ಎಸ್ಐಆರ್ ಎಂಬುದು ಮತದಾರರ ಪಟ್ಟಿ ಶುದ್ಧೀಕರಣ: ಸಂಬಿತ್ ಪಾತ್ರಾ
ಬೆಂಗಳೂರು: ‘ಚುನಾವಣಾ ಆಯೋಗ ನಡೆಸಿರುವ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಮತದಾರರ ಪಟ್ಟಿಯ ಶುದ್ಧೀಕರಣ ಪ್ರಕ್ರಿಯೆಯಾಗಿದೆ. ಈ ಪ್ರಕ್ರಿಯೆಯಿಂದ ಬಾಂಗ್ಲಾದ ಅಕ್ರಮ ವಲಸಿಗರು ಹಾಗೂ ಮೃತರ ಹೆಸರಿನಲ್ಲಿ ಬೇರೊಬ್ಬರು ಮತದಾನ ಮಾಡುವುದು ತಪ್ಪಲಿದೆ’ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಹೇಳಿದರು.ವಿಕಸಿತ ಭಾರತ ಕರ್ನಾಟಕವು ನಗರದಲ್ಲಿ ಗುರುವಾರ ಹಮ್ಮಿಕೊ

ಬೆಂಗಳೂರು: ‘ಚುನಾವಣಾ ಆಯೋಗ ನಡೆಸಿರುವ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಮತದಾರರ ಪಟ್ಟಿಯ ಶುದ್ಧೀಕರಣ ಪ್ರಕ್ರಿಯೆಯಾಗಿದೆ. ಈ ಪ್ರಕ್ರಿಯೆಯಿಂದ ಬಾಂಗ್ಲಾದ ಅಕ್ರಮ ವಲಸಿಗರು ಹಾಗೂ ಮೃತರ ಹೆಸರಿನಲ್ಲಿ ಬೇರೊಬ್ಬರು ಮತದಾನ ಮಾಡುವುದು ತಪ್ಪಲಿದೆ’ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಹೇಳಿದರು.ವಿಕಸಿತ ಭಾರತ ಕರ್ನಾಟಕವು ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಯುವ ಸಂವಾದ’ ಕಾರ್ಯಕ್ರಮದಲ್ಲಿಭಾಗವಹಿಸಿ, ಮಾತನಾಡಿದರು. ‘ಎಸ್ಐಆರ್ ಪ್ರಕ್ರಿಯೆ ವೇಳೆ 13 ಕೋಟಿ ಜನರ ಹೆಸರು ಬಿಟ್ಟಿರುವುದು ಮತ ಕಳವು ಅಲ್ಲ, ಬದಲಾಗಿ ಮತದಾರರ ಪಟ್ಟಿಯ ಶುದ್ಧೀಕರಣವಾಗಿದೆ. ಗೈರುಹಾಜರಿ, ಸ್ಥಳಾಂತರ, ಮೃತಪಟ್ಟವರು, ನಕಲಿ ಮತದಾರರ ಹೆಸರನ್ನು ತೆಗೆದು ಹಾಕಲಾಗಿದೆ. ರಾಹುಲ್ ಗಾಂಧಿ ಅವರು 13 ಕೋಟಿ ಮತಗಳನ್ನು ಕಳ್ಳತನ ಮಾಡಲಾಗಿದೆ ಎಂದು ದೇಶದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮತ ಕಳ್ಳತನವಾಗಿದ್ದರೆ ಜನರು ಬೀದಿಗೆ ಬಂದು ಪ್ರತಿಭಟಿಸುತ್ತಿದ್ದರು’ ಎಂದು ಅಭಿಪ್ರಾಯಪಟ್ಟರು.‘ಎಸ್ಐಆರ್ ಸಾಮಾನ್ಯ ಪ್ರಕ್ರಿಯೆಯಾಗಿದ್ದು, ದೇಶದಲ್ಲಿ ಈವರೆಗೆನಡೆದ 12 ಎಸ್ಐಆರ್ ಪ್ರಕ್ರಿಯೆಗಳಲ್ಲಿ10 ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೇ ನಡೆದಿದೆ’ ಎಂದರು.ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ‘2014ಕ್ಕೂ ಮೊದಲು ದೇಶದ ಯುವಜನರು ವಿಶ್ವಾಸ ಕಳೆದುಕೊಂಡಿದ್ದರು. ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದಾಗ ನಡೆದ ಹಗರಣಗಳೇ ಇದಕ್ಕೆ ಕಾರಣ. 2014ರ ನಂತರ ದೇಶದ ಪ್ರಧಾನಿಯಾದ ನರೇಂದ್ರ ಮೋದಿ ಅವರು ಯುವಜನರಲ್ಲಿ ವಿಶ್ವಾಸ ತುಂಬಿದ್ದಾರೆ’ ಎಂದು ಹೇಳಿದರು.ಸಂಸದ ತೇಜಸ್ವಿ ಸೂರ್ಯ, ‘ಹಾಲು ಹಾಗೂ ಅದರ ಉತ್ಪನ್ನಗಳು ಮತ್ತು ಬಸ್ ಪ್ರಯಾಣ ದರ ಹೆಚ್ಚಳ ಮಾಡುವ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೀಪಾವಳಿಗೆ ಡಬಲ್ ಬೋನಸ್ ನೀಡಿದ್ದಾರೆ. ಈ ರೀತಿಬೆಲೆ ಏರಿಕೆ ಮಾಡಿದರೆ ಜನರು ಚುನಾವಣೆ ಗಳಲ್ಲಿ ತಕ್ಕ ಪಾಠ ಕಲಿಸುತ್ತಾರೆ. ದೇಶದ ವಿವಿಧೆಡೆ ಜನರು ಅದನ್ನೆ ಕಾಂಗ್ರೆಸ್ ಪಕ್ಷಕ್ಕೆ ಮಾಡುತ್ತಾ ಬಂದಿದ್ದು, ಸೋತಾಗ ಮತ ಕಳವು ಎಂದು ಅಪ ನಂಬಿಕೆ ಹುಟ್ಟು ಹಾಕುತ್ತಿದ್ದಾರೆ’ ಎಂದರು.