ಕಾಪಿ ಪೇಸ್ಟ್ ಉತ್ತರ ಬೇಡ, ತೈಲ ಕಂಪನಿಗಳಿಗೆ ಸಚಿವ ರಿಜ್ವಾನ್ ಅರ್ಷದ್ ತಿರುಗೇಟು
ಬೆಂಗಳೂರು: ಪೆಟ್ರೋಲ್ನಲ್ಲಿ ನಿಗದಿಗಿಂತ ಹೆಚ್ಚಿನ ಪ್ರಮಾಣದ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬ ರಾಜ್ಯ ಸರ್ಕಾರದ ಆರೋಪವನ್ನು ತಳ್ಳಿಹಾಕಿರುವ ತೈಲ ಮಾರುಕಟ್ಟೆ ಕಂಪನಿಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ತಿರುಗೇಟು ನೀಡಿದ್ದಾರೆ. ಕಂಪನಿಗಳು ನೀಡಿರುವ ಸ್ಪಷ್ಟನೆ ‘ಕಟ್-ಕಾಪಿ-ಪೇಸ್ಟ್ ಉತ್ತರ’ ಎಂದು ಟೀಕಿಸಿರುವ ಅವರು, ಸೋಮವಾರ ಈ ಕುರಿತು
ಬೆಂಗಳೂರು: ಪೆಟ್ರೋಲ್ನಲ್ಲಿ ನಿಗದಿಗಿಂತ ಹೆಚ್ಚಿನ ಪ್ರಮಾಣದ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬ ರಾಜ್ಯ ಸರ್ಕಾರದ ಆರೋಪವನ್ನು ತಳ್ಳಿಹಾಕಿರುವ ತೈಲ ಮಾರುಕಟ್ಟೆ ಕಂಪನಿಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ತಿರುಗೇಟು ನೀಡಿದ್ದಾರೆ. ಕಂಪನಿಗಳು ನೀಡಿರುವ ಸ್ಪಷ್ಟನೆ ‘ಕಟ್-ಕಾಪಿ-ಪೇಸ್ಟ್ ಉತ್ತರ’ ಎಂದು ಟೀಕಿಸಿರುವ ಅವರು, ಸೋಮವಾರ ಈ ಕುರಿತು ದೇಶದ ಜನರಿಗೆ ವಿವರವಾದ ಪ್ರತಿಕ್ರಿಯೆ ನೀಡುವುದಾಗಿ ಹೇಳಿದ್ದಾರೆ.ಪೆಟ್ರೋಲ್ನಲ್ಲಿ ಹೆಚ್ಚುವರಿ ಎಥೆನಾಲ್: ಗ್ರಾಹಕರ ನಷ್ಟಕ್ಕೆ ಹೊಣೆ ಯಾರು?We have taken note of your cut-copy-paste response.I don’t wish to spoil your Diwali weekend. On Monday, I will share a detailed response with the entire nation.Until then, enjoy the festivities. Happy Diwali!P.S. For you to know, we are the Government, an official source,… pic.twitter.com/uD2pE2ORPo— Rizwan Arshad (@ArshadRizwan) November 7, 2026 ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿರುವ ಅವರು, ‘ನಿಮ್ಮ ಕಟ್-ಕಾಪಿ-ಪೇಸ್ಟ್ ಉತ್ತರವನ್ನು ಗಮನಿಸಿದ್ದೇವೆ. ದೀಪಾವಳಿ ವಾರಾಂತ್ಯವನ್ನು ಹಾಳುಮಾಡಲು ನನಗೆ ಇಷ್ಟವಿಲ್ಲ. ಸೋಮವಾರ ಇಡೀ ದೇಶದ ಮುಂದೆ ವಿವರವಾದ ಉತ್ತರ ನೀಡುತ್ತೇನೆ. ಅಲ್ಲಿಯವರೆಗೆ ಹಬ್ಬವನ್ನು ಆನಂದಿಸಿ. ದೀಪಾವಳಿ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ.‘ನಾವು ಸರ್ಕಾರ. ಅಧಿಕೃತ ಮೂಲ. ಯಾವುದೋ ಅಪರಿಚಿತ ಸಂಸ್ಥೆಯಲ್ಲ’ ಎಂದೂ ಅವರು ಪೋಸ್ಟ್ನಲ್ಲಿ ತೈಲ ಕಂಪನಿಗಳಿಗೆ ತಿರುಗೇಟು ನೀಡಿದ್ದಾರೆ. ಇಂಡಿಯನ್ ಆಯಿಲ್, ಹಿಂದೂಸ್ತಾನ್ ಪೆಟ್ರೋಲಿಯಂ ಮತ್ತು ಭಾರತ್ ಪೆಟ್ರೋಲಿಯಂ ಕಂಪನಿಗಳ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳನ್ನೂ ಅವರು ತಮ್ಮ ಪೋಸ್ಟ್ನಲ್ಲಿ ಟ್ಯಾಗ್ ಮಾಡಿದ್ದಾರೆ.E20 420 ಆಗಿದೆ: ಎಥೆನಾಲ್ ಮಿಶ್ರಿತ ಪೆಟ್ರೋಲ್ ಕುರಿತು ಕೇಂದ್ರಕ್ಕೆ ರಾಹುಲ್ ತರಾಟೆಕರ್ನಾಟಕದ ವಿವಿಧ ಪೆಟ್ರೋಲ್ ಬಂಕ್ಗಳಿಂದ ಸಂಗ್ರಹಿಸಿದ ಮಾದರಿಗಳಲ್ಲಿ ಶೇ 20ಕ್ಕಿಂತ ಹೆಚ್ಚಿನ ಎಥೆನಾಲ್ ಪತ್ತೆಯಾಗಿದೆ ಎಂದು ರಾಜ್ಯ ಸರ್ಕಾರ ಆರೋಪಿಸಿತ್ತು. ಸಚಿವ ರಿಜ್ವಾನ್ ಅರ್ಷದ್ ನವೆಂಬರ್ 6ರಂದು ಪ್ರಕಟಿಸಿದ ವಿವರಗಳ ಪ್ರಕಾರ, ಇಂಡಿಯನ್ ಆಯಿಲ್ನ ಮಾದರಿಯಲ್ಲಿ ಶೇ 31.2 ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂನ ಮಾದರಿಯಲ್ಲಿ ಶೇ 30.5ರಷ್ಟು ಎಥೆನಾಲ್ ಪತ್ತೆಯಾಗಿತ್ತು. ರಾಜ್ಯ ಸರ್ಕಾರದ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಜಂಟಿ ಸ್ಪಷ್ಟನೆ ನೀಡಿದ್ದವು. ದೇಶದ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪರೀಕ್ಷಿಸಿದ 893 ಮಾದರಿಗಳ ಪೈಕಿ ಕರ್ನಾಟಕದ 56 ಮಾದರಿಗಳೂ ಸೇರಿದ್ದು, ಎಲ್ಲದರಲ್ಲೂ ಎಥೆನಾಲ್ ಪ್ರಮಾಣ ನಿಗದಿತ ಶೇ 19ರಿಂದ 21ರ ಮಿತಿಯಲ್ಲಿದೆ ಎಂದು ಕಂಪನಿಗಳು ಹೇಳಿದ್ದವು. ರಾಜ್ಯ ಸರ್ಕಾರದ ಪರೀಕ್ಷಾ ವಿಧಾನ ನಿಗದಿತ ಮಾನದಂಡಗಳಿಗೆ ಅನುಗುಣವಾಗಿಲ್ಲ ಎಂದು ಆಕ್ಷೇಪಿಸಿದ್ದ ಕಂಪನಿಗಳು, ರಾಜ್ಯ ಸರ್ಕಾರದೊಂದಿಗೆ ಜಂಟಿ ಮತ್ತು ಪಾರದರ್ಶಕ ಪರೀಕ್ಷೆ ನಡೆಸಲು ಸಿದ್ಧವಿರುವುದಾಗಿ ತಿಳಿಸಿದ್ದವು.ಶೇ 31ರಷ್ಟು ಎಥೆನಾಲ್: ರಾಜ್ಯ ಸರ್ಕಾರದ ಆರೋಪ ತಳ್ಳಿಹಾಕಿದ ತೈಲ ಕಂಪನಿಗಳು