ಪದಕಟ್ಟು-6: ಪ್ರಾಚೀನತೆಯಷ್ಟೇ ಅಲ್ಲ, ಸರಳ–ಸೌಂದರ್ಯವೂ ಕನ್ನಡದ ಹೆಗ್ಗಳಿಕೆ
ಜಗತ್ತಿನ ಪ್ರಾಚೀನ ಭಾಷೆಗಳಲ್ಲಿ ಒಂದಾದ ಕನ್ನಡ ವೈಶಿಷ್ಟ್ಯವೆಂದರೆ ಅದರ ಸರಳತೆ ಮತ್ತು ನಾದ ಸೌಂದರ್ಯ. ಹೀಗಾಗಿ ಕನ್ನಡದಲ್ಲಿ ಬಳಕೆಯಲ್ಲಿರುವ ಬೇರೆ ಭಾಷೆಗಳ ಪದಗಳಿಗೆ ಪರ್ಯಾಯವನ್ನು ಕಟ್ಟುವ ಸಂದರ್ಭದಲ್ಲಿ ವ್ಯಾಕರಣಬದ್ಧವಾಗಿ ಇರಬೇಕಾದುದು ಎಷ್ಟು ಮುಖ್ಯವೋ ಅಷ್ಟೇ ಮೂಕ್ಯವಾದುದು ಈ ಎರಡೂ ಸಂಗತಿಗಳನ್ನು ಗಮನಿಸಬೇಕಾದುದು. ಈ ಹಿನ್ನೆಲೆಯಲ್ಲಿ ನಮ್ಮ ಹಿರಿಯರು ಹುಟ್ಟು ಹಾಕಿದ

ಜಗತ್ತಿನ ಪ್ರಾಚೀನ ಭಾಷೆಗಳಲ್ಲಿ ಒಂದಾದ ಕನ್ನಡ ವೈಶಿಷ್ಟ್ಯವೆಂದರೆ ಅದರ ಸರಳತೆ ಮತ್ತು ನಾದ ಸೌಂದರ್ಯ. ಹೀಗಾಗಿ ಕನ್ನಡದಲ್ಲಿ ಬಳಕೆಯಲ್ಲಿರುವ ಬೇರೆ ಭಾಷೆಗಳ ಪದಗಳಿಗೆ ಪರ್ಯಾಯವನ್ನು ಕಟ್ಟುವ ಸಂದರ್ಭದಲ್ಲಿ ವ್ಯಾಕರಣಬದ್ಧವಾಗಿ ಇರಬೇಕಾದುದು ಎಷ್ಟು ಮುಖ್ಯವೋ ಅಷ್ಟೇ ಮೂಕ್ಯವಾದುದು ಈ ಎರಡೂ ಸಂಗತಿಗಳನ್ನು ಗಮನಿಸಬೇಕಾದುದು. ಈ ಹಿನ್ನೆಲೆಯಲ್ಲಿ ನಮ್ಮ ಹಿರಿಯರು ಹುಟ್ಟು ಹಾಕಿದ ಹೊಸ ಪದಗಳನ್ನು ಕೇವಲ ಇಂಗ್ಲಿಷ್ನ ಅಥವಾ ಬೇರೆಭಾಷೆಯ ಶಬ್ದಶಃ ಅನುವಾದವಾಗಿರಲಿಲ್ಲ. ಅವು ಕನ್ನಡಿಗರ ಆಡುಭಾಷೆಗೆ ಹತ್ತಿರವಾಗಿದ್ದವು. ಇದಕ್ಕೊಂದು ಸ್ಪಷ್ಟ ಉದಾಹರಣೆ ಎಂದರೆ ಬಾನ್ + ಉಲಿ = ಬಾನುಲಿ. ಇಲ್ಲಿ ಅರ್ಥದಷ್ಟೇ ಗಮನ ಸೆಳೆಯುವುದು ಆ ಪದದ ಸರಳತೆ ಹಾಗೂ ಅದರಲ್ಲಿನ ನಾದ. ಬಾನುಲಿ ಎಂಬ ಪದವನ್ನು ಕೇಳುವಾಗಲೇ ಅದರ ವ್ಯಾಪ್ತಿಯನ್ನು ನಾವು ಗ್ರಹಿಸಿಬಿಡಬಹುದು. ಅಲ್ಲದೇ ಬಾನೇ ಉಲಿಯುತ್ತದೆ; ಅಂದರೆ ಶಬ್ದದ ತರಂಗಗಳು ಆಕಾಶ ಮಾರ್ಗವಾಗಿ ನಮ್ಮ ಕಿವಿಗೆ ಬಂದು ತಲುಪುವುದರಿಂದ ಸಮರ್ಥ ಶಬ್ದಾರ್ಥವೂ ನಮಗೆ ದಕ್ಕುತ್ತದೆ.