ಬಾಗಲಕೋಟೆ | ವಾಲಿಬಾಲ್ ಕ್ರೀಡಾಪಟುಗಳ ಅಬ್ಬರ; ಪ್ರೇಕ್ಷಕರ ಹರ್ಷೋದ್ಗಾರ
ಜಮಖಂಡಿ: ಕರ್ನಾಟಕ ರಾಜ್ಯೋತ್ಸವದ ಸಂಭ್ರಮ ಹಾಗೂ ಕನ್ನಡ ಸಂಘದ 60ನೇ ವರ್ಷದ ಷಷ್ಠ್ಯಬ್ದಿ ಮಹೋತ್ಸವದ ಅಂಗವಾಗಿ ತಾಲ್ಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿರುವ ರಾಷ್ಟ್ರಮಟ್ಟದ ಪುರುಷರ ವಾಲಿಬಾಲ್ ಪಂದ್ಯಾವಳಿಗೆ ಕ್ರೀಡಾಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಂಕಣದಲ್ಲಿ ಆಟಗಾರರ ಜಿದ್ದಾಜಿದ್ದಿನ ಹೋರಾಟ, ಪ್ರೇಕ್ಷಕರ ಕೇಕೆ, ಸಿಳ್ಳೆ ಹಾಗೂ ಚಪ್ಪಾಳೆಗಳ ಸದ್ದು ಕ್

ಜಮಖಂಡಿ: ಕರ್ನಾಟಕ ರಾಜ್ಯೋತ್ಸವದ ಸಂಭ್ರಮ ಹಾಗೂ ಕನ್ನಡ ಸಂಘದ 60ನೇ ವರ್ಷದ ಷಷ್ಠ್ಯಬ್ದಿ ಮಹೋತ್ಸವದ ಅಂಗವಾಗಿ ತಾಲ್ಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿರುವ ರಾಷ್ಟ್ರಮಟ್ಟದ ಪುರುಷರ ವಾಲಿಬಾಲ್ ಪಂದ್ಯಾವಳಿಗೆ ಕ್ರೀಡಾಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಂಕಣದಲ್ಲಿ ಆಟಗಾರರ ಜಿದ್ದಾಜಿದ್ದಿನ ಹೋರಾಟ, ಪ್ರೇಕ್ಷಕರ ಕೇಕೆ, ಸಿಳ್ಳೆ ಹಾಗೂ ಚಪ್ಪಾಳೆಗಳ ಸದ್ದು ಕ್ರೀಡಾಕೂಟಕ್ಕೆ ಹೊಸ ಕಳೆ ನೀಡಿದೆ.ಪಂದ್ಯ ಆರಂಭವಾಗುತ್ತಿದ್ದಂತೆ ಆಟಗಾರರು ತಮ್ಮ ತಂಡದ ಗೆಲುವಿಗಾಗಿ ತೀವ್ರ ಪೈಪೋಟಿ ನಡೆಸಿದರು. ಎದುರಾಳಿ ತಂಡದ ದಾಳಿಯನ್ನು ತಡೆಯಲು ರಕ್ಷಣಾತ್ಮಕ ಆಟ ಪ್ರದರ್ಶಿಸಿದ ಆಟಗಾರರು, ಅವಕಾಶ ಸಿಕ್ಕಾಗಲೆಲ್ಲ ಆಕ್ರಮಣಕಾರಿ ಹೊಡೆತಗಳ ಮೂಲಕ ಅಂಕಗಳನ್ನು ಕಲೆಹಾಕಿದರು. ನೆಟ್ ಸಮೀಪದ ಜಿಗಿತ, ಬಲಿಷ್ಠ ಸ್ಮ್ಯಾಷ್ ಹಾಗೂ ಚುರುಕಿನ ರಕ್ಷಣಾತ್ಮಕ ಆಟಗಳು ಪ್ರೇಕ್ಷಕರನ್ನು ರೋಮಾಂಚನಗೊಳಿಸಿದವು.ಚೆಂಡು ಗಾಳಿಯಲ್ಲಿ ಹಾರುತ್ತಿದ್ದಂತೆ ಪ್ರೇಕ್ಷಕರ ಕಣ್ಣುಗಳು ಅಂಕಣದತ್ತ ನೆಟ್ಟಿದ್ದವು. ಆಟಗಾರರ ಅದ್ಭುತ ಪ್ರದರ್ಶನಕ್ಕೆ ಪ್ರೇಕ್ಷಕರು ಕೆಕೆ ಕೂಗುತ್ತ, ಸಿಳ್ಳೆ ಹೊಡೆಯುತ್ತ, ಚಪ್ಪಾಳೆ ತಟ್ಟುತ್ತ ಹುರಿದುಂಬಿಸಿದರು. ನಿರ್ಣಾಯಕ ಕ್ಷಣಗಳಲ್ಲಿ ಅಂಕ ಗಳಿಸಿದಾಗ ಕ್ರೀಡಾಂಗಣದಲ್ಲಿ ಹರ್ಷೋದ್ಗಾರ ಮುಗಿಲು ಮುಟ್ಟಿತು. ಪ್ರತಿ ರೋಚಕ ತಿರುವು ಪ್ರೇಕ್ಷಕರಲ್ಲಿ ಕುತೂಹಲ ಹಾಗೂ ಉತ್ಸಾಹವನ್ನು ಹೆಚ್ಚಿಸಿತು.ಗೆಲುವಿನ ಸಂಭ್ರಮದಲ್ಲಿ ಆಟಗಾರರ ಮುಖದಲ್ಲಿ ಆತ್ಮವಿಶ್ವಾಸ ಮಿನುಗಿದರೆ, ಸೋಲಿನ ಕ್ಷಣದಲ್ಲಿಯೂ ಕ್ರೀಡಾಸ್ಫೂರ್ತಿ ಮೆರೆದ ತಂಡಗಳಿಗೆ ಪ್ರೇಕ್ಷಕರು ಪ್ರೋತ್ಸಾಹ ನೀಡಿದರು. ಕ್ರೀಡೆ ಕೇವಲ ಗೆಲುವು-ಸೋಲಿನ ಆಟವಲ್ಲ, ಅದು ಶಿಸ್ತು, ಒಗ್ಗಟ್ಟು, ಪರಿಶ್ರಮ ಹಾಗೂ ಪರಸ್ಪರ ಗೌರವದ ಸಂಕೇತ ಎಂಬ ಭಾವನೆ ಕ್ರೀಡಾಂಗಣದಲ್ಲಿ ಅನಾವರಣಗೊಂಡಿತು.ವಾಲಿಬಾಲ್ ಫಲಿತಾಂಶ : ಇಂಡಿಯನ್ ಆರ್ಮಿ ತಂಡ 2-0 ಸೆಟ್ ನಲ್ಲಿ ಇನ್ ಕಮ್ ಟ್ಯಾಕ್ಸ್ ಪುಣೆ ಪರಾಭವಗೊಂಡಿತು, ಜಮಖಂಡಿ ಟೈಗರ್ಸ್ 2-0 ಸೆಟ್ ಗಳಲ್ಲಿ ಲೋಯಲ್ ಗಡಚಿರೊಳ್ಳಿ ತಂಡ ಸೋತಿತು, ಸ್ಪೋರ್ಟ್ಸ್ ಹಾಸ್ಟೇಲ್ ಬೆಂಗಳೂರ 2-0 ಸಾಂಗಲಿ ಸೋತಿತು, ಸ್ಪೋರ್ಟ್ಸ್ ಹಾಸ್ಟೇಲ್ ಬೆಳಗಾವಿ 0-2 ಸೆಟ್ ಹೈದ್ರಾಬಾದ ರಾಯಲ್ ತಂಡ ಗೆದ್ದಿತು, ಜಮಖಂಡಿ ಟೈಗರ್ಸ್ 2-1 ಕರ್ನಾಟಕ ಸ್ಟೇಟ್ ಪೊಲೀಸ್ ಬೆಂಗಳೂರ ಸೋತಿತು, ಲೋಯಲ್ ಮೆಟಲ್ 2-0 ಸ್ಪೋರ್ಟ್ಸ್ ಹಾಸ್ಟೇಲ್ ಬೆಂಗಳೂರ ಸೋತಿತು, ಜಯಂತ ಸ್ಪೋಟ್ಸ್ ಕೊಲ್ಲಾಪೂರ 0-2 ಇಂಡಿಯನ್ ಆರ್ಮಿ ಸಿಕಂದರಾಬಾದ್ ಗೆದ್ದಿತು, ಕರ್ನಾಟಕ ಸ್ಟೇಟ್ ಪೊಲೀಸ್ 2-0ಲಾಯಲ್ ಮೆಟಲ್ ಗಡಚಿರೊಳ್ಳಿ ಸೋತಿತು.261107-19-1957431788