಾದರೆ ಕಬ್ಬಿನಲ್ಲಿ ಸಂಪೂರ್ಣವಾಗಿ ಸಕ್ಕರೆ ಅಂಶ ಮಾತ್ರ ಉಳಿಯುತ್ತಿದೆ. ಹೀಗಾಗಿ, ಕಾರ್ಖಾನೆಗಳಿಗೆ ಇದು ಲಾಭ ತಂದು ಕೊಡಲಿದೆ.‘ಈ ವರ್ಷ ರಾಜ್ಯದ ಗದ್ದೆಯಲ್ಲಿದ್ದ ಕಬ್ಬು ಶೇ 20ರಷ್ಟು ಕಡಿಮೆ ಆಗುವುದು ನಿಶ್ಚಿತ. ಸಂಶೋಧನೆಗಳ ಪ್ರಕಾರ, ಪ್ರತಿ ಎಕರೆಗೆ 10 ರಿಂದ 15 ಟನ್ ಕಬ್ಬು ಕಡಿಮೆಯಾಗುವ ಸಾಧ್ಯತೆ ಇದೆ’ ಎಂದು ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಕಬ್ಬು ಅಭಿವೃದ್ಧಿ ಅಧಿಕಾರಿ ನಾಮದೇವ ಬನ್ನೆ ತಿಳಿಸಿದ್ದಾರೆ.ಕಳೆದ ವರ್ಷ ರಾಜ್ಯದ 81 ಕಾರ್ಖಾನೆಗಳ ಪೈಕಿ ಕೆಲವು ಹೆಚ್ಚು ಮತ್ತು ಕೆಲವು ಕಡಿಮೆ ರಿಕವರಿ ದಾಖಲಿಸಿವೆ. ಇಳುವರಿ ಪ್ರಮಾಣ ಶೇ 12.20ರಷ್ಟು ದಾಖಲಾಗಿದೆ.ಕಡಿಮೆಯಾದ ಹಂಗಾಮಿನ ದಿನಗಳು: ಪ್ರತಿ ವರ್ಷ ಕನಿಷ್ಠ 130 ದಿನಗಳಿಂದ 150 ದಿನಗಳವರೆಗೆ ಕಾರ್ಖಾನೆಗಳು ಕಬ್ಬು ನುರಿಸುತ್ತಿದ್ದವು. ಆದರೆ, ಈ ವರ್ಷ ಹೆಚ್ಚೆಂದರೆ 90 ದಿನ ಮಾತ್ರ ಹಂಗಾಮು ಇರಲಿದೆ. ತಿಂಗಳಿನಿಂದ ರೈತರು ಹೋರಾಟ ನಡೆಸಿದ್ದರಿಂದ ಹಂಗಾಮು ಆರಂಭವಾಗಿಲ್ಲ, ಕಬ್ಬು ಕಟಾವು ಕೂಡ ನಡೆದಿಲ್ಲ.‘ಶುಕ್ರವಾರದಿಂದ (ನವೆಂಬರ್ 6) ಕಬ್ಬು ಕಟಾವು ಆರಂಭಿಸಿದರೂ ಕಬ್ಬು ನುರಿಸಲು ಇನ್ನೂ ಮೂರು– ನಾಲ್ಕು ದಿನ ಬೇಕು. ಒಮ್ಮೆ ನುರಿಸುವ ಕೆಲಸ ಆರಂಭವಾದರೆ ಮಧ್ಯ ನಿಲ್ಲಿಸಲು ಆಗದು. ನಿರಂತರ ಕೆಲಸ ನಡೆಯುತ್ತಿರಬೇಕು. ಇದಕ್ಕಾಗಿ ಕನಿಷ್ಠ 3 ಸಾವಿರ ಟನ್ ಕಬ್ಬು ಕಾರ್ಖಾನೆಗಳ ಆವರಣದಲ್ಲಿ ಸಂಗ್ರಹ ಇರಬೇಕು’ ಎಂಬುದು ಕಾರ್ಖಾನೆಗಳ ಮಾಲೀಕರ ಹೇಳಿಕೆ.