ಮೂರೂವರೆ ತಿಂಗಳಿಂದ ಆಸ್ಪತ್ರೆಯಲ್ಲಿರುವ ಮಗುವಿನ ಜವಾಬ್ದಾರಿ ಕ್ಲೌಡ್ ನೈನ್ ಆಸ್ಪತ್ರೆ ಹೊರಬೇಕು: ಹೆಚ್ಡಿಕೆ
ಬೆಂಗಳೂರು: ನಾಗರಭಾವಿಯ ಕ್ಲೌಡ್ ನೈನ್ ಆಸ್ಪತ್ರೆಯಲ್ಲಿ (Cloudnine Hospital) ಒಂದೂವರೆ ವರ್ಷದ ಮಗುವಿಗೆ ಅನಸ್ತೇಶಿಯಾ ಕೊಟ್ಟ ಪರಿಣಾಮ ಆ ಮಗು ತೀವ್ರ ಅನಾರೋಗ್ಯಕ್ಕೆ ಗುರಿಯಾಗಿದ್ದು, ಅದಕ್ಕೆ ಆಸ್ಪತ್ರೆ ಜವಾಬ್ದಾರಿ ವಹಿಸಿಕೊಂಡು ಮಗುವಿಗೆ ಚಿಕಿತ್ಸೆ ನೀಡಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಒತ್ತಾಯಿಸಿದರು. ಮಂಡ್ಯ ಜಿಲ್ಲೆಯ ಕಟ್

ಬೆಂಗಳೂರು: ನಾಗರಭಾವಿಯ ಕ್ಲೌಡ್ ನೈನ್ ಆಸ್ಪತ್ರೆಯಲ್ಲಿ (Cloudnine Hospital) ಒಂದೂವರೆ ವರ್ಷದ ಮಗುವಿಗೆ ಅನಸ್ತೇಶಿಯಾ ಕೊಟ್ಟ ಪರಿಣಾಮ ಆ ಮಗು ತೀವ್ರ ಅನಾರೋಗ್ಯಕ್ಕೆ ಗುರಿಯಾಗಿದ್ದು, ಅದಕ್ಕೆ ಆಸ್ಪತ್ರೆ ಜವಾಬ್ದಾರಿ ವಹಿಸಿಕೊಂಡು ಮಗುವಿಗೆ ಚಿಕಿತ್ಸೆ ನೀಡಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಒತ್ತಾಯಿಸಿದರು. ಮಂಡ್ಯ ಜಿಲ್ಲೆಯ ಕಟ್ಟೆ ದೊಡ್ಡಿ ಗ್ರಾಮದ ಸಂಪತ್ ಎಂಬವರ ಮಗು ಶಮನ್ ಅನಾರೋಗ್ಯದ ಕಾರಣಕ್ಕೆ ನಾಗರಭಾವಿಯ ಕ್ಲೌಡ್ ನೈನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮಗುವಿಗೆ ಅಲ್ಲಿ ಅನಸ್ತೇಶಿಯಾ ಕೊಟ್ಟು ಆಸ್ಪತ್ರೆಗೆ ಕೊಡಲಾಗಿದೆ. ಸೂಕ್ತ ಚಿಕಿತ್ಸೆ ನೀಡದೆ ಅವರು ನಿರ್ಲಕ್ಷ್ಯ ತೋರಿ ಅನಸ್ತೇಶಿಯಾ ನೀಡಿದ್ದಾರೆ. ಮೂರುವರೆ ತಿಂಗಳಿಂದ ಮಗು ಆಸ್ಪತ್ರೆಯಲ್ಲಿಯೇ ಇದೆ. ಆಸ್ಪತ್ರೆಯ ಆಡಳಿತ ಮಂಡಳಿ ಈ ನಿರ್ಲಕ್ಷ್ಯಕ್ಕೆ ಯಾವುದೇ ಜವಾಬ್ದಾರಿ ವಹಿಸಿಕೊಂಡಿಲ್ಲ ಎಂದು ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ಕಿವಿ ಗಾಯದ ಚಿಕಿತ್ಸೆಗೆಂದು ಬಂದಿದ್ದ ಮಗು ಕೋಮಾಗೆ – ನಾಗರಬಾವಿ ಕ್ಲೌಡ್ ನೈನ್ ಆಸ್ಪತ್ರೆ ವಿರುದ್ಧ ಪೋಷಕರ ಆರೋಪ ರಾಜ್ಯದ ಆರೋಗ್ಯ ಸಚಿವರು ಇಂತಹ ಆಸ್ಪತ್ರೆಗಳ ಮೇಲೆ ನಿಗಾ ಇಡಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದುಬಾರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಇಂತಹ ಆಸ್ಪತ್ರೆಗಳ ಕಡೆ ಸರ್ಕಾರ ಗಮನ ಕೊಟ್ಟು ಕ್ರಮ ವಹಿಸಬೇಕು. ಕ್ಲೌಡ್ ನೈನ್ ಆಸ್ಪತ್ರೆಗೆ ಜವಾಬ್ದಾರಿ ಇಲ್ಲವಾ? ಆಸ್ಪತ್ರೆಯವರು ಸಂಪೂರ್ಣ ಉಚಿತವಾಗಿ ಚಿಕಿತ್ಸೆ ಕೊಡಬೇಕು. ಇಲ್ಲವೇ ಸರ್ಕಾರವಾದರೂ ಈ ಮಗುವಿನ ಚಿಕಿತ್ಸೆಯ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಹೇಳಿದರು. ಆಸ್ಪತ್ರೆಯ ಆಡಳಿತ ಮಂಡಳಿ ತೋರುತ್ತಿರುವ ನಿರ್ಲಕ್ಷ್ಯ ಸಹಿಸಲು ಸಾಧ್ಯವಿಲ್ಲ. ನಿಮ್ಮ ಅಸಡ್ಡೆಯಿಂದ ಮಗುವಿನ ತಂದೆ, ತಾಯಿ ರಸ್ತೆಯಲ್ಲಿ ಮಲಗಿದ್ದಾರೆ. ಕೂಡಲೇ ಸಮಸ್ಯೆ ಸರಿಪಡಿಸಿ. ಇಲ್ಲವಾದರೆ ನಾನೇ ಆಸ್ಪತ್ರೆಗೆ ಬರಬೇಕಾಗುತ್ತದೆ ಎಂದು ಸಚಿವರು ಎಚ್ಚರಿಸಿದರು.