ಮಹಿಳಾ ಕ್ರಿಕೆಟ್: ಸೂಪರ್ ಲೀಗ್ ಹಂತಕ್ಕೆ ಅಜೇಯ ಕರ್ನಾಟಕ
ಪ್ರಜಾವಾಣಿ ವಾರ್ತೆಬೆಂಗಳೂರು: ಅಬ್ಬರದ ಆಟ ಮುಂದುವರಿಸಿದ ಕರ್ನಾಟಕ ತಂಡವು ಬಿಸಿಸಿಐ ಸೀನಿಯರ್ ಮಹಿಳೆಯರ ಎಲೀಟ್ ಟಿ20 ಕ್ರಿಕೆಟ್ ಟೂರ್ನಿಯ ಗುಂಪು ಹಂತದ ತನ್ನ ಕೊನೆಯ ಪಂದ್ಯದಲ್ಲಿ ಶುಕ್ರವಾರ 7 ವಿಕೆಟ್ಗಳಿಂದ ಚಂಡೀಗಢ ತಂಡವನ್ನು ಸೋಲಿಸಿತು. ಅದರೊಂದಿಗೆ, ಅಜೇಯವಾಗಿ ಸೂಪರ್ ಲೀಗ್ ಹಂತಕ್ಕೆ ಮುನ್ನಡೆಯಿತು.ಗುಂಪು ಹಂತದ ಎಲ್ಲ 7 ಪಂದ್ಯಗಳನ್ನು ಜಯಿಸಿದ ಶುಭಾ ಸತೀಶ್

ಪ್ರಜಾವಾಣಿ ವಾರ್ತೆಬೆಂಗಳೂರು: ಅಬ್ಬರದ ಆಟ ಮುಂದುವರಿಸಿದ ಕರ್ನಾಟಕ ತಂಡವು ಬಿಸಿಸಿಐ ಸೀನಿಯರ್ ಮಹಿಳೆಯರ ಎಲೀಟ್ ಟಿ20 ಕ್ರಿಕೆಟ್ ಟೂರ್ನಿಯ ಗುಂಪು ಹಂತದ ತನ್ನ ಕೊನೆಯ ಪಂದ್ಯದಲ್ಲಿ ಶುಕ್ರವಾರ 7 ವಿಕೆಟ್ಗಳಿಂದ ಚಂಡೀಗಢ ತಂಡವನ್ನು ಸೋಲಿಸಿತು. ಅದರೊಂದಿಗೆ, ಅಜೇಯವಾಗಿ ಸೂಪರ್ ಲೀಗ್ ಹಂತಕ್ಕೆ ಮುನ್ನಡೆಯಿತು.ಗುಂಪು ಹಂತದ ಎಲ್ಲ 7 ಪಂದ್ಯಗಳನ್ನು ಜಯಿಸಿದ ಶುಭಾ ಸತೀಶ್ ನಾಯಕತ್ವದ ರಾಜ್ಯ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನ (28 ಅಂಕ) ಉಳಿಸಿಕೊಂಡಿತು.ಸೂರತ್ನ ಸಿ.ಕೆ. ಪೀಠಾವಾಲಾ ಕಾಲೇಜು ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಶುಭಾ ಎದುರಾಳಿ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದರು. ಬಿ.ಜಿ.ತೇಜಸ್ವಿನಿ (17ಕ್ಕೆ2) ಮತ್ತು ಅನನ್ಯಾ ಹೆಗ್ಡೆ (20ಕ್ಕೆ2) ಅವರು ಪರಿಣಾಮಕಾರಿ ಬೌಲಿಂಗ್ ಮೂಲಕ ಚಂಡೀಗಢ ತಂಡದ ಬ್ಯಾಟರ್ಗಳನ್ನು ಕಟ್ಟಿಹಾಕಿದರು.ನಾಯಕಿ, ಆರಂಭ ಆಟಗಾರ್ತಿ ತಾನ್ಯಾ ಭಾಟಿಯಾ (69; 53ಎ, 4x10, 6x1) ಹೋರಾಟ ತೋರಿದರು. ಕೊನೆಯಲ್ಲಿ ಕಶ್ವೀ ಗೌತಮ್ (ಔಟಾಗದೇ 21; 10ಎ) ಬಿರುಸಿನ ಬ್ಯಾಟಿಂಗ್ ಮಾಡಿದರು. ಇದರಿಂದಾಗಿ, ಚಂಡೀಗಢ ತಂಡವು ನಿಗದಿತ ಓವರ್ಗಳಲ್ಲಿ 6 ವಿಕೆಟ್ಗೆ 140 ರನ್ ಗಳಿಸಿತು.ಗುರಿ ಬೆನ್ನಟ್ಟಿದ ಕರ್ನಾಟಕ ತಂಡಕ್ಕೆ ವೃಂದಾ ದಿನೇಶ್ (ಔಟಾಗದೇ 60; 39ಎ, 4x5, 6x3) ಮತ್ತು ನಿಕಿ ಪ್ರಸಾದ್ (52; 33ಎ, 4x9, 6x1) ಅವರು ಬಿರುಸಿನ ಅರ್ಧಶತಕ ಗಳಿಸಿ ನೆರವಾದರು. ವೃಂದಾ ಜೊತೆ ಸೇರಿದ ಶುಭಾ (ಅಜೇಯ 18; 13ಎ) ತಂಡವನ್ನು ಗೆಲುವಿನ ದಡ ಸೇರಿಸಿದರು. ರಾಜ್ಯ ತಂಡವು ಇನ್ನೂ 22 ಎಸೆತಗಳು ಬಾಕಿ ಇರುವಂತೆ 3 ವಿಕೆಟ್ಗೆ 141 ರನ್ ಗಳಿಸಿ, ಸಂಭ್ರಮಿಸಿತು.ಸಂಕ್ಷಿಪ್ತ ಸ್ಕೋರು: ಚಂಡೀಗಢ: 20 ಓವರ್ಗಳಲ್ಲಿ 6 ವಿಕೆಟ್ಗೆ 140 (ತಾನ್ಯಾ ಭಾಟಿಯಾ 69, ಕಶ್ವೀ ಗೌತಮ್ ಔಟಾಗದೇ 21; ಬಿ.ಜಿ.ತೇಜಸ್ವಿನಿ 17ಕ್ಕೆ2, ಅನನ್ಯಾ ಹೆಗ್ಡೆ 20ಕ್ಕೆ2, ದೀಕ್ಷಾ ಹೊನ್ನುಶ್ರೀ 24ಕ್ಕೆ1, ನಿಕಿ ಪ್ರಸಾದ್ 23ಕ್ಕೆ1). ಕರ್ನಾಟಕ: 16.2 ಓವರ್ಗಳಲ್ಲಿ 3 ವಿಕೆಟ್ಗೆ 141 (ವೃಂದಾ ದಿನೇಶ್ ಔಟಾಗದೇ 60, ನಿಕಿ ಪ್ರಸಾದ್ 52, ಶುಭಾ ಸತೀಶ್ ಅಜೇಯ 18; ನಂದನಿ ಶರ್ಮಾ 16ಕ್ಕೆ1, ಕಶ್ವೀ ಗೌತಮ್ 27ಕ್ಕೆ1). ಪಂದ್ಯದ ಆಟಗಾರ್ತಿ: ನಿಕಿ ಪ್ರಸಾದ್.