ಸೌತ್ ವೆಸ್ಟರ್ನ್ ರೈಲ್ವೆ ತಂಡಕ್ಕೆ ಚಾಂಪಿಯನ್ ಪಟ್ಟ
ಜಮಖಂಡಿ: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕನ್ನಡ ಸಂಘದ 60ನೇ ವರ್ಷದ ಸಂಭ್ರಮಾಚರಣೆ ನಿಮಿತ್ತ ತಾಲ್ಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿರುವ ರಾಷ್ಟ್ರಮಟ್ಟದ ಕ್ರೀಡಾಕೂಟದ ಮಹಿಳಾ ಕಬಡ್ಡಿ ಪಂದ್ಯಾವಳಿ ರೋಚಕ ಹಣಾಹಣಿಯೊಂದಿಗೆ ಗುರುವಾರ ಮುಕ್ತಾಯಗೊಂಡಿತು.ದೇಶದ ವಿವಿಧ ರಾಜ್ಯಗಳ ತಂಡಗಳು ಪಾಲ್ಗೊಂಡಿದ್ದ ಪಂದ್ಯಾವಳಿಯಲ್ಲಿ ಸೌತ್ ವೆಸ್ಟರ್ನ್ ರೈಲ್ವೆ ತಂಡ ಪ್ರಥಮ ಸ್ಥಾನ ಪಡೆದು

ಜಮಖಂಡಿ: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕನ್ನಡ ಸಂಘದ 60ನೇ ವರ್ಷದ ಸಂಭ್ರಮಾಚರಣೆ ನಿಮಿತ್ತ ತಾಲ್ಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿರುವ ರಾಷ್ಟ್ರಮಟ್ಟದ ಕ್ರೀಡಾಕೂಟದ ಮಹಿಳಾ ಕಬಡ್ಡಿ ಪಂದ್ಯಾವಳಿ ರೋಚಕ ಹಣಾಹಣಿಯೊಂದಿಗೆ ಗುರುವಾರ ಮುಕ್ತಾಯಗೊಂಡಿತು.ದೇಶದ ವಿವಿಧ ರಾಜ್ಯಗಳ ತಂಡಗಳು ಪಾಲ್ಗೊಂಡಿದ್ದ ಪಂದ್ಯಾವಳಿಯಲ್ಲಿ ಸೌತ್ ವೆಸ್ಟರ್ನ್ ರೈಲ್ವೆ ತಂಡ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಪಟ್ಟ ಅಲಂಕರಿಸಿತು. ರಾಜಸ್ಥಾನದ ಎಸ್ಎಸ್ಬಿ ತಂಡ ದ್ವಿತೀಯ, ಹರಿಯಾಣದ ಎಸ್ಎಸ್ಎ ತಂಡ ತೃತೀಯ ಹಾಗೂ ಕರ್ನಾಟಕ ತಂಡ ನಾಲ್ಕನೇ ಸ್ಥಾನ ಪಡೆದುಕೊಂಡವು.ಪಂದ್ಯಾವಳಿಯ ಸೆಮಿಫೈನಲ್ನಲ್ಲಿ ರಾಜಸ್ಥಾನದ ಎಸ್ಎಸ್ಬಿ ತಂಡ 24-22 ಅಂಕಗಳಿಂದ ಕರ್ನಾಟಕ ತಂಡವನ್ನು ಸೋಲಿಸಿತು. ಮತ್ತೊಂದು ಸೆಮಿಫೈನಲ್ನಲ್ಲಿ ಸೌತ್ ವೆಸ್ಟರ್ನ್ ರೈಲ್ವೆ ತಂಡ 24-8 ಅಂಕಗಳಿಂದ ಹರಿಯಾಣದ ಎಸ್ಎಸ್ಎ ತಂಡವನ್ನು ಮಣಿಸಿತು. ಫೈನಲ್ ಪಂದ್ಯದಲ್ಲಿ ಸೌತ್ ವೆಸ್ಟರ್ನ್ ರೈಲ್ವೆ ತಂಡ 25-15 ಅಂಕಗಳಿಂದ ರಾಜಸ್ಥಾನದ ಎಸ್ಎಸ್ಬಿ ತಂಡವನ್ನು ಸೋಲಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು.