ಇಂಡಿಗೋ ವಿಮಾನಕ್ಕೆ ಹೈಜಾಕ್ ಬೆದರಿಕೆ – ಲಕ್ನೋಗೆ ಹೊರಟಿದ್ದ ಫ್ಲೈಟ್ ಬೆಂಗ್ಳೂರಿಗೆ ವಾಪಸ್
ಬೆಂಗಳೂರು: ಕೆಂಪೆಗೌಡ ಏರ್ಪೋರ್ಟ್ನಿಂದ ಲಕ್ನೋಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಹೈಜಾಕ್ ಬೆದರಿಕೆ (Hijack Threat) ಪತ್ರ ಪತ್ತೆಯಾಗಿದ್ದು, ವಿಮಾನ ಬೆಂಗಳೂರಿಗೆ (Bengaluru) ವಾಪಸ್ ಆಗಿದೆ. ಇಂಡಿಗೋ ಸಂಸ್ಥೆಯ 6E451 ವಿಮಾನ ಸಂಜೆ 6:10ರ ಸುಮಾರಿಗೆ ಬೆಂಗಳೂರಿನಿಂದ ಲಕ್ನೋಗೆ ಟೇಕಾಫ್ ಆಗಿತ್ತು. ಹಾರಾಟದಲ್ಲಿದ್ದಾಗ ವಿಮಾನದ ಶೌಚಾಲಯದಲ್ಲಿ ಹೈಜಾಕ್ ಮಾಡುವ ಬೆ

ಬೆಂಗಳೂರು: ಕೆಂಪೆಗೌಡ ಏರ್ಪೋರ್ಟ್ನಿಂದ ಲಕ್ನೋಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಹೈಜಾಕ್ ಬೆದರಿಕೆ (Hijack Threat) ಪತ್ರ ಪತ್ತೆಯಾಗಿದ್ದು, ವಿಮಾನ ಬೆಂಗಳೂರಿಗೆ (Bengaluru) ವಾಪಸ್ ಆಗಿದೆ. ಇಂಡಿಗೋ ಸಂಸ್ಥೆಯ 6E451 ವಿಮಾನ ಸಂಜೆ 6:10ರ ಸುಮಾರಿಗೆ ಬೆಂಗಳೂರಿನಿಂದ ಲಕ್ನೋಗೆ ಟೇಕಾಫ್ ಆಗಿತ್ತು. ಹಾರಾಟದಲ್ಲಿದ್ದಾಗ ವಿಮಾನದ ಶೌಚಾಲಯದಲ್ಲಿ ಹೈಜಾಕ್ ಮಾಡುವ ಬೆದರಿಕೆ ಪತ್ರ ಪತ್ತೆಯಾಗಿದೆ. ಪತ್ರದಲ್ಲಿ “This plane is going to get Hijack at exactly 6:30” ಎಂದು ಬರೆಯಲಾಗಿತ್ತು. ಪತ್ರ ಕಂಡುಬಂದ ಹಿನ್ನೆಲೆಯಲ್ಲಿ ವಿಮಾನ ಸಿಬ್ಬಂದಿ ಭದ್ರತಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಬಳಿಕ ವಿಮಾನವನ್ನು ಮುನ್ನೆಚ್ಚರಿಕಾ ಕ್ರಮವಾಗಿ ಮರಳಿ ವಾಪಸ್ ಬೆಂಗಳೂರಿಗೆ ತಂದು ಲ್ಯಾಂಡ್ ಮಾಡಲಾಗಿದೆ. ವಿಮಾನದಲ್ಲಿ 171 ಪ್ರಯಾಣಿಕರಿದ್ದು, ಅವರನ್ನು ಸುರಕ್ಷಿತವಾಗಿ ಕೆಳಗಿಳಿಸಿ ವಿಮಾನ ಹಾಗೂ ಪ್ರಯಾಣಿಕರನ್ನ ತಪಾಸಣೆಗೆ ಒಳಪಡಿಸಲಾಗಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಿಐಎಸ್ಎಫ್ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿಯಿಂದ ತೀವ್ರ ತಪಾಸಣೆ ಕೈಗೊಳ್ಳಲಾಗಿದೆ. ಬೆದರಿಕೆ ಪತ್ರ ಬರೆದವರು ಯಾರು? ವಿಮಾನದಲ್ಲಿ ಯಾವುದೇ ಅಪಾಯಕಾರಿ ವಸ್ತುಗಳಿವೆಯೇ? ಎಂದು ಪರಿಶೀಲನೆ ನಡೆಸಲಾಗುತ್ತಿದೆ.