ದೀಪಾವಳಿ ಸಂಭ್ರಮ: ರೊಮ್ಯಾಂಟಿಕ್ ಜೋಡಿಯಾಗಿ ಗಮನ ಸೆಳೆದ ಅಭಿಷೇಕ್- ಐಶ್ವರ್ಯಾ ರೈ
ಖ್ಯಾತ ಫ್ಯಾಶನ್ ಡಿಸೈನರ್ ಮನೀಶ್ ಮಲ್ಹೋತ್ರಾ ಅವರು ಗುರುವಾರ ರಾತ್ರಿ ಆಯೋಜಿಸಿದ್ದ ದೀಪಾವಳಿ ಸಂಭ್ರಮದಲ್ಲಿ ಬಾಲಿವುಡ್ನ ಪ್ರಮುಖ ತಾರೆಯರು ಭಾಗವಹಿಸಿ ಸಂಭ್ರಮಿಸಿದರು. ಅದರಲ್ಲೂ ತಾರಾ ಜೋಡಿ ಐಶ್ವರ್ಯಾ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಜೊತೆಯಾಗಿ ಆಗಮಿಸಿ ಎಲ್ಲರ ಗಮನ ಸೆಳೆದರು.ಮಗಳು ಆರಾಧ್ಯಳ ಜನ್ಮದಿನ: ‘ಮೈ ಲವ್ ಮೈ ಲೈಫ್’ ಎಂದ ಐಶ್ವರ್ಯಾ ರೈ ಬಚ್ಚನ್15ನೇ ವಿವಾಹ

ಖ್ಯಾತ ಫ್ಯಾಶನ್ ಡಿಸೈನರ್ ಮನೀಶ್ ಮಲ್ಹೋತ್ರಾ ಅವರು ಗುರುವಾರ ರಾತ್ರಿ ಆಯೋಜಿಸಿದ್ದ ದೀಪಾವಳಿ ಸಂಭ್ರಮದಲ್ಲಿ ಬಾಲಿವುಡ್ನ ಪ್ರಮುಖ ತಾರೆಯರು ಭಾಗವಹಿಸಿ ಸಂಭ್ರಮಿಸಿದರು. ಅದರಲ್ಲೂ ತಾರಾ ಜೋಡಿ ಐಶ್ವರ್ಯಾ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಜೊತೆಯಾಗಿ ಆಗಮಿಸಿ ಎಲ್ಲರ ಗಮನ ಸೆಳೆದರು.ಮಗಳು ಆರಾಧ್ಯಳ ಜನ್ಮದಿನ: ‘ಮೈ ಲವ್ ಮೈ ಲೈಫ್’ ಎಂದ ಐಶ್ವರ್ಯಾ ರೈ ಬಚ್ಚನ್15ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಐಶ್ವರ್ಯಾ ರೈ -ಅಭಿಷೇಕ್ ಬಚ್ಚನ್ ಜೋಡಿ ಅಭಿಷೇಕ್ ಬಚ್ಚನ್- ಐಶ್ವರ್ಯಾ ರೈ ಪಾಪರಾಜಿಗಳ ಕ್ಯಾಮೆರಾಗಳಿಗೆ ಪೋಸ್ ನೀಡುವ ವೇಳೆ ಅಭಿಷೇಕ್ ತಮ್ಮ ಪತ್ನಿಯ ಕೈಹಿಡಿದ ಕ್ಷಣ ಹಾಗೂ ಐಶ್ವರ್ಯಾ ಅವರ ಮುಖದಲ್ಲಿ ಮೂಡಿದ ಕಿರುನಗೆ ಅಭಿಮಾನಿಗಳ ಮನ ಗೆದ್ದಿದೆ. ಕೆಂಪು ಬಣ್ಣದ ಸೀರೆಯಲ್ಲಿ ಐಶ್ವರ್ಯಾ ರೈ ಕಂಗೊಳಿಸಿದರೆ, ಕಪ್ಪು ಬಣ್ಣದ ಉಡುಪಿನಲ್ಲಿ ಅಭಿಷೇಕ್ ಮಿಂಚಿದ್ದಾರೆ. ಇಬ್ಬರೂ ಪ್ರೀತಿಯಿಂದ ಮಾತನಾಡುತ್ತಿದ್ದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಹರಿದಾಡಿವೆ. ಅಭಿಷೇಕ್ ಬಚ್ಚನ್- ಐಶ್ವರ್ಯಾ ರೈ ಈ ವಿಡಿಯೊ ನೋಡಿದ ನೆಟ್ಟಿಗರು, ‘ಬಹಳ ದಿನಗಳ ನಂತರ ಐಶ್ವರ್ಯಾ ಅವರ ಮುಖದಲ್ಲಿ ನಿಜವಾದ ಸಂತೋಷ ಕಾಣುತ್ತಿದೆ’, ‘ಬಾಲಿವುಡ್ನ ಅತ್ಯಂತ ಸುಂದರ ಜೋಡಿ’ ಎಂದೆಲ್ಲ ಕಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಐಶ್ವರ್ಯಾ ರೈ ಈ ದೀಪಾವಳಿ ಪಾರ್ಟಿಯಲ್ಲಿ ಬಾಲಿವುಡ್ನ ದಿಗ್ಗಜ ತಾರೆಯರಾದ ಕರೀನಾ ಕಪೂರ್ ಖಾನ್ ದಂಪತಿ, ಅಕ್ಷಯ್ ಕುಮಾರ್, ಟ್ವಿಂಕಲ್ ಖನ್ನಾ, ಮಾಧುರಿ ದೀಕ್ಷಿತ್, ಕಾಜೋಲ್ ಹಾಗೂ ಕರಣ್ ಜೋಹರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.