ರಾಯಬಾಗ ತಾಲ್ಲೂಕಿನ ಮೆಕ್ಕೇಳಿ ಗ್ರಾಮದಲ್ಲಿ ಶುಕ್ರವಾರ ಕಾರ್ಮಿಕರು ಕಬ್ಬು ಕಟಾವು ಆರಂಭಿಸಿದರುಹುಕ್ಕೇರಿ ತಾಲ್ಲೂಕಿನ ಹೊಸೂರ ಗ್ರಾಮದ ಹೊಲವೊಂದರಲ್ಲಿ ಶುಕ್ರವಾರ ರೈತರು ಕಬ್ಬು ಕಟಾವು ಆರಂಭಿಸಿದರು ಪ್ರಜಾವಾಣಿ ಚಿತ್ರ: ಪಿ.ಜಿ. ಕೊಣ್ಣೂರ್Highlights - ಕಬ್ಬು ಒಣಗಿದ್ದರಿಂದ ಎಕರೆಗೆ ಶೇ 20ರಷ್ಟು ಕುಸಿತ ಕಬ್ಬು ನುರಿಕೆ ಆರಂಭವಾಗಲು ಇನ್ನೂ 3 ರಿಂದ 4 ದಿನ ಬೇಕು ನೀರಿನ ಅಂಶವಿಲ್ಲದೇ ತೂಕ ಕಡಿಮೆಅಪ್ಪಾಸಾಹೇಬ ಸಿರಗಾವೆ ವ್ಯವಸ್ಥಾಪಕ ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆ ನಿಪ್ಪಾಣಿಈ ವರ್ಷ 80ರಿಂದ 90 ದಿನ ಕಬ್ಬು ನುರಿಸಲು ಸಾಧ್ಯ. ಇದರಿಂದ ಯಂತ್ರಗಳ ವೆಚ್ಚ ಕಾರ್ಮಿಕರ ಸಂಬಳ ನಿರ್ವಹಣೆ ಮಾರುಕಟ್ಟೆ ಎಲ್ಲವೂ ಸೇರಿ ಕಾರ್ಖಾನೆಗಳು ಹಾನಿ ಅನುಭವಿಸಲಿವೆನಾಮದೇವ ಬನ್ನೆ ಕಬ್ಬು ಅಭಿವೃದ್ಧಿ ಅಧಿಕಾರಿ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಕಳೆದ ವರ್ಷ ರಾಜ್ಯದ ಸರಾಸರಿ ರಿಕವರಿ ಶೇ 12.20 ಇತ್ತು. ಈ ವರ್ಷ ಒಣಗಿದ ಕಬ್ಬಿನಿಂದ ಸರಾಸರಿ ಶೇ 13ಕ್ಕೂ ಹೆಚ್ಚು ರಿಕವರಿ ಬರುವ ಸಾಧ್ಯತೆ ಇದೆ ಎಂಬುದು ಸಂಶೋಧನೆಯಿಂದ ಗೊತ್ತಾಗಿದೆ ಬಾಗಲಕೋಟೆ: ಮುಂದುವರೆದ ರೈತರ ಪ್ರತಿಭಟನೆ ಬಾಗಲಕೋಟೆ: ಪ್ರತಿ ಟನ್ ಕಬ್ಬಿಗೆ ₹3600 ನೀಡುವುದನ್ನು ಒಪ್ಪದ ರೈತರು ಗುರುವಾರ ಜಿಲ್ಲೆಯ ವಿವಿಧೆಡೆ ಪ್ರತಿಭಟನೆ ಮುಂದುವರೆಸಿದರು. ಬೀಳಗಿಯಲ್ಲಿ ಐದನೇ ದಿನವೂ ಅನಿರ್ದಿಷ್ಟಾವಧಿ ಧರಣಿ ಮುಂದುವರೆದಿದ್ದು ಮಲ್ಲಪ್ಪ ಭಾವಿ ಐದನೇ ದಿನವೂ ಉಪವಾಸ ಮುಂದುವರೆಸಿದ್ದಾರೆ. ಜಮಖಂಡಿಯಲ್ಲಿ ಅಹೋರಾತ್ರಿ ಧರಣಿ ಮುಂದುವರೆದಿದ್ದರೆ ಮುಧೋಳದಲ್ಲಿಯೂ ಪ್ರತಿಭಟನೆ ಮುಂದುವರೆಸಲು ನಿರ್ಧರಿಸಿದ್ದಾರೆ. ರೈತರ ಪ್ರತಿಭಟನೆ ಮುಂದುವರೆಸುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯ ಯಾವುದೇ ಕಾರ್ಖಾನೆ ಕಬ್ಬು ನುರಿಸುವ ಕಾರ್ಯ ಆರಂಭಿಸಿಲ್ಲ. ರೈತರೊಂದಿಗೆ ಜಿಲ್ಲಾಡಳಿತ ನಡೆಸುತ್ತಿರುವ ಮಾತುಕತೆಯ ಫಲಿತಾಂಶ ನೋಡಿಕೊಂಡು ಕಾರ್ಖಾನೆ ಆರಂಭಿಸಲು ನಿರ್ಧರಿಸಿದ್ದಾರೆ. ರಿಕವರಿ ಪ್ರಮಾಣ ಎಂದರೆ... ನಿರ್ದಿಷ್ಟ ತೂಕದ ಕಬ್ಬಿನ ಅರೆಯುವಿಕೆಯಿಂದ ಉತ್ಪಾದನೆಯಾದ ಸಕ್ಕರೆಯ ಶೇಕಡವಾರು ಪ್ರಮಾಣವೇ ಇಳುವರಿ ಪ್ರಮಾಣ ಅಥವಾ ರಿಕವರಿ. ಉದಾಹರಣೆಗೆ ಒಂದು ವೇಳೆ 100 ಕೆಜಿ ಕಬ್ಬು ಅರೆದಾಗ 10 ಕೆಜಿ ಸಕ್ಕರೆ ಸಿಕ್ಕಿದರೆ ಆಗ ಆ ಕಬ್ಬಿನ ಇಳುವರಿ ಪ್ರಮಾಣ ಶೇ 10 ಆಗುತ್ತದೆ. ಈ ರೀತಿಯ ರಿಕವರಿ ಆಧರಿಸಿಯೇ ಕಬ್ಬಿಗೆ ದರ ನಿಗದಿ ಮಾಡಲಾಗುತ್ತದೆ. ಕೇಂದ್ರ ಸರ್ಕಾರವು 2025–26ನೇ ಸಾಲಿಗೆ ಟನ್ ಕಬ್ಬಿಗೆ ಎಫ್ಆರ್ಪಿ (₹3550) ನಿಗದಿ ಪಡಿಸುವಾಗ ರಿಕವರಿ ಮಿತಿ ಶೇ 10.25 ಇರಬೇಕು ಎಂದು ಹೇಳಿತ್ತು. ಅಂದರೆ 1000 ಕೆಜಿ ಕಬ್ಬು ಅರೆದರೆ 102.5 ಕೆಜಿ ಸಕ್ಕರೆ ಉತ್ಪಾದನೆಯಾಗಬೇಕು. ಅದಕ್ಕಿಂತ ಕಡಿಮೆ ಸಕ್ಕರೆ ಉತ್ಪಾದನೆಯಾದರೆ ಟನ್ ಕಬ್ಬಿಗೆ ₹3555 ಸಿಗುವುದಿಲ್ಲ ಎಂದರ್ಥ.