ಇರುಸು‘ಮುರುಸು’!
‘ಸೈಲೆನ್ಸ್, ಈಗ ಬರ ಕುರಿತು ಚರ್ಚೆಗೆ ಅವಕಾಶ ಕೊಡ್ತಿದೀನಿ’ ಸಭಾಧ್ಯಕ್ಷರು ಘೋಷಿಸುದ್ರು.‘ಇಲ್ಲವೇ ಇಲ್ಲ, ಮೊದ್ಲು ಅರಬ್ಬೀ ಸಮುದ್ರಕ್ಕೆ ಎಸೆಯೋ ಹೇಳಿಕೆ ಬಗ್ಗೆ ಗಂಭೀರ ಚರ್ಚೆ ಆಗ್ಬೇಕು’ ಕೂಗುದ್ರು ಒಬ್ರು ಮಂತ್ರಿ.‘ಅದ್ಯಾವ ಮಹಾ ತಪ್ಪು? ನಿಮ್ ಮಾಜಿಗಳೊಬ್ರು ಪೇಪರ್ರೋರನ್ನೇ ಅರಬ್ಬೀ ಸಮುದ್ರಕ್ಕೆ ಎಸೀಬೇಕು ಅಂತ ಹೇಳಿರ್ಲಿಲ್ವಾ? ನಾವೇನ್ ಹಳ್ಳಿಗುಗ್ಗುನಾ?’ ವಿರೋಧ ಪಕ್

‘ಸೈಲೆನ್ಸ್, ಈಗ ಬರ ಕುರಿತು ಚರ್ಚೆಗೆ ಅವಕಾಶ ಕೊಡ್ತಿದೀನಿ’ ಸಭಾಧ್ಯಕ್ಷರು ಘೋಷಿಸುದ್ರು.‘ಇಲ್ಲವೇ ಇಲ್ಲ, ಮೊದ್ಲು ಅರಬ್ಬೀ ಸಮುದ್ರಕ್ಕೆ ಎಸೆಯೋ ಹೇಳಿಕೆ ಬಗ್ಗೆ ಗಂಭೀರ ಚರ್ಚೆ ಆಗ್ಬೇಕು’ ಕೂಗುದ್ರು ಒಬ್ರು ಮಂತ್ರಿ.‘ಅದ್ಯಾವ ಮಹಾ ತಪ್ಪು? ನಿಮ್ ಮಾಜಿಗಳೊಬ್ರು ಪೇಪರ್ರೋರನ್ನೇ ಅರಬ್ಬೀ ಸಮುದ್ರಕ್ಕೆ ಎಸೀಬೇಕು ಅಂತ ಹೇಳಿರ್ಲಿಲ್ವಾ? ನಾವೇನ್ ಹಳ್ಳಿಗುಗ್ಗುನಾ?’ ವಿರೋಧ ಪಕ್ಷದೋರು ಕೂಗುದ್ರು.‘ಅರಬ್ಬೀ ಸಮುದ್ರ ಒಂದೇನಾ ಇರೋದು, ನಿಮಗೆ ಬೇರೆ ಯಾವ ಸಮುದ್ರನೂ ಇಲ್ವಾ? ಯಾಕ್ ಎಲ್ಲಾ ಅರಬ್ಬೀ ಸಮುದ್ರಕ್ಕೇ ಎಸೀಬೇಕು ಅಂತೀರಿ?’ ಪ್ರಶ್ನಿಸಿದರು ಅಧ್ಯಕ್ಷರು.‘ಬಂಗಾಳಕೊಲ್ಲೀಲಿ ಮುರುಸು ಚಂಡಮಾರುತ ಇದೆ. ಹೋಗ್ಲಿ ಪಾಪ ಅಂತ ಅರಬ್ಬೀ ಸಮುದ್ರ ಅಂದಿದಾರೆ’ ವಿ.ಪ.ದೋರು ಸಮರ್ಥಿಸಿಕೊಂಡರು.‘ನಿಮ್ಮನ್ನ ಮಾತ್ರ ಅಲ್ಲ, ಆ ಹಳ್ಳಿಗುಗ್ಗುಗಳನ್ನೂ ಅರಬ್ಬೀ ಸಮುದ್ರಕ್ಕೇ ಎಸೀಬೇಕು’ ಅಂದ್ರು ಇನ್ನೊಬ್ಬರು ಮಂತ್ರಿ.‘ಇವರನ್ನ ಎಸುದ್ರೆ ಸಾಕು, ಇಬ್ರೂ ದೋಸ್ತಿಗಳಲ್ವಾ? ಇವರೇ ಅವರನ್ನ ಎಳ್ಕೊಂಡ್ ಹೋಗಿ ಮುಳುಗುಸ್ತಾರೆ’ ಮತ್ತೊಬ್ಬರು ಕಾಲ್ ಎಳುದ್ರು.‘ನೋಡ್ರಪ್ಪಾ, ಮುಳುಗುಸೋದಿದ್ರೆ ಬೇರೆ ಸಮುದ್ರ ಹುಡುಕ್ಕೊಳಿ’ ಮನವಿ ಮಾಡಿದರು ಸಿಎಂ.‘ಅರಬ್ಬೀ ಸಮುದ್ರ ಹತ್ರ ಇದೆ, ಬೇರೆ ಸಮುದ್ರ ಅಂದ್ರೆ ಸುಮ್ನೆ ಸಾಗಣೆ ಖರ್ಚು ಜಾಸ್ತಿಯಾಗುತ್ತೆ’.‘ರೀ, ತಲೆ ಇದೆಯೇನ್ರೀ ನಿಮ್ಗೆ! ಇವರನ್ನ ಅಲ್ ಎಸುದ್ರೆ ನಮ್ ಕೋಸ್ಟಲ್ ಡವಲಪ್ಮೆಂಟ್ ಎಕ್ಕುಟ್ಟೋಗುತ್ತೆ. ಅಲ್ದೇ ಮೋದಿ ಮಾಮನ ಲಕ್ಷದ್ವೀಪದ ಜಾಲಿ ಸೆಂಟರ್ಗೆ ಹೋಗಿ ಮಜಾ ಉಡಾಯಿಸ್ತಾರೆ’ ರೇಗಿದರು ಸಿಎಂ.‘ಓಹೋ! ಅಣಕು ಕಲಾಪ!’ ಹೆಣ್ಣು ಧ್ವನಿ ತೂರಿ ಬಂತು.ಗುದ್ಲಿಂಗ, ಮಾಲಿಂಗ, ಪರ್ಮೇಶಿ ಎಲ್ಲಾ ತಿರುಗಿ ನೋಡಿದರು. ಪದ್ದಮ್ಮ ಮುಖ ಊದಿಸಿ ನಿಂತಿದ್ದರು.‘ಅಲ್ಲ, ರಾಜಕೀಯದೋರನ್ನೆಲ್ಲ ಸಮುದ್ರಕ್ಕೆ ಎಸೆದರೆ ಎಕೋ ಸಿಸ್ಟಂ ಏನಾಗಬೇಡ? ಅಲ್ಲಿರೋ ಜೀವಿಗಳು ಬದುಕೋದು ಬೇಡ್ವಾ?’ಮನೆ ಹಲ್ಲಿ ಡೈನಾಸರ್ ಅಂದ್ಕೊಂಡ್ ಗುರುಗುಟ್ಟಿದ ಹಾಗಾಯ್ತು.‘ಏಳ್ರೀ ಮೇಲೆ...’ ಪದ್ದಮ್ಮ ಕೂಗಿದ ಸದ್ದಿಗೆ ಇಡೀ ಹರಟೆಕಟ್ಟೆಯೇ ಮಂಗಮಾಯವಾಯಿತು.