ಭಾರತೀಯಳಾಗಿ ಹೆಮ್ಮೆ ಎನಿಸುತ್ತಿದೆ: ಶೂರ್ಪನಖಿ ಪಾತ್ರದ ಕುರಿತು ರಕುಲ್ ಪ್ರೀತ್
ನವದೆಹಲಿ: 'ರಾಮಾಯಣ' ಚಿತ್ರದಲ್ಲಿ ರಾವಣನ ತಂಗಿ 'ಶೂರ್ಪನಖಿ' ಪಾತ್ರದಲ್ಲಿ ಅಭಿನಯಿಸಿರುವ ನಟಿ ರಕುಲ್ ಪ್ರೀತ್ ಸಿಂಗ್, ಚಿತ್ರ ಬಿಡುಗಡೆಯಾದ ಮರುದಿನ ತಮ್ಮ ಶೂಟಿಂಗ್ ದಿನಗಳ ನೆನಪುಗಳನ್ನು ಕುರಿತು ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.ಟ್ರೇಲರ್ ಬಿಡುಗಡೆಯಾದಾಗಿನಿಂದಲೂ ಶೂರ್ಪನಖಿ ಪಾತ್ರದ ಅವರ ಲುಕ್ ಭಾರಿ ಮೆಚ್ಚುಗೆ ಗಳಿಸಿತ್ತು. ಈ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡ

ನವದೆಹಲಿ: 'ರಾಮಾಯಣ' ಚಿತ್ರದಲ್ಲಿ ರಾವಣನ ತಂಗಿ 'ಶೂರ್ಪನಖಿ' ಪಾತ್ರದಲ್ಲಿ ಅಭಿನಯಿಸಿರುವ ನಟಿ ರಕುಲ್ ಪ್ರೀತ್ ಸಿಂಗ್, ಚಿತ್ರ ಬಿಡುಗಡೆಯಾದ ಮರುದಿನ ತಮ್ಮ ಶೂಟಿಂಗ್ ದಿನಗಳ ನೆನಪುಗಳನ್ನು ಕುರಿತು ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.ಟ್ರೇಲರ್ ಬಿಡುಗಡೆಯಾದಾಗಿನಿಂದಲೂ ಶೂರ್ಪನಖಿ ಪಾತ್ರದ ಅವರ ಲುಕ್ ಭಾರಿ ಮೆಚ್ಚುಗೆ ಗಳಿಸಿತ್ತು. ಈ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿರುವ ನಟಿ, 'ರಾಮಾಯಣದಲ್ಲಿ ಶೂರ್ಪನಖಿ ಪಾತ್ರ ಕುರಿತು ಅನುಭವವನ್ನು ಹಂಚಿಕೊಳ್ಳಲು ಕಾಯುತ್ತಿದ್ದೆ. ಇದು ನನಗೆ ಅತ್ಯಂತ ವಿಶೇಷವಾದ ಅನುಭವ. ಪೀಳಿಗೆಯಿಂದ ಪೀಳಿಗೆಗೆ ಬದುಕಿನ ಮತ್ತು ಸಂಸ್ಕೃತಿಯ ಭಾಗವಾಗಿರುವ ಕಥೆಯಲ್ಲಿ ನಟಿಸುವ ಅವಕಾಶ ಪ್ರತಿದಿನ ಸಿಗುವುದಿಲ್ಲ' ಎಂದು ಬರೆದುಕೊಂಡಿದ್ದಾರೆ. View this post on Instagram ಅಲ್ಲದೆ, 'ಮಹಾಕಾವ್ಯವನ್ನು ಇಷ್ಟೊಂದು ಭವ್ಯವಾಗಿ ಬೆಳ್ಳಿತೆರೆಯ ಮೇಲೆ ತಂದಿರುವುದನ್ನು ನೋಡುವುದೇ ಒಂದು ಅದ್ಭುತ ಅನುಭವ. ಇದು ಕೇವಲ ಒಂದು ಸಿನಿಮಾವಲ್ಲ, ಒಬ್ಬ ಭಾರತೀಯಳಾಗಿ ನನಗೆ ಹೆಮ್ಮೆ ತಂದಿಕೊಟ್ಟ ಕ್ಷಣ' ಎಂದಿದ್ದಾರೆ.ಈ ಹಿಂದೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ್ದ ರಕುಲ್, 'ಶೂರ್ಪನಖಿ' ರಾಮಾಯಣದ ಯುದ್ಧಕ್ಕೆ ಮುಖ್ಯ ಕಾರಣವಾಗಿದ್ದಳು. ಆಕೆಗೆ ಹಲವು ಮಗ್ಗಲುಗಳಿವೆ. ಇಂತಹ ಸಂಕೀರ್ಣವಾದ ಪಾತ್ರವನ್ನು ಮಾಡುವುದು ನಿಜಕ್ಕೂ ಕುತೂಹಲಕಾರಿಯಾಗಿತ್ತು ಎಂದು ತಿಳಿಸಿದ್ದರು.ಆದಿಪುರುಷ್ ಸಿನಿಮಾಗಿಂತಲೂ ಕಡಿಮೆ; ‘ರಾಮಾಯಣ’ ಮೊದಲ ದಿನ ಗಳಿಸಿದ್ದೆಷ್ಟು?‘ರಾಮಾಯಣ’ ಸಿನಿಮಾ ವಿಮರ್ಶೆ: ದಶಾನನನ ಲೋಕದಲ್ಲಿ ರಾಮಾಯಣ