ಜಿಕೆವಿಕೆ ಆವರಣದಲ್ಲಿ ನ.13ರಂದು ಕೃಷಿ ಮೇಳ: ಬರಗಾಲದ ಕಾರಣ ಒಂದು ದಿನಕ್ಕೆ ಸೀಮಿತ
ಬೆಂಗಳೂರು: ಕೃಷಿ ವಿಶ್ವವಿದ್ಯಾಲಯದಲ್ಲಿ ಇದೇ 13ರಂದು ಕೃಷಿ ಮೇಳ ನಡೆಯಲಿದೆ. ಬರಗಾಲದ ಕಾರಣ ಮೇಳವನ್ನು ಒಂದು ದಿನಕ್ಕೆ ಸೀಮಿತಗೊಳಿಸಲಾಗಿದ್ದು, ಕಡಿಮೆ ನೀರಿನಲ್ಲಿ ಬೆಳೆಯುವ ರಾಗಿ, ಮುಸುಕಿನ ಜೋಳ ಹಾಗೂ ಬೀಜದ ದಂಟು ತಳಿಗಳನ್ನು ಇದೇ ವೇಳೆ ಬಿಡುಗಡೆ ಮಾಡಲಾಗುತ್ತದೆ.ಹೆಬ್ಬಾಳದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿನ ಕೃಷಿ ಮೇಳ ಸಭಾಂಗಣದಲ್ಲಿ ಬೆಳಿಗ್ಗೆ 10ಕ್ಕೆ ಕ

ಬೆಂಗಳೂರು: ಕೃಷಿ ವಿಶ್ವವಿದ್ಯಾಲಯದಲ್ಲಿ ಇದೇ 13ರಂದು ಕೃಷಿ ಮೇಳ ನಡೆಯಲಿದೆ. ಬರಗಾಲದ ಕಾರಣ ಮೇಳವನ್ನು ಒಂದು ದಿನಕ್ಕೆ ಸೀಮಿತಗೊಳಿಸಲಾಗಿದ್ದು, ಕಡಿಮೆ ನೀರಿನಲ್ಲಿ ಬೆಳೆಯುವ ರಾಗಿ, ಮುಸುಕಿನ ಜೋಳ ಹಾಗೂ ಬೀಜದ ದಂಟು ತಳಿಗಳನ್ನು ಇದೇ ವೇಳೆ ಬಿಡುಗಡೆ ಮಾಡಲಾಗುತ್ತದೆ.ಹೆಬ್ಬಾಳದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿನ ಕೃಷಿ ಮೇಳ ಸಭಾಂಗಣದಲ್ಲಿ ಬೆಳಿಗ್ಗೆ 10ಕ್ಕೆ ಕೃಷಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ ಉದ್ಘಾಟಿಸಲಿದ್ದಾರೆ. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ, ಕುಲಪತಿ ವೆಂಕಟರವಣ ಪಾಲ್ಗೊಳ್ಳಲಿದ್ದಾರೆ.ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ರೈತ ಮತ್ತು ರೈತ ಮಹಿಳಾ ಪ್ರಶಸ್ತಿಗಳ ಪ್ರದಾನ ಕಾರ್ಯಕ್ರಮವು ಮಧ್ಯಾಹ್ನ 2ಕ್ಕೆ ನಡೆಯಲಿದೆ. ಬರ ನಿರ್ವಹಣಾ ತಾಂತ್ರಿಕತೆಗಳ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ. ಈ ವೇಳೆ ವಿಶ್ವವಿದ್ಯಾಲಯವು ಅಭಿವೃದ್ಧಿಪಡಿಸಿರುವ ಮುಸುಕಿನ ಜೋಳ ಎಂಎಎಚ್– 20–45, ರಾಗಿ ಜಿಪಿಯು 101 ಹಾಗೂ ಬೀಜದ ದಂಟಿನ ಕೆಬಿಜಿಎ– 18 ಅನ್ನು ಜನಾರ್ಪಣೆ ಮಾಡಲಾಗುತ್ತಿದೆ.ಹೊಸ ತಳಿ ವಿಶೇಷತೆ: ಬರ ಕಾರಣ ಕಡಿಮೆ ನೀರಿನಲ್ಲಿ ಹೆಚ್ಚು ಇಳುವರಿ ನೀಡುವ ತಳಿಗಳನ್ನು ವಿಶ್ವವಿದ್ಯಾಲಯವು ಅಭಿವೃದ್ಧಿಪಡಿಸಿದೆ. ಹೊಸ ರಾಗಿ ತಳಿಯು 110ರಿಂದ 115 ದಿನದಲ್ಲಿ ಕಟಾವಿಗೆ ಬರಲಿದ್ದು, ಹೆಕ್ಟೇರ್ಗೆ 37ರಿಂದ 40 ಕ್ವಿಂಟಲ್ ಇಳುವರಿ ಸಿಗಲಿದೆ. 6.5 ಟನ್ ಮೇವು ಲಭ್ಯವಾಗಲಿದ್ದು, ಬೇಸಿಗೆ ವೇಳೆ ಜಾನುವಾರಿಗೆ ಮೇವು ಅಭಾವ ಉಂಟಾಗದು. ರೋಗ ನಿರೋಧಕ ಶಕ್ತಿ ಇರುವ ತಳಿಯಾಗಿದ್ದು, ಬೆಂಕಿ ರೋಗ ಕಾಡುವುದಿಲ್ಲ. ಜೊತೆಗೆ ಕಬ್ಬಿಣದ ಅಂಶ ಹೆಚ್ಚಿರುತ್ತದೆ. ಪೌಷ್ಟಿಕಾಂಶ ನೀಡುವ ಕೆಬಿಜಿಎ– 18 ಬೀಜದ ದಂಟು ತಳಿಯು ಹೆಕ್ಟೇರ್ಗೆ 22ರಿಂದ 24 ಕ್ವಿಂಟಲ್ ಇಳುವರಿ ನೀಡುತ್ತದೆ. ಕೀಟ ಭಾದೆ ಕಾಡುವುದಿಲ್ಲ. ಮುಸುಕಿನ ಜೋಳ 20–45 ತಳಿಯು 110ರಿಂದ 115 ಕ್ವಿಂಟಲ್ ಇಳುವರಿ ನೀಡುತ್ತದೆ. ಎಕರೆಗೆ 20 ಟನ್ ಮೇವು ಸಿಗಲಿದೆ. ಎಲ್ ನಿನೊ ಪರಿಣಾಮ ಹಾಗೂ ಭವಿಷ್ಯದ ಸಿದ್ದತೆಗಳು, ಬರ ಸನ್ನಿವೇಶಕ್ಕೆ ಸೂಕ್ತ ಬೆಳೆ ಮತ್ತು ತಳಿ, ಪೂರಕ ಕೃಷಿ ತಂತ್ರಜ್ಞಾನಗಳು ಹಾಗೂ ಮಣ್ಣು ಮತ್ತು ನೀರು ಸಂರಕ್ಷಣೆ ಕುರಿತ ತಾಂತ್ರಿಕ ಮಾಹಿತಿಯನ್ನು ಸಂಪನ್ಮೂಲ ವ್ಯಕ್ತಿಗಳು ಕೃಷಿಕರಿಗೆ ನೀಡಲಿದ್ದಾರೆ.