ಮೇಕೆದಾಟು ಅಣೆಕಟ್ಟು ಯೋಜನೆಗೆ ಅನುಮತಿ ಕೊಡಬೇಡಿ: ಮೋದಿಗೆ ಸಿಎಂ ವಿಜಯ್ ಪತ್ರ
ನವದೆಹಲಿ: ಮೇಕೆದಾಟು ಅಣೆಕಟ್ಟು ಯೋಜನೆಗೆ ಅನುಮತಿ ನೀಡಬೇಡಿ ಎಂದು ಪ್ರಧಾನಿ ಮೋದಿಗೆ ತಮಿಳುನಾಡು ಸಿಎಂ ವಿಜಯ್ ಪತ್ರ ಬರೆದಿದ್ದಾರೆ. ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಅಧಿಕಾರಿಗಳ ಸ್ಥಳ ಪರಿಶೀಲನೆಗೆ ತಮಿಳುನಾಡು ಸಿಎಂ ವಿಜಯ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜಲಾನಯನ ಪ್ರದೇಶದ ಇತರೆ ರಾಜ್ಯಗಳ ಒಪ್ಪಿಗೆ ಇಲ್ಲದೆ ಯೋಜನೆಗೆ ಶಾಸನಬದ್ಧ ಅಥವಾ ಆಡಳಿತಾತ್ಮಕ ಅನುಮ

ನವದೆಹಲಿ: ಮೇಕೆದಾಟು ಅಣೆಕಟ್ಟು ಯೋಜನೆಗೆ ಅನುಮತಿ ನೀಡಬೇಡಿ ಎಂದು ಪ್ರಧಾನಿ ಮೋದಿಗೆ ತಮಿಳುನಾಡು ಸಿಎಂ ವಿಜಯ್ ಪತ್ರ ಬರೆದಿದ್ದಾರೆ. ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಅಧಿಕಾರಿಗಳ ಸ್ಥಳ ಪರಿಶೀಲನೆಗೆ ತಮಿಳುನಾಡು ಸಿಎಂ ವಿಜಯ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜಲಾನಯನ ಪ್ರದೇಶದ ಇತರೆ ರಾಜ್ಯಗಳ ಒಪ್ಪಿಗೆ ಇಲ್ಲದೆ ಯೋಜನೆಗೆ ಶಾಸನಬದ್ಧ ಅಥವಾ ಆಡಳಿತಾತ್ಮಕ ಅನುಮತಿ ನೀಡದಂತೆ ಪ್ರಧಾನಿ ಮೋದಿಗೆ ಮನವಿ ಮಾಡಿದ್ದಾರೆ. ಕೇಂದ್ರ ಅಧಿಕಾರಿಗಳ ಸ್ಥಳ ಪರಿಶೀಲನೆಯಿಂದ ಕಾವೇರಿ ಡೆಲ್ಟಾ ರೈತರಲ್ಲಿ ಆತಂಕ ಹೆಚ್ಚಳವಾಗಿದೆ. 2026–27ರ ನೀರಿನ ಕೊರತೆಯ ವರ್ಷದಲ್ಲಿ ತಮಿಳುನಾಡಿಗೆ ನ್ಯಾಯಯುತ ಪಾಲಿನ ನೀರು ಸಿಗುತ್ತಿಲ್ಲ. ಕೆಳಹರಿವಿನ ರಾಜ್ಯಗಳ ಹಕ್ಕುಗಳನ್ನು ಸಂಪೂರ್ಣವಾಗಿ ರಕ್ಷಿಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ. ನೀರಿನ ಪ್ರಮಾಣ ಹಾಗೂ ಮಾಸಿಕ ನೀರು ಬಿಡುಗಡೆ ನಿಯಮಿತ ವ್ಯವಸ್ಥೆಯನ್ನು ಸಂರಕ್ಷಿಸುವಂತೆ ಪ್ರಧಾನಿ ಮೋದಿಗೆ ವಿಜಯ್ ಮನವಿ ಮಾಡಿದ್ದಾರೆ.
Read the complete story at Public TV Kannada