‘28’: ಮೌನದ ಪದರಗಳನ್ನು ಒಡೆದು ಹುಟ್ಟಿದ ಕವಿತೆಗಳು
ಮುಟ್ಟು – ಇದು ಕೇವಲ ದೇಹದ ಕ್ರಿಯೆಯಷ್ಟೇ ಅಲ್ಲ, ಮೌನದ ಪದರಗಳ ಕೆಳಗೆ ಹುದುಗಿರುವ ಸಾವಿರಾರು ಹೆಣ್ಣುಮನಗಳ ಕಥೆ. ದಿನಬಳಕೆಯ ವಸ್ತುವೊಂದನ್ನು ಬಹಿರಂಗವಾಗಿ ಕೇಳುವುದರಿಂದ ಹಿಡಿದು, ಕಪ್ಪು ಕವರ್ನೊಳಗೆ ಮುಚ್ಚಿಟ್ಟು ತರುವವರೆಗಿನ ಪ್ರತಿ ಹಂತದಲ್ಲೂ ಸಮಾಜ ನಿರ್ಮಿಸಿದ ಅಪರಾಧ ಪ್ರಜ್ಞೆಯೊಂದು ನಮಗೆ ಎದುರಾಗುತ್ತಲೇ ಇರುತ್ತದೆ. ಆದರೆ, ಆ ಒಂದು ಮಾತು, ಆ ಒಂದು ಮುಕ್ತ ನೋಟ ಹ

ಮುಟ್ಟು – ಇದು ಕೇವಲ ದೇಹದ ಕ್ರಿಯೆಯಷ್ಟೇ ಅಲ್ಲ, ಮೌನದ ಪದರಗಳ ಕೆಳಗೆ ಹುದುಗಿರುವ ಸಾವಿರಾರು ಹೆಣ್ಣುಮನಗಳ ಕಥೆ. ದಿನಬಳಕೆಯ ವಸ್ತುವೊಂದನ್ನು ಬಹಿರಂಗವಾಗಿ ಕೇಳುವುದರಿಂದ ಹಿಡಿದು, ಕಪ್ಪು ಕವರ್ನೊಳಗೆ ಮುಚ್ಚಿಟ್ಟು ತರುವವರೆಗಿನ ಪ್ರತಿ ಹಂತದಲ್ಲೂ ಸಮಾಜ ನಿರ್ಮಿಸಿದ ಅಪರಾಧ ಪ್ರಜ್ಞೆಯೊಂದು ನಮಗೆ ಎದುರಾಗುತ್ತಲೇ ಇರುತ್ತದೆ. ಆದರೆ, ಆ ಒಂದು ಮಾತು, ಆ ಒಂದು ಮುಕ್ತ ನೋಟ ಹೇಗೆ ಒಬ್ಬರ ಒಂಟಿತನಕ್ಕೆ ಧ್ವನಿಯಾಗಬಲ್ಲದು? ಅಡುಗೆಮನೆಯ ಕಣ್ಣೀರಿನಿಂದ ಹಿಡಿದು ಶಾಲೆಯಿಂದ ಹೊರಗುಳಿಯುವ ಪುಟ್ಟ ಹುಡುಗಿಯರ ತವಕದವರೆಗೆ – ಮುಟ್ಟಿನ ಸುತ್ತಲಿನ ನೋವು, ಪ್ರೀತಿ ಮತ್ತು ಅನುಕಂಪಗಳು ಹೇಗೆ ಕಾಡಿದವು ಎನ್ನುವುದನ್ನು ಬರಹಗಾರ ಸದಾಶಿವ ಸೊರಟೂರು ಅವರು ತಮ್ಮ ‘28’ ಎನ್ನುವ ಕವನ ಸಂಕಲದಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ಕವಿತೆಗಳ ಹುಟ್ಟಿಗೆ ಕಾರಣವೇನು, ಹೇಗೆ ಹುಟ್ಟಿತು ಎನ್ನುವ ಬಗ್ಗೆ ‘ಪ್ರಜಾವಾಣಿ ಡಿಜಿಟಲ್’ನೊಂದಿಗೆ ಹಂಚಿಕೊಂಡಿದ್ದು ಹೀಗೆ.