ನನಗೋಸ್ಕರ ಪ್ರಾರ್ಥನೆ ಮಾಡಿ... ಗಿಣಿರಾಮ ಖ್ಯಾತಿಯ ನಟಿ ಚೈತ್ರಾ ರಾವ್ಗೆ ಏನಾಯ್ತು?
‘ಗಿಣಿರಾಮ’ ಧಾರಾವಾಹಿಯಲ್ಲಿ ಆಯಿ ಸಾಹೇಬ ಪಾತ್ರದಲ್ಲಿ ಅಭಿನಯಿಸುವ ಮೂಲಕ ನಟಿ ಚೈತ್ರಾ ರಾವ್ ಕನ್ನಡಿಗರಿಗೆ ಪರಿಚಿತರಾಗಿದ್ದಾರೆ. ಉತ್ತರ ಕರ್ನಾಟಕದ ಗೆಟಪ್, ಖಡಕ್ ಆಗಿ ಡೈಲಾಗ್ ಹೇಳುತ್ತಿದ್ದ ಗಟ್ಟಿಗಿತ್ತಿ ಆಯಿ ಸಾಹೇಬರ ನಟನೆ ಈಗಲೂ ವೀಕ್ಷಕರ ಮನದಲ್ಲಿ ಹಚ್ಚಹಸಿರಾಗಿದೆ. ಶಿವರಾಮನನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡು ಮಸಲತ್ತು ಮಾಡುತ್ತಿದ್ದ ಆಯಿ ಸಾಹೇಬ ಅವರ ಅಭಿನಯ

‘ಗಿಣಿರಾಮ’ ಧಾರಾವಾಹಿಯಲ್ಲಿ ಆಯಿ ಸಾಹೇಬ ಪಾತ್ರದಲ್ಲಿ ಅಭಿನಯಿಸುವ ಮೂಲಕ ನಟಿ ಚೈತ್ರಾ ರಾವ್ ಕನ್ನಡಿಗರಿಗೆ ಪರಿಚಿತರಾಗಿದ್ದಾರೆ. ಉತ್ತರ ಕರ್ನಾಟಕದ ಗೆಟಪ್, ಖಡಕ್ ಆಗಿ ಡೈಲಾಗ್ ಹೇಳುತ್ತಿದ್ದ ಗಟ್ಟಿಗಿತ್ತಿ ಆಯಿ ಸಾಹೇಬರ ನಟನೆ ಈಗಲೂ ವೀಕ್ಷಕರ ಮನದಲ್ಲಿ ಹಚ್ಚಹಸಿರಾಗಿದೆ. ಶಿವರಾಮನನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡು ಮಸಲತ್ತು ಮಾಡುತ್ತಿದ್ದ ಆಯಿ ಸಾಹೇಬ ಅವರ ಅಭಿನಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.ಪತಿ ಸೈಫ್ ಮೇಲೆ ನಡೆದ ಹಲ್ಲೆ ನೆನಪಿಸಿಕೊಂಡು ಭಾವುಕರಾದ ನಟಿ ಕರೀನಾ ಕಪೂರ್ ಮಲಯಾಳಂ ನಟಿ ಮಮಿತಾ ಬೈಜು ಅಭಿನಯಕ್ಕೆ ಮನಸೋತ ನಟಿ ಮೇಘನಾ ರಾಜ್ನಟಿ ಚೈತ್ರಾ ರಾವ್ ‘ಗಿಣಿರಾಮ’ ಧಾರಾವಾಹಿ ಮುಕ್ತಾಯಗೊಂಡ ಬಳಿಕ ಚೈತ್ರಾ ಅವರು ಯಾವುದೇ ಹೊಸ ಧಾರಾವಾಹಿಯಲ್ಲಿ ಅಭಿನಯಿಸಿರಲಿಲ್ಲ. ಇದೀಗ ಅದಕ್ಕೆ ಕಾರಣವನ್ನು ಅವರೇ ಬಹಿರಂಗಪಡಿಸಿದ್ದಾರೆ. ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಅವರು ಹಂಚಿಕೊಂಡಿರುವ ಹೊಸ ವಿಡಿಯೊವನ್ನು ನೋಡಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ.ತಮಗೆ ಕರುಳಿನ ಕ್ಯಾನ್ಸರ್ ಇರುವುದು ಪತ್ತೆಯಾಗಿದ್ದು, ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ ಬಳಿಕ ಏನೆಲ್ಲಾ ಆಯ್ತು ಎಂಬುವುದರ ಬಗ್ಗೆ ಚೈತ್ರಾ ಅವರು ಮಾಹಿತಿ ನೀಡಿದ್ದಾರೆ. ಚಿಕಿತ್ಸೆಯ ಭಾಗವಾಗಿ ತಮ್ಮ ಉದ್ದನೆಯ ಕೂದಲನ್ನು ಕತ್ತರಿಸಿರುವುದಾಗಿಯೂ ಅವರು ವಿವರಿಸಿದ್ದಾರೆ. View this post on Instagram ನಟಿ ಚೈತ್ರಾ ರಾವ್ ಹೇಳಿದ್ದೇನು?‘ಇನ್ಸ್ಟಾಗ್ರಾಂನಲ್ಲಿ ಯಾವುದೇ ಪೋಸ್ಟ್ ಹಂಚಿಕೊಳ್ಳುತ್ತಿಲ್ಲ ಏಕೆ ಎಂದು ಅನೇಕರು ಸಂದೇಶ ಕಳುಹಿಸಿ ವಿಚಾರಿಸುತ್ತಿದ್ದೀರಿ. ಹೀಗಾಗಿ, ನನ್ನ ಆರೋಗ್ಯ ಸ್ಥಿತಿಯ ಕುರಿತು ಸ್ಪಷ್ಟನೆ ನೀಡಲು ಈ ವಿಡಿಯೊ ಮೂಲಕ ನಿಮ್ಮ ಮುಂದೆ ಬಂದಿದ್ದೇನೆ. ಇತ್ತೀಚೆಗೆ ಕರುಳಿನಲ್ಲಿ ಗಡ್ಡೆ ಕಾಣಿಸಿಕೊಂಡಿತ್ತು. ಶಸ್ತ್ರಚಿಕಿತ್ಸೆ ಬಳಿಕ ಪರೀಕ್ಷೆಯಲ್ಲಿ ಕ್ಯಾನ್ಸರ್ ಅಂತ ಗೊತ್ತಾಯಿತು. ಚಿಕಿತ್ಸೆ ಪಡೆದು ಸುಧಾರಿಸಿಕೊಳ್ಳುವಷ್ಟರಲ್ಲಿ ಅಂಡಾಶಯದಲ್ಲಿ ಕ್ಯಾನ್ಸರ್ ಪತ್ತೆಯಾಯಿತು. ಈ ವಿಷಯ ತಿಳಿಯುತ್ತಿದ್ದಂತೆ ನಾನು ಮಾನಸಿಕ ಹಾಗೂ ದೈಹಿಕವಾಗಿ ಸಂಪೂರ್ಣವಾಗಿ ಕುಗ್ಗಿ ಹೋಗಿದ್ದೆ. ಆ ಆಘಾತದಿಂದ ಹೊರಬರಲು ನನಗೆ ಸ್ವಲ್ಪ ಸಮಯ ಬೇಕಾಯಿತು. ಆರೋಗ್ಯ ಸಮಸ್ಯೆಯಿಂದಾಗಿ ತೀವ್ರ ಆಯಾಸವಾಗುತ್ತಿದ್ದುದರಿಂದ ನನ್ನನ್ನು ನೋಡಲು ಬಂದವರಿಂದಲೂ ದೂರ ಉಳಿಯುತ್ತಿದ್ದೆ, ಯಾರೊಂದಿಗೂ ಹೆಚ್ಚು ಮಾತನಾಡಲು ಆಗುತ್ತಿರಲಿಲ್ಲ. ಚಿಕಿತ್ಸೆಯ ಭಾಗವಾಗಿ ಕೀಮೋಥೆರಪಿ ಮಾಡಬೇಕಾಗುತ್ತದೆ ಹಾಗೂ ಕೂದಲು ಕತ್ತರಿಸಬೇಕು ಎಂದು ವೈದ್ಯರು ತಿಳಿಸಿದರು. ಹೀಗಾಗಿ ಕೂದಲನ್ನು ಸಂಪೂರ್ಣವಾಗಿ ಬೋಳಿಸಿಕೊಂಡಿದ್ದೇನೆ. ಸದ್ಯ ಕೀಮೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಆದಷ್ಟು ಬೇಗ ಗುಣಮುಖಳಾಗಿ ಬರುತ್ತೇನೆ. ನನಗೋಸ್ಕರ ಪ್ರಾರ್ಥನೆ ಮಾಡಿ’ ಎಂದಿದ್ದಾರೆ.