ಭಾರತ ಎ ನ್ಯೂಜಿಲೆಂಡ್ ಎ 3ನೇ ‘ಟೆಸ್ಟ್’ ಇಂದಿನಿಂದ; ಬೂಮ್ರಾ, ಪ್ರಸಿದ್ಧ ಕಣಕ್ಕೆ?
ಲಿಂಕನ್ (ನ್ಯೂಜಿಲೆಂಡ್): ಭಾರತ ಎ ಮತ್ತು ಆತಿಥೇಯ ನ್ಯೂಜಿಲೆಂಡ್ ಎ ನಡುವಣ ಮೂರನೇ ಮತ್ತು ಅಂತಿಮ ‘ಟೆಸ್ಟ್’ ಪಂದ್ಯ ಶನಿವಾರ ಆರಂಭವಾಗಲಿದೆ.ನಾಲ್ಕು ದಿನಗಳ ಈ ಪಂದ್ಯವು ವೇಗಿಗಳಾದ ಜಸ್ಪ್ರೀತ್ ಬೂಮ್ರಾ, ಪ್ರಸಿದ್ಧ ಕೃಷ್ಣ ಮತ್ತು ಅನುಭವಿ ಆಲ್ರೌಂಡರ್ ರವೀಂದ್ರ ಜಡೇಜ ಅವರು ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಗೆ ಸಿದ್ಧರಾಗಲು ವೇದಿಕೆ

ಲಿಂಕನ್ (ನ್ಯೂಜಿಲೆಂಡ್): ಭಾರತ ಎ ಮತ್ತು ಆತಿಥೇಯ ನ್ಯೂಜಿಲೆಂಡ್ ಎ ನಡುವಣ ಮೂರನೇ ಮತ್ತು ಅಂತಿಮ ‘ಟೆಸ್ಟ್’ ಪಂದ್ಯ ಶನಿವಾರ ಆರಂಭವಾಗಲಿದೆ.ನಾಲ್ಕು ದಿನಗಳ ಈ ಪಂದ್ಯವು ವೇಗಿಗಳಾದ ಜಸ್ಪ್ರೀತ್ ಬೂಮ್ರಾ, ಪ್ರಸಿದ್ಧ ಕೃಷ್ಣ ಮತ್ತು ಅನುಭವಿ ಆಲ್ರೌಂಡರ್ ರವೀಂದ್ರ ಜಡೇಜ ಅವರು ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಗೆ ಸಿದ್ಧರಾಗಲು ವೇದಿಕೆಯಾಗಲಿದೆ.ಬಿರುಗಾಳಿ ಮತ್ತು ವಿಪರೀತ ಚಳಿಯಿಂದ ಕೂಡಿರುವ ನ್ಯೂಜಿಲೆಂಡ್ ವಾತಾವರಣಕ್ಕೆ ಹೊಂದಿಕೊಳ್ಳಲೂ ಭಾರತದ ಆಟಗಾರರಿಗೆ ಈ ಪಂದ್ಯ ನೆರವಾಗಲಿದೆ. ಮೊದಲ ಎರಡೂ ಪಂದ್ಯಗಳು ಡ್ರಾ ಆಗಿದ್ದು, ಅನುಭವಿ ಆಟಗಾರರ ದಂಡನ್ನೇ ಹೊಂದಿರುವ ಪ್ರವಾಸಿ ತಂಡವು ಈ ಪಂದ್ಯದಲ್ಲಿ ಫೇವರಿಟ್ ಎನಿಸಿದೆ.ಬೂಮ್ರಾ ಅವರು ಏಷ್ಯನ್ ಕ್ರೀಡಾಕೂಟದ ನಂತರ ಕಣಕ್ಕಿಳಿದಿಲ್ಲ. ಕಾರ್ಯಭಾರ ನಿರ್ವಹಣೆಗಾಗಿ, ನ್ಯೂಜಿಲೆಂಡ್ ಪ್ರವಾಸದಲ್ಲಿ ಅವರನ್ನು ಟೆಸ್ಟ್ ಸರಣಿಗೆ ಮಾತ್ರ ಸೀಮಿತಗೊಳಿಸಲಾಗಿದೆ.ಪ್ರಸಿದ್ಧ ಅವರು ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ವೇಳೆ ಮಂಡಿರಜ್ಜು (ಹ್ಯಾಮ್ಸ್ಟ್ರಿಂಗ್) ನೋವಿಗೆ ತುತ್ತಾಗಿದ್ದರು. ತಾವು ‘ಫಿಟ್’ ಎಂಬುದನ್ನು ಅವರು ಈ ಪಂದ್ಯದಲ್ಲಿ ಸಾಬೀತುಪಡಿಸಬೇಕಿದೆ. ಜಡೇಜ ಅವರು ರಣಜಿ ಕ್ರಿಕೆಟ್ ಟೂರ್ನಿಯಲ್ಲಿ ಸೌರಾಷ್ಟ್ರ ಪರ ಎರಡು ಪಂದ್ಯ ಆಡಿ, ನ್ಯೂಜಿಲೆಂಡ್ಗೆ ಬಂದಿದ್ದಾರೆ. ಅವರನ್ನು ಏಕದಿನ ಸರಣಿಗೆ ಆಯ್ಕೆ ಮಾಡಿಲ್ಲ.ದೇವದತ್ತ ಪಡಿಕ್ಕಲ್, ನಾಯಕ ಧ್ರುವ್ ಜುರೇಲ್ ಮತ್ತು ಯಶಸ್ವಿ ಜೈಸ್ವಾಲ್ ಅವರನ್ನೊಳಗೊಂಡ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದೆ. ಆಲ್ರೌಂಡರ್ ನಿತೀಶ್ ರೆಡ್ಡಿ ಅವರೂ ಆಡುವ 11ರಲ್ಲಿ ಸ್ಥಾನ ಪಡೆಯಬಹುದು.ಕಳೆದ ಎರಡು ಪಂದ್ಯಗಳಲ್ಲಿ ಭಾರತದ ಬ್ಯಾಟರ್ಗಳನ್ನು ಕಾಡಿದ್ದ ವೇಗಿಗಳಾದ ಸಿಮೋನ್ ಕೀನ್ ಮತ್ತು ಫ್ರೇಸರ್ ಶೀಟ್ ಅವರು ಗಾಯದಿಂದಾಗಿ ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.ರವೀಂದ್ರ ಜಡೇಜ