ಅರಿಜೋನಾ: ಭಾರತೀಯ ಅಮೆರಿಕನ್ ಅಮೀಶ್ಗೆ ಗೆಲುವು
ವಾಷಿಂಗ್ಟನ್: ವೈದ್ಯ ಹಾಗೂ ಭಾರತೀಯ ಅಮೆರಿಕನ್, ಡೆಮಾಕ್ರಟಿಕ್ ಪಕ್ಷದ ಅಮೀಶ್ ಶಾ ಅವರು ಅರಿಜೋನಾದಿಂದ ಅಮೆರಿಕ ಸಂಸತ್ತಿನ ಕೆಳಮನೆಗೆ(ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್) ಆಯ್ಕೆಯಾಗಿದ್ದಾರೆ.ಅರಿಜೋನಾದಿಂದ ಆಯ್ಕೆಯಾದ ಮೊದಲ ಭಾರತೀಯ ಅಮೆರಿಕನ್ ಎಂಬ ಹಿರಿಮೆಗೂ ಶಾ ಪಾತ್ರರಾಗಿದ್ದಾರೆ. ಅಲ್ಲದೇ, ಕೆಳಮನೆಗೆ ಆಯ್ಕೆಯಾಗಿರುವ ಆರನೇ ಭಾರತೀಯ ಅಮೆರಿಕನ್ ಕೂಡ ಆಗಿದ್ದಾರೆ.

ವಾಷಿಂಗ್ಟನ್: ವೈದ್ಯ ಹಾಗೂ ಭಾರತೀಯ ಅಮೆರಿಕನ್, ಡೆಮಾಕ್ರಟಿಕ್ ಪಕ್ಷದ ಅಮೀಶ್ ಶಾ ಅವರು ಅರಿಜೋನಾದಿಂದ ಅಮೆರಿಕ ಸಂಸತ್ತಿನ ಕೆಳಮನೆಗೆ(ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್) ಆಯ್ಕೆಯಾಗಿದ್ದಾರೆ.ಅರಿಜೋನಾದಿಂದ ಆಯ್ಕೆಯಾದ ಮೊದಲ ಭಾರತೀಯ ಅಮೆರಿಕನ್ ಎಂಬ ಹಿರಿಮೆಗೂ ಶಾ ಪಾತ್ರರಾಗಿದ್ದಾರೆ. ಅಲ್ಲದೇ, ಕೆಳಮನೆಗೆ ಆಯ್ಕೆಯಾಗಿರುವ ಆರನೇ ಭಾರತೀಯ ಅಮೆರಿಕನ್ ಕೂಡ ಆಗಿದ್ದಾರೆ. ಅವರು ತಮ್ಮ ಪ್ರತಿಸ್ಪರ್ಧಿ, ರಿಪಬ್ಲಿಕನ್ ಪಕ್ಷದ ಜಯ್ ಫೀಲಿ ಅವರನ್ನು ಪರಾಭವಗೊಳಿಸಿದ್ದಾರೆ.‘ನಿಮ್ಮ ಮುಂದಿನ ಸಂಸದನಾಗಿ ಆಯ್ಕೆಯಾಗಿರುವುದು ಜೀವಮಾನದಲ್ಲಿ ನನಗೆ ಲಭಿಸಿರುವ ಗೌರವ. ನೀವು ನನಗೆ ಮತ ಹಾಕಿರಲಿ ಅಥವಾ ಹಾಕದೇ ಇರಲಿ ನಾನು ನಿಮ್ಮೆಲ್ಲರ ಪ್ರತಿನಿಧಿಯಾಗಿ ಸಂಸತ್ನಲ್ಲಿ ಕಾರ್ಯ ನಿರ್ವಹಿಸುವೆ’ ಎಂದು 48 ವರ್ಷದ ಶಾ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
Read the complete story at Prajavani