ಹಣದುಬ್ಬರ;ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಜನತೆ ತಕ್ಕಪಾಠ ಕಲಿಸಬೇಕು: ಕಾಂಗ್ರೆಸ್
ನವದೆಹಲಿ: ದೇಶದ ಸಾಮಾನ್ಯ ಜನರು ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಇದರ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಲು ಪಂಜಾಬ್, ಉತ್ತರಾಖಂಡ, ಉತ್ತರ ಪ್ರದೇಶ, ಗೋವಾ ಮತ್ತು ಮಣಿಪುರದ ಜನರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಮೂಲಕ ಅವರಿಗೆ ಪಾಠ ಕಲಿಸಬೇಕು ಎಂದು ಕಾಂಗ್ರೆಸ್ ಹೇಳಿದೆ. ಪಿಎಂ ಗರೀಬ್ ಕಲ್ಯಾಣ ಯೋಜನೆಯ ಹೊರತಾಗ

ನವದೆಹಲಿ: ದೇಶದ ಸಾಮಾನ್ಯ ಜನರು ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಇದರ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಲು ಪಂಜಾಬ್, ಉತ್ತರಾಖಂಡ, ಉತ್ತರ ಪ್ರದೇಶ, ಗೋವಾ ಮತ್ತು ಮಣಿಪುರದ ಜನರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಮೂಲಕ ಅವರಿಗೆ ಪಾಠ ಕಲಿಸಬೇಕು ಎಂದು ಕಾಂಗ್ರೆಸ್ ಹೇಳಿದೆ. ಪಿಎಂ ಗರೀಬ್ ಕಲ್ಯಾಣ ಯೋಜನೆಯ ಹೊರತಾಗಿಯೂ, ಗ್ರಾಮೀಣ ಪ್ರದೇಶಗಳಲ್ಲಿ ಬೆಲೆ ಏರಿಕೆಯಾಗುತ್ತಿದೆ. ಅದು ಸಾಮಾನ್ಯ ಜನರ ಮೇಲೆ ಆರ್ಥಿಕ ಹೊರೆಯನ್ನು ಹೇರುತ್ತಿದೆ. ಬೆಲೆ ಏರಿಕೆಯ ಕಾರಣದಿಂದಾಗಿ ಗ್ರಾಮೀಣ ಭಾಗದ ಕುಟುಂಬಗಳು ಒಟ್ಟು ಮಾಸಿಕ ಆದಾಯದ ಶೇ. 53.5 ರಷ್ಟನ್ನು ಕೇವಲ ಆಹಾರಕ್ಕಾಗಿ ಖರ್ಚು ಮಾಡುತ್ತಿವೆ ಎಂದು ನಬಾರ್ಡ್ ಸಮೀಕ್ಷೆಯನ್ನು ಉಲ್ಲೇಖಿಸಿದ ವರದಿಯೊಂದು ತಿಳಿಸಿದೆ. ಈ ವರದಿಯನ್ನು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ‘ಮೋದಿ ಸರ್ಕಾರದ ಆಡಳಿತದಲ್ಲಿ ಸಾಮಾನ್ಯ ಜನರ ಜೀವನವು ಹಣದುಬ್ಬರ ಮತ್ತು ಸಾಲದಲ್ಲಿ ಸಿಲುಕಿಕೊಂಡಿದೆ. ಮೋದಿ ಸರ್ಕಾರದ ಗ್ರಾಮೀಣ ಅಭಿವೃದ್ಧಿಯ ಅಸಲಿಯತ್ತನ್ನು ಅದರದ್ದೇ ಸಂಸ್ಥೆಯಾದ ನಬಾರ್ಡ್ ನಡೆಸಿದ ಸಮೀಕ್ಷೆಗಳು ಬಯಲು ಮಾಡುತ್ತಿವೆ. ಗ್ರಾಮೀಣ ಕುಟುಂಬಗಳ ಉಳಿತಾಯ ಕುಸಿಯುತ್ತಿದೆ, ಸಾಲ ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ’ ಎಂದು ಹೇಳಿದ್ದಾರೆ.मोदी सरकार में आम आदमी की ज़िंदगी महंगाई और कर्ज़ के दोहरे चक्रव्यूह में फंस गई है।ग्रामीण खुशहाली के मोदी सरकार के दावों की पोल उसकी अपनी संस्था NABARD के सर्वे खोल रहे हैं। ग्रामीण परिवारों के खर्च का आधे से ज़्यादा हिस्सा खाने-पीने पर जा रहा है। बचत घट रही है, कर्ज़ लेने… pic.twitter.com/7Cj9OmHJJ6— Jairam Ramesh (@Jairam_Ramesh) November 6, 2026 ನಿರಂತರ ಬೆಲೆ ಏರಿಕೆಯು ಬಡವರು ಮತ್ತು ಮಧ್ಯಮ ವರ್ಗದವರ ಬೆನ್ನೆಲುಬನ್ನೇ ಮುರಿಯುತ್ತಿದೆ. ತರಕಾರಿ, ಹಣ್ಣು, ಬೇಳೆಕಾಳು, ಹಾಲು ಮತ್ತು ಹಿಟ್ಟು ಸೇರಿದಂತೆ ದೈನಂದಿನ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಹೊರೆಯಿಂದ ಸಾರ್ವಜನಿಕರು ಈಗಾಗಲೇ ತತ್ತರಿಸಿಹೋಗಿದ್ದಾರೆ. ದೀಪಾವಳಿಯ ನಂತರ ಸೋಪು, ಬಿಸ್ಕತ್ತು, ನೂಡಲ್ಸ್ ಮತ್ತು ಇತರ ದೈನಂದಿನ ಅಗತ್ಯ ವಸ್ತುಗಳ ಬೆಲೆಗಳು ಕೂಡ ಹೆಚ್ಚಾಗಲಿವೆ. ಆದರೆ, ಸರ್ಕಾರವು ವಾಸ್ತವವನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಿದ್ದು, ಸುಧಾರಣೆಗೆ ಯಾವುದೇ ಅವಕಾಶವನ್ನು ನೀಡುತ್ತಿಲ್ಲ ಎಂದಿದ್ದಾರೆ. ಮೋದಿ ಸರ್ಕಾರದ ಅಭಿವೃದ್ಧಿಯ ನಿಜವಾದ ಸತ್ಯವೆಂದರೆ ಸಾಮಾನ್ಯರ ಜೇಬು ಖಾಲಿಯಾಗುತ್ತಿದೆ ಮತ್ತು ಸಾಲದ ಹೊರೆ ಹೆಚ್ಚಾಗುತ್ತಿದೆ. ಈಗ, ಅಧಿಕಾರದ ಅಹಂಕಾರದಲ್ಲಿ ಮುಳುಗಿರುವ ಮೋದಿ ಸರ್ಕಾರವು ಹಣದುಬ್ಬರವನ್ನು ನಿಯಂತ್ರಿಸಲು ಯಾವುದೇ ಪ್ರಯತ್ನವನ್ನು ಮಾಡುತ್ತಿಲ್ಲ. ಬಿಜೆಪಿಯನ್ನು ಚುನಾವಣೆಗಳಲ್ಲಿ ಸೋಲಿಸುವ ಮೂಲಕ ಜನರು ಉತ್ತರವನ್ನು ನೀಡಲಿದ್ದಾರೆ ಎಂದು ಹೇಳಿದ್ದಾರೆ.