ಯೆಮೆನ್: ವೈಮಾನಿಕ ದಾಳಿಯಲ್ಲಿ 22 ಸಾವು
ಕೈರೊ: ಯೆಮೆನ್ ರಾಜಧಾನಿ ಸನಾ ಸಮೀಪ ಶನಿವಾರ ನಡೆದ ವೈಮಾನಿಕ ದಾಳಿಯಲ್ಲಿ 22 ಮಂದಿ ಮೃತಪಟ್ಟಿದ್ದು, 30 ಜನ ಗಾಯಗೊಂಡಿದ್ದಾರೆ ಎಂದು ಯೆಮೆನ್ನ ಹೂಥಿ ನಿಯಂತ್ರಿತ ಆರೋಗ್ಯ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.ಅಲ್–ಶರೀಯಾ ಗ್ರಾಮದ ಮೇಲೆ ಸೌದಿ ಅರೇಬಿಯಾ ಈ ದಾಳಿ ನಡೆಸಿದೆ ಎಂದು ಆರೋಗ್ಯ ಸಚಿವಾಲಯದ ವಕ್ತಾರ ಅನೀಸ್ ಅಲಸ್ಬಾಹಿ ಅವರು ಆರೋಪಿಸಿದ್ದಾರೆ. ಆದರೆ ಈ ಬಗ್ಗೆ ಸ
ಕೈರೊ: ಯೆಮೆನ್ ರಾಜಧಾನಿ ಸನಾ ಸಮೀಪ ಶನಿವಾರ ನಡೆದ ವೈಮಾನಿಕ ದಾಳಿಯಲ್ಲಿ 22 ಮಂದಿ ಮೃತಪಟ್ಟಿದ್ದು, 30 ಜನ ಗಾಯಗೊಂಡಿದ್ದಾರೆ ಎಂದು ಯೆಮೆನ್ನ ಹೂಥಿ ನಿಯಂತ್ರಿತ ಆರೋಗ್ಯ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.ಅಲ್–ಶರೀಯಾ ಗ್ರಾಮದ ಮೇಲೆ ಸೌದಿ ಅರೇಬಿಯಾ ಈ ದಾಳಿ ನಡೆಸಿದೆ ಎಂದು ಆರೋಗ್ಯ ಸಚಿವಾಲಯದ ವಕ್ತಾರ ಅನೀಸ್ ಅಲಸ್ಬಾಹಿ ಅವರು ಆರೋಪಿಸಿದ್ದಾರೆ. ಆದರೆ ಈ ಬಗ್ಗೆ ಸೌದಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.‘ಅರೆ ವೈದ್ಯಕೀಯ ಸಿಬ್ಬಂದಿಯನ್ನು ಗುರಿಯಾಗಿಸಿ ದಾಳಿ ನಡೆದಿದೆ’ ಎಂದು ಹೂಥಿಯ ಸಬಾ ಸುದ್ದಿ ಸಂಸ್ಥೆ ವರದಿ ಮಾಡಿದೆ.ರಿಯಾದ್ ಮೇಲೆ ದಾಳಿಗೆ ಮುಂದಾಗಿದ್ದ ಹೂಥಿ ಕ್ಷಿಪಣಿಗಳನ್ನು ಹೊಡೆದುರುಳಿಸಲಾಗಿದೆ ಎಂದು ಸೌದಿ ನೇತೃತ್ವದ ಒಕ್ಕೂಟ ಶನಿವಾರ ಹೇಳಿದೆ.ಯೆಮೆನ್ನಲ್ಲಿ ಸಂಘರ್ಷ ಪುನರಾರಂಭಗೊಂಡ ಬಳಿಕ 1,600 ಮಂದಿ ಮೃತಪಟ್ಟಿದ್ದಾರೆ ಮತ್ತು 3 ಲಕ್ಷ ಜನ ಸ್ಥಳಾಂತರಗೊಂಡಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
Read the complete story at Prajavani