ಸಮಗ್ರ ಕೃಷಿಯಲ್ಲಿ ಯಶ ಕಂಡ ಧಾರವಾಡದ ರೈತ ಗಂಗಪ್ಪ
ಉಪ್ಪಿನಬೆಟಗೇರಿ: ಧಾರವಾಡ ತಾಲ್ಲೂಕಿನ ಮುಳಮುತ್ತಲ ಗ್ರಾಮದ ರೈತ ಗಂಗಪ್ಪ ಬಾಳಪ್ಪ ಗಾಣಿಗೇರ ಅವರು ತಮ್ಮ 6 ಎಕರೆ ಜಮೀನಿನಲ್ಲಿ ಬೆಳೆಯುವ ರೇಷ್ಮೆ, ಹತ್ತಿ ಹಾಗೂ ತೋಟಗಾರಿಕೆ ಬೆಳೆಗಳಿಂದ ವರ್ಷಕ್ಕೆ ₹10 ಲಕ್ಷದಿಂದ ₹15 ಲಕ್ಷ ಆದಾಯ ಗಳಿಸುತ್ತಿದ್ದಾರೆ.ಗಂಗಪ್ಪ ಗಾಣಿಗೇರ ಅವರದು ಅವಿಭಕ್ತ ಕುಟುಂಬ. ಮನೆಯಲ್ಲಿ ಎಲ್ಲರೂ ಕೃಷಿ ಕಾಯಕ ಮಾಡುತ್ತಾರೆ. ಅಗತ್ಯವಿದ್ದಾಗ ಮಾತ್ರ ಕೂಲಿ

ಉಪ್ಪಿನಬೆಟಗೇರಿ: ಧಾರವಾಡ ತಾಲ್ಲೂಕಿನ ಮುಳಮುತ್ತಲ ಗ್ರಾಮದ ರೈತ ಗಂಗಪ್ಪ ಬಾಳಪ್ಪ ಗಾಣಿಗೇರ ಅವರು ತಮ್ಮ 6 ಎಕರೆ ಜಮೀನಿನಲ್ಲಿ ಬೆಳೆಯುವ ರೇಷ್ಮೆ, ಹತ್ತಿ ಹಾಗೂ ತೋಟಗಾರಿಕೆ ಬೆಳೆಗಳಿಂದ ವರ್ಷಕ್ಕೆ ₹10 ಲಕ್ಷದಿಂದ ₹15 ಲಕ್ಷ ಆದಾಯ ಗಳಿಸುತ್ತಿದ್ದಾರೆ.ಗಂಗಪ್ಪ ಗಾಣಿಗೇರ ಅವರದು ಅವಿಭಕ್ತ ಕುಟುಂಬ. ಮನೆಯಲ್ಲಿ ಎಲ್ಲರೂ ಕೃಷಿ ಕಾಯಕ ಮಾಡುತ್ತಾರೆ. ಅಗತ್ಯವಿದ್ದಾಗ ಮಾತ್ರ ಕೂಲಿ ಆಳುಗಳನ್ನು ಅವಲಂಬಿಸಿದ್ದಾರೆ. ಒಂದಿಷ್ಟು ಜಮೀನು ಮಳೆ ಆಶ್ರಿತವಾಗಿದ್ದರೆ, ಇನ್ನೊಂದಿಷ್ಟು ನೀರಾವರಿ ಇದೆ. ಕಪ್ಪು ಮತ್ತು ಕೆಂಪು ಮಣ್ಣಿನಿಂದ ಕೂಡಿದೆ.ಸ್ವಂತ 6 ಎಕರೆ ಜಮೀನಿನಲ್ಲಿ ಮತ್ತು 15 ಎಕರೆ ಭೋಗ್ಯ (ಲೀಸ್) ಭೂಮಿಯಲ್ಲಿ ರೇಷ್ಮೆ, ಹತ್ತಿ, ಸೋಯಾಬೀನ್, ಹೆಸರು, ಉದ್ದು ಸೇರಿದಂತೆ ತೋಟಗಾರಿಕೆ ಬೆಳೆ ಬೆಳೆದಿದ್ದಾರೆ.ಕರ್ನಾಟಕ ಬೀಜ ನಿಗಮ ಮಂಡಳಿಯಲ್ಲಿ ಡಿ.ಸಿ.ಎಚ್.32 ಸೇರಿದಂತೆ ಬೇರೆ ತಳಿಯ ಹತ್ತಿ ತಂದು 4 ಎಕರೆ ಜಮೀನಿನಲ್ಲಿ ಬೆಳೆದಿದ್ದಾರೆ. ಮಣ್ಣಿನ ಫಲವತ್ತತೆಗೆ ಸಗಣಿ ಗೊಬ್ಬರ, ರಾಸಾಯಣಿಕ ಗೊಬ್ಬರ ಬಳಸಿದ್ದಾರೆ.