‘ಕಲ್ಯಾಣಿ ಟೀಚರ್’ ಆಗಿ ಕಿರುತೆರೆಗೆ ಮರಳಿದ ಬಿಗ್ ಬಾಸ್ ಖ್ಯಾತಿಯ ಅಶ್ವಿನಿ ಗೌಡ
ಕನ್ನಡ ಕಿರುತೆರೆಯ ಜನಪ್ರಿಯ ನಟಿ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ ಅಶ್ವಿನಿ ಗೌಡ ಅವರು ಮತ್ತೆ ಕಿರುತೆರೆಯಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಬಿಗ್ ಬಾಸ್ನಿಂದ ಹೊರಬಂದ ಬಳಿಕ ನಟಿ ಅಶ್ವಿನಿ ಗೌಡ, ‘ಓ ಮನಸೇ’ ಎಂಬ ಹೊಸ ಧಾರಾವಾಹಿಯ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ.ಅಭಿಮಾನ ಇರಲಿ, ಹೆಣ್ಣಿನ ಗೌರವಕ್ಕೆ ಧಕ್ಕೆ ಬರದಿರಲಿ: ಅಶ್ವಿನಿ ಗೌಡ ಪೋಸ್ಟ್ನನ್ನ ಮೌನ ದೌರ್ಬಲ್ಯವ

ಕನ್ನಡ ಕಿರುತೆರೆಯ ಜನಪ್ರಿಯ ನಟಿ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ ಅಶ್ವಿನಿ ಗೌಡ ಅವರು ಮತ್ತೆ ಕಿರುತೆರೆಯಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಬಿಗ್ ಬಾಸ್ನಿಂದ ಹೊರಬಂದ ಬಳಿಕ ನಟಿ ಅಶ್ವಿನಿ ಗೌಡ, ‘ಓ ಮನಸೇ’ ಎಂಬ ಹೊಸ ಧಾರಾವಾಹಿಯ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ.ಅಭಿಮಾನ ಇರಲಿ, ಹೆಣ್ಣಿನ ಗೌರವಕ್ಕೆ ಧಕ್ಕೆ ಬರದಿರಲಿ: ಅಶ್ವಿನಿ ಗೌಡ ಪೋಸ್ಟ್ನನ್ನ ಮೌನ ದೌರ್ಬಲ್ಯವೆಂದು ಭಾವಿಸದಿರಿ;ಟ್ರೋಲಿಗರಿಗೆ ಅಶ್ವಿನಿ ಗೌಡ ಖಡಕ್ ಎಚ್ಚರಿಕೆ ಏನಿದು ‘ಓ ಮನಸೇ’ ಧಾರಾವಾಹಿಯ ಕಥೆ? ಮೈಸೂರಿನ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಕಥಾನಾಯಕಿ ರಾಗಾಗೆ ಶಿಕ್ಷಣವೆಂದರೆ ಪ್ರಾಣ. ಪುಸ್ತಕ ಓದುವುದೇ ಅವಳ ಹವ್ಯಾಸ. ಶಿಕ್ಷಣವು ಕೇವಲ ಪದವಿ ಪಡೆಯುವ ಸಾಧನವಲ್ಲ, ಅದು ಸ್ವಾವಲಂಬನೆ ಹಾಗೂ ಸ್ವಾತಂತ್ರ್ಯದ ಹಾದಿ ಎಂದು ಆಕೆ ನಂಬಿದವಳು. ರಾಗಾಳ ಬದುಕಿಗೆ ಪ್ರೊಫೆಸರ್ ಕಲ್ಯಾಣಿ ಅವರೇ ಅತಿದೊಡ್ಡ ಸ್ಫೂರ್ತಿ. ಆದರೆ, ಎತ್ತರದ ಕನಸು ಕಾಣುವ ರಾಗಾಳ ಆಶಯಗಳಿಗೆ ಸ್ವಂತ ತಂದೆಯೇ ತಡೆಗೋಡೆಯಾಗಿದ್ದಾರೆ.