ದೀಪಾವಳಿ ಹಬ್ಬದ ಸಂಭ್ರಮದ ವೇಳೆ ಚಿನ್ನ, ಬೆಳ್ಳಿ ದರ ಇಳಿಕೆ
ನವದೆಹಲಿ: ಸ್ಥಳೀಯ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದಿರುವ ಹಿನ್ನೆಲೆಯಲ್ಲಿ ಶುಕ್ರವಾರದ ವಹಿವಾಟಿನಲ್ಲಿ ಚಿನ್ನ ಹಾಗೂ ಬೆಳ್ಳಿ ದರ ಇಳಿಕೆಯಾಗಿದೆ. ದಂತೆರಾಸ್ ಹಬ್ಬದ ಸಂಭ್ರಮದ ದಿನವೇ ಇಳಿಕೆ ದಾಖಲಾಗಿದೆ. 10 ಗ್ರಾಂ ಚಿನ್ನದ ಬೆಲೆಯು ₹2,178ರಷ್ಟು ಇಳಿಕೆ ಕಂಡು, ₹1,41,917ಕ್ಕೆ ತಲುಪಿದೆ.ಸ್ಥಳೀಯ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದಿರುವುದೇ ಚಿನ್ನದ ಬೆಲೆ ಇಳಿಕೆಗೆ ಪ್ರಮ

ನವದೆಹಲಿ: ಸ್ಥಳೀಯ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದಿರುವ ಹಿನ್ನೆಲೆಯಲ್ಲಿ ಶುಕ್ರವಾರದ ವಹಿವಾಟಿನಲ್ಲಿ ಚಿನ್ನ ಹಾಗೂ ಬೆಳ್ಳಿ ದರ ಇಳಿಕೆಯಾಗಿದೆ. ದಂತೆರಾಸ್ ಹಬ್ಬದ ಸಂಭ್ರಮದ ದಿನವೇ ಇಳಿಕೆ ದಾಖಲಾಗಿದೆ. 10 ಗ್ರಾಂ ಚಿನ್ನದ ಬೆಲೆಯು ₹2,178ರಷ್ಟು ಇಳಿಕೆ ಕಂಡು, ₹1,41,917ಕ್ಕೆ ತಲುಪಿದೆ.ಸ್ಥಳೀಯ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದಿರುವುದೇ ಚಿನ್ನದ ಬೆಲೆ ಇಳಿಕೆಗೆ ಪ್ರಮುಖ ಕಾರಣ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.ಅಂತರರಾಷ್ಟ್ರೀಯ ಮಟ್ಟದಲ್ಲಿ, ನ್ಯೂಯಾರ್ಕ್ನಲ್ಲಿ ಚಿನ್ನದ ಬೆಲೆಯು ಶೇ 0.94ರಷ್ಟು ಕುಸಿತ ಕಂಡಿದ್ದು, ಪ್ರತಿ ಔನ್ಸ್ಗೆ 4,049.43 ಡಾಲರ್ಗೆ ಇಳಿಕೆಯಾಗಿದೆ.ಬೆಳಿ ದರದಲ್ಲೂ ಇಳಿಕೆ ಕಂಡುಬಂದಿದೆ. ಕೆ.ಜಿಗೆ ₹3,534 ಇಳಿಕೆಯಾಗಿ, ₹1,83,606ಕ್ಕೆ ತಲುಪಿದೆ.ಒಟ್ಟಾರೆಯಾಗಿ ದೀಪಾವಳಿ ಹಬ್ಬದ ಸಂಭ್ರಮದ ವೇಳೆ ಚಿನ್ನ ಹಾಗೂ ಬೆಳ್ಳಿ ದರ ಇಳಿಕೆಯಾಗಿರುವುದು ಗ್ರಾಹಕರಲ್ಲಿ ಸಂತಸ ಮೂಡಿಸಿದೆ. ಹಬ್ಬದ ಸಂಭ್ರಮ: ಚಿನ್ನ-ಬೆಳ್ಳಿ ದರ ಮತ್ತಷ್ಟು ಏರಿಕೆಯಾಗಲಿದೆಯೇ?ಹಬ್ಬದ ಸಂಭ್ರಮ: ಸತತ ಎರಡನೇ ದಿನವೂ ಚಿನ್ನ, ಬೆಳ್ಳಿ ದರ ಏರಿಕೆ
Read the complete story at Prajavani