********ಒಂದು ಪ್ಯಾಕ್ ಪ್ಯಾಡ್ ಕೊಡಿ, ಎಕ್ಸ್ ಎಲ್ ಸೈಜ್' ಹೀಗೆ ಕೇಳಿದ್ದೆ ಅವತ್ತು. ಅಂಗಡಿ ತುಂಬಿತ್ತು. ನನ್ನ ಜೋರು ಮಾತಿನಿಂದ ಅಂಗಡಿ ಸ್ತಬ್ಧ. ಕೆಲವರು ಮುಖ ಮುಖ ನೋಡಿಕೊಂಡರು. ನಾಲ್ಕು ಜನ ಇರುವ ಕಡೆ ಗಟ್ಟಿಯಾಗಿ ಆಡಬಾರದ ಮಾತಾಗಿತ್ತಾ ಅದು? ಗೊತ್ತಿಲ್ಲ. ನನಗೇನೊ ಅವರೆಲ್ಲರೂ ಮಾತು ಬಿಟ್ಟು ಮುಖ ಮುಖ ನೋಡಿಕೊಂಡಿದ್ದು ಹಾಗೆ ಅನಿಸಿತ್ತು.ಆದರೆ ಅಂಗಡಿಯೊಳಗಿದ್ದ ಅವಳ ಕಣ್ಣುಗಳು ಬೆಳಗಿದ್ದವು. ಮಧ್ಯೆ ವಯಸ್ಸಿಗೆ ಸನಿಹ ಇರುವ ವಯಸ್ಸು. ಅವಳ ನೋಟದಲ್ಲಿ ನನ್ನ ಕಡೆಗೆ ಮೆಚ್ಚುಗೆಯೂ ಇತ್ತು.ಅವತ್ತು ಪ್ಯಾಡ್ ಕವರ್ ಮಾಡಿಕೊಡುವಾಗ ನಿಜಕ್ಕೂ ಅವಳು, ಅವಳಾಗಿರಲಿಲ್ಲ.. ಅನಿಸಿತ್ತು. ಅಲ್ಲಿಂದ ಪ್ರತಿಬಾರಿಯೂ ನಾನು ಪ್ಯಾಡ್ ತರಲು ಹೋದಾಗ ಅವಳೊಂದು ಮೌನದ ಉಳಿತಾಯ ಖಾತೆಯಂತೆ ಕಾಣುತ್ತಿದ್ದಳು.ಕಣ್ಣ ನೋಟದಲ್ಲೇ ಹೆಚ್ಚುನು ಗಾಢವಲ್ಲದ ಪರಿಚಯವೊಂದು ಬೆಳೆಯುತ್ತಾ ಹೋಯ್ತು ನಮ್ಮ ನಡುವೆ.ಅವತ್ತೊಂದಿನ ಅಂಗಡಿಯಲ್ಲಿ ಜನ ವಿರಳವಿತ್ತು. 'ಪ್ಯಾಡ್ ಗಳನ್ನು ಕೊಡುವಾಗ ಯಾಕೊ ನೀವು ಒಂಥಾರ ಇರ್ತೀರಲ್ಲ..' ಕೇಳಿದ್ದೆ ಸುಮ್ಮನೆ. ಆದರೆ ಅವಳು ಮಾತಿನ ಖಾತೆ ತೆರೆದಿರಲಿಲ್ಲ.ಅಲ್ಲಿಂದ ಹಲವು ತಿಂಗಳ ಬಳಿಕ ಎಂದೊ ಒಮ್ಮೆ ಪ್ಯಾಡ್ ತರಲು ಹೋದಾಗ ಅವಳು ಅದನ್ನು ಕವರ್ ಮಾಡುತ್ತಾ ಅಡಿದ ಮಾತುಗಳು ಸಣ್ಣ ಸ್ವರವೂ ಕೆಡದಂತೆ ಇಂದಿಗೂ ನೆನಪಿವೆ..'ಯಾರ ಪಾಲಿನ ಮುಟ್ಟೊ ಅನಾಥವೊ ಅವಳೇ ನಿಜವಾದ ಬಡವಿ ಈ ಜಗತ್ತಿನಲ್ಲಿ. ಅದರಲ್ಲಿ ನಾನೂ ಒಬ್ಳು. ಋತುಮತಿಯಾದ ದಿನಗಳಲ್ಲಿ ಒಂದು ಕನಸಿತ್ತು. ನನ್ನ ಬದುಕಿನಲ್ಲಿ ಬರುವ ಹುಡುಗ ನನಗಿಂತ ನನ್ನ ಮುಟ್ಟು ಕೇರ್ ಮಾಡಬೇಕು ಅಂತ.. ಆದರೆ ನಲವತ್ತು ಆದರೂ ನನಗಿನ್ನೂ ಮದುವೆ ಆಗಲಿಲ್ಲ..' ಅಂದಳು. ಅವಳ ಮಾತುಗಳಲ್ಲಿ ತೇವವಿತ್ತು.ಆ ಕ್ಷಣಕ್ಕೆ ಥಟನೆ ನೆನಪಾದದ್ದು ಐದು ವರ್ಷದ ಹಿಂದೆ ನನ್ನವಳು ಅಡುಗೆ ಮನೆಯಲ್ಲಿ ಹಾಕಿದ ಕಣ್ಣೀರು.. ಅವಳು ಅವತ್ತು ಆಡದೆಯೂ ಆಡಿದ ಮಾತುಗಳು ನನಗಿಂದು ತಲುಪಿದವು.ಅವಳ ಮಾತುಗಳನ್ನು ಕೇಳಿಸಿಕೊಂಡ ಮೇಲೆ ನನಗೇನು ಮಾತನಾಡಬೇಕೊ ತಿಳಿಯಲಿಲ್ಲ. ಎಷ್ಟೊ ಹೊತ್ತು ಅಲ್ಲೇ ನಿಂತಿದ್ದು ಮನೆಗೆ ಬಂದೆ.ಅಲ್ಲಿಂದ ಪುಂಖಾನುಪುಖವಾಗಿ ನಾನು ಮುಟ್ಟಿನ ಅನೇಕ ನೋವುಗಳಿಗೆ ಮುಖಾಮುಖಿಯಾದೆ.ಗೆಳತಿಯ ನೋವು, ಒಂಟಿತನ.. ಮುಟ್ಟು ನಾಮಪದವೊ, ಕ್ರಿಯಾಪದವೊ ಎಂದು ಕೇಳಿದ ವಿದ್ಯಾರ್ಥಿನಿ.. ಮುಟ್ಟಿನ ಕವರ್ ಹಿಡಿದು ನಡೆದು ಬರುವಾಗ ನನ್ನನ್ನು ನಗುತ್ತಾ ನೋಡಿದ ಜನ.. ಮುಟ್ಟಿನ ಕಾರಣಕ್ಕೆ ಸಂಭ್ರಮದಿಂದ ದೂರ ಉಳಿದ ಅಮ್ಮ, ಮುಟ್ಟಿನ ನೋವನ್ನು ಗುಟ್ಟು ಮಾಡದೇ ಸುಮ್ಮನೆ ನುಂಗಿ ನಗುವ ಅಕ್ಕ, ಮುಟ್ಟು ಮುಟ್ಟುವ ಮೊದಲೇ ಹೊರಟು ಹೋದ ಮಗಳು.. ಸರಿಯಾದ ಪ್ಯಾಡ್ ಸಿಗದೇ ಶಾಲೆಯಿಂದ ಮೂರ್ನಾಲ್ಕು ದಿನ ಹೊರ ಉಳಿಯುವ ನನ್ನ ವಿದ್ಯಾರ್ಥಿನಿಯರು.. ಮುಟ್ಟಿನ ದಿನವೂ ಅವಳನ್ನು ಸೇರಿದೆ ಎಂದು ಬೀಗುವ ಗೆಳೆಯ.. ಇವರೆಲ್ಲರೂ ನನ್ನನ್ನು ತಟ್ಟುತ್ತಾ ಹೋದರು.ಆಗ ಹುಟ್ಟಿದವು ಈ ಕವಿತೆಗಳು...ನಾನು ಮುಟ್ಟಾಗುತ್ತೇನೆ, ಅವನು ಹೊರಗಾಗುತ್ತಾನೆನಾನು ಗರ್ಭದಲ್ಲಿ ಮಗು ಹೊತ್ತಾಗಲೆಲ್ಲಾ ಅವನು ಮೆಲ್ಲ ಮೆಲ್ಲ ನಡೆಯುತ್ತಾನೆ.ನಡೆಸುತ್ತಾನೆಮಗು ಹೆರುವಾಗ ನಾನು ಚೀರುತ್ತೇನೆ ಅವನು ಅಳುತ್ತಾನೆ..ಒಮ್ಮೊಮ್ಮೆ ಅವನು ಗಂಡ ನಾನು ಹೆಂಡತಿ ಇಲ್ಲವೇನಾನು ಗಂಡ ಅವನು ಹೆಂಡತಿ..ಅಷ್ಟೇಮತ್ತೇನಿಲ್ಲ!