ಆರು ತಿಂಗಳ ಬೆಳೆಯಾಗಿರುವ ಹತ್ತಿಗೆ ತುಂತುರು ನೀರಾವರಿ ಅಳವಡಿಸಿದ್ದರಿಂದ ಬೆಳೆ ಚೆನ್ನಾಗಿ ಬಂದಿದ್ದು, ಎಕರೆಗೆ 8 ರಿಂದ 9 ಕ್ವಿಂಟಲ್ ಹತ್ತಿ ಬರುತ್ತಿದೆ. ಒಂದನೇ ಬೀಡು ಕ್ವಿಂಟಲ್ಗೆ ₹12 ಸಾವಿರಕ್ಕೆ ಮಾರಾಟವಾಗಿದೆ ಎನ್ನುತ್ತಾರೆ ಗಂಗಪ್ಪ.ಚಂದನಮಟ್ಟಿ ನರ್ಸರಿಯಲ್ಲಿ ಹಿಪ್ಪು ನೇರಳೆ ಗಿಡಗಳನ್ನು ತಂದು ಬೆಳೆದಿದ್ದ ರೈತರ ಜಮೀನಿನಲ್ಲಿ ಅದರ ಗೇಟು (ಕಾಂಡ) ತಂದು 8 ವರ್ಷದ ಹಿಂದೆ 1ಎಕರೆ 10 ಗುಂಟೆಯಲ್ಲಿ ಬೆಳೆಯಲಾಗಿತ್ತು. ಒಮ್ಮೆ ನಾಟಿ ಮಾಡಿದರೆ ಸಾಕು, ಇದು 10ರಿಂದ 15 ವರ್ಷದವರೆಗೆ ಬೆಳೆಯುತ್ತದೆ.ಸವದತ್ತಿ ಹತ್ತಿರದ ಹೂಲಿ ಗ್ರಾಮದ ಹುಳು ಸಾಕಣೆ ಕೇಂದ್ರದಿಂದ ₹9 ಸಾವಿರ ವೆಚ್ಚದಲ್ಲಿ 200 ಲಿಂಕ್ಸ್ ರೇಷ್ಮೆ ಹುಳುಗಳನ್ನು ಹವಾಮಾನ ನಿಯಂತ್ರಿತ ಶೆಡ್ಡಿನಲ್ಲಿ ಸಾಕಾಣಿಕೆ ಮಾಡಲಾಗಿದೆ. 22 ದಿನಕ್ಕೆ ರೇಷ್ಮೆ ಹುಳು ಗೂಡು ಕಟ್ಟುತ್ತದೆ. ಕಸಕಡ್ಡಿಯಿಂದ ಬೇರ್ಪಡಿಸಿ ಗುಣಮಟ್ಟದ ರೇಷ್ಮೆಯನ್ನು ಬೆಂಗಳೂರಿನ ರಾಮನಗರದ ಮಾರುಕಟ್ಟೆಗೆ ಕಳಿಸಲಾಗುತ್ತದೆ.ಕೆ.ಜಿ ರೇಷ್ಮೆ ಗೂಡಿಗೆ ₹700ರಿಂದ ₹1ಸಾವಿರ ವರೆಗೆ ಮಾರಾಟವಾಗುತ್ತದೆ. ಒಂದು ಬಿಡಿಗೆ ₹1.60ಲಕ್ಷ ಆದಾಯ ದೊರಕುತ್ತದೆ. ರೇಷ್ಮೆ ಐದು ಭಾರಿ ಕಟಾವಿಗೆ ಬರುತ್ತದೆ.‘ಸವತೆಕಾಯಿ, ಮುಳಗಾಯಿ (ಬದನೆ) ಬೆಳೆ ಮತ್ತು ಹೂವುಗಳನ್ನು ಬೆಳೆಯಲಾಗಿದ್ದು. ಆಗಾಗ ಕಟಾವು ಮಾಡಿ ಮಾರಾಟಕ್ಕೆ ಕಳಿಸಲಾಗುತ್ತದೆ. ಬಂದ ಆದಾಯದಲ್ಲಿ ಮನೆತನದ ಖರ್ಚು ನಿರ್ವಹಿಸಲಾಗುತ್ತದೆ’ಎನ್ನುತ್ತಾರೆ ಗುರುಪುತ್ರ, ಬಾಳಪ್ಪ.ಜಮೀನಿನಲ್ಲಿ ರೇಷ್ಮೆ, ಹತ್ತಿ ಸೇರಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ವರ್ಷಕ್ಕೆ ₹10 ಲಕ್ಷದಿಂದ ₹15ಲಕ್ಷ ಆದಾಯ ಗಳಿಸುತ್ತಿದ್ದೇವೆ ಗುರುಪುತ್ರ ಗಾಣಿಗೇರ ರೈತ, ಮುಳಮುತ್ತಲ ಗ್ರಾಮ261106-24-1510809361