ಹಬ್ಬದ ಸಂಭ್ರಮ: ಸತತ ಎರಡನೇ ದಿನವೂ ಚಿನ್ನ, ಬೆಳ್ಳಿ ದರ ಏರಿಕೆ
ನವದೆಹಲಿ: ದಂತೆರಾಸ್ ಹಬ್ಬದ ಸಂಭ್ರಮದ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಮತ್ತು ಚಿಲ್ಲರೆ ಮಾರಾಟಗಾರರಿಂದ ಖರೀದಿ ಭರಾಟೆ ಹೆಚ್ಚಾಗಿರುವ ಕಾರಣ, ಗುರುವಾರ ರಾಷ್ಟ್ರ ರಾಜಧಾನಿಯಲ್ಲಿ ಸತತ ಎರಡನೇ ದಿನವೂ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಇಲ್ಲಿನ ಚಿನಿವಾರ ಪೇಟೆಯಲ್ಲಿ ಗುರುವಾರ ನಡೆದ ವಹಿವಾಟಿನಲ್ಲಿ10 ಗ್ರಾಂ ಚಿನ್ನದ ಬೆಲೆ ₹2,200ರಷ್ಟು ಏರಿಕೆ ಕಂಡು ₹1.48 ಲಕ್ಷಕ

ನವದೆಹಲಿ: ದಂತೆರಾಸ್ ಹಬ್ಬದ ಸಂಭ್ರಮದ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಮತ್ತು ಚಿಲ್ಲರೆ ಮಾರಾಟಗಾರರಿಂದ ಖರೀದಿ ಭರಾಟೆ ಹೆಚ್ಚಾಗಿರುವ ಕಾರಣ, ಗುರುವಾರ ರಾಷ್ಟ್ರ ರಾಜಧಾನಿಯಲ್ಲಿ ಸತತ ಎರಡನೇ ದಿನವೂ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಇಲ್ಲಿನ ಚಿನಿವಾರ ಪೇಟೆಯಲ್ಲಿ ಗುರುವಾರ ನಡೆದ ವಹಿವಾಟಿನಲ್ಲಿ10 ಗ್ರಾಂ ಚಿನ್ನದ ಬೆಲೆ ₹2,200ರಷ್ಟು ಏರಿಕೆ ಕಂಡು ₹1.48 ಲಕ್ಷಕ್ಕೆ ತಲುಪಿದೆ.99.9ರಷ್ಟು ಶುದ್ಧ ಚಿನ್ನದ ಬೆಲೆಯು (ಎಲ್ಲಾ ತೆರಿಗೆಗಳನ್ನು ಒಳಗೊಂಡಂತೆ) ಬುಧವಾರದ ಅಂತ್ಯಕ್ಕೆ ₹1,46,600 ಇತ್ತು. ಗುರುವಾರ ಇದು ₹2,200ರಷ್ಟು ಏರಿಕೆಯಾಗಿ 10 ಗ್ರಾಂ.ಗೆ ₹1,48,800ಕ್ಕೆ ವಹಿವಾಟು ಅಂತ್ಯಗೊಳಿಸಿದೆ.ಬೆಳ್ಳಿ ದರದಲ್ಲೂ ಏರಿಕೆಬೆಳ್ಳಿ ದರದಲ್ಲೂ ಹೆಚ್ಚಳ ಕಂಡುಬಂದಿದೆ. ಗುರುವಾರ ₹1,500ರಷ್ಟು ಏರಿಕೆ ಕಂಡು ₹1,94,500ಕ್ಕೆ ತಲುಪಿದೆ. ಬುಧವಾರ ಕೆ.ಜಿ.ಗೆ ₹1,93,000ರಷ್ಟು ಇತ್ತು.ಶುಕ್ರವಾರದಂದು ದಂತೆರಾಸ್ ಹಬ್ಬದ ಶುಭ ಸಂಭ್ರಮದಲ್ಲಿ ಆಭರಣಗಳನ್ನು ಖರೀದಿಸಲು ಸಕಾಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆಭರಣಗಳ ಖರೀದಿಗೆ ಬೇಡಿಕೆ ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ವಹಿವಾಟು ಬಿರುಸುಗೊಂಡಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಹೂಡಿಕೆದಾರರ ಬೇಡಿಕೆ ಹೆಚ್ಚಾಗಿರುವುದು ಸಹ ಬೆಲೆ ಏರಿಕೆಗೆ ಇನ್ನೊಂದು ಕಾರಣವಾಗಿದೆ.ಹಬ್ಬದ ಋತುವಿನಲ್ಲಿ ಆಗಿರುವ ಈ ಬೆಲೆ ಏರಿಕೆಯು, ಕಳೆದ ವರ್ಷಕ್ಕೆ ಹೋಲಿಸಿದರೆ ಗಣನೀಯ ಹೆಚ್ಚಳವನ್ನು ಪ್ರತಿಫಲಿಸುತ್ತಿದೆ. ಕಳೆದ ವರ್ಷ ಅಕ್ಟೋಬರ್ 18ರಂದು ಆಚರಿಸಲಾದ ದಂತೆರಾಸ್ ದಿನದಂದು 10 ಗ್ರಾಂ ಚಿನ್ನದ ಬೆಲೆ ₹1,32,400 ಹಾಗೂ ಒಂದು ಕೆ.ಜಿ ಬೆಳ್ಳಿ ದರ ₹1.7 ಲಕ್ಷ ಇತ್ತು.ಷೇರುಪೇಟೆಯಲ್ಲಿ ಸತತ 6ನೇ ದಿನವೂ ಗೂಳಿ ಓಟಭಾರತದಲ್ಲಿ ಚಿನ್ನದ ಬೇಡಿಕೆ ಕುಸಿತ: ವಿಶ್ವ ಚಿನ್ನ ಸಮಿತಿ ವರದಿಯಲ್ಲೇನಿದೆ?