ಆತ್ಮವಿಶ್ವಾಸದ ಉತ್ತುಂಗದಲ್ಲಿ ಗಿಲ್ ಬಳಗ
ವೆಲಿಂಗ್ಟನ್: ಅತಿ ಹೆಚ್ಚು ಬಿರುಗಾಳಿ ಬೀಸುವ ವಿಶ್ವದ ನಗರಗಳಲ್ಲಿ ವೆಲಿಂಗ್ಟನ್ಗೆ ಎರಡನೇ ಸ್ಥಾನವಿದೆ. ಹವಾಮಾನದಲ್ಲಿ ಹಠಾತ್ ಬದಲಾಗುವ ಸಾಧ್ಯತೆಗಳೂ ಇಲ್ಲಿ ಹೆಚ್ಚು. ಶುಕ್ರವಾರ ಬೆಳಿಗ್ಗೆಯೂ ಇಂತಹದೊಂದು ಅನಿರೀಕ್ಷಿತ ವಾತಾವರಣ ಇತ್ತು. ಮಂಜು ಮುಸುಕಿದ ಚಳಿಯ ವಾತಾವರಣ ಇತ್ತು. ಇದರಿಂದಾಗಿ ಆತಿಥೇಯ ನ್ಯೂಜಿಲೆಂಡ್ ಕ್ರಿಕೆಟ್ ತಂಡವು ಒಳಾಂಗಣದಲ್ಲಿ ತಾಲೀಮು ನಡೆಸಬೇ

ವೆಲಿಂಗ್ಟನ್: ಅತಿ ಹೆಚ್ಚು ಬಿರುಗಾಳಿ ಬೀಸುವ ವಿಶ್ವದ ನಗರಗಳಲ್ಲಿ ವೆಲಿಂಗ್ಟನ್ಗೆ ಎರಡನೇ ಸ್ಥಾನವಿದೆ. ಹವಾಮಾನದಲ್ಲಿ ಹಠಾತ್ ಬದಲಾಗುವ ಸಾಧ್ಯತೆಗಳೂ ಇಲ್ಲಿ ಹೆಚ್ಚು. ಶುಕ್ರವಾರ ಬೆಳಿಗ್ಗೆಯೂ ಇಂತಹದೊಂದು ಅನಿರೀಕ್ಷಿತ ವಾತಾವರಣ ಇತ್ತು. ಮಂಜು ಮುಸುಕಿದ ಚಳಿಯ ವಾತಾವರಣ ಇತ್ತು. ಇದರಿಂದಾಗಿ ಆತಿಥೇಯ ನ್ಯೂಜಿಲೆಂಡ್ ಕ್ರಿಕೆಟ್ ತಂಡವು ಒಳಾಂಗಣದಲ್ಲಿ ತಾಲೀಮು ನಡೆಸಬೇಕಾಯಿತು. ಭಾರತವು ಮಧ್ಯಾಹ್ನ ತನ್ನ ಅಭ್ಯಾಸವನ್ನು ರದ್ದುಗೊಳಿಸಿತು. ಇಡೀ ದಿನ ಸೂರ್ಯನ ದರ್ಶನವೇ ಆಗಲಿಲ್ಲ. ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಣ ಎರಡನೇ ಏಕದಿನ ಪಂದ್ಯ ನಡೆಯಲಿರುವ ಶನಿವಾರವೂ ಇಂತಹದೇ ವಾತಾವರಣ ಇರಲಿದೆ ಎಂಬ ಮುನ್ಸೂಚನೆ ಪ್ರಕಟವಾಗಿದೆ. ಹಗಲು ಹೊತ್ತಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಮಧ್ಯಾಹ್ನ ಮತ್ತು ಸಂಜೆ ಹೊತ್ತಲ್ಲಿ ಮಳೆ ಸುರಿಯುವ ಸಾಧ್ಯತೆಯೂ ಇದೆ. ಆದ್ದರಿಂದ ಆಟಕ್ಕೆ ಎಷ್ಟು ಸಮಯ ಸಿಗಬಹುದು ಎಂಬ ಯೋಚನೆ ಮೂಡಿದೆ. ಭಾರತವು ಐದು ಪಂದ್ಯಗಳ ಸರಣಿಯಲ್ಲಿ ಈಗಾಗಲೇ 1–0 ಮುನ್ನಡೆ ಸಾಧಿಸಿದೆ. ಈ ಸರಣಿ ಆರಂಭಕ್ಕೂ ಮುನ್ನ ವೇಗದ ಬೌಲಿಂಗ್ ವಿಭಾಗದ ಕುರಿತ ಕೊರಗು ಇತ್ತು. ಇದೇ 19ರಿಂದ ಶುರುವಾಗುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡಲಿರುವ ವೇಗಿ ಜಸ್ಪ್ರೀತ್ ಬೂಮ್ರಾ ಅವರಿಗೆ ಟಿ20 ಹಾಗೂ ಏಕದಿನ ಸರಣಿಗಳಿಂದ ವಿಶ್ರಾಂತಿ ನೀಡಲಾಗಿತ್ತು. ಪ್ರಸಿದ್ಧಕೃಷ್ಣ ಗಾಯದಿಂದಾಗಿ ಹೊರಗುಳಿದಿದ್ದರು. ಆಕ್ಲೆಂಡ್ನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಸಿರಾಜ್ ಅವರು ಆಡಲಿಲ್ಲ. ಆಗ ಅವರು ನ್ಯೂಜಿಲೆಂಡ್ ಎ ಎದುರಿನ ಪಂದ್ಯದಲ್ಲಿ ಭಾರತ ಎ ತಂಡದಲ್ಲಿ ಆಡುತ್ತಿದ್ದರು. ಆದ್ದರಿಂದ ಅವರ ಅನುಪಸ್ಥಿತಿಯಲ್ಲಿ ಎಡಗೈ ವೇಗಿ ಅರ್ಷದೀಪ್ ಸಿಂಗ್ (70ಕ್ಕೆ4), ಗುರ್ನೂರ್ ಬ್ರಾರ್ (2/22), ಅಕಿಬ್ ನಬಿ (3/44) ಮತ್ತು ಅನ್ಷುಲ್ ಕಂಬೋಜ್ (ವಿಕೆಟ್ ಇಲ್ಲದೇ 33) ಅವರು ದಾಳಿಯ ಹೊಣೆ ನಿಭಾಯಿಸಿದರು. ಕಂಬೋಜ್ ಮತ್ತು ನಬಿ ಅವರಿಗೆ ಅದು ಎರಡನೇ ಏಕದಿನ ಪಂದ್ಯವಾಗಿತ್ತು. ಆದರೆ ಮೂವರೂ ಬೌಲರ್ಗಳು ಶಿಸ್ತುಬದ್ಧ ದಾಳಿ ನಡೆಸಿದರು. ಕಿವೀಸ್ ಬ್ಯಾಟರ್ಗಳನ್ನು ನಿಯಂತ್ರಿಸಿದರು. ಆದರೆ ನಬಿ ಅವರಿಗೆ ಈ ಪಂದ್ಯದಲ್ಲಿಯೂ ವಿಕೆಟ್ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಅದರಿಂದಾಗಿ ಮೊಹಮ್ಮದ್ ಸಿರಾಜ್ ಅವರಿಗೆ ಸ್ಥಾನ ನೀಡುವ ಸಾಧ್ಯತೆ ಹೆಚ್ಚಿದೆ. ಇದಲ್ಲದೆ ನಾಯಕ ಶುಭಮನ್ ಗಿಲ್ ಮತ್ತು ಅನುಭವಿ ಕೆ. ಎಲ್. ರಾಹುಲ್ ಅವರು ಟೆಸ್ಟ್ ಸರಣಿಯ ಸಿದ್ಧತೆಗಾಗಿ ಮೂರನೇ ಏಕದಿನ ಪಂದ್ಯದ ನಂತರ ನಿರ್ಗಮಿಸಲಿದ್ದಾರೆ. ಆದ್ದರಿಂದ ಈ ಪಂದ್ಯದಲ್ಲಿ ಹೆಚ್ಚಿನ ಬದಲಾವಣೆಗಳಾಗುವ ಸಾಧ್ಯತೆ ಇಲ್ಲ. ನಾಲ್ವರು ವೇಗಿಗಳೊಂದಿಗೆ ಏಕೈಕ ಸ್ಪಿನ್ನರ್ ಆಗಿ ಅಕ್ಷರ್ ಪಟೇಲ್ ಕಣಕ್ಕಿಳಿಯುವುದು ಬಹುತೇಕ ಖಚಿತ. ಕುಲದೀಪ್ ಯಾದವ್ ಅವರು ಡಗ್ಔಟ್ನಲ್ಲಿ ಕಾಲ ಕಳೆಯಬೇಕಾಗಬಹುದು. ಕಳೆದ ಪಂದ್ಯದಲ್ಲಿ ಸೊನ್ನೆ ಸುತ್ತಿದ್ದ ರೋಹಿತ್ ಶರ್ಮಾ ಇಲ್ಲಿ ದೊಡ್ಡ ಇನಿಂಗ್ಸ್ ಕಟ್ಟುವತ್ತ ಚಿತ್ತ ನೆಟ್ಟಿದ್ದಾರೆ. ಅವರ ‘ಸ್ನೇಹಿತ’ ವಿರಾಟ್ ಕೊಹ್ಲಿ 51 ಎಸೆತಗಳಲ್ಲಿ 74 ರನ್ ಹೊಡೆಯುವ ಮೂಲಕ ತಾವು ‘ಚೇಸಿಂಗ್ ಮಾಸ್ಟರ್’ ಎಂಬುದನ್ನು ಮತ್ತೊಮ್ಮೆ ತೋರಿಸಿಕೊಟ್ಟರು. ಇನ್ನೊಂದೆಡೆ ಮಿಚೆಲ್ ಸ್ಯಾಂಟನರ್ ಬಳಗವು ತಿರುಗೇಟು ನೀಡುವ ಛಲದಲ್ಲಿದೆ. ಟಿ20 ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ಪುಟಿದೆದ್ದ ಮಾದರಿಯಲ್ಲಿಯೇ ಇಲ್ಲಿಯೂ ಆಡುವತ್ತ ಸಿದ್ಥತೆ ನಡೆಸಿದೆ. ಡ್ಯಾರಿಲ್ ಮಿಚೆಲ್, ಟಾಮ್ ಲೇಥಮ್, ಹೆನ್ರಿ ನಿಕೊಲ್ಸ್, ಜೇಕಬ್ ಡಫಿ, ಕೈಲ್ ಜೆಮೀಸನ್ ಮತ್ತು ಮೈಕೆಲ್ ಬ್ರೇಸ್ವೆಲ್ ಅವರು ಪಂದ್ಯಕ್ಕೆ ಪ್ರಮುಖ ಘಟ್ಟದಲ್ಲಿ ತಿರುವು ನೀಡಬಲ್ಲ ಸಮರ್ಥರು. ಪಂದ್ಯ ಆರಂಭ: ಬೆಳಿಗ್ಗೆ 7.30ರಿಂದನೇರಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್ವರ್ಕ್. ಸೋನಿ ಲಿವ್ ಆ್ಯಪ್.ವಿರಾಟ್ ಕೊಹ್ಲಿ