ಇನ್ನೊಂದೆಡೆ, ಶ್ರೀಮಂತ ಕುಟುಂಬದಲ್ಲಿ ಬೆಳೆದ ಕಥಾನಾಯಕ ರಿಷಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದರ ಮುಖ್ಯಸ್ಥ. ತಮ್ಮೆಲ್ಲ ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಬದುಕುವ ಆತನಿಗೆ ‘ಪ್ರೀತಿ’ ಎಂಬ ಪದದ ಮೇಲೆ ನಂಬಿಕೆಯಿಲ್ಲ. ತಾಯಿ ಕಲ್ಯಾಣಿಯ ಪ್ರೀತಿಯಿಂದ ದೂರವಾಗಿ ಬೆಳೆದಿರುವ ರಿಷಿಗೆ ಆಕೆಯ ಮೇಲೆ ತೀವ್ರ ಅಸಹನೆಯಿದೆ. View this post on Instagram ವಿರುದ್ಧ ವ್ಯಕ್ತಿತ್ವ ಹೊಂದಿರುವ ರಾಗಾ ಹಾಗೂ ರಿಷಿಯ ಪಯಣದಲ್ಲಿ ವರ್ಷಗಳಿಂದ ಹೆಪ್ಪುಗಟ್ಟಿರುವ ಕಲ್ಯಾಣಿ ಮತ್ತು ಜಯರಾಮ್ ನಡುವಿನ ಮನಸ್ತಾಪ ದೂರವಾಗುವುದೇ? ತಂದೆಯ ವಿರೋಧವನ್ನು ಮೀರಿ ರಾಗಾ ತನ್ನ ಕನಸನ್ನು ಹೇಗೆ ನನಸು ಮಾಡಿಕೊಳ್ಳುತ್ತಾಳೆ? ಸಂಪೂರ್ಣ ಭಿನ್ನ ಸ್ವಭಾವದ ರಾಗಾ-ರಿಷಿ ಒಂದಾಗಲು ಸಾಧ್ಯವೇ? ಎಂಬುದೇ ಈ ಧಾರಾವಾಹಿಯ ಮುಖ್ಯ ಕಥಾವಸ್ತು.ಧಾರಾವಾಹಿಯಲ್ಲಿ ನಾಯಕ ರಿಷಿ ಪಾತ್ರದಲ್ಲಿ ದರ್ಶಕ್ ಗೌಡ ಹಾಗೂ ನಾಯಕಿ ರಾಗಾ ಪಾತ್ರದಲ್ಲಿ ಮಧುಮಿತಾ ಗೌಡ ನಟಿಸುತ್ತಿದ್ದಾರೆ. ಇವರೊಂದಿಗೆ ಅಶ್ವಿನಿ ಗೌಡ, ಅಜಿತ್ ಹಂದೆ, ರೇಖಾ ಕೃಷ್ಣಪ್ಪ, ರಮೇಶ್ ಪಂಡಿತ್, ಸಹನಾ, ಪ್ರಮೋದ್ ರಾಜ್, ದೀಪಾ ಕಟ್ಟೆ ಹಾಗೂ ನಿಸರ್ಗ ಅಣ್ಣಪ್ಪ ಸೇರಿದಂತೆ ಹಲವು ಅನುಭವಿ ಕಲಾವಿದರು ಅಭಿನಯಿಸುತ್ತಿದ್ದಾರೆ.‘ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್’ ಸಂಸ್ಥೆಯಡಿ ಗಣಪತಿ ಭಟ್ ಅವರು ನಿರ್ಮಿಸುತ್ತಿರುವ ಈ ಧಾರಾವಾಹಿಗೆ ಬಿ. ಮಧುಸೂದನ್ ನಿರ್ದೇಶನವಿದೆ. ಈ ಧಾರಾವಾಹಿಯು ನವೆಂಬರ್ 10ರಿಂದ ಪ್ರತಿದಿನ ರಾತ್ರಿ 8.30ಕ್ಕೆ ಸ್ಟಾರ್ ಸುವರ್ಣ ವಾಹಿನಿ ಹಾಗೂ ಜಿಯೊ ಹಾಟ್ಸ್ಟಾರ್ನಲ್ಲಿ ಪ್ರಸಾರವಾಗಲಿದೆ.