ಆಟಗಾರ್ತಿಯರ ಚುರುಕಿನ ದಾಳಿ, ಸಂಘಟಿತ ಆಟ ಹಾಗೂ ಪರಿಣಾಮಕಾರಿ ರಕ್ಷಣಾ ತಂತ್ರಗಳು ಕ್ರೀಡಾಭಿಮಾನಿಗಳ ಗಮನ ಸೆಳೆದವು. ಪ್ರತಿ ಅಂಕಕ್ಕೂ ನಡೆದ ಪೈಪೋಟಿ ಪಂದ್ಯಾವಳಿಗೆ ರೋಚಕತೆ ತುಂಬಿತು. ಕ್ರೀಡಾಭಿಮಾನಿಗಳ ಹರ್ಷೋದ್ಗಾರ ಹಾಗೂ ಚಪ್ಪಾಳೆ ಆಟಗಾರ್ತಿಯರಿಗೆ ಮತ್ತಷ್ಟು ಉತ್ಸಾಹ ನೀಡಿದವು.ವಾಲಿಬಾಲ್ ಫಲಿತಾಂಶ: ಹೈದರಾಬಾದ್ ತಂಡ 50-43 ಅಂಕಗಳಿಂದ ಕೊಲ್ಲಾಪುರ ತಂಡವನ್ನು ಸೋಲಿಸಿತು. ಜಮಖಂಡಿ ಟೈಗರ್ಸ್ ತಂಡ ಸೌತ್ ವೆಸ್ಟರ್ನ್ ರೈಲ್ವೆ ವಿರುದ್ಧ 40-43 ಅಂಕಗಳಿಂದ ಸೋಲು ಕಂಡಿತು. ಬಳಿಕ ಸ್ಪೋರ್ಟ್ಸ್ ಬೆಂಗಳೂರು ತಂಡವನ್ನು 55-44 ಅಂಕಗಳಿಂದ ಹಾಗೂ ಸಾಂಗಲಿ ತಂಡವನ್ನು 50-36 ಅಂಕಗಳಿಂದ ಮಣಿಸಿತು. ಕರ್ನಾಟಕ ಸ್ಟೇಟ್ ಪೊಲೀಸ್ ತಂಡ ಸೌತ್ ವೆಸ್ಟರ್ನ್ ರೈಲ್ವೆ ವಿರುದ್ಧ 65-54 ಅಂಕಗಳಿಂದ ಮತ್ತು ಸ್ಪೋರ್ಟ್ಸ್ ಬೆಂಗಳೂರು ವಿರುದ್ಧ 50-40 ಅಂಕಗಳಿಂದ ಜಯಗಳಿಸಿತು.ಲಾಯಲ್ ಮೆಟಲ್ ಹಾಗೂ ಸೌತ್ ವೆಸ್ಟರ್ನ್ ರೈಲ್ವೆ ತಂಡಗಳ ನಡುವಿನ ಪಂದ್ಯ 66-66 ಅಂಕಗಳಿಂದ ಸಮಬಲಗೊಂಡಿತು. ಇನ್ಕಮ್ ಟ್ಯಾಕ್ಸ್ ತಂಡ 80-32 ಅಂಕಗಳಿಂದ ಕೊಲ್ಲಾಪುರ ತಂಡವನ್ನು ಸೋಲಿಸಿತು. ಸಿಕಂದರಾಬಾದ್ ಆರ್ಮಿ ತಂಡ ಹೈದರಾಬಾದ್ ವಿರುದ್ಧ 51-47 ಅಂಕಗಳಿಂದ ಹಾಗೂ ಸ್ಪೋರ್ಟ್ಸ್ ಹಾಸ್ಟೆಲ್ ಬೆಂಗಳೂರು ವಿರುದ್ಧ 50-40 ಅಂಕಗಳಿಂದ ಜಯ ಸಾಧಿಸಿತು.ಪಂದ್ಯಗಳನ್ನು ವೀಕ್ಷಿಸಲು ಸಂಸದ ಪಿ.ಸಿ. ಗದ್ದಿಗೌಡರ, ತೇರದಾಳ ಶಾಸಕ ಸಿದ್ದು ಸವದಿ, ಶಾಸಕ ಜಗದೀಶ ಗುಡಗುಂಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.ಕ್ರೀಡಾಭಿಮಾನಿಗಳ ಉತ್ಸಾಹಕನ್ನಡ ಸಂಘದ ಅಧ್ಯಕ್ಷ ರಾಹುಲ ಕಲೂತಿ ಮಾತನಾಡಿ, ‘ಕುಸ್ತಿ, ವಾಲಿಬಾಲ್ ಹಾಗೂ ಪುರುಷರ ಕಬಡ್ಡಿ ಪಂದ್ಯಾವಳಿಗಳು ಮುಂದುವರಿದಿವೆ. ರಾಷ್ಟ್ರಮಟ್ಟದ ಕ್ರೀಡಾಕೂಟವನ್ನು ವೀಕ್ಷಿಸಲು ಸಾವಿರಾರು ಕ್ರೀಡಾಭಿಮಾನಿಗಳು ಆಗಮಿಸುತ್ತಿರುವುದು ಸಂತಸ ತಂದಿದೆ‘ ಎಂದರು.261106-19-1868734152