ಏರ್ಟೆಲ್ಗೆ ₹10,710 ಕೋಟಿ ಲಾಭ
ನವದೆಹಲಿ: ದೂರಸಂಪರ್ಕ ವಲಯದ ಭಾರ್ತಿ ಏರ್ಟೆಲ್ ಕಂಪನಿಯು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹10,710 ಕೋಟಿ ನಿವ್ವಳ ಲಾಭ ಗಳಿಸಿದೆ.ಕಳೆದ ಆರ್ಥಿಕ ವರ್ಷದ ಇದೇ ತ್ರೈಮಾಸಿಕದಲ್ಲಿ ಕಂಪನಿಯು ₹8,651 ಕೋಟಿ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಲಾಭದಲ್ಲಿ ಶೇ 24ರಷ್ಟು ಹೆಚ್ಚಳವಾಗಿದೆ ಎಂದು ಕಂಪನಿ ಷೇರುಪೇಟೆಗೆ ಗುರುವಾರ ತಿಳಿಸಿದೆ.ವರಮಾನವು ₹52,145 ಕೋಟಿಯಿಂದ ₹60,877

ನವದೆಹಲಿ: ದೂರಸಂಪರ್ಕ ವಲಯದ ಭಾರ್ತಿ ಏರ್ಟೆಲ್ ಕಂಪನಿಯು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹10,710 ಕೋಟಿ ನಿವ್ವಳ ಲಾಭ ಗಳಿಸಿದೆ.ಕಳೆದ ಆರ್ಥಿಕ ವರ್ಷದ ಇದೇ ತ್ರೈಮಾಸಿಕದಲ್ಲಿ ಕಂಪನಿಯು ₹8,651 ಕೋಟಿ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಲಾಭದಲ್ಲಿ ಶೇ 24ರಷ್ಟು ಹೆಚ್ಚಳವಾಗಿದೆ ಎಂದು ಕಂಪನಿ ಷೇರುಪೇಟೆಗೆ ಗುರುವಾರ ತಿಳಿಸಿದೆ.ವರಮಾನವು ₹52,145 ಕೋಟಿಯಿಂದ ₹60,877 ಕೋಟಿಗೆ ಹೆಚ್ಚಳವಾಗಿದ್ದು, ಶೇ 16.7ರಷ್ಟು ಏರಿಕೆ ದಾಖಲಿಸಿದೆ. ಒಟ್ಟು ವರಮಾನವು ₹42,308 ಕೋಟಿಗೆ ತಲುಪಿದೆ.ಕಳೆದ ಆರ್ಥಿಕ ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಪ್ರತಿ ಗ್ರಾಹಕನಿಂದ ಬರುವ ಸರಾಸರಿ ವರಮಾನ (ಎಆರ್ಪಿಯು) ₹256 ಇತ್ತು. ಇದು ಈ ಬಾರಿ ₹271ಕ್ಕೆ ಹೆಚ್ಚಳವಾಗಿದೆ ಎಂದು ಕಂಪನಿ ತಿಳಿಸಿದೆ.Highlights - null
Read the complete story at Prajavani