ಮೊಬೈಲ್ನಲ್ಲಿ ಪ್ರಶ್ನೆಪತ್ರಿಕೆ ಚಿತ್ರ, ಗೂಗಲ್ ಲೆನ್ಸ್ನಲ್ಲಿ ಉತ್ತರ! VAO ಅಕ್ರಮ
ಸರ್ಕಾರಿ ಉದ್ಯೋಗದ ಕನಸು ಕಾಣುವ ಲಕ್ಷಾಂತರ ಯುವಜನರಿಗೆ ಆಘಾತ ನೀಡಿರುವುದು ಗ್ರಾಮ ಆಡಳಿತ ಅಧಿಕಾರಿ (VAO) ನೇಮಕಾತಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ. ಹಾವೇರಿ ಜಿಲ್ಲೆಯ ಶಿಗ್ಗಾವಿಯ ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್ ಮೂಲಕ ಪ್ರಶ್ನೆಪತ್ರಿಕೆಯ ಫೋಟೊ ತೆಗೆದು ಗೂಗಲ್ ಲೆನ್ಸ್ ಬಳಸಿ ಉತ್ತರ ಕಂಡುಕೊಂಡ ಆರೋಪ ಶಂಕರ ಬನ್ನೂರು ವಿರುದ್ಧ ಕೇಳಿಬಂದಿದೆ. 200 ಅಂಕಗಳಿಗೆ

ಸರ್ಕಾರಿ ಉದ್ಯೋಗದ ಕನಸು ಕಾಣುವ ಲಕ್ಷಾಂತರ ಯುವಜನರಿಗೆ ಆಘಾತ ನೀಡಿರುವುದು ಗ್ರಾಮ ಆಡಳಿತ ಅಧಿಕಾರಿ (VAO) ನೇಮಕಾತಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ. ಹಾವೇರಿ ಜಿಲ್ಲೆಯ ಶಿಗ್ಗಾವಿಯ ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್ ಮೂಲಕ ಪ್ರಶ್ನೆಪತ್ರಿಕೆಯ ಫೋಟೊ ತೆಗೆದು ಗೂಗಲ್ ಲೆನ್ಸ್ ಬಳಸಿ ಉತ್ತರ ಕಂಡುಕೊಂಡ ಆರೋಪ ಶಂಕರ ಬನ್ನೂರು ವಿರುದ್ಧ ಕೇಳಿಬಂದಿದೆ. 200 ಅಂಕಗಳಿಗೆ 151.25 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದ ಅಭ್ಯರ್ಥಿಯ ವಿರುದ್ಧದ ಆರೋಪಗಳ ತನಿಖೆಯಲ್ಲಿ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳು ಮಹತ್ವದ ಸಾಕ್ಷ್ಯಗಳಾಗಿವೆ. ಪರೀಕ್ಷಾ ಕೇಂದ್ರದ ನಿರ್ಲಕ್ಷ್ಯದ ಆರೋಪದ ಹಿನ್ನೆಲೆಯಲ್ಲಿ ಪ್ರಾಂಶುಪಾಲರು ಸೇರಿದಂತೆ ಎಂಟು ಮಂದಿಯ ವಿರುದ್ಧ ಕಾನೂನು ಕ್ರಮಕ್ಕೆ ಶಿಫಾರಸು ಮಾಡಲಾಗಿದೆ. ಈ ಅಕ್ರಮ ಬಯಲಾದದ್ದು ಹೇಗೆ ಎಂಬುದರ ಸಂಪೂರ್ಣ ವಿವರ ಈ ವಿಡಿಯೊದಲ್ಲಿ.
Read the complete story at Prajavani