ಮಳೆ ಕೊರತೆಯ ನಡುವೆಯೂ ಚೆಂಡು ಹೂವು ಬೆಳೆದ ರೈತ, ಲಾಭದ ನಿರೀಕ್ಷೆಯಲ್ಲಿ
ಕವಿತಾಳ: ಪ್ರಸಕ್ತ ವರ್ಷ ತೀವ್ರ ಮಳೆ ಕೊರತೆಯ ನಡುವೆಯೂ ಸಮೀಪದ ಪಾಮನಕಲ್ಲೂರು ಗ್ರಾಮದ ರೈತ ಶಿವಾನಂದ ಹೂಗಾರ ಅವರು ಚೆಂಡು ಹೂವು ಬೆಳೆದಿದ್ದು, ಲಾಭದ ನಿರೀಕ್ಷೆಯಲ್ಲಿದ್ದಾರೆ.ಸ್ವಂತ ಜಮೀನಿನಲ್ಲಿ ಒಂದು ಎಕರೆ ಪ್ರದೇಶದಲ್ಲಿ ಚೆಂಡು ಹೂವು ಬೆಳೆದ ರೈತ ಶಿವಾನಂದ ಅವರು ದಸರಾ ಹಬ್ಬದ ಸಂದರ್ಭದಲ್ಲಿ ಅಂದಾಜು 4 ಕ್ವಿಂಟಲ್ ಹೂವು ಮಾರಾಟ ಮಾಡಿದ್ದಾರೆ. ಈಗ ದೀಪಾವಳಿ ಮತ್ತು ಗೌರ

ಕವಿತಾಳ: ಪ್ರಸಕ್ತ ವರ್ಷ ತೀವ್ರ ಮಳೆ ಕೊರತೆಯ ನಡುವೆಯೂ ಸಮೀಪದ ಪಾಮನಕಲ್ಲೂರು ಗ್ರಾಮದ ರೈತ ಶಿವಾನಂದ ಹೂಗಾರ ಅವರು ಚೆಂಡು ಹೂವು ಬೆಳೆದಿದ್ದು, ಲಾಭದ ನಿರೀಕ್ಷೆಯಲ್ಲಿದ್ದಾರೆ.ಸ್ವಂತ ಜಮೀನಿನಲ್ಲಿ ಒಂದು ಎಕರೆ ಪ್ರದೇಶದಲ್ಲಿ ಚೆಂಡು ಹೂವು ಬೆಳೆದ ರೈತ ಶಿವಾನಂದ ಅವರು ದಸರಾ ಹಬ್ಬದ ಸಂದರ್ಭದಲ್ಲಿ ಅಂದಾಜು 4 ಕ್ವಿಂಟಲ್ ಹೂವು ಮಾರಾಟ ಮಾಡಿದ್ದಾರೆ. ಈಗ ದೀಪಾವಳಿ ಮತ್ತು ಗೌರಿ ಹುಣ್ಣಿಮೆಗೆ ನಿರೀಕ್ಷೆಯಂತೆ ಮಾರಾಟವಾದಲ್ಲಿ ಹೆಚ್ಚಿನ ಲಾಭದ ನಿರೀಕ್ಷೆಯಲ್ಲಿದ್ದಾರೆ.ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಜಮೀನಿನಲ್ಲಿ ಹಳದಿ ಮತ್ತು ಕೆಂಪು ಬಣ್ಣದ ಹೊದಿಕೆ ಹಾಕಿದಂತೆ ಕಂಡು ಬರುವ ತೋಟ ವ್ಯಾಪಾರಿಗಳನ್ನು ಸವಾರರನ್ನು ಆಕರ್ಷಿಸುತ್ತಿದೆ. ಕೆಲ ವಾಹನ ಸವಾರರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.‘ಪ್ರತಿ ಸಸಿಗೆ ₹3ರಂತೆ ಬೆಳಗಾವಿಯಿಂದ 11 ಸಾವಿರ ಸಸಿಗಳನ್ನು ಖರೀದಿಸಿ ತಂದಿದ್ದು, ರಸಗೊಬ್ಬರ, ಕ್ರಿಮಿನಾಶಕ ಮತ್ತು ಕೂಲಿ ಕಾರ್ಮಿಕರಿಗೆ ₹14 ಸಾವಿರ ಖರ್ಚಾಗಿದೆ. ದಸರಾ ಸಂದರ್ಭದಲ್ಲಿ ಹೂವು ಮಾರಾಟದಿಂದ ₹47 ಸಾವಿರ ಸಿಕ್ಕಿದೆ. ಖರ್ಚು ಮಾಡಿದ ಹಣ ಕೈ ಸೇರಿದ್ದು, ದೀಪಾವಳಿ ಮತ್ತು ಗೌರಿ ಹುಣ್ಣಿಮೆಗೆ ಮಾರಾಟ ಮಾಡುವ ಹೂವು ಲಾಭ ತರಲಿದೆ’ ಎಂದು ಶಿವಾನಂದ ಹೇಳಿದರು.‘ಮುಂಗಾರು ಮತ್ತು ಹಿಂಗಾರು ಮಳೆ ಕೊರತೆಯಿಂದ ಕೊಳವೆಬಾವಿಯಲ್ಲಿ ಅಂತರ್ಜಲ ಕುಸಿದು ನೀರಿನ ಪ್ರಮಾಣ ಕಡಿಮೆಯಾಗಿದೆ. 34 ಗುಂಟೆ ಜಮೀನಿನಲ್ಲಿ ಬೆಳೆದ ಶಾವಂತಿಗೆ ಹೂವು ನಿರೀಕ್ಷಿತ ಇಳುವರಿ ನೀಡಲಿಲ್ಲ. ಚೆಂಡು ಹೂವು ಉತ್ತಮ ಇಳುವರಿ ಬಂದಿದ್ದು, ಈ ವರ್ಷ ಕೈಹಿಡಿದಿದೆ. ಕಳೆದ ವರ್ಷ ಅಧಿಕ ಮಳೆಯಿಂದ ಚೆಂಡು ಹೂವು ನೆಲಕ್ಕುರುಳಿ ನಷ್ಟ ಅನುಭವಿಸುವಂತಾಗಿತ್ತು’ ಎಂದು ಶಿವಾನಂದ ತಿಳಿಸಿದರು.ಸೂಕ್ತ ಸಂದರ್ಭದಲ್ಲಿ ಮಳೆಯಾಗಿದ್ದರೆ, ಇನ್ನೂ ಹೆಚ್ಚಿನ ಇಳುವರಿ ಬರುವ ಸಾಧ್ಯತೆಯಿತ್ತು. ಮಳೆ ಕೊರತೆ ನಡುವೆಯೂ ಚೆಂಡು ಹೂವು ಈ ವರ್ಷ ಉತ್ತಮ ಆದಾಯ ತಂದು ಕೊಟ್ಟಿದೆ– ಶಿವಾನಂದ ಹೂಗಾರ, ರೈತ261106-32-214822137