ಪಟಾಕಿ: ನಗರದಲ್ಲಿ ತಗ್ಗದ ಅವಘಡ
ಬೆಂಗಳೂರು: ಪಟಾಕಿ ಸಿಡಿಸುವಾಗ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದ ಪರಿಣಾಮ ನಗರದಲ್ಲಿ ವರ್ಷದಿಂದ ವರ್ಷಕ್ಕೆ ಕಣ್ಣಿನ ಗಾಯ ಪ್ರಕರಣಗಳು ಏರುತ್ತಲೇ ಇದೆ. ಮಾರುಕಟ್ಟೆಯಲ್ಲಿ ಸಿಗುವ ಹಸಿರು ಪಟಾಕಿಗಳೂ ದೃಷ್ಟಿ ಕಸಿಯುತ್ತಿವೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರತಿ ವರ್ಷ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ವಿವಿಧ ಸರ್ಕಾರೇತರ ಸಂಸ್ಥೆಗಳು ಹಾಗ

ಬೆಂಗಳೂರು: ಪಟಾಕಿ ಸಿಡಿಸುವಾಗ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದ ಪರಿಣಾಮ ನಗರದಲ್ಲಿ ವರ್ಷದಿಂದ ವರ್ಷಕ್ಕೆ ಕಣ್ಣಿನ ಗಾಯ ಪ್ರಕರಣಗಳು ಏರುತ್ತಲೇ ಇದೆ. ಮಾರುಕಟ್ಟೆಯಲ್ಲಿ ಸಿಗುವ ಹಸಿರು ಪಟಾಕಿಗಳೂ ದೃಷ್ಟಿ ಕಸಿಯುತ್ತಿವೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರತಿ ವರ್ಷ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ವಿವಿಧ ಸರ್ಕಾರೇತರ ಸಂಸ್ಥೆಗಳು ಹಾಗೂ ವೈದ್ಯಕೀಯ ಸಂಸ್ಥೆಗಳು ಹಸಿರು ಪಟಾಕಿಗಳ ಬಗ್ಗೆ ಜಾಗೃತಿ ಮೂಡಿಸುತ್ತಿವೆ. ಹಬ್ಬದ ಸಂದರ್ಭದಲ್ಲಿ ನಿಗದಿತ ಅವಧಿಗೆ ಮಾತ್ರ ಹಸಿರು ಪಟಾಕಿ ಸಿಡಿಸಲು ಅವಕಾಶ ನೀಡಿ, ಮಾರ್ಗಸೂಚಿ ಹೊರಡಿಸಲಾಗುತ್ತಿದೆ. ಇಷ್ಟಾಗಿಯೂ ವರ್ಷದಿಂದ ವರ್ಷಕ್ಕೆ ಪಟಾಕಿ ಸಿಡಿತದಿಂದ ಕಣ್ಣಿಗೆ ಗಾಯ ಮಾಡಿಕೊಳ್ಳುವವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಲಕ್ಷ್ಮಿ ಬಾಂಬ್, ಬಿಜಲಿ ಪಟಾಕಿ ಹಾಗೂ ಹೂ ಕುಂಡ ಸಿಡಿತದಿಂದಲೇ ಹೆಚ್ಚಿನವರು ಗಾಯಗೊಳ್ಳುತ್ತಿದ್ದಾರೆ. ಅದರಲ್ಲಿಯೂ ಮಕ್ಕಳು ಹೆಚ್ಚಾಗಿ ಕಣ್ಣಿಗೆ ಹಾನಿ ಮಾಡಿಕೊಳ್ಳುತ್ತಿರುವುದು ನೇತ್ರ ಚಿಕಿತ್ಸಾ ಕೇಂದ್ರಗಳ ದಾಖಲಾತಿಯಿಂದ ದೃಢಪಟ್ಟಿದೆ. ಪಟಾಕಿ ಗಾಯಗಳಿಗೆ ಸಂಬಂಧಿಸಿದಂತೆ ಕಳೆದ ವರ್ಷ ಮಿಂಟೊ ಕಣ್ಣಿನ ಆಸ್ಪತ್ರೆಯಲ್ಲಿ 56 ಮಂದಿ ಚಿಕಿತ್ಸೆ ಪಡೆದುಕೊಂಡಿದ್ದರು. ಈ ಸಂಖ್ಯೆ ನಾರಾಯಣ ನೇತ್ರಾಲಯದಲ್ಲಿ ನೂರರ ಗಡಿ ದಾಟಿತ್ತು. ನೇತ್ರಧಾಮ, ಶಂಕರ ಕಣ್ಣಿನ ಆಸ್ಪತ್ರೆ ಸೇರಿ ಒಟ್ಟು ಚಿಕಿತ್ಸೆ ಪಡೆದವರ ಸಂಖ್ಯೆ 200ರ ಗಡಿ ದಾಟಿತ್ತು. ಕೆಲವರ ಕಣ್ಣಿಗೆ ಗಂಭೀರ ಹಾನಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ‘ಮಾರುಕಟ್ಟೆಯಲ್ಲಿ ಎಲ್ಲವನ್ನೂ ಹಸಿರು ಪಟಾಕಿಗಳೆಂದು ಮಾರಾಟ ಮಾಡಲಾಗುತ್ತಿದೆ. ಇದನ್ನು ಖರೀದಿಸುವ ಜನರು, ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸದೆ ಸಿಡಿಸುವುದರಿಂದ ಅಪಾಯವನ್ನು ತಂದೊಡ್ಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಪರವಾನಗಿ ಪಡೆದ ಮಳಿಗೆಗಳಲ್ಲಿ, ಹಸಿರು ಪಟಾಕಿ ಬಗ್ಗೆ ಖಚಿತಪಡಿಸಿಕೊಂಡು ಖರೀದಿಸಬೇಕು. ಹಸಿರು ಪಟಾಕಿಗಳಲ್ಲಿ ರಾಸಾಯನಿಕಗಳ ಬಳಕೆ ಪ್ರಮಾಣ ಕಡಿಮೆ ಇರುತ್ತದೆ. ಮಾಲಿನ್ಯ ಕಡಿಮೆಯಾದರೂ, ಅದರ ತೀವ್ರತೆ ಸಾಮಾನ್ಯ ಪಟಾಕಿಗಳಂತೆ ಇರುತ್ತದೆ’ ಎಂದು ಎಚ್ಚರಿಸುತ್ತಾರೆ ನಗರದ ನೇತ್ರ ತಜ್ಞರು. ವೀಕ್ಷಿಸುವ ವೇಳೆ ಗಾಯ: ಪಟಾಕಿ ಸಿಡಿಸುವವರ ಜತೆಗೆ ವೀಕ್ಷಿಸುವವರೂ ಹೆಚ್ಚಿನ ಸಂಖ್ಯೆಯಲ್ಲಿ ಗಾಯಗೊಂಡು, ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ಮಿಂಟೊದಲ್ಲಿ ಕಳೆದ ವರ್ಷ ವರದಿಯಾದ ಪ್ರಕರಣಗಳಲ್ಲಿ, 31 ಮಂದಿ ಸ್ವಯಂ ಹಾನಿ ಮಾಡಿಕೊಂಡರೆ, 25 ಮಂದಿ ಪಟಾಕಿ ಸಿಡಿಯುವುದನ್ನು ವೀಕ್ಷಿಸುತ್ತಿದ್ದವರಾಗಿದ್ದಾರೆ. ನಾರಾಯಣ ನೇತ್ರಾಲಯದಲ್ಲಿ ವರದಿಯಾದ ಪ್ರಕರಣಗಳಲ್ಲಿ 32 ಮಂದಿ ಪಟಾಕಿ ಸಿಡಿಯುವುದನ್ನು ನೋಡುತ್ತಿದ್ದವರಾಗಿದ್ದಾರೆ. ‘ಪಟಾಕಿ ಹಚ್ಚುವರಷ್ಟೇ ಅದನ್ನು ವೀಕ್ಷಿಸುವವರೂ ಎಚ್ಚರವಾಗಿರಬೇಕು. ಹಸಿರು ಪಟಾಕಿಗಳಾದರೂ ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸಿ, ಪಟಾಕಿ ಸಿಡಿಸಬೇಕು’ ಎಂದು ಮಿಂಟೊ ಕಣ್ಣಿನ ಆಸ್ಪತ್ರೆ ನಿರ್ದೇಶಕ ಡಾ.ಸುರೇಶ್ ಬಾಬು ತಿಳಿಸಿದರು. ಡಾ. ಸುಪ್ರಿಯಾ ಶ್ರೀಗಣೇಶ್ ನೇತ್ರಧಾಮ ಆಸ್ಪತ್ರೆ ಕಾರ್ಯನಿರ್ವಾಹಕ ನಿರ್ದೇಶಕಿಹಸಿರು ಪಟಾಕಿಗಳೂ ಹೊಗೆ ಮತ್ತು ಸೂಕ್ಷ್ಮ ಕಣಗಳನ್ನು ಹೊರಸೂಸುತ್ತವೆ. ಪಟಾಕಿ ಗಾಯ ಪ್ರಕರಣಗಳಲ್ಲಿ ತಕ್ಷಣ ಚಿಕಿತ್ಸೆ ದೊರೆಯದಿದ್ದರೆ ದೃಷ್ಟಿ ಶಾಶ್ವತ ನಷ್ಟವಾಗುವ ಅಪಾಯ ಇರಲಿದೆಡಾ. ರೋಹಿತ್ ಶೆಟ್ಟಿ ನಾರಾಯಣ ನೇತ್ರಾಲಯದ ನಿರ್ದೇಶಕಡಾ. ರೋಹಿತ್ ಶೆಟ್ಟಿ ನಾರಾಯಣ ನೇತ್ರಾಲಯದ ನಿರ್ದೇಶಕಪಟಾಕಿ ಸಿಡಿಸುವಾಗ ನಿರ್ದಿಷ್ಟ ಅಂತರ ಕಾಯ್ದುಕೊಳ್ಳುವುದು ರಕ್ಷಣಾತ್ಮಕ ಕನ್ನಡಕ ಧರಿಸುವುದು ಸೇರಿ ವಿವಿಧ ಮುನ್ನೆಚ್ಚರಿಕೆ ವಹಿಸಬೇಕು. ಗಾಯವಾದಲ್ಲಿ ತಕ್ಷಣ ಚಿಕಿತ್ಸೆ ಪಡೆಯಬೇಕುಗಾಯಗೊಳ್ಳುವವರಲ್ಲಿ ಮಕ್ಕಳೇ ಅಧಿಕ ಮಿಂಟೊ ಕಣ್ಣಿನ ಆಸ್ಪತ್ರೆಯ ದಾಖಲಾತಿ ಪ್ರಕಾರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುವವರಲ್ಲಿ ಮಕ್ಕಳ ಸಂಖ್ಯೆಯೇ ಅಧಿಕ. ವೈದ್ಯರ ವಿಶ್ಲೇಷಣೆ ಪ್ರಕಾರ ಒಟ್ಟು ಪ್ರಕರಣಗಳಲ್ಲಿ ಶೇ 40 ರಷ್ಟು ಮಂದಿ 14 ವರ್ಷದೊಳಗಿನ ಮಕ್ಕಳಾಗಿರುತ್ತಾರೆ. ಕಳೆದ ವರ್ಷ ವರದಿಯಾದ 56 ಪ್ರಕರಣಗಳಲ್ಲಿ ಐದು ಮಕ್ಕಳು ಐದು ವರ್ಷದೊಳಗಿನವರಾಗಿದ್ದಾರೆ. ಎಂಟು ಮಕ್ಕಳು 6ರಿಂದ 10 ವರ್ಷದೊಳಗಿನವರು 18 ಮಂದಿ 11ರಿಂದ 18 ವರ್ಷದೊಳಗಿನವರಾಗಿದ್ದಾರೆ.ಇನ್ನುಳಿದವರು 18 ವರ್ಷ ಮೇಲ್ಪಟ್ಟವರು. ವೈದ್ಯರ ಪ್ರಮುಖ ಸಲಹೆಗಳು *ಪಟಾಕಿ ಖರೀದಿಸಲೇಬೇಕಾದಲ್ಲಿ ಐಎಸ್ಐ ಗುರುತಿನ ಹಸಿರು ಪಟಾಕಿಗಳನ್ನು ಖರೀದಿಸಿ *ಕನಿಷ್ಠ 2-3 ಅಡಿ ದೂರದಿಂದ ಪಟಾಕಿ ಹಚ್ಚಿ *ಪಟಾಕಿ ಹಚ್ಚಲು ಉದ್ದನೆಯ ಕೋಲು ಬಳಸಿ *ಮೈದಾನ ಖಾಲಿ ಜಾಗಗಳಲ್ಲಷ್ಟೇ ಪಟಾಕಿ ಹಚ್ಚಿ *ಪಟಾಕಿ ಸುಡುವುದಕ್ಕೆ ಗಾಜಿನ ಬಾಟಲಿಗಳನ್ನು ಬಳಸಬೇಡಿ. ಇದರಿಂದ ಸಿಡಿಯುವ ಚೂರುಗಳು ಕಣ್ಣಿಗೆ ಹಾನಿ ಮಾಡಬಹುದು *ಪಟಾಕಿ ಸಿಡಿದಾಗ ಕಣ್ಣಿಗೆ ಕಿಡಿ ಬಿದ್ದರೆ ಕಣ್ಣನ್ನು ಉಜ್ಜಿಕೊಳ್ಳಬೇಡಿ