‘ಮಧುಬಲೆ’ಯಲ್ಲಿ ಸಿಲುಕಿದ ರಾಜಕೀಯ ಮುಖಂಡನಿಗೆ ಬೆದರಿಕೆ; ₹ 2 ಕೋಟಿಗೆ ಬೇಡಿಕೆ
ಹಾವೇರಿ: ಸಿ.ಸಿ.ಟಿ.ವಿ ಕ್ಯಾಮೆರಾ ಮಾರಾಟದ ಉದ್ಯಮಕ್ಕೆ ₹ 25 ಲಕ್ಷ ಹೂಡಿಕೆ ಮಾಡುವುದಾಗಿ ಹೇಳಿ ಹಾವೇರಿಯ ರಾಷ್ಟ್ರೀಯ ಪಕ್ಷವೊಂದರ ಮುಖಂಡರೊಬ್ಬರನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದ ಮಹಿಳೆಯೊಬ್ಬರು, ತಮ್ಮ ಸಹಚರರ ಜೊತೆ ಸೇರಿ ಮಧುಬಲೆ (ಹನಿ ಟ್ರ್ಯಾಪ್) ಜಾಲಕ್ಕೆ ಸಿಲುಕಿಸಿ ₹ 2 ಕೋಟಿ ಹಣಕ್ಕೆ ಬೇಡಿಕೆ ಇಟ್ಟ ಬಗ್ಗೆ ಬೆಂಗಳೂರಿನ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ

ಹಾವೇರಿ: ಸಿ.ಸಿ.ಟಿ.ವಿ ಕ್ಯಾಮೆರಾ ಮಾರಾಟದ ಉದ್ಯಮಕ್ಕೆ ₹ 25 ಲಕ್ಷ ಹೂಡಿಕೆ ಮಾಡುವುದಾಗಿ ಹೇಳಿ ಹಾವೇರಿಯ ರಾಷ್ಟ್ರೀಯ ಪಕ್ಷವೊಂದರ ಮುಖಂಡರೊಬ್ಬರನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದ ಮಹಿಳೆಯೊಬ್ಬರು, ತಮ್ಮ ಸಹಚರರ ಜೊತೆ ಸೇರಿ ಮಧುಬಲೆ (ಹನಿ ಟ್ರ್ಯಾಪ್) ಜಾಲಕ್ಕೆ ಸಿಲುಕಿಸಿ ₹ 2 ಕೋಟಿ ಹಣಕ್ಕೆ ಬೇಡಿಕೆ ಇಟ್ಟ ಬಗ್ಗೆ ಬೆಂಗಳೂರಿನ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‘ಹಾವೇರಿಯ ಉದ್ಯಮಿಯೂ ಆದ 46 ವರ್ಷ ವಯಸ್ಸಿನ ಮುಖಂಡ, ಮಧುಬಲೆ ಜಾಲದ ಬಗ್ಗೆ ದೂರು ನೀಡಿದ್ದಾರೆ. ಮಹಿಳೆ ಸೇರಿ ಎಂಟು ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ತನಿಖೆಯೂ ಮುಂದುವರಿದಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.‘ಸಾಮಾಜಿಕ ಮಾಧ್ಯಮದ ಮೂಲಕ ಪರಿಚಯವಾಗಿದ್ದ ಮಹಿಳೆ, ಹಾವೇರಿಯಿಂದ ಉದ್ಯಮಿಯನ್ನು ಬೆಂಗಳೂರಿಗೆ ಕರೆಸಿಕೊಂಡು ಕೃತ್ಯ ಎಸಗಿದ್ದಾರೆ. ದೂರುದಾರರನ್ನು ಬೆತ್ತಲೆಗೊಳಿಸಿ, ಅವರಿಂದ ಎರಡು ಚಿನ್ನದ ಉಂಗುರಗಳನ್ನು ಕಿತ್ತುಕೊಂಡಿದ್ದಾರೆ. ₹ 2 ಕೋಟಿ ನೀಡುವಂತೆ ಬೆದರಿಸಿ, ಮನೆಯಿಂದ ಬಿಟ್ಟು ಕಳುಹಿಸಿದ್ದಾರೆ. ಹಣ ಹೊಂದಿಸಲು ಮುಂದಾಗಿದ್ದ ಮುಖಂಡ, ಸ್ನೇಹಿತರ ಸಲಹೆಯಂತೆ ಠಾಣೆಗೆ ದೂರು ನೀಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.