ಜೂನ್ ವೇಳೆಗೆ ಐದು ವಾಹನ ಬಿಡುಗಡೆ: ಮಹೀಂದ್ರ
ನವದೆಹಲಿ: ಮುಂದಿನ ವರ್ಷದ ಜೂನ್ ವೇಳೆಗೆ ನಾಲ್ಕು ಎಸ್ಯುವಿ ಸೇರಿದಂತೆ ಐದು ವಾಹನಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗಿದೆ ಎಂದು ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಶ್ ಜೆ. ಹೇಳಿದ್ದಾರೆ.ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕಂಪನಿಯು 1.83 ಲಕ್ಷ ಎಸ್ಯುವಿ ವಾಹನಗಳನ್ನು ಮಾರಾಟ ಮಾಡಿದೆ. 23,345 ವಿದ್ಯುತ್ ಚಾಲಿತ ವಾಹನಗಳು ಮಾರ

ನವದೆಹಲಿ: ಮುಂದಿನ ವರ್ಷದ ಜೂನ್ ವೇಳೆಗೆ ನಾಲ್ಕು ಎಸ್ಯುವಿ ಸೇರಿದಂತೆ ಐದು ವಾಹನಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗಿದೆ ಎಂದು ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಶ್ ಜೆ. ಹೇಳಿದ್ದಾರೆ.ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕಂಪನಿಯು 1.83 ಲಕ್ಷ ಎಸ್ಯುವಿ ವಾಹನಗಳನ್ನು ಮಾರಾಟ ಮಾಡಿದೆ. 23,345 ವಿದ್ಯುತ್ ಚಾಲಿತ ವಾಹನಗಳು ಮಾರಾಟವಾಗಿವೆ. ಇದು ಪ್ರಯಾಣಿಕ ವಾಹನಗಳ ಒಟ್ಟು ಮಾರಾಟದಲ್ಲಿ ಶೇ 12.7ರಷ್ಟಾಗಿದೆ.ಲಾಭ ಹೆಚ್ಚಳ: ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿಯ ತೆರಿಗೆ ನಂತರದ ಲಾಭದಲ್ಲಿ (ಪಿಎಟಿ) ಶೇ 25ರಷ್ಟು ಹೆಚ್ಚಳವಾಗಿದೆ.ಕಳೆದ ಆರ್ಥಿಕ ವರ್ಷದ ಇದೇ ತ್ರೈಮಾಸಿಕದಲ್ಲಿ ಕಂಪನಿಯು ₹3,673 ಕೋಟಿ ಲಾಭ ಗಳಿಸಿತ್ತು. ಅದು ಈ ಬಾರಿ ₹4,587 ಕೋಟಿಗೆ ಏರಿಕೆಯಾಗಿದೆ. ವರಮಾನದಲ್ಲಿನ ಹೆಚ್ಚಳವು ಲಾಭ ಏರಿಕೆಗೆ ಕಾರಣ ಎಂದು ಕಂಪನಿ ಷೇರುಪೇಟೆಗೆ ಗುರುವಾರ ತಿಳಿಸಿದೆ.ವರಮಾನವು ₹45,885 ಕೋಟಿಯಿಂದ ₹57,514 ಕೋಟಿಗೆ ಹೆಚ್ಚಳವಾಗಿದೆ. ವೆಚ್ಚವು ₹51,845 ಕೋಟಿಗೆ ಏರಿಕೆಯಾಗಿದೆ ಎಂದು ತಿಳಿಸಿದೆ.Highlights - null
Read the complete story at Prajavani