ಛತ್ತೀಸಗಢದಲ್ಲಿ ಭಾರಿ ಪ್ರಮಾಣದಲ್ಲಿ ಮವೋವಾದಿಗಳ ಶಸ್ತ್ರಾಸ್ತ್ರಗಳು ಪತ್ತೆ
ಬಿಜಾಪುರ: ಛತ್ತೀಗಸಢದ ಬಿಜಾಪುರ ಜಿಲ್ಲೆಯಲ್ಲಿ ಮಾವೋವಾದಿಗಳು ಅಡಗಿಸಿಟ್ಟಿದ್ದ 900 ಡಿಟೊನೇಟರ್ ಹಾಗೂ ಭಾರಿ ಪ್ರಮಾಣದ ಸ್ಫೋಟದ ಕಚ್ಚಾ ವಸ್ತುಗಳನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದಿವೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.ನಾನು 'ದಿಮಾಗಿ ನಕ್ಸಲ್': ಪ್ರಧಾನಿ ಮೋದಿಗೆ ತಿರುಗೇಟು ನೀಡಿದ ಕಪಿಲ್ ಸಿಬಲ್ಸಿಆರ್ಪಿಎಫ್ನ 240ನೇ ಬೆಟಾಲಿಯನ್ ಎಲೈಟ್ ಕೋಬ್ರಾ ಘಟಕ ನೀಡಿದ

ಬಿಜಾಪುರ: ಛತ್ತೀಗಸಢದ ಬಿಜಾಪುರ ಜಿಲ್ಲೆಯಲ್ಲಿ ಮಾವೋವಾದಿಗಳು ಅಡಗಿಸಿಟ್ಟಿದ್ದ 900 ಡಿಟೊನೇಟರ್ ಹಾಗೂ ಭಾರಿ ಪ್ರಮಾಣದ ಸ್ಫೋಟದ ಕಚ್ಚಾ ವಸ್ತುಗಳನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದಿವೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.ನಾನು 'ದಿಮಾಗಿ ನಕ್ಸಲ್': ಪ್ರಧಾನಿ ಮೋದಿಗೆ ತಿರುಗೇಟು ನೀಡಿದ ಕಪಿಲ್ ಸಿಬಲ್ಸಿಆರ್ಪಿಎಫ್ನ 240ನೇ ಬೆಟಾಲಿಯನ್ ಎಲೈಟ್ ಕೋಬ್ರಾ ಘಟಕ ನೀಡಿದ ಮಾಹಿತಿ ಅನುಸಾರ ನಡೆಸಿದ ಜಂಟಿ ಕಾರ್ಯಾಚರಣೆ ನಡೆಸಿದ್ದವು. ಪುಜಾರಿಕಾಂಕೇರ್ ಗ್ರಾಮದ ಸಮೀಪದ ಕಾಡಿನಲ್ಲಿ ಭೂಗತ ಅಡಗುದಾಣದಲ್ಲಿ ಶನಿವಾರ ಇವುಗಳು ಪತ್ತೆಯಾಗಿವೆ. 711 ಬಿಜಿಎಲ್ ಷೆಲ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.ಸ್ಫೋಟಕಗಳು ಮತ್ತು ಎಲೆಕ್ಟ್ರಾನಿಕ್ ಸಾಧನಗಳ ತಯಾರಿಕೆಗೆ ಬಳಸುವ ಹಲವು ವಸ್ತುಗಳನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿವೆ. ಇವುಗಳಲ್ಲಿ 455 ಎಲೆಕ್ಟ್ರಿಕ್ ಡಿಟೊನೇಟರ್ಗಳು, 500 ನಾನ್ ಎಲೆಕ್ಟ್ರಿಕ್ ಡಿಟೊನೇಟರ್ಗಳು, ಎರಡು ಮಲ್ಟಿಮೀಟರ್ಗಳು, ಎರಡು ರೇಡಿಯೊ ಸೆಟ್ ಬ್ಯಾಟರಿ ಚಾರ್ಜರ್ ಕಪ್ಗಳು, ಎರಡು ತಾಮ್ರದ ಪ್ರೊಟೊಟೈಪಿಂಗ್ ಸರ್ಕ್ಯೂಟ್ ಬೋರ್ಡ್ಗಳು (ಪಿಸಿಬಿ), ಮಲ್ಟಿ ಯುಎಸ್ಬಿ ಪೋರ್ಟ್ ಕಾರ್ಡ್ ರೀಡರ್, ಮೊಬೈಲ್ ಚಾರ್ಜರ್, ಲ್ಯಾಪ್ಟಾಪ್ ಅಡಾಪ್ಟರ್, 12 ವೋಲ್ಟ್ ಎಫ್ಎಂ/ಎಎಂ ಪವರ್ ಆ್ಯಂಟೆನಾ, ಟೆಲಿಸ್ಕೋಪಿಕ್ ಆ್ಯಂಟೆನಾ ಹಾಗೂ ನಕ್ಸಲ್ ಸಾಹಿತ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಮಾವೋವಾದಿ ಸಂಘಟನೆಗೆ ‘ಪಕ್ಷ’ದ ಮಾನ್ಯತೆ ಕೊಡಿ: ನಕ್ಸಲ್ ನಾಯಕ ದೇವುಜಿ ಆಗ್ರಹಛತ್ತೀಸಗಢ: ನಕ್ಸಲ್ ಸಂಬಂಧಿತ ಪ್ರಕರಣದಲ್ಲಿ ವ್ಯಕ್ತಿಗೆ ಜೀವಾವಧಿ ಶಿಕ್ಷೆಇದಕ್ಕೂ ಮುನ್ನ ಗುರುವಾರ, ಕರ್ರೆಗುಟ್ಟ ಬೆಟ್ಟಗಳ ಸಮೀಪ ಮಾವೋವಾದಿಗಳು ಅಡಗಿಸಿಟ್ಟಿದ್ದ 711 ಬ್ಯಾರೆಲ್ ಗ್ರೆನೇಡ್ ಲಾಂಚರ್ (ಬಿಜಿಎಲ್) ಶೆಲ್ಗಳನ್ನು ಭದ್ರತಾ ಪಡೆಗಳು ಪತ್ತೆಹಚ್ಚಿದ್ದವು. ಸದ್ಯದ ಮಟ್ಟಿಗೆ ಸಾರ್ವಜನಿಕರು ಈ ಪ್ರದೇಶಕ್ಕೆ ಭೇಟಿ ನೀಡದಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.ಈ ವರ್ಷದ ಮಾರ್ಚ್ 31ರಂದು ಛತ್ತೀಸ್ಗಢವನ್ನು ಸಶಸ್ತ್ರ ಮಾವೋವಾದಿ ಮುಕ್ತ ರಾಜ್ಯವೆಂದು ಘೋಷಿಸಲಾಗಿತ್ತು.‘ನಕ್ಸಲ್ ಮನಸ್ಥಿತಿಯವರ’ ಸುತ್ತ ಗುದ್ದಾಟ: BJP & ವಿಪಕ್ಷಗಳ ನಾಯಕರ ನಡುವೆ ಜಟಾಪಟಿ