ಇನ್ನೊಂದು ವಿಶೇಷ ಸಂಗತಿಯೆಂದರೆ ಹೊಸ ಪದಗಳು ಜನಿಸಿದಾಗ ಅವನ್ನು ಸಾಮಾನ್ಯರ ಬಳಕೆಗೆ ತಲುಪಿಸುವ, ಬಳಕೆಯಲ್ಲಿ ಅವನ್ನು ಅಷ್ಟೇ ಸಮರ್ಥವಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಆದ ಪ್ರಯತ್ನ. ಇದರಲ್ಲಿ ಪತ್ರಿಕೆಗಳೂ ಸೇರಿದಂತೆ ಮಾಧ್ಯಮಗಳ ಪಾತ್ರ ಅತ್ಯಂತ ಹಿರಿದು. ಸೃಷ್ಟಿಯಾದ ಹೊಸ ಪದಗಳನ್ನು ಅಂದಿನ ಪ್ರಮುಖ ದಿನಪತ್ರಿಕೆಗಳು (ಪ್ರಮುಖವಾಗಿ ಪ್ರಜಾವಾಣಿ, ಸಂಯುಕ್ತ ಕರ್ನಾಟಕ ಇತ್ಯಾದಿ) ಹಾಗೂ ಆಕಾಶವಾಣಿಯ ಸಂಪಾದಕೀಯ ಸಿಬ್ಬಂದಿ ತಮ್ಮ ಮಾಧ್ಯಮಗಳಲ್ಲಿ ಧೈರ್ಯವಾಗಿ ಬಳಸತೊಡಗಿದರು. ಮಾಧ್ಯಮಗಳ ಬೆಂಬಲದಿಂದಾಗಿ ಇವು ಜನಮಾನಸದಲ್ಲಿ ಬೇರೂರಿದವು.ಪದಕಟ್ಟು ಭಾಗ– 4: ಕನ್ನಡದಲ್ಲಿ ಹೊಸ ಶಬ್ದಸೃಷ್ಟಿ ಮತ್ತು ಪರ್ಯಾಯ ಪದಗಳ ಯಶೋಗಾಥೆಪದಕಟ್ಟು ಭಾಗ– 5: ತಂತ್ರಜ್ಞಾನ ಯುಗದಲ್ಲಿ ಪರ್ಯಾಯ ಪದಗಳ ಸವಾಲು ಇದಲ್ಲದೇ ಪದಕಟ್ಟುವಿಕೆಯಲ್ಲಿ ಸನ್ನಿವೇಶಕ್ಕೆ ತಕ್ಕ ಸೂಕ್ತತೆಯೂ ಮುಖ್ಯವಾದುದು. ಒಂದು ವಸ್ತುವಿನ ಕಾರ್ಯವೇನು ಎಂಬುದನ್ನು ಆಧರಿಸಿ ನಮ್ಮ ಹಿರಿಯರು ಪದಗಳನ್ನು ರಚಿಸಿದರು. ಯಾವುದೇ ಸನ್ನಿವೇಶವನ್ನು ಕ್ಯಾಮೇರಾದಲ್ಲಿ ಸೆರೆಹಿಡಿದು, ಸ್ಥಿರವಾಗಿ ಇರುವಂತೆ ಮಾಡಿದ ಚಿತ್ರಗಳನ್ನು ‘ಸ್ಥಿರ ಬಿಂಬ’ ಎನ್ನಲಾಯಿತು. ಅದು ಯಾವುದೇ ವಸ್ತು, ವ್ಯಕ್ತಿ, ಸನ್ನಿವೇಶದ ಛಾಯಾ ಪ್ರತಿಯಾದ್ದರಿಂದ ಅದನ್ನು ಛಾಯಾಚಿತ್ರ ಎಂದೂ ಗುರುತಿಸಲಾಯಿತು. ಹಾಗೆಯೇ ಅಂಥ ಚಿತ್ರಗಳು ದೃಶ್ಯದಿಂದ ದೃಶ್ಯಕ್ಕೆ ಚಲಿಸುತ್ತಾ ಬದಲಾಗಲಾರಂಭಿಸಿದಾಗ, ಅದನ್ನು 'ಚಲಿಸುವ ಚಿತ್ರ'ವೆಂಬ ಕಾರಣಕ್ಕೆ ಚಲನಚಿತ್ರ (ಸಿನಿಮಾ) ಎಂದು ಕರೆದರು. ಹಾಗೆಯೇ, 'ಆಕಾಶದಿಂದ ಬರುವ ಧ್ವನಿ'ಯೇ ಆಕಾಶವಾಣಿ – ಹೀಗಾಗಿ ಜನರಿಗೆ ಈ ಪದಗಳನ್ನು ಒಪ್ಪಿಕೊಳ್ಳುವುದು ಸುಲಭವಾಯಿತು.ಇವೆಲ್ಲವೂ ಬದಲಾದ ಸನ್ನಿವೇಶಕ್ಕೆ ತಕ್ಕಂತೆ ಹುಟ್ಟಿದ ಪದಗಳು. ಭಾರತಕ್ಕೆ ಸಿನಿಮಾ ರಂಗ ಮೊದಲಬಾರಿಗೆ ‘ಟಾಕೀಸ್’ಗಳು ತಲೆ ಎತ್ತಿದವು. ಅದನ್ನು ‘ಚಲನಚಿತ್ರಮಂದಿರ’ ಎಂದು ಕರೆಯಲಾಯಿತು. ಹಾಗೆಯೇ ‘ಥಿಯೇಟರ್’ ನಾಟಕ, ನೃತ್ಯ ಇತ್ಯಾದಿ ಸಾಂಸ್ಕೃತಿಕ ಪ್ರಕಾರಗಳು ನಮ್ಮಲ್ಲೂ ಇದ್ದವಾದರೂ, ಅವೆಲ್ಲ ಬಹುತೇಕ ಬಯಲಲ್ಲೇ ನಡೆಯುತ್ತಿದ್ದವು. ಅದಕ್ಕಾಗಿ ಪ್ರತ್ಯೇಕ ಭವನಗಳು ಇದ್ದ ಉದಾಹರಣೆ ಕಡಿಮೆ. ಅವೇನಿದ್ದರೂ ರಾಜಾಶ್ರಯದಲ್ಲಿ ಮಾತ್ರವೇ. ಪಾಶ್ಚಾತ್ಯರು ನಮ್ಮಲ್ಲಿಗೆ ಬಂದ ಮೇಲೆ ಥಿಯೇಟರ್ಬಂತು. ಅದನ್ನು ಇಂಗ್ಲಿಷ್ನಲ್ಲಿ ಯತಾವತ್ಆಗಿ ಇಲ್ಲಿಗೆ ತಂದದ್ದರಿಂದ, ‘ಥಿಯೇಟರ್’ ಪದಗಳೇ ರಾಜ್ಯಾದ್ಯಂತ ಚಾಲ್ತಿಯಲ್ಲಿದ್ದವು. ಅದು ಕನ್ನಡದ ’ರಂಗಭೂಮಿ’ ಆಯಿತು. ಹೀಗೆ ಕನ್ನಡ ಸಾಹಿತ್ಯ ಮತ್ತು ಚಿತ್ರರಂಗದ ಹಿರಿಯರು 'Cinema Hall'ಗೆ ‘ಚಿತ್ರಮಂದಿರ’, 'Screen'ಗೆ ‘ಪರದೆ’, 'Silver Screen'ಗೆ ‘ಬೆಳ್ಳಿಪರದೆ’, ಮತ್ತು 'Movie/Cinema'ಗೆ ‘ಚಲನಚಿತ್ರ’ (ಚಲಿಸುವ ಚಿತ್ರ) ಎಂಬ ಅತ್ಯಂತ ಸೂಕ್ತ ಪದಗಳನ್ನು ಕಟ್ಟಿಕೊಟ್ಟರು. ಸಿನಿಮಾ ವಿಮರ್ಶೆಗಳು ಮತ್ತು ಜಾಹೀರಾತುಗಳಲ್ಲಿ ಈ ಪದಗಳನ್ನು ಬಳಸಿ ಜನರ ನಾಲಿಗೆಯ ಮೇಲೆ ಕೂರಿಸಲಾಯಿತು.ಇದೇ ಹಿನ್ನೆಲೆಯಲ್ಲಿ ಕನ್ನಡ ರಾಜ್ಯೋತ್ಸವದ ತಿಂಗಳಿನಲ್ಲಿ ನಮ್ಮಲ್ಲಿ ಬಳಕೆಯಲ್ಲಿರುವ ಒಂದಷ್ಟು ಪರಕೀಯ ಪದಗಳಿಗೆ ಪರ್ಯಾಯ ಕನ್ನಡ ಪದಗಳನ್ನು ಕಟ್ಟುವ ಪಯತ್ನವನ್ನು ನಾವೂ ಮಾಡೋಣ. ‘ಪ್ರಜಾವಾಣಿ ಡಿಜಿಟಲ್’ ನಿಮಗೆ ವೇದಿಕೆ ಒದಗಿಸಿಕೊಡುತ್ತದೆ. ಕನ್ನಡದ ಪದರಚನೆಗೆ ಹೊಂದುವ, ಚಿಕ್ಕದಾದ, ಅರ್ಥಪೂರ್ಣವಾದ, ವ್ಯಾಕರಣಬದ್ಧವಾದ ಮತ್ತು ಜನಸಾಮಾನ್ಯರು ಸುಲಭವಾಗಿ ಬಳಸಬಹುದಾದ ಪರ್ಯಾಯ ಪದಗಳನ್ನು ನೀವು ಕಟ್ಟಿಕೊಟ್ಟರೆ ಆಯ್ದು ಸೂಕ್ತ ಪರ್ಯಾಯ ಪದಗಳನ್ನು ನಾಳೆ Prajavani. Net ನಲ್ಲಿ ಪ್ರಕಟಿಸುತ್ತೇವೆ;ಪದಕಟ್ಟು ಆರನೇ ದಿನದ ಸವಾಲು26. ಪಾಸ್ವರ್ಡ್(Password)27. ಯೂಸರ್ನೇಮ್(Username) 28. ಲಾಗಿನ್(Login) 29. ಲಾಗ್ಔಟ್ (Logout) 30 ಡೌನ್ಲೋಡ್(Download) ಪದಕಟ್ಟು ಐದನೇ ದಿನದ ಸವಾಲಿಗೆ ನಮ್ಮ ಸಲಹೆಗಳು ಇಂತಿವೆ;21. ಸ್ವಿಚ್(Switch): ವಿದ್ಯುತ್ ತಿರುವಿ22. ಪ್ಲಗ್(Plug): ವಿದ್ಯುತ್ ಕೊಂಡಿ23. ಸಾಕೆಟ್(Socket): ಕೊಂಡಿ ಕಂಡಿ24. ಎಕ್ಸಾಸ್ಟ್ಫ್ಯಾನ್(Exhaust fan): ಹೊಗೆ ಬೀಸುಗ25. ಸ್ಕ್ರೀನ್ಶಾಟ್(Screenshot): ಪರದೆಚಿತ್ರ ಕರುನಾಡೋತ್ಸವ ’ಪದ ಕಟ್ಟು‘ ಭಾಗ–3: ಇಂದಿನ ಸವಾಲುಪದಕಟ್ಟು ಭಾಗ– 5: ತಂತ್ರಜ್ಞಾನ ಯುಗದಲ್ಲಿ ಪರ್ಯಾಯ ಪದಗಳ ಸವಾಲು