ಕನಕಗಿರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಸಂಭ್ರಮಕ್ಕೆ ಸಿದ್ಧತೆ
ಕನಕಗಿರಿ: ಐತಿಹಾಸಿಕ ಹಾಗೂ ಸಾಂಸ್ಕೃತಿಕವಾಗಿ ಬಹಳಷ್ಟು ವೈಶಿಷ್ಟ ಪರಂಪರೆ ಹೊಂದಿರುವ ಸುವರ್ಣಗಿರಿ ಎಂದು ರಾಜರ ಕಾಲದಲ್ಲಿ ಖ್ಯಾತಿ ಪಡೆದಿದ್ದ ಕನಕಗಿರಿಯಲ್ಲಿ ನವೆಂಬರ್ ತಿಂಗಳಿನಲ್ಲಿಯೇ ಕನ್ನಡದ ತೇರು ಎಳೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ.ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ತಾಲ್ಲೂಕು ಮಟ್ಟದ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನ ಶನಿವಾರ ನಡೆಯಲಿದ್ದು, ಪಟ

ಕನಕಗಿರಿ: ಐತಿಹಾಸಿಕ ಹಾಗೂ ಸಾಂಸ್ಕೃತಿಕವಾಗಿ ಬಹಳಷ್ಟು ವೈಶಿಷ್ಟ ಪರಂಪರೆ ಹೊಂದಿರುವ ಸುವರ್ಣಗಿರಿ ಎಂದು ರಾಜರ ಕಾಲದಲ್ಲಿ ಖ್ಯಾತಿ ಪಡೆದಿದ್ದ ಕನಕಗಿರಿಯಲ್ಲಿ ನವೆಂಬರ್ ತಿಂಗಳಿನಲ್ಲಿಯೇ ಕನ್ನಡದ ತೇರು ಎಳೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ.ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ತಾಲ್ಲೂಕು ಮಟ್ಟದ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನ ಶನಿವಾರ ನಡೆಯಲಿದ್ದು, ಪಟ್ಟಣವು ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಪಟ್ಟಣದ ಎಲ್ಲಾ ವೃತ್ತಗಳನ್ನು ವಿದ್ಯುತ್ ದೀಪಗಳಿಂದ ಅಲಂಕೃತಗೊಳಿಸಲಾಗಿದೆ. ಎಲ್ಲೆಡೆ ಕನ್ನಡದ ಬಾವುಟ ಕಟ್ಟಲಾಗಿದೆ. ವೃತ್ತಗಳಲ್ಲಿ ಕನ್ನಡದ ಬಟ್ಟೆಯಿಂದ ಅಲಂಕಾರ ಮಾಡಲಾಗಿದೆ. ಮುಖ್ಯವೇದಿಕೆಗೆ ಅನುಭಾವಿ ಚಿದಾನಂದ ಅವಧೂತರ ಹಾಗೂ ಮಹಾಮಂಟಪಕ್ಕೆ ರಾಜಾ ಮಾತೆ ರಾಣಿ ಗೌರಮ್ಮ ಅವರ ಹೆಸರಿಡಲಾಗಿದೆ.ಗುಜ್ಜಲ ವಂಶದ ರಾಜಾ ಉಡಚಪ್ಪ ನಾಯಕ, ಸ್ವಾತಂತ್ರ್ಯ ಹೋರಾಟಗಾರ ಜಯತೀರ್ಥ ರಾಜಪುರೋಹಿತರು, ನವಲಿ ತಾಂಡಾದ ಜೇಮ್ಮಾ ನಾಯಕ್, ವೆಂಕೋಬಚಾರ್ಯ ಜೋಶಿ, ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ದಿ. ಮಹಾಂತಯ್ಯ ಹಿರೇಮಠ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಭಾಷಾಸಾಬ (ಸಜ್ಜಪ್ಪ ಮಾಸ್ತರ), ನಾರಾಯಣರೆಡ್ಡಿ ಶಿವನಗುಂಡಿ, ರಾಮಚಂದ್ರಪ್ಪ ತುಪ್ಪದ, ಸುಳೇಕಲ್ನ ದಿ.ಸಾವಿತ್ರಮ್ಮ ಭುವನೇಶ್ವರಪ್ಪ ತಾತನವರ ಹೆಸರಿನಲ್ಲಿ ರಾಜ ಬೀದಿಯಲ್ಲಿ ಒಂಬತ್ತು ಮಹಾದ್ವಾರಗಳನ್ನು ನಿರ್ಮಿಸಲಾಗಿದೆ.ಕನಕಾಚಲಪತಿ ದೇವಸ್ಥಾನದ ಆವರಣದಲ್ಲಿ ನಿರ್ಮಾಣ ಮಾಡಿರುವ ವೇದಿಕೆಯ ಮುಂಭಾಗದಲ್ಲಿ ಬೆಳಿಗ್ಗೆ 7 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ರಾಷ್ಟ್ರ ಧ್ವಜಾರೋಹಣ, ಪರಿಷತ್ತಿನ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ ಅವರು ಪರಿಷತ್ತಿನ ಧ್ವಜಾರೋಹಣ ಹಾಗೂ ಕಸಾಪ ತಾಲ್ಲೂಕು ಅಧ್ಯಕ್ಷ ಮೆಹಬೂಬಹುಸೇನ ಅವರಿಂದ ಕನ್ನಡ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ.ಕಲ್ಮಠದ ಮುಂದೆ ಸಮ್ಮೇಳನದ ಸರ್ವಾಧ್ಯಕ್ಷ ವೆಂಕಟೇಶ ಕೆ.ಜನಾದ್ರಿ ಅವರ ಮೆರವಣಿಗೆ, ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರದ ಮೆರವಣಿಗೆ ವಿವಿಧ ಜನಪದ ಕಲಾತಂಡಗಳೊಂದಿಗೆ ರಾಜಬೀದಿ ಮೂಲಕ ದೇವಸ್ಥಾನದ ವರೆಗೆ ನಡೆಯಲಿದೆ. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತನುಶ್ರೀ ಟಿ.ಜೆ. ರಾಮಚಂದ್ರ ಅವರು ಚಾಲನೆ ನೀಡುವರು. ಕಲ್ಮಠದ ಚನ್ನಮಲ್ಲಸ್ವಾಮಿ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಕಂಠಿರಂಗ ನಾಯಕ ಸೇರಿದಂತೆ ಅಧಿಕಾರಿಗಳು ಭಾಗವಹಿಸುವರು.ಸಮ್ಮೇಳನದಲ್ಲಿ ಭರತನಾಟ್ಯ, ವಿದ್ಯಾರ್ಥಿಗಳ ಸಾಮೂಹಿಕ ನೃತ್ಯ, ಜನಪದ ಗೀತೆ, ಸುಗ್ಗಿ ಹಾಡು, ಸಂಗೀತ, ತಬಲಾ ವಾದನ, ಮಿಮಿಕ್ರಿ ಸೇರಿದಂತೆ ವಿವಿಧ ಜಾನಪದ ಕಾರ್ಯಕ್ರಮದ ಜತೆಗೆ ಗದಗ ಜಿಲ್ಲೆಯ ಕೊತಬಾಳದ ಅರುಣೋದಯ ಕಲಾ ತಂಡದವರಿಂದ ಜನಪದ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿದೆ.ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಒಂದು ವಾರದ ಹಿಂದೆಯಷ್ಟೇ ಧ್ವಜಾರೋಹಣ ನೆರವೇರಿಸಿ ಕನ್ನಡ ತಾಯಿ ಹಾಗೂ ತಾಯ್ನೆಲಕ್ಕಾಗಿ ದುಡಿದ ಮಹನೀಯರನ್ನು ಸ್ಮರಿಸಲಾಗಿದೆ. ಈಗ ಅದೇ ತಿಂಗಳಲ್ಲೇ ತಾಲ್ಲೂಕಿನ ಎರಡನೇ ಸಾಹಿತ್ಯ ಸಮ್ಮೇಳನದ ಖುಷಿ ಕಣ್ತುಂಬಿಕೊಳ್ಳುವ ಅವಕಾಶ ಲಭಿಸಿದೆ.ಸಮ್ಮೇಳನದಲ್ಲಿ ಏನೇನು?•ಬೆಳಿಗ್ಗೆ 10.30: ವೇದಿಕೆ ಕಾರ್ಯಕ್ರಮ ಉದ್ಘಾಟನೆ. ಕಲ್ಮಠದ ಚನ್ನಮಲ್ಲಸ್ವಾಮಿ, ಸುಳೇಕಲ್ ಬೃಹನ್ಮಠದ ಭುವನೇಶ್ವರಯ್ಯ ತಾತನವರ ಸಾನ್ನಿಧ್ಯ•ಶರಣೇಗೌಡ ಪಾಟೀಲ ಆಶಯ, ಸಚಿವ ಶಿವರಾಜ ತಂಗಡಗಿ ಅವರಿಂದ ದಿಕ್ಸೂಚಿ ಭಾಷಣ•ವಾಗ್ಮಿ ಬೆಂಗಳೂರಿನ ರವಿ ಕಮಲಾಪುರ ಅವರಿಂದ ಉದ್ಘಾಟನೆ. ಸಂಸದ ಕೆ.ರಾಜಶೇಖರ ಹಿಟ್ನಾಳ ಅವರಿಂದ ಭುವನೇಶ್ವರಿದೇವಿಗೆ ಪುಷ್ಪಾರ್ಚನೆ•ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತನುಶ್ರೀ ಟಿಜೆ ರಾಮಚಂದ್ರ ಅವರಿಂದ ಸಮ್ಮೇಳನದ ಅಧ್ಯಕ್ಷರ ನುಡಿ ಪುಸ್ತಕ ಬಿಡುಗಡೆಗೊಳಿಸುವರು•‘ಕನಕಗಿರಿ ಪರಂಪರೆ ಮತ್ತು ಪ್ರಗತಿ’ ಕವಿಗೋಷ್ಠಿ, ಸಮ್ಮೇಳನಾಧ್ಯಕ್ಷರ ಸಂವಾದ, ಬಹಿರಂಗ ಅಧಿವೇಶನ ನಡೆಯಲಿದೆಉದರ್ ಸಜ್ಜಕ್ಕನಕಾಚಲಪತಿ ದೇವಸ್ಥಾನ ಪಕ್ಕದಲ್ಲಿ ಸಾಹಿತ್ಯ ಪರಿಷತ್ತಿನ ವತಿಯಿಂದ ಊಟದ ವ್ಯವಸ್ಥೆ ಮಾಡಲಾಗಿದೆ.ಉದರ್ ಸಜ್ಜಕ್, ಬದನೆಕಾಯಿ ಪಲ್ಲೆ, ರೊಟ್ಟಿ, ಹೆಸರು ಕಾಳು, ಚಿತ್ರಾನ್ನ, ಅನ್ನ-ಸಾಂಬಾರು, ಮಜ್ಜಿಗೆ, ಪುಡಿ, ಚಟ್ನಿ ವ್ಯವಸ್ಥೆ ಮಾಡಲಾಗಿದೆ ಎಂದು ಪರಿಷತ್ತಿನ ಕೋಶಾಧ್ಯಕ್ಷ ರವಿ ಬಲಿಜ, ಗೌರವ ಕಾರ್ಯದರ್ಶಿಗಳಾದ ಕನಕರೆಡ್ಡಿ ಕೆರಿ, ತಿಪ್ಪಣ್ಣ ಮಡಿವಾಳರ ತಿಳಿಸಿದ್ದಾರೆ.261107-35-547786281