ಉತ್ತರಾಖಂಡ ಹೆಲಿಕಾಪ್ಟರ್ ದುರಂತದಲ್ಲಿ ಮಗನ ಸಾವಿನ ಬೆನ್ನಲ್ಲೇ ತಂದೆಯೂ ನಿಧನ
ಹಾಸನ: ಇತ್ತೀಚಿಗೆ ಉತ್ತರಾಖಂಡ ಹೆಲಿಕಾಪ್ಟರ್ ದುರಂತದಲ್ಲಿ ಉದ್ಯಮಿ ಪ್ರತಾಪ್ ಗೌಡ ಸಾವನ್ನಪ್ಪಿದ್ದ ಬೆನ್ನಲ್ಲೇ ಇದೀಗ ಅವರ ತಂದೆಯವರು ನಿಧನರಾಗಿದ್ದಾರೆ. ನಿಂಗರಾಜು (84) ಸಾವನ್ನಪ್ಪಿದ ಪ್ರತಾಪ್ಗೌಡ ತಂದೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಹಾಸನ ತಾಲ್ಲೂಕಿನ ಜೋಡಿ ಕೃಷ್ಣಾಪುರದಲ್ಲಿ ನಿಂಗರಾಜು ಅವರು ಟೈಲರ್ ಆಗಿ ವೃತ್ತಿ ಜೀವನ ಆರಂಭಿಸಿದ್ದರು. ನಂತರ ಸಕಲೇಶಪ

ಹಾಸನ: ಇತ್ತೀಚಿಗೆ ಉತ್ತರಾಖಂಡ ಹೆಲಿಕಾಪ್ಟರ್ ದುರಂತದಲ್ಲಿ ಉದ್ಯಮಿ ಪ್ರತಾಪ್ ಗೌಡ ಸಾವನ್ನಪ್ಪಿದ್ದ ಬೆನ್ನಲ್ಲೇ ಇದೀಗ ಅವರ ತಂದೆಯವರು ನಿಧನರಾಗಿದ್ದಾರೆ. ನಿಂಗರಾಜು (84) ಸಾವನ್ನಪ್ಪಿದ ಪ್ರತಾಪ್ಗೌಡ ತಂದೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಹಾಸನ ತಾಲ್ಲೂಕಿನ ಜೋಡಿ ಕೃಷ್ಣಾಪುರದಲ್ಲಿ ನಿಂಗರಾಜು ಅವರು ಟೈಲರ್ ಆಗಿ ವೃತ್ತಿ ಜೀವನ ಆರಂಭಿಸಿದ್ದರು. ನಂತರ ಸಕಲೇಶಪುರ ತಾಲ್ಲೂಕಿನ ಬಾಚಿಹಳ್ಳಿ ಗ್ರಾಮದಲ್ಲಿ ನೆಲೆಸಿದ್ದರು. ಇದನ್ನೂ ಓದಿ: ಉತ್ತರಾಖಂಡ ದುರಂತ – ನಾಳೆ ಮರಣೋತ್ತರ ಪರೀಕ್ಷೆ ಬಳಿಕ ಬೆಂಗಳೂರಿಗೆ ಮೃತದೇಹ ರವಾನೆ ಸಾಧ್ಯತೆ ಆನಂತರ ಉದ್ಯೋಗ ಅರಸಿ ಬೆಂಗಳೂರಿಗೆ ಬಂದ ಪುತ್ರ ಪ್ರತಾಪ್ಗೌಡ ಕಂಟ್ರಾಕ್ಟರ್, ಉದ್ಯಮಿಯಾಗಿದ್ದರು. ಮಗನ ಸಾವಿನ ಚಿಂತೆಯಲ್ಲಿದ್ದ ನಿಂಗರಾಜು ಅವರು ನಿನ್ನೆ (ನ.5) ರಾತ್ರಿ ಕೊನೆಯುಸಿರೆಳೆದಿದ್ದಾರೆ. ಇಂದು ಬಾಚಿಹಳ್ಳಿ ಗ್ರಾಮದಲ್ಲಿ ನಿಂಗರಾಜು ಅವರ ಅಂತ್ಯಕ್ರಿಯೆ ನೆರವೇರಲಿದೆ.
Read the complete story at Public TV Kannada