ಬಜೆಟ್, VFX ಬದಲು ರಾಮ-ಸೀತೆಯ ಗುಣಗಳ ಬಗ್ಗೆ ಚರ್ಚೆಯಾಗಲಿ: ನಟ ಸಲ್ಮಾನ್ ಖಾನ್
ನಿತೇಶ್ ತಿವಾರಿ ನಿರ್ದೇಶನದ ರಣಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ನವೆಂಬರ್ 5ರಂದು ತೆರೆಕಂಡಿದ್ದು, 2026ರಲ್ಲಿ ಬಿಡುಗಡೆಯಾದ ಹಿಂದಿ ಸಿನಿಮಾಗಳ ಪೈಕಿ ಎರಡನೇ ಅತಿ ದೊಡ್ಡ ಬಾಕ್ಸ್ ಆಫೀಸ್ ಓಪನಿಂಗ್ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ.ಈ ನಡುವೆ, ಈ ಬಿಗ್ ಬಜೆಟ್ ಸಿನಿಮಾದ ಸುತ್ತ ಕೇಳಿಬರುತ್ತಿರುವ ₹4,

ನಿತೇಶ್ ತಿವಾರಿ ನಿರ್ದೇಶನದ ರಣಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ನವೆಂಬರ್ 5ರಂದು ತೆರೆಕಂಡಿದ್ದು, 2026ರಲ್ಲಿ ಬಿಡುಗಡೆಯಾದ ಹಿಂದಿ ಸಿನಿಮಾಗಳ ಪೈಕಿ ಎರಡನೇ ಅತಿ ದೊಡ್ಡ ಬಾಕ್ಸ್ ಆಫೀಸ್ ಓಪನಿಂಗ್ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ.ಈ ನಡುವೆ, ಈ ಬಿಗ್ ಬಜೆಟ್ ಸಿನಿಮಾದ ಸುತ್ತ ಕೇಳಿಬರುತ್ತಿರುವ ₹4,000 ಕೋಟಿ ನಿರ್ಮಾಣ ವೆಚ್ಚ ಹಾಗೂ ವಿಎಫ್ಎಕ್ಸ್ ಪ್ರಚಾರದ ಕುರಿತು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಪ್ರತಿಕ್ರಿಯಿಸಿದ್ದಾರೆ. ‘ಮಹಾಕಾವ್ಯ ಆಧಾರಿತ ಸಿನಿಮಾವೊಂದನ್ನು ನಿರ್ಮಾಣ ವೆಚ್ಚ ಮತ್ತು ತಂತ್ರಜ್ಞಾನಕ್ಕೆ ಸೀಮಿತಗೊಳಿಸುವ ಬದಲು, ಅದು ಹೇಳುವ ಕಥೆ ಹಾಗೂ ಜೀವಂತಗೊಳಿಸುವ ಪಾತ್ರಗಳ ಆಧಾರದ ಮೇಲೆ ಚರ್ಚಿಸಬೇಕು’ ಎಂದಿದ್ದಾರೆ."#Ramayana movie ke baat karni hai to Ramayana par karo, na ki cost of making or VFX par. Ram ke upar baat karo, uski quality par. #Maatrubhumi me jo hero hai usme sab qualities hai Ram jaise" - #SalmanKhan pic.twitter.com/5b8zaKeKU0— $@M (@SAMTHEBESTEST_) November 6, 2026 ತಮ್ಮ ಮುಂಬರುವ ‘ಮಾತೃಭೂಮಿ’ ಸಿನಿಮಾದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸಲ್ಮಾನ್ ಖಾನ್, ರಾಮಾಯಣ ಚಿತ್ರದ ಕುರಿತ ಚರ್ಚೆಯು ಅದರ ಕಥಾವಸ್ತು ಹಾಗೂ ಮೌಲ್ಯಗಳ ಮೇಲೆಯೇ ಆಗಬೇಕೇ ಹೊರತು ವಿಎಫ್ಎಕ್ಸ್ ಅಥವಾ ಬಜೆಟ್ ಮೇಲಲ್ಲ. ₹4,000 ಕೋಟಿ ವೆಚ್ಚ ಹಾಗೂ ವಿಎಫ್ಎಕ್ಸ್ ಎಂಬ ಪ್ರಚಾರದ ಶೈಲಿ ಸೂಕ್ತವಲ್ಲ ಎಂಬುದು ನನ್ನ ಭಾವನೆ. ರಾಮಾಯಣದ ಚರ್ಚೆಗಳು ಶ್ರೀರಾಮ, ಸೀತೆ ಮತ್ತು ರಾವಣನ ಪಾತ್ರಗಳ ಸುತ್ತಲೂ ಇರಬೇಕು’ ಎಂದಿದ್ದಾರೆ.‘ಮಾತೃಭೂಮಿ’ ಚಿತ್ರದ ನಾಯಕನಲ್ಲೂ ಶ್ರೀರಾಮನ ಗುಣಗಳು...ಶ್ರೀರಾಮನ ಸದ್ಗುಣಗಳನ್ನು ನೆನಪಿಸಿದ ಸಲ್ಮಾನ್, ‘ಶ್ರೀರಾಮ ಕೇವಲ ಒಬ್ಬ ಯೋಧನಷ್ಟೇ ಅಲ್ಲ, ಆತನಲ್ಲಿದ್ದ ಅಪಾರ ಗುಣಗಳ ಬಗ್ಗೆಯೂ ಚರ್ಚೆಯಾಗಬೇಕು. ಆತ ಒಬ್ಬ ಆದರ್ಶ ಪುತ್ರ, ಉತ್ತಮ ಪತಿ, ಶ್ರೇಷ್ಠ ತಂದೆ ಹಾಗೂ ಧೀರ ಯೋಧನಾಗಿದ್ದ. ನನ್ನ ‘ಮಾತೃಭೂಮಿ’ ಚಿತ್ರದ ನಾಯಕನ ಪಾತ್ರದಲ್ಲೂ ಶ್ರೀರಾಮನ ಈ ಎಲ್ಲ ಸದ್ಗುಣಗಳನ್ನು ಕಾಣಬಹುದು’ ಎಂದು ಹೇಳಿದ್ದಾರೆ.