ಏಳು ಮಂದಿಯ ಹತ್ಯೆ ಪೂರ್ವಯೋಜಿತ ಕೃತ್ಯ: ಪ್ರಿಯಾಂಕ್ ಖರ್ಗೆ
ಪ್ರಜಾವಾಣಿ ವಾರ್ತೆಬೆಂಗಳೂರು: ‘ಏಳು ಮಂದಿಯ ಹತ್ಯೆ ಪ್ರಕರಣವು ಪೂರ್ವಯೋಜಿತ ಕೃತ್ಯವಾಗಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ’ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆರೋಪಿಯು ಬಹಳ ಯೋಜಿತವಾಗಿ ಹೆಂಡತಿ ಕಡೆಯ ಕುಟುಂಬ ಸದಸ್ಯರನ್ನು ಮಾತ್ರ ವಿಕೃತ ಮನಸ್ಸಿನಿಂದ ಕೊಲೆ ಮಾಡಿದ್ದಾನೆ. ಅದಕ್ಕೆ ಆತ ಮಗಳನ್ನು ಕ

ಪ್ರಜಾವಾಣಿ ವಾರ್ತೆಬೆಂಗಳೂರು: ‘ಏಳು ಮಂದಿಯ ಹತ್ಯೆ ಪ್ರಕರಣವು ಪೂರ್ವಯೋಜಿತ ಕೃತ್ಯವಾಗಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ’ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆರೋಪಿಯು ಬಹಳ ಯೋಜಿತವಾಗಿ ಹೆಂಡತಿ ಕಡೆಯ ಕುಟುಂಬ ಸದಸ್ಯರನ್ನು ಮಾತ್ರ ವಿಕೃತ ಮನಸ್ಸಿನಿಂದ ಕೊಲೆ ಮಾಡಿದ್ದಾನೆ. ಅದಕ್ಕೆ ಆತ ಮಗಳನ್ನು ಕೂಡ ಬ್ರೈನ್ ವಾಶ್ ಮಾಡಿದ್ದಾನೆ. ಮಗಳು ಸಹ ಇದಕ್ಕೆ ಪ್ರೋತ್ಸಾಹ ನೀಡಿದ್ದಾಳೆ’ ಎಂದು ಹೇಳಿದರು.ಖಿನ್ನತೆಗೆ ಒಳಗಾಗಿದ್ದ: ‘ಆಸ್ತಿ ವಿಚಾರಕ್ಕೆ ಈ ಕೊಲೆ ನಡೆದಿದೆಯೋ ಅಥವಾ ಆರೋಪಿ ಮಾನಸಿಕವಾಗಿ ಅಸ್ವಸ್ಥನಾಗಿದ್ದಾನೆಯೇ ಎನ್ನುವುದು ಗೊತ್ತಾಗಿಲ್ಲ. ಒಬ್ಬ ವ್ಯಕ್ತಿ ಈ ಮಟ್ಟಕ್ಕೆ ಇಳಿದಿದ್ದಾನೆ ಎಂದರೆ ಆತ ಮಾನಸಿಕವಾಗಿ ಸ್ವಲ್ಪ ಖಿನ್ನತೆಗೆ ಒಳಗಾಗಿರಬಹುದು. ಯಾವುದನ್ನೂ ನಿರ್ಲಕ್ಷಿಸುವುದಿಲ್ಲ, ಆರೋಪಿಯ ಉದ್ದೇಶ ಏನೆಂದು ಗೊತ್ತಾಗಬೇಕು’ ಎಂದರು.ಆರೋಪಿಯ ಮನೆಯಲ್ಲಿ ಪತ್ತೆಯಾಗಿರುವ ಡೈರಿಯಲ್ಲಿ ಪೊಲೀಸ್ ಅಧಿಕಾರಿಯ ಮೊಬೈಲ್ ಸಂಖ್ಯೆ ಸಿಕ್ಕಿರುವ ಬಗ್ಗೆ ಪ್ರತಿಕ್ರಿಯಿಸಿ, ‘ಪೊಲೀಸ್ ಅಧಿಕಾರಿಗಳ ಮೊಬೈಲ್ ಸಂಖ್ಯೆ ಸಾರ್ವಜನಿಕವಾಗಿ ಲಭ್ಯ ಇರುತ್ತದೆ. ಹಂತಕನ ಡೈರಿಯಲ್ಲಿ ಪೊಲೀಸ್ ಅಧಿಕಾರಿಯ ಮೊಬೈಲ್ ಸಂಖ್ಯೆಯಿದ್ದ ಮಾತ್ರಕ್ಕೆ ಅಧಿಕಾರಿ ಕೊಲೆಗೆ ಸಹಕಾರ ನೀಡಿದ್ದಾರೆ ಅಂತ ಅಲ್ಲ. ತುರ್ತು ಸೇವೆಯ ನಂಬರ್, ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್, ಹೆಡ್ ಕಾನ್ಸ್ಟೆಬಲ್ ನಂಬರ್ ಇಟ್ಟುಕೊಳ್ಳುವುದು ಸಹಜ. ಆ ಕಾರಣಕ್ಕೆ ಅವರೆಲ್ಲಾ ಅಪರಾಧ ಕೃತ್ಯಕ್ಕೆ ಸಹಕಾರ ನೀಡಿದ್ದಾರೆ ಎಂಬುದಾಗಿ ಭಾವಿಸಬಾರದು’ ಎಂದರು.261107-4-786344254