ವಿದ್ಯುತ್ ತಂತಿಗಳ ಸುಳಿಯಲ್ಲಿ ಬೆಂಗಳೂರು: 10 ತಿಂಗಳಲ್ಲಿ 69 ಮಂದಿ ಸಾವು
ಬೆಂಗಳೂರು: ಬೆಂಗಳೂರಿನಲ್ಲಿ ಇತ್ತೀಚೆಗೆ ಸಂಭವಿಸಿದ ಸರಣಿ ವಿದ್ಯುತ್ ಅವಘಡಗಳು, ನಗರದ ವಿದ್ಯುತ್ ಸುರಕ್ಷತಾ ವ್ಯವಸ್ಥೆಯಲ್ಲಿನ ಲೋಪಗಳನ್ನು ಬಯಲಿಗೆಳೆದಿವೆ. ಪ್ರಾಣಾಪಾಯ ಉಂಟುಮಾಡುವ ವಿದ್ಯುತ್ ಅವಘಡಗಳು ಕೇವಲ ಮಣ್ಣಿನ ರಸ್ತೆಗಳು ಅಥವಾ ರಸ್ತೆಬದಿಯ ತೆರೆದ ವಿದ್ಯುತ್ ಪರಿವರ್ತಕಗಳ ಬಳಿ ಮಾತ್ರ ಸಂಭವಿಸುತ್ತವೆ ಎಂಬ ನಂಬಿಕೆಯನ್ನು ಈ ಘಟನೆಗಳು ಸುಳ್ಳು ಎಂದು ಸಾಬೀತುಪಡಿಸಿವ
ಬೆಂಗಳೂರು: ಬೆಂಗಳೂರಿನಲ್ಲಿ ಇತ್ತೀಚೆಗೆ ಸಂಭವಿಸಿದ ಸರಣಿ ವಿದ್ಯುತ್ ಅವಘಡಗಳು, ನಗರದ ವಿದ್ಯುತ್ ಸುರಕ್ಷತಾ ವ್ಯವಸ್ಥೆಯಲ್ಲಿನ ಲೋಪಗಳನ್ನು ಬಯಲಿಗೆಳೆದಿವೆ. ಪ್ರಾಣಾಪಾಯ ಉಂಟುಮಾಡುವ ವಿದ್ಯುತ್ ಅವಘಡಗಳು ಕೇವಲ ಮಣ್ಣಿನ ರಸ್ತೆಗಳು ಅಥವಾ ರಸ್ತೆಬದಿಯ ತೆರೆದ ವಿದ್ಯುತ್ ಪರಿವರ್ತಕಗಳ ಬಳಿ ಮಾತ್ರ ಸಂಭವಿಸುತ್ತವೆ ಎಂಬ ನಂಬಿಕೆಯನ್ನು ಈ ಘಟನೆಗಳು ಸುಳ್ಳು ಎಂದು ಸಾಬೀತುಪಡಿಸಿವೆ.ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ತಂತಿ ತುಳಿದು ಕಾಡಾನೆ ಸಾವುಅಕ್ಟೋಬರ್ ಕೊನೆಯ ವಾರದಲ್ಲಿ ಸಂಭವಿಸಿದ ಎರಡು ವಿದ್ಯುತ್ ಅವಘಡಗಳು ನಗರದ ಜನನಿಬಿಡ ಪ್ರದೇಶಗಳನ್ನು ಮೀರಿ, ಐಷಾರಾಮಿ ಕಟ್ಟಡಗಳಲ್ಲಿಯೂ ವಿದ್ಯುತ್ ಸುರಕ್ಷತೆಯ ಲೋಪಗಳಿರುವುದನ್ನು ಬಹಿರಂಗಪಡಿಸಿವೆ. ಹಲಸೂರು ಸಮೀಪದ ಪಂಚತಾರಾ ಹೋಟೆಲ್ನ ಚಾವಣಿಯ ಈಜುಕೊಳದಲ್ಲಿ ವಿದ್ಯುತ್ ಪ್ರವಹಿಸಿ, ಜರ್ಮನಿಯ ವಿಮಾನಯಾನ ಸಂಸ್ಥೆಯ ಸಿಬ್ಬಂದಿಯೊಬ್ಬರು ಮತ್ತು ಸ್ಲೊವಾಕಿಯಾದ ತಂತ್ರಜ್ಞಾನ ಉದ್ಯಮದ ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ. ಅವರನ್ನು ರಕ್ಷಿಸಲು ಮುಂದಾದ ಇಬ್ಬರು ಕೂಡ ಗಾಯಗೊಂಡಿದ್ದಾರೆ.ಈ ದುರಂತವು ಖಾಸಗಿ ಹಾಗೂ ಐಷಾರಾಮಿ ಕಟ್ಟಡಗಳಲ್ಲಿನ ದೋಷಪೂರಿತ ಅರ್ಥಿಂಗ್ ವ್ಯವಸ್ಥೆ, ನಿರ್ವಹಣೆಯಲ್ಲಿನ ಲೋಪ ಮತ್ತು ವಿದ್ಯುತ್ ಸೋರಿಕೆಯಾದಾಗ ತಕ್ಷಣ ಸಂಪರ್ಕ ಕಡಿತಗೊಳಿಸುವ ಸುರಕ್ಷತಾ ವ್ಯವಸ್ಥೆಗಳ ಕೊರತೆಯನ್ನು ಎತ್ತಿತೋರಿಸಿದೆ. ಐಷಾರಾಮಿ ಕಟ್ಟಡಗಳೂ ವಿದ್ಯುತ್ ಸೋರಿಕೆಯ ಅಪಾಯದಿಂದ ಹೊರತಾಗಿಲ್ಲ ಎಂಬುದನ್ನು ಈ ಘಟನೆ ಸ್ಪಷ್ಟಪಡಿಸಿದೆ.ಆದರೆ, ಆಗೊಮ್ಮೆ ಈಗೊಮ್ಮೆ ಸುದ್ದಿಯಾಗುವ ಇಂತಹ ಗಂಭೀರ ಘಟನೆಗಳಾಚೆಗೆ ನಗರದಲ್ಲಿ ಪ್ರತಿದಿನವೂ ವಿದ್ಯುತ್ ಸುರಕ್ಷತೆಯ ಸಮಸ್ಯೆ ಇದ್ದೇ ಇದೆ. ನಗರದ ವಾಣಿಜ್ಯ ಕಟ್ಟಡಗಳು ಮತ್ತು ಹಳತಾದ ವಿದ್ಯುತ್ ಜಾಲಗಳ ನಡುವಿನ ಸುರಕ್ಷತಾ ಹೊಣೆಗಾರಿಕೆಯನ್ನು ನಿಗದಿಪಡಿಸುವ ಪ್ರಯತ್ನದಲ್ಲಿ ಸ್ಥಳೀಯ ಆಡಳಿತ ಸಂಸ್ಥೆಗಳು ಹಾಗೂ ವಿದ್ಯುತ್ ಪರಿವೀಕ್ಷಣಾ ಇಲಾಖೆ ತೊಡಗಿವೆ. ಇದರ ನಡುವೆಯೇ ಹೆಚ್ಚುತ್ತಿರುವ ವಿದ್ಯುತ್ ಅವಘಡಗಳ ಸಾವುಗಳು, ನಗರದಲ್ಲಿ ಮೂಲಭೂತ ವಿದ್ಯುತ್ ಸುರಕ್ಷತಾ ನಿಯಮಗಳ ಪಾಲನೆಗೆ ಏಕೆ ಆದ್ಯತೆ ನೀಡಲಾಗುತ್ತಿಲ್ಲ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿವೆ.‘ವಸತಿ ಪ್ರದೇಶಗಳಲ್ಲಿರುವ ವೆಲ್ಡಿಂಗ್ ಮತ್ತು ಫ್ಯಾಬ್ರಿಕೇಷನ್ ಅಂಗಡಿಗಳಿಗೆ ವ್ಯಾಪಾರ ಪರವಾನಗಿ ಅಥವಾ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರಗಳೇ ಇಲ್ಲ. ಇಂತಹ ಅಂಗಡಿಗಳು ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದುಕೊಂಡಿವೆ. ಇದರಿಂದ ವಿದ್ಯುತ್ ವಿತರಣಾ ಪರಿವರ್ತಕಗಳು ಮತ್ತು ರಿಂಗ್ ಮೇನ್ ಯುನಿಟ್ಗಳ (ಆರ್ಎಂಯು) ಮೇಲೆ ಹೆಚ್ಚಿನ ಹೊರೆ ಬೀಳುತ್ತಿದೆ. ಅವು ಬಿಸಿಯಾಗಿ, ಪದೇಪದೇ ಟ್ರಿಪ್ ಆಗುವುದರಿಂದ ವಿದ್ಯುತ್ ಕಡಿತ ಹಾಗೂ ವೋಲ್ಟೇಜ್ ಏರಿಳಿತಗಳು ಸಂಭವಿಸುತ್ತಿವೆ’ ಎಂದು ಬೆಂಗಳೂರಿನ ನಾಗರಿಕ ಹೋರಾಟಗಾರ ಕೊಚ್ಚು ಶಂಕರ್ ಹೇಳಿದ್ದಾರೆ.‘ಆಪ್ಟಿಕಲ್ ಫೈಬರ್ ಕೇಬಲ್ಗಳು (ಒಎಫ್ಸಿ) ದೊಡ್ಡ ಸಮಸ್ಯೆಯಾಗಿವೆ’ ಎನ್ನುತ್ತಾರೆ ವೈಟ್ಫೀಲ್ಡ್ ರೈಸಿಂಗ್ನ ಅಂಜಲಿ ಸೈನಿ. ‘ಅವುಗಳಲ್ಲಿ ಹಲವು ಕೇಬಲ್ಗಳನ್ನು ಭೂಗತವಾಗಿ ಅಥವಾ ಡಕ್ಟ್ಗಳ ಒಳಗೆ ಅಳವಡಿಸಿಲ್ಲ. ‘ಕೆಲವೊಮ್ಮೆ ವಿದ್ಯುತ್ ತಂತಿಗಳನ್ನೇ ಆಪ್ಟಿಕಲ್ ಫೈಬರ್ ಕೇಬಲ್ಗಳೆಂದು (ಒಎಫ್ಸಿ) ತಪ್ಪಾಗಿ ಗುರುತಿಸಲಾಗುತ್ತದೆ. ಇದರಿಂದ ವಿದ್ಯುತ್ ಸ್ಪರ್ಶದ ಅವಘಡಗಳೂ ಸಂಭವಿಸಿವೆ’ ಎಂದು ಅವರು ತಿಳಿಸಿದ್ದಾರೆ. ಇಂತಹ ಅಪಾಯಗಳನ್ನು ತಪ್ಪಿಸಲು ಎಲ್ಲ ಕೇಬಲ್ಗಳನ್ನು ಡಕ್ಟ್ಗಳ ಒಳಗೆ ಅಳವಡಿಸುವಂತೆ ಅಧಿಕಾರಿಗಳಿಗೆ ಅವರು ಒತ್ತಾಯಿಸಿದ್ದಾರೆ.ಸುದ್ದಿಹಾಳೆ ಬಿಕ್ಕಟ್ಟು: ಆತಂಕದಲ್ಲಿ ಪತ್ರಿಕೋದ್ಯಮದ ಭವಿಷ್ಯ, ಪರಿಹಾರವೇನು?ಅಂಕಿಅಂಶಗಳು ಏನು ಹೇಳುತ್ತವೆ?ಬೆಸ್ಕಾಂನ ಸೆಪ್ಟೆಂಬರ್ 2026ರ ವರದಿಯ ಪ್ರಕಾರ, ಸೆಪ್ಟೆಂಬರ್ ತಿಂಗಳೊಂದರಲ್ಲೇ 31 ವಿದ್ಯುತ್ ಅವಘಡಗಳು ಸಂಭವಿಸಿವೆ. ಈ ವರ್ಷದ ಆರಂಭದಿಂದ ಸೆಪ್ಟೆಂಬರ್ ಅಂತ್ಯದವರೆಗೆ ಒಟ್ಟು 157 ಅವಘಡಗಳು ವರದಿಯಾಗಿವೆ. ಸೆಪ್ಟೆಂಬರ್ನಲ್ಲಿ ವಿದ್ಯುತ್ ಅವಘಡಗಳಿಂದ 15 ಮಂದಿ ಮೃತಪಟ್ಟಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ. ಇದರೊಂದಿಗೆ ಈ ವರ್ಷದ ಒಟ್ಟು ಸಾವಿನ ಸಂಖ್ಯೆ 69ಕ್ಕೆ ಮತ್ತು ಗಾಯಗೊಂಡವರ ಸಂಖ್ಯೆ 45ಕ್ಕೆ ಏರಿದೆ.ಸೆಪ್ಟೆಂಬರ್ನಲ್ಲಿ ಮೂರು ಪ್ರಾಣಿಗಳು ಮೃತಪಟ್ಟಿದ್ದು, ಈ ವರ್ಷ ಮೃತಪಟ್ಟ ಪ್ರಾಣಿಗಳ ಸಂಖ್ಯೆ 24ಕ್ಕೆ ಮುಟ್ಟಿದೆ. ವಿದ್ಯುತ್ ಅವಘಡಗಳಿಂದ ಉಂಟಾದ ಬೆಂಕಿ ಪ್ರಕರಣಗಳು ಸೆಪ್ಟೆಂಬರ್ನಲ್ಲಿ ಐದು ವರದಿಯಾಗಿದ್ದು, ಈ ವರ್ಷದ ಒಟ್ಟು ಸಂಖ್ಯೆ 19 ಆಗಿದೆ. ವಿದ್ಯುತ್ ಪ್ರವಹಿಸುತ್ತಿರುವ ತಂತಿ ಅಥವಾ ಉಪಕರಣಗಳನ್ನು ಮುಟ್ಟುವುದೇ ಅವಘಡಗಳಿಗೆ ಪ್ರಮುಖ ಕಾರಣ. ಸೆಪ್ಟೆಂಬರ್ನಲ್ಲಿ ಸಂಭವಿಸಿದ 31 ಅವಘಡಗಳ ಪೈಕಿ 18 (ಶೇ 58) ಮತ್ತು ಈ ವರ್ಷದ ಒಟ್ಟು 157 ಪ್ರಕರಣಗಳ ಪೈಕಿ 74 (ಶೇ 47) ಅವಘಡಗಳಿಗೆ ಇದೇ ಕಾರಣ..ಇನ್ನು ನಿರ್ದಿಷ್ಟ ಕಾರಣ ಪತ್ತೆಯಾಗದ ವಿದ್ಯುತ್ ಅವಘಡಗಳು 29, ವಿದ್ಯುತ್ ಸೋರಿಕೆ ಅಥವಾ ವಿದ್ಯುತ್ ಪ್ರವಹಿಸುವ ಭೂಸಂಪರ್ಕ ಮತ್ತು ಗೈ ತಂತಿಗಳಿಂದ ಸಂಭವಿಸಿದ ಅವಘಡಗಳು 16, ತುಂಡಾದ ವಿದ್ಯುತ್ ತಂತಿಗಳಿಂದ 14 ಹಾಗೂ ಗ್ರಾಹಕರ ಆಂತರಿಕ ವಿದ್ಯುತ್ ವ್ಯವಸ್ಥೆಯ ದೋಷಗಳಿಂದ ಒಂಬತ್ತು ಪ್ರಕರಣಗಳು ವರದಿಯಾಗಿವೆ.ಈ ಅವಘಡಗಳ ಹೊರೆ ಬಹುತೇಕ ಸಾರ್ವಜನಿಕರ ಮೇಲೇ ಬಿದ್ದಿದೆ. ಸೆಪ್ಟೆಂಬರ್ನಲ್ಲಿ ಮೃತಪಟ್ಟ 15 ಮಂದಿಯೂ ಬೆಸ್ಕಾಂಗೆ ಸೇರಿದವರಲ್ಲ. ಈ ವರ್ಷ ಮೃತಪಟ್ಟ 69 ಮಂದಿಯ ಪೈಕಿ 68 ಮಂದಿ ಇಲಾಖೆಯ ಹೊರಗಿನವರು. ಗಾಯಗೊಂಡ 45 ಮಂದಿಯಲ್ಲಿ 16 ಮಂದಿ ಮಾತ್ರ ಬೆಸ್ಕಾಂ ಸಿಬ್ಬಂದಿ.ಒಳನೋಟ: ‘ಬಲೆಗೆ’ ಮೀನುಗಾರರ ಬದುಕುಸಾವಿಗೆ ಹೊಣೆ ಯಾರು?650 ವೋಲ್ಟ್ಗಿಂತ ಕಡಿಮೆ ವಿದ್ಯುತ್ ಬಳಕೆಯ ಕಟ್ಟಡಗಳಲ್ಲಿ ಸಂಭವಿಸುವ ಎಲ್ಲ ವಿದ್ಯುತ್ ಸುರಕ್ಷತಾ ಅವಘಡಗಳಿಗೆ ಬೆಸ್ಕಾಂ ಹೊಣೆ ಎಂದು ವಿದ್ಯುತ್ ಪರಿವೀಕ್ಷಣಾ ಇಲಾಖೆಯ ಹೆಚ್ಚುವರಿ ಮುಖ್ಯ ವಿದ್ಯುತ್ ಪರಿವೀಕ್ಷಕ ಕೆ. ನಾಗರಾಜ್ ಹೇಳಿದರು.. ಬಹುತೇಕ ಮನೆಗಳು ಮತ್ತು ವಾಣಿಜ್ಯ ಕಟ್ಟಡಗಳು ಈ ವ್ಯಾಪ್ತಿಗೆ ಬರುತ್ತವೆ. ದೊಡ್ಡ ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಗಳು 650 ವೋಲ್ಟ್ಗಿಂತ ಹೆಚ್ಚಿನ ವಿದ್ಯುತ್ ಬಳಕೆಯ ವ್ಯಾಪ್ತಿಗೆ ಬರಬಹುದು. ಅಂತಹ ಸಂದರ್ಭಗಳಲ್ಲಿ ವಿದ್ಯುತ್ ಪರಿವೀಕ್ಷಣಾ ಇಲಾಖೆ ಜವಾಬ್ದಾರಿ ವಹಿಸುತ್ತದೆ.ಆದರೆ, ಯಾವುದೇ ಸ್ಥಳದಲ್ಲಿ ವಿದ್ಯುತ್ ಅವಘಡ ಸಂಭವಿಸಿದರೂ ಇಲಾಖೆ ತನಿಖೆ ನಡೆಸಿ ವರದಿ ಸಲ್ಲಿಸುತ್ತದೆ. ಸಂಬಂಧಿತ ಅಂಕಿಅಂಶಗಳನ್ನೂ ನಿರ್ವಹಿಸುತ್ತದೆ ಎಂದು ಅವರು ವಿವರಿಸಿದ್ದಾರೆ.ಕಟ್ಟಡಗಳಲ್ಲಿನ ಎಲ್ಲ ವಿದ್ಯುತ್ ಸುರಕ್ಷತಾ ಕಾಮಗಾರಿಗಳನ್ನು ನಿರ್ವಹಿಸುವ ವಿದ್ಯುತ್ ಗುತ್ತಿಗೆದಾರರಿಗೆ ಇಲಾಖೆ ಪ್ರಮಾಣಪತ್ರ ನೀಡುತ್ತದೆ. ‘ನೋಂದಣಿಯಾಗದ ವಿದ್ಯುತ್ ಗುತ್ತಿಗೆದಾರರ ಸೇವೆ ಪಡೆಯಬಾರದು. ನಮ್ಮ ವೆಬ್ಸೈಟ್ನಲ್ಲಿ ನೋಂದಾಯಿತ ಗುತ್ತಿಗೆದಾರರ ವಿವರಗಳನ್ನು ಪರಿಶೀಲಿಸಿ, ಅವರ ಮೂಲಕವೇ ದುರಸ್ತಿ ಮತ್ತು ಬದಲಾವಣೆ ಕಾಮಗಾರಿಗಳನ್ನು ಮಾಡಿಸಿಕೊಳ್ಳಬೇಕು. ಇದರಿಂದ ಸಮಸ್ಯೆ ಎದುರಾದಾಗ ಹೊಣೆಗಾರಿಕೆಯನ್ನು ನಿಗದಿಪಡಿಸಲು ಸಾಧ್ಯವಾಗುತ್ತದೆ’ ಎಂದು ಅವರು ಹೇಳಿದ್ದಾರೆ.ಪ್ರತಿ ಜಿಲ್ಲೆ ಹಾಗೂ ಪ್ರತಿ ವಿದ್ಯುತ್ ಸರಬರಾಜು ಕಂಪನಿಯ (ಎಸ್ಕಾಂ) ವ್ಯಾಪ್ತಿಯಲ್ಲಿ ವಿದ್ಯುತ್ ಪರಿವೀಕ್ಷಕರಿದ್ದಾರೆ. ಆದರೆ, ಇನ್ನೂ ಹೆಚ್ಚಿನ ಪರಿವೀಕ್ಷಕರ ಅಗತ್ಯವಿದೆ ಎಂಬುದನ್ನು ಅಧಿಕಾರಿಗಳು ಮನಗಂಡಿದ್ದಾರೆ. ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಇಲಾಖೆಗೆ ಮನವಿ ಸಲ್ಲಿಸಲಾಗಿದೆ.ಅಡುಗೆ ಮನೆಗೆ ತಟ್ಟಲಿದೆ ಪ್ರಶಾಂತ ಸಾಗರದ ಬಿಸಿ: ಅಕ್ಕಿ, ಸಕ್ಕರೆ, ಎಣ್ಣೆ ದುಬಾರಿ!ಬೆಸ್ಕಾಂ ಏನು ಮಾಡುತ್ತಿದೆ?ನಿಯಮಿತ ತಪಾಸಣೆ ಮತ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿದ್ದರೂ ಈ ಕೆಲಸ ನಿರಂತರವಾಗಿ ನಡೆಯಬೇಕಿದೆ ಎಂದು ಬೆಸ್ಕಾಂ ಮೂಲಗಳು ತಿಳಿಸಿವೆ. ವಿದ್ಯುತ್ ವ್ಯವಸ್ಥೆಗಳಲ್ಲಿ ಆಗಾಗ ದೋಷಗಳು ಕಾಣಿಸಿಕೊಳ್ಳುವುದರಿಂದ ಅವುಗಳ ಮೇಲೆ ನಿರಂತರ ನಿಗಾ ಇರಿಸಬೇಕಾಗುತ್ತದೆ. ವರದಿಯಾದ ಅಥವಾ ಗಮನಕ್ಕೆ ಬಂದ ದೋಷಗಳನ್ನು ತ್ವರಿತವಾಗಿ ಸರಿಪಡಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.ವಿದ್ಯುತ್ ಸುರಕ್ಷತೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬೆಸ್ಕಾಂ ಹಲವು ಮಾಧ್ಯಮಗಳ ಮೂಲಕ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ರೇಡಿಯೊ, ದೂರದರ್ಶನ, ಪತ್ರಿಕೆಗಳು, ಚಿತ್ರಮಂದಿರಗಳು, ಕೆಎಸ್ಆರ್ಟಿಸಿ ಬಸ್ ನಿಲ್ದಾಣಗಳಲ್ಲಿನ ಡಿಜಿಟಲ್ ಪರದೆಗಳು, ಬೀದಿ ನಾಟಕಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ಇದಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ.ಸುರಕ್ಷತಾ ಜಾಹೀರಾತುಗಳು, ಜಾಗೃತಿ ಸಂದೇಶಗಳು, ಶಾಲಾ ಮಟ್ಟದ ಪ್ರಬಂಧ ಮತ್ತು ಭಾಷಣ ಸ್ಪರ್ಧೆಗಳು ಹಾಗೂ ವಿದ್ಯುತ್ ಸುರಕ್ಷತಾ ವಿಡಿಯೊಗಳ ಪ್ರದರ್ಶನವೂ ಈ ಕಾರ್ಯಕ್ರಮಗಳೂ ನಡೆಸಲಾಗುತ್ತದೆ.ಪ್ರಸ್ತುತ ಹಲವು ಯೋಜನೆಗಳು ಪ್ರಗತಿಯಲ್ಲಿವೆ. ಸುರಕ್ಷತಾ ವಿಡಿಯೊಗಳ ಸಿದ್ಧತೆ ಮತ್ತು 250 ಬೀದಿ ನಾಟಕಗಳ ಪ್ರದರ್ಶನವನ್ನು 2026ರ ಡಿಸೆಂಬರ್ 31ರೊಳಗೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ವಿದ್ಯುತ್ ಬಳಕೆಯ ಸಂದರ್ಭದಲ್ಲಿ ಪಾಲಿಸಬೇಕಾದ ಕ್ರಮಗಳ ಕುರಿತು ಪತ್ರಿಕೆಗಳಲ್ಲಿ ಜಾಹೀರಾತು ಹಾಗೂ ರೇಡಿಯೊ ಜಾಗೃತಿ ಸಂದೇಶಗಳನ್ನು ನವೆಂಬರ್ 8ರಿಂದ ಆರಂಭಿಸಲು ನಿರ್ಧರಿಸಲಾಗಿದೆ. ದೂರದರ್ಶನ ಪ್ರಸಾರ, ಶಾಲಾ ಸ್ಪರ್ಧೆಗಳು ಮತ್ತು ಫೋಮ್ ಬೋರ್ಡ್ ಜಾಹೀರಾತುಗಳನ್ನೂ ಕೈಗೆತ್ತಿಕೊಳ್ಳಲಾಗುತ್ತಿದೆ.ದುರ್ಬಲ ಮುಂಗಾರು, ಪಶ್ಚಿಮ ಏಷ್ಯಾ ಸಂಘರ್ಷ: ಭಾರತದ ಆರ್ಥಿಕತೆಗೆ 'ಉಭಯ ಸಂಕಟ'