75 ವರ್ಷಗಳ ಹಿಂದೆ: ಲಂಚ ಕೊಟ್ಟು ಓಟು ಪಡೆದೀರಿ: ಚುನಾವಣಾ ಆಯೋಗ ಎಚ್ಚರಿಕೆ!
ಲಂಚ ಕೊಟ್ಟು ಓಟು ಪಡೆದೀರಿ: ಚುನಾವಣಾ ಆಯೋಗ ಎಚ್ಚರಿಕೆ!ದೆಹಲಿ, ನ. 6– ಚುನಾವಣೆಯಲ್ಲಿ ಸ್ಪರ್ಧಿಸುವ ಉಮೇದುವಾರರು ತಮ್ಮ ಎದುರಾಳಿಗಳು ಎಷ್ಟು ಹಣವನ್ನು ವೆಚ್ಚ ಮಾಡುತ್ತಾರೆಂಬ ಬಗ್ಗೆ ಸರ್ಪಕಾವಲಿದ್ದು, ಸರ್ಕಾರಕ್ಕೆ ತಿಳಿಸಬೇಕೆಂಬುದಾಗಿ ಕೇಂದ್ರ ಚುನಾವಣಾಧಿಕಾರಿಗಳಾದ ಸುಕುಮಾರ್ ಸೇನ್ರವರು ತಮ್ಮ ‘ಚುನಾವಣೆ ಬಗ್ಗೆ ಮಾಡಬಹುದಾದ್ದು ಮತ್ತು ಮಾಡಬಾರದ್ದು’ ಎಂಬ ಕೈಪಿಡಿಯಲ

ಲಂಚ ಕೊಟ್ಟು ಓಟು ಪಡೆದೀರಿ: ಚುನಾವಣಾ ಆಯೋಗ ಎಚ್ಚರಿಕೆ!ದೆಹಲಿ, ನ. 6– ಚುನಾವಣೆಯಲ್ಲಿ ಸ್ಪರ್ಧಿಸುವ ಉಮೇದುವಾರರು ತಮ್ಮ ಎದುರಾಳಿಗಳು ಎಷ್ಟು ಹಣವನ್ನು ವೆಚ್ಚ ಮಾಡುತ್ತಾರೆಂಬ ಬಗ್ಗೆ ಸರ್ಪಕಾವಲಿದ್ದು, ಸರ್ಕಾರಕ್ಕೆ ತಿಳಿಸಬೇಕೆಂಬುದಾಗಿ ಕೇಂದ್ರ ಚುನಾವಣಾಧಿಕಾರಿಗಳಾದ ಸುಕುಮಾರ್ ಸೇನ್ರವರು ತಮ್ಮ ‘ಚುನಾವಣೆ ಬಗ್ಗೆ ಮಾಡಬಹುದಾದ್ದು ಮತ್ತು ಮಾಡಬಾರದ್ದು’ ಎಂಬ ಕೈಪಿಡಿಯಲ್ಲಿ ಸೂಚಿಸಿದ್ದಾರೆ.ಉಮೇದುವಾರರ ಪರವಾಗಿ ಯಾರಾದರೂ ಸಂಪೂರ್ಣ ರಸೀದಿ ಇತ್ಯಾದಿಗಳ ಆಧಾರದ ಮೇಲೆ ಚುನಾವಣಾ ವೆಚ್ಚದ ಬಗ್ಗೆ ಲೆಕ್ಕವನ್ನಿಡಬೇಕೆಂದೂ, ಉಮೇದುವಾರರ ಪರವಾಗಿ ಲಂಚ ಅರ್ಪಿಸುವುದಾಗಲೀ, ಅನುಚಿತ ರೀತಿಯಲ್ಲಿ ಪ್ರಭಾರ ಬೀರುವುದು, ಪೋಲಿಂಗ್ ಸ್ಟೇಷನ್ನುಗಳಿಗೆ ವಾಹನ ಸೌಕರ್ಯ ಇತ್ಯಾದಿಗಳನ್ನು ಕಲ್ಪಿಸಿಕೊಡುವುದು ಮುಂತಾದ ಪದ್ಧತಿಗಳಿಗೆ ಉಮೇದುವಾರರು ಅವಕಾಶ ಕೊಡಬಾರದೆಂದೂ ಕೈಪಿಡಿ ಸೂಚಿಸುತ್ತದೆ.
Read the complete story